44 ವರ್ಷದ ಟಿ ವಿಯ ನಟ ಸಮೀರ್ ಶರ್ಮಾ ಅವರು ಬುಧವಾರ ತಡರಾತ್ರಿ ತಮ್ಮ ಮಲಾಡ್ ಅಪಾರ್ಟ್‌ಮೆಂಟ್‌ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ ಎಂದು ಮಲಾಡ್ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ನಟ ಸಮೀರ್ ಶರ್ಮಾ ಮಲಾಡ್‌ನ (ಪಶ್ಚಿಮ) ಅಹಿನ್ಸಾ ಮಾರ್ಗದ ನೇಹಾ ಸಿಎಚ್‌ಎಸ್ ಕಟ್ಟಡದ ಮೊದಲ ಮಹಡಿಯಲ್ಲಿ ವಾಸವಿದ್ದರು ಎಂದು ಮಲಾಡ್ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬುಧವಾರ ಭದ್ರತಾ ಸಿಬ್ಬಂದಿಯೊಬ್ಬರು, ನಟ ಮೃತಪಟ್ಟಿರುವುದನ್ನು ಕಂಡು ಅಲ್ಲಿನ ಇತರ ಸದಸ್ಯರನ್ನು ಎಚ್ಚರಿಸಿದ್ದಾರೆ. ನಂತರ ಪೊಲೀಸರು ಇದನ್ನು ಆತ್ಮಹತ್ಯೆ ಶಂಕೆಯೆಂದು ಕರೆದಿದ್ದಾರೆ.
ನಾವು ಆಕಸ್ಮಿಕ ಸಾವಿನ ಪ್ರಕರಣವನ್ನು ದಾಖಲಿಸಿದ್ದೇವೆ (ಎಡಿಆರ್), ಮತ್ತು ಅವರ ಶವವನ್ನು ಶವಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿದ್ದೇವೆ ಎಂದು ಮಲಾಡ್ ಪೊಲೀಸ್ ಠಾಣೆಯ ಹಿರಿಯ ಇನ್ಸ್‌ಪೆಕ್ಟರ್ ಜಾರ್ಜ್ ಫರ್ನಾಂಡಿಸ್ ಹೇಳಿದ್ದಾರೆ.
ಪೊಲೀಸರ ಪ್ರಕಾರ, ಅವರು ಫೆಬ್ರವರಿಯಲ್ಲಿ ಅಪಾರ್ಟ್ಮೆಂಟ್ ಅನ್ನು ಬಾಡಿಗೆಗೆ ಪಡೆದಿದ್ದರು. ಈಗ ಪ್ರಕರಣದ ತನಿಖೆ ಮುಂದುವರೆದಿದೆ.
ಸಮೀರ್ ಶರ್ಮಾ ಕಹಾನಿ ಘರ್ ಘರ್ ಕಿ, ಕ್ಯುಂಕಿ ಸಾಸ್ ಭಿ ಕಭಿ ಬಹು ಥಿ, ಜ್ಯೋತಿ, ಇಸ್ ಪ್ಯಾರ್ ಕೋ ಕ್ಯಾ ನಾಮ್ ಡು ಮತ್ತು ಲೆಫ್ಟ್ ರೈಟ್ ಮುಂತಾದ ಕಾರ್ಯಕ್ರಮಗಳಲ್ಲಿ ನಟಿಸಿದ್ದಾರೆ. ಹಸೀ ತೋಹ್ ಫಾಸೀ ಮತ್ತು ಇಟ್ಟೆಫಾಕ್ ಮುಂತಾದ ಚಿತ್ರಗಳಲ್ಲಿ ಗುರುತಿಸಿಕೊಂಡಿದ್ದರು.
ಸಮೀರ್ ನಿಧನಕ್ಕೆ ನಟರಾದ ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ವರುಣ್ ಧವನ್ ಸಂತಾಪ ಸೂಚಿಸಿದ್ದಾರೆ.
ಅವರ ಕೊನೆಯ ಸೋಷಿಯಲ್ ಮೀಡಿಯಾ ಪೋಸ್ಟ್, ಸಮುದ್ರದ ಚಿತ್ರವನ್ನು ಜುಲೈ 29 ರಂದು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಳ್ಳಲಾಗಿದೆ.
2020 ರಲ್ಲಿ, ಚಲನಚಿತ್ರ ಮತ್ತು ದೂರದರ್ಶನ ಉದ್ಯಮಗಳಲ್ಲಿ ಮನ್ಮೀತ್ ಗ್ರೆವಾಲ್, ಪ್ರೇಕ್ಷಾ ಮೆಹ್ತಾ, ಮತ್ತು ಸುಶಾಂತ್ ಸಿಂಗ್ ರಜಪೂತ್ ಸೇರಿದಂತೆ ಹಲವಾರು ಆತ್ಮಹತ್ಯೆ ಪ್ರಕರಣಗಳು ವರದಿಯಾಗಿವೆ.
ಜೀವ ಅಮೂಲ್ಯವಾಗಿದೆ ಮಾನಸಿಕ ಒತ್ತಡಗಳಿದ್ದರೆ ಇಲ್ಲಿ ಸಂಪರ್ಕಿಸಿ:
ಬೆಂಗಳೂರು ಸಹಾಯವಾಣಿ – 080-25497777, ಬೆಳಿಗ್ಗೆ 10 ರಿಂದ ಸಂಜೆ 8 ರವರೆಗೆ
ಕರ್ನಾಟಕ ಆರೋಗ್ಯ ಸಹಾಯವಾಣಿ: 104
ಇದನ್ನೂ ಓದಿ: ಈ ಎನ್‌ಇಪಿ ಅಂದ್ರೆ ಏನು? ಅದರೊಳಗ ಏನೈತಿ, ಏನಿಲ್ಲ?


