Homeಮುಖಪುಟಕೊರೊನಾ ಸೋಂಕಿತರ ಗುರುತು ಬಿಡುಗಡೆ ಮಾಡುತ್ತಿರುವ ಗುಜರಾತ್ ಸರ್ಕಾರ..!

ಕೊರೊನಾ ಸೋಂಕಿತರ ಗುರುತು ಬಿಡುಗಡೆ ಮಾಡುತ್ತಿರುವ ಗುಜರಾತ್ ಸರ್ಕಾರ..!

- Advertisement -
- Advertisement -

ಗುಜರಾತ್ ಸರ್ಕಾರವು ರಾಜ್ಯದಲ್ಲಿ ಕೊರೊನಾ ಸೋಂಕಿರುವ ಜನರ ಹೆಸರು, ವಯಸ್ಸು, ವಿಳಾಸ ಮತ್ತು ಇತರ ವಿವರಗಳನ್ನು ಬಿಡುಗಡೆ ಮಾಡಿದೆ. ರಾಜ್ಯದ ಪ್ರಮುಖ ಹಾಟ್‌ಸ್ಪಾಟ್‌ಗಳಲ್ಲಿ ಒಂದಾದ ಅಹಮದಾಬಾದ್‌ನಲ್ಲಿರುವ ಮುನ್ಸಿಪಲ್ ಕಾರ್ಪೊರೇಷನ್ ರೋಗಿಗಳ ಗುರುತುಗಳನ್ನು ನೀಡುವ ದೈನಂದಿನ ಬುಲೆಟಿನ್ ಗಳನ್ನು ಬಿಡುಗಡೆ ಮಾಡುತ್ತಿದೆ.

ಅಹಮದಾಬಾದ್‌ನ ಹೊರತಾಗಿ, ಭೋಪಾಲ್‌ನಂತಹ ಪ್ರಮುಖ ಪ್ರದೇಶಗಳ ಮುನ್ಸಿಪಲ್ ಕಾರ್ಪೊರೇಷನ್ ಕೂಡಾ ರೋಗಿಗಳ ಪಟ್ಟಿಗಳನ್ನು ಬಿಡುಗಡೆ ಮಾಡಿವೆ. ಉಪ ಮುಖ್ಯಮಂತ್ರಿ ನಿತಿನ್ ಪಟೇಲ್ ಅವರು ಸೋಂಕಿತರ ಹೆಸರುಗಳು ಮತ್ತು ವಿಳಾಸಗಳು ಸೇರಿದಂತೆ ವಿವರಗಳನ್ನು ಸರ್ಕಾರ ಪ್ರಕಟಿಸುವುದಾಗಿ ವಾರಗಳ ಹಿಂದೆ ಘೋಷಿಸಿದ್ದರು. ಸೋಂಕಿತ ವ್ಯಕ್ತಿಗಳೊಂದಿಗೆ ಅವರು ಸಂವಹನ ನಡೆಸಿದ್ದಾರೆಯೇ ಎಂದು ಜನರಿಗೆ ತಿಳಿಸಲು ಈ ಪ್ರಯೋಗಗಳನ್ನು ಮಾಡಲಾಗುತ್ತದೆ ಎಂದು ಪಟೇಲ್ ಹೇಳಿದ್ದಾರೆ. ಅಂತಹ ಜನರು ಪರೀಕ್ಷೆಗಾಗಿ ಆಸ್ಪತ್ರೆಗಳನ್ನು ಸಂಪರ್ಕಿಸಬಹುದು. ವೈರಸ್ ಹರಡುವುದನ್ನು ತಡೆಯಲು ಇದು ಬಹಳ ಉಪಯೋಗಕಾರಿಯಾಗಿದೆ ಎಂದು ಹೇಳಿದ್ದಾರೆ.

ಗುಜರಾತ್‌ನ ಪ್ರಮುಖ ಪತ್ರಿಕೆಗಳು ಕೊರೊನಾ ವೈರಸ್‌ ಸೋಂಕಿತರಾದವರ ಹೆಸರು, ವಯಸ್ಸು, ವಿಳಾಸಗಳು ಮತ್ತು ವೃತ್ತಿಯನ್ನು ಪಟ್ಟಿ ಮಾಡುತ್ತಿದೆ.

ಈ ರೀತಿಯ ಬಹಿರಂಗಪಡಿಸುವಿಕೆಯು ರಾಜ್ಯದಲ್ಲಿ ಕೋಮು ವಿಭಜನೆಯನ್ನು ಸೃಷ್ಟಿ ಮಾಡುತ್ತದೆ ಎಂದು ಎಂದು ವ್ಯಾಪಕ ಟೀಕೆಗಳು ಕೇಳಿ ಬಂದಿವೆ. ಈ ಹಿಂದೆ, ಗುಜರಾತಿನಲ್ಲಿ ರೋಗಿಗಳನ್ನು ಧಾರ್ಮಿಕ ಆಧಾರದ ಮೇಲೆ ಬೇರ್ಪಡಿಸಿ ಕೊರೊನಾ ಚಿಕಿತ್ಸೆಯನ್ನು ನೀಡುತ್ತಿರುವ ಬಗ್ಗೆ ವರದಿಗಳಾಗಿದ್ದವು.

ಗುಜರಾತಿನಲ್ಲಿ ದಿನದಿಂದ ದಿನಕ್ಕೆ ವೇಗವಾಗಿ ಕೊರೊನಾ ಪ್ರಕರಣಗಳು ಏರುತ್ತಲೇ ಇದೆ. ಇದುವರೆಗೆ ಅಲ್ಲಿ 3,071 ಕೊರೊನಾ ಪ್ರಕರಣಗಳು ವರದಿಯಾಗಿವೆ ಹಾಗೂ 133 ಜನರು ಸಾವಿಗೀಡಾಗಿದ್ದಾರೆ.


ಇದನ್ನೂ ಓದಿ: ಮುಖ್ಯಮಂತ್ರಿ ಜೊತೆ ಸಭೆ ನಡೆಸಿದ ಕೆಲವೇ ಗಂಟೆಗಳಲ್ಲಿ ಗುಜರಾತ್‌ ಶಾಸಕನಿಗೆ ಕೊರೊನಾ ಪಾಸಿಟಿವ್‌!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read