ಕೊರೊನಾ ವೈರಸ್ ಬಗ್ಗೆ ನಕಲಿ ಸುದ್ದಿಗಳ ಹರಡುತ್ತಿರುವುದರ ವಿರುದ್ದ ಹಾಗೂ ವೈದ್ಯರ ಮೇಲಿನ ದೌರ್ಜನ್ಯದ ವಿರುದ್ದ ನಟಿ ಶಿಲ್ಪಾ ಶೆಟ್ಟಿ ವಿಡಿಯೊ ಸಂದೇಶವನ್ನು ಹಂಚಿಕೊಂಡಿದ್ದಾರೆ.
ಆರೋಗ್ಯ ಕಾರ್ಯಕರ್ತರ ವಿರುದ್ಧ ಆಗುತ್ತಿರುವ ಹಿಂಸಾಚಾರದ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ರವೀನಾ ಟಂಡನ್ ಅವರ “ಜೀತೆಗಾ ಇಂಡಿಯಾ ಜೀತೇಂಗೆ ಹಮ್” ಅಭೀಯಾನದ ಭಾಗವಾಗಿ ಶಿಲ್ಪಾ ತಮ್ಮ ವಿಡಿಯೋ ಸಂದೇಶವನ್ನು ಹಂಚಿಕೊಂಡಿದ್ದಾರೆ.
ವೈದ್ಯರು, ದಾದಿಯರು ಮತ್ತು ಇತರ ವೈದ್ಯಕೀಯ ಸಿಬ್ಬಂದಿ ಸೇರಿದಂತೆ ಆರೋಗ್ಯ ವೃತ್ತಿಪರರನ್ನು ಉಲ್ಲೇಖಿಸಿ “ಮಾನವೀಯತೆಯ ಹೆಸರಿನಲ್ಲಿ ನಾವು ಮಾಡಬಹುದಾದ ಕ್ರಮವವೇನೆಂದರೆ, ನಮ್ಮನ್ನು ಸುರಕ್ಷಿತವಾಗಿಡಲು ತಮ್ಮ ಪ್ರಾಣವನ್ನೇ ತ್ಯಾಗ ಮಾಡುತ್ತಿರುವವರಿಗಾಗಿ ಧ್ವನಿ ಎತ್ತುವುದು” ಎಂದು ಶಿಲ್ಪಾ ಹೇಳಿದ್ದಾರೆ.
ಜೊತೆಗೆ ಕೊರೊನಾ ವೈರಸ್ ಸುಳ್ಳು ಮಾಹಿತಿಯ ಹರಡುವಿಕೆಯ ಬಗ್ಗೆ ಎಚ್ಚರವಾಗಿರುವಂತೆ ಶಿಲ್ಪಾ ಶೆಟ್ಟಿ ತನ್ನ ಇನ್ಸ್ಟ್ರಾಗ್ರಾಮ್ ನಲ್ಲಿ ಎಚ್ಚರಿಕೆ ನೀಡಿದ್ದಾರೆ.
ಶಿಲ್ಪಾ ತನ್ನ ಲಾಕ್‌ಡೌನ್ ಜೀವನ ದೈನಂದಿನ ನೋಟವನ್ನು ಆಗಾಗ್ಗೆ ಹಂಚಿಕೊಳ್ಳುತ್ತಿದ್ದಾರೆ. ಇಂದು ಶಿಲ್ಪಾ “ನನ್ನ ಪ್ರೀತಿಯ, ರವೀನಾ ನನ್ನನ್ನು ನಾಮನಿರ್ದೇಶನ ಮಾಡಿದ್ದಕ್ಕಾಗಿ ಮತ್ತು ನಿಮ್ಮ ಈ ಅದ್ಭುತ ಕಾರ್ಯಕ್ರಮದಲ್ಲಿ ಭಾಗವಾಗಿಸಿದ್ದಕ್ಕಾಗಿ ಧನ್ಯವಾದಗಳು. ನನ್ನ ಎಲ್ಲ ಸಹ ನಾಗರಿಕರೆ ದಯವಿಟ್ಟು ನಮ್ಮ ಸಮುದಾಯವನ್ನು ಸುರಕ್ಷಿತವಾಗಿಡಲು ದಣಿವರಿಯಿಲ್ಲದೆ ಕೆಲಸ ಮಾಡುತ್ತಿರುವ ಯೋಧರ ಪರವಾಗಿ ನಿಂತುಕೊಳ್ಳಿ .. ಸುಳ್ಳು ವದಂತಿಗಳನ್ನು ಬಯಲು ಮಾಡಿ. ನಿಮ್ಮ ಮಟ್ಟದಲ್ಲಿ ನಕಲಿ ಸುದ್ದಿಗಳ ಹರಡುವಿಕೆಯನ್ನು ನಿಲ್ಲಿಸಬೇಕು ಎಂಬುದು ನನ್ನ ವಿನಮ್ರ ವಿನಂತಿಯಾಗಿದೆ. ಈ ಸಾಂಕ್ರಾಮಿಕ ರೋಗದ ವಿರುದ್ಧ ಒಗ್ಗಟ್ಟಾಗಿ ನಿಲ್ಲುವ ಸಮಯ ಇದು. ” ಎಂದಿದ್ದಾರೆ.
ಸಂದೇಶವನ್ನು ಹರಡಲು ಶಿಲ್ಪಾ ತನ್ನ ಸಹೋದರಿ ಶಮಿತಾ ಶೆಟ್ಟಿ, ಚಲನಚಿತ್ರ ನಿರ್ಮಾಪಕ ಫರಾ ಖಾನ್ ಮತ್ತು ನಟ ಅಭಿಮನ್ಯು ದಸ್ಸಾನಿಯನ್ನು ನಾಮಕರಣ ಮಾಡಿದರು.
ಈ ರೀತಿಯ ಕಾರ್ಯದಲ್ಲಿ ಕೈಜೋಡಿಸುವಂತೆ ರವೀನಾ, ಶಿಲ್ಪಾ ಶೆಟ್ಟಿಯ ಜೊತೆ ಸೋನು ಸೂದ್ ಅವರನ್ನು ಕೂಡಾ ನಾಮಕರಣ ಮಾಡಿದ್ದರು. ಈ ಮಧ್ಯೆ ಹ್ಯಾಪಿ ನ್ಯೂ ಇಯರ್ ನಟ ಕೊರೊನಾ ವಿರುದ್ದ ಹೋರಾಡುತ್ತಿರುವ ಆರೋಗ್ಯ ಕಾರ್ಯಕರ್ತರು ಉಳಿಯಲು ತನ್ನ ಮುಂಬೈ ಹೋಟೆಲ್ ಅನ್ನು ತೆರೆದಿದ್ದಾರೆ. ತಮ್ಮ ಸಂದೇಶಗಳನ್ನು ಹಂಚಿಕೊಂಡ ರವೀನಾ, ಸೋನಾಲಿ ಕುಲಕರ್ಣಿ ಮತ್ತು ಚಲನಚಿತ್ರ ನಿರ್ಮಾಪಕ ಒನಿರ್ ಅವರನ್ನು ಕೂಡಾ ಟ್ಯಾಗ್ ಮಾಡಿದ್ದರು.
ಇದನ್ನೂ ಓದಿ: ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯ ಹರಡಿದ 16 ಸುಳ್ಳು ಸುದ್ದಿಗಳು


