Homeಮುಖಪುಟ20% ಕಡಿಮೆ ಬೆಲೆ ನೀಡಿ ಸೇಬು ಖರೀದಿಗೆ ಮುಂದಾದ ಅದಾನಿ ಕಂಪನಿ: ರೈತರಿಂದ ಅದಾನಿ ಬಾಯ್ಕಾಟ್...

20% ಕಡಿಮೆ ಬೆಲೆ ನೀಡಿ ಸೇಬು ಖರೀದಿಗೆ ಮುಂದಾದ ಅದಾನಿ ಕಂಪನಿ: ರೈತರಿಂದ ಅದಾನಿ ಬಾಯ್ಕಾಟ್ ಬೆದರಿಕೆ

ಕಳೆದ ವರ್ಷ 88 ರೂ ಗೆ ಒಂದು ಕೆಜಿ ಪ್ರೀಮಿಯಂ ಸೇಬು ಖರೀದಿಸುತ್ತಿದ್ದ ಅದಾನಿ ಕಂಪನಿ ಈಗ ಕೇವಲ 72 ರೂ ಖರೀದಿಸಲು ಮುಂದಾಗಿದೆ.

- Advertisement -
- Advertisement -

ದೆಹಲಿಯಲ್ಲಿ ನೂತನ ಕೃಷಿ ಕಾನೂನುಗಳನ್ನು ವಿರೋಧಿಸಿ ನಡೆಯುತ್ತಿರುವ ರೈತರ ಬೃಹತ್ ಹೋರಾಟ ಇಂದಿಗೆ 9 ತಿಂಗಳು ಪೂರೈಸಿದೆ. ಸರ್ಕಾರದ ಯಾವುದೇ ಸಂಧಾನ, ಬೆದರಿಕೆಗಳಿಗೆ ಬಗ್ಗದ ರೈತರು ದಿನೇ ದಿನೇ ಹೋರಾಟ ತೀವ್ರಗೊಳಿಸುತ್ತಿದ್ದಾರೆ. ಅವರ ಹೋರಾಟ ನ್ಯಾಯಯುತವಾದುದ್ದು ಎಂಬುದನ್ನು ಹಿಮಾಚಲ ಪ್ರದೇಶದ ಸೇಬು ಬೆಳೆಗಾರರ ಸಂಕಷ್ಟ ಮತ್ತೊಮ್ಮೆ ಸಾಬೀತುಪಡಿಸಿದೆ. ಈ ವರ್ಷ ಸಂಭವಿಸಿದ ಪ್ರವಾಹ ಮತ್ತು ಭೂಕುಸಿತದಿಂದಾಗಿ ಮೊದಲೆ ಬೆಳೆ ನಷ್ಟದಿಂದ ಸಂಕಷ್ಟದಿಂದಿದ್ದ ರೈತರ ಮೇಲೆ ಅದಾನಿ ಅಗ್ರಿ ಫ್ರೆಶ್ ಕಂಪನಿ ಗಧಾಪ್ರಹಾರ ನಡೆಸಿದೆ. 20% ಕಡಿಮೆ ಬೆಲೆ ನೀಡಿ ಸೇಬು ಖರೀದಿಗೆ ಮುಂದಾಗಿರುವುದು ರೈತರಲ್ಲಿ ಆಕ್ರೋಶ ಹುಟ್ಟಿಸಿದೆ.

ಹಿಮಾಚಲ ಪ್ರದೇಶದಲ್ಲಿ ಅದಾನಿ ಗ್ರೂಪ್ ಸಿಎ ಸ್ಟೋರ್‌ಗಳಿಗೆ ಸೇಬು ಖರೀದಿಸಲು ಗುರುವಾರ ತನ್ನ ಬೆಲೆಗಳನ್ನು ಘೋಷಿಸಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ, ಪ್ರೀಮಿಯಂ ಸೇಬಿನ ಬೆಲೆಗಳು ಈ ಬಾರಿ ಶೇಕಡಾ 20 ರಷ್ಟು ಕಡಿಮೆಯಾಗಿವೆ. ಕಳೆದ ವರ್ಷ ಪ್ರೀಮಿಯಂ ಸೇಬಿನ ಆರಂಭಿಕ ಬೆಲೆ ಪ್ರತಿ ಕೆಜಿಗೆ 88 ರೂ ಇತ್ತು. ಆದರೆ ಅದನ್ನು ಈ ಬಾರಿ ಅದು ಕೆಜಿಗೆ 72 ರೂಗೆ ಇಳಿಸಲಾಗಿದೆ. ಇದು ಸೇಬು ಬೆಳೆಗಾರರನ್ನು ಕೆರಳಿಸಿದ್ದು ಅವರು ಅದಾನಿ ಕಂಪನಿ ಬಾಯ್ಕಾಟ್ ಮಾಡುವ ಎಚ್ಚರಿಕೆ ನಿಡಿದ್ದಾರೆ ಎಂದು ದಿ ಟ್ರಿಬ್ಯೂನ್ ವರದಿ ಮಾಡಿದೆ.

ಇಂದು ಘೋಷಿಸಿದ ದರಗಳ ಪ್ರಕಾರ, ಶೇ.60 ಕ್ಕಿಂತ ಕಡಿಮೆ ಬಣ್ಣವನ್ನು ಹೊಂದಿರುವ ಸೇಬುಗಳನ್ನು ಪ್ರತಿ ಕೆಜಿಗೆ 12 ರಿಂದ 15ರೂಗಳಿಗೆ ಮಾರಾಟ ಮಾಡಲಾಗುತ್ತಿದೆ. ಪ್ರತಿ ಕೆಜಿ ಸೇಬಿನ ಉತ್ಪಾದನಾ ವೆಚ್ಚ ಸುಮಾರು 25 ರೂ ಆಗುತ್ತದೆ ಎಂದು ರೈತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಶಿಮ್ಲಾದಲ್ಲಿ ಸೇಬು ಖರೀದಿ ಪ್ರಕ್ರಿಯೆ: Photo Courtesy: The Tribune

“ಇದು ತುಂಬಾ ನಿರಾಶಾದಾಯಕವಾಗಿದೆ ಮತ್ತು ಸೇಬು ಬೆಳೆಗಾರರು ಈ ಬಾರಿ ಅದಾನಿ ಕಂಪನಿಯನ್ನು ಬಹಿಷ್ಕರಿಸಬೇಕು” ಎಂದು ಹಣ್ಣು, ತರಕಾರಿ ಮತ್ತು ಹೂ ಬೆಳೆಗಾರರ ​​ಸಂಘದ ಅಧ್ಯಕ್ಷ ಹರೀಶ್ ಚೌಹಾಣ್ ಕರೆ ನೀಡಿದ್ದಾರೆ. “ಅದಾನಿ ಕಂಪನಿಯ ಬೆಲೆ ನಿಗದಿಗೊಳಿಸುವ ಕಾರ್ಯವಿಧಾನವು ಅನಿಯಂತ್ರಿತವಾಗಿದೆ. ಬೆಲೆಗಳನ್ನು ನಿಗದಿಪಡಿಸಿದಾಗ ಯಾವುದೇ ಸರ್ಕಾರಿ ಅಧಿಕಾರಿಯಾಗಲಿ ಅಥವಾ ರೈತರ ಪ್ರತಿನಿಧಿಗಳಾಗಲಿ ಯಾರೂ ಇಲ್ಲ” ಎಂದು ಚೌಹಾಣ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೇ ದೆಹಲಿಯಲ್ಲಿ ಹೋರಾಟನಿರತ ರೈತರ ವರ್ಷದಿಂದಲೂ ಹೇಳುತ್ತಾ ಬಂದಿರುವುದನ್ನು ನಾವು ಗಮನಿಸಬೇಕು.

ಇನ್ನೊಂದೆಡೆ ಬಿಥಲ್‌ನಲ್ಲಿರುವ ಅದಾನಿ ಸಿಎ ಗೋಡೌನ್ ಪ್ಲಾಂಟ್ ಮುಖ್ಯಸ್ಥ ಮಂಜೀತ್ ಶಿಲು ಮಾತನಾಡಿ, “ನಾವು ನೀಡುತ್ತಿರುವ ಬೆಲೆಗಳು ಉತ್ತಮವಾಗಿವೆ. ಬೆಳೆಗಾರರು ಪ್ಯಾಕಿಂಗ್ ಮತ್ತು ಗ್ರೇಡಿಂಗ್‌ಗೆ ಹಣ ಪಾವತಿಸಬೇಕಾಗಿಲ್ಲ. ನಮ್ಮಲ್ಲಿ ಸುಮಾರು 17,000 ಬೆಳೆಗಾರರ ​​ಗುಂಪು ಇದೆ. ಅವರು ನಮಗೆ ಸೇಬು ಮಾರುತ್ತಾರೆ. ನಾವು ಬೆಲೆಗಳನ್ನು ಘೋಷಿಸಿದಾಗಿನಿಂದ ಯಾರೂ ಆ ಬಗ್ಗೆ ನಮಗೆ ದೂರು ನೀಡಿಲ್ಲ. ಅದಾನಿ ಕಂಪನಿಗೆ ಸೇಬು ನೀಡದ ಬೆಳೆಗಾರರು ಮಾತ್ರ ದೂರು ನೀಡುತ್ತಿದ್ದಾರೆ” ಎಂದಿದ್ದಾರೆ.

ಅದಾನಿ ಕಂಪನಿ ದರಗಳು ಅತ್ಯಂತ ಕಳಪೆ ಮಟ್ಟದ್ದಾಗಿವೆ. ಎಪಿಎಂಸಿ ಮಂಡಿಗಳಲ್ಲಿ ಇದಕ್ಕಿಂತ ಹೆಚ್ಚಿನ ಬೆಲೆ ರೈತರಿಗೆ ಸಿಗುತ್ತಿದೆ ಎಂದು ಪ್ರಗತಿಪರ ಬೆಳೆಗಾರರ ​​ಸಂಘದ ಅಧ್ಯಕ್ಷ ಲೋಕಿಂದರ್ ಬಿಶ್ತ್ ಹೇಳಿದ್ದಾರೆ. ಅದಾನಿ ಕಂಪನಿಯ ಸಿಎ ಸ್ಟೋರ್‌ಗಳನ್ನು ಸ್ಥಾಪಿಸಲು ಸರ್ಕಾರದಿಂದ ದೊಡ್ಡ ಸಬ್ಸಿಡಿಗಳನ್ನು ಪಡೆದಿದ್ದು ಈಗ ರೈತರನ್ನು ಶೋಷಣೆ ಮಾಡುತ್ತಿದ್ದಾರೆ. ಈ ಕಂಪನಿಗಳ ಮೋಸಜಾಲದಿಂದ ರೈತರು ಬಿಡುಗಡೆ ಹೊಂದಲು ಸರ್ಕಾರವು ಕೋಲ್ಡ್‌ ಸ್ಟೋರೇಜ್‌ಗಳನ್ನು ರೈತರಿಗೆ ನಿರ್ಮಿಸಿಕೊಡಬೇಕು. ಇದರಿಂದ ರೈತರು ಬೆಲೆಕುಸಿತ ಉಂಟಾದಾಗ ಅತಿ ಕಡಿಮೆ ಬೆಲೆಗೆ ಸೇಬು ಮಾರುವುದು ತಪ್ಪುತ್ತದೆ ಎಂದು ಅವರು ಒತ್ತಾಯಿಸಿದ್ದಾರೆ.

ಸರ್ಕಾರವು ಗಣನೀಯ ಪ್ರಮಾಣದ ಸೇಬುಗಳನ್ನು ಸಮಂಜಸವಾದ ಬೆಲೆಯಲ್ಲಿ ಖರೀದಿಸಿದರೆ, ಕಾಶ್ಮೀರದ ನಾಫೆಡ್‌ನಂತೆ ಮಾರುಕಟ್ಟೆಯು ಹೆಚ್ಚು ಕಡಿಮೆ ಸ್ಥಿರವಾಗಿರುತ್ತದೆ ಮತ್ತು ಮಾರುಕಟ್ಟೆ ಶಕ್ತಿಗಳು ಬೆಳೆಗಾರರನ್ನು ಶೋಷಿಸಲು ಸಾಧ್ಯವಾಗುವುದಿಲ್ಲ ಎಂದು ಸಹ ಅವರು ಒತ್ತಾಯಿಸಿದ್ದಾರೆ.

ಇದೇ ಸಂದರ್ಭದಲ್ಲಿ ಹಿಮಾಚಲ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಕುಲದೀಪ್ ರಾಥೋರ್ ಅದಾನಿ ಕಂಪನಿಯ ರೈತ ವಿರೋಧಿ ಧೋರಣೆಯನ್ನು ಖಂಡಿಸಿದ್ದಾರೆ. ಸರ್ಕಾರದ ಮೌನ ಅನುಮೋದನೆಯೊಂದಿಗೆ ಅದಾನಿ ಕಂಪನಿಗೆ ಸೇಬು ಬೆಲೆಯನ್ನು ಕಡಿಮೆ ಮಾಡಿದೆ. ಈಗಾಗಿ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು ಕೂಡಲೇ ಸರ್ಕಾರ ಅವರ ನೆರವಿಗೆ ಧಾವಿಸಬೇಕು ಮತ್ತು ಅದಾನಿ ಕಂಪನಿ ಹೆಚ್ಚು ಬೆಲೆ ನೀಡುವಂತೆ ತಾಕೀತು ಮಾಡಬೇಕೆಂದು ಒತ್ತಾಯಿಸಿದ್ದಾರೆ.

1984 ರಿಂದ ರಾಜ್ಯ ಸರ್ಕಾರಗಳು ರೈತರಿಗೆ ಕೃಷಿ ಉಪಕರಣಗಳ ಜೊತೆಗೆ ಕೀಟನಾಶಕ, ಶಿಲೀಂಧ್ರನಾಶಕ ಮತ್ತು ಇತರ ಔಷಧಿಗಳ ಮೇಲೆ ಸಬ್ಸಿಡಿಗಳನ್ನು ನೀಡುತ್ತಿವೆ ಆದರೆ ಬಿಜೆಪಿ ಸರ್ಕಾರವು ಈ ಎಲ್ಲಾ ಸಬ್ಸಿಡಿಗಳನ್ನು ನಿಲ್ಲಿಸಿದೆ ಎಂದು ಅವರು ಆರೋಪಿಸಿದ್ದಾರೆ.

ಕಳೆದ ವರ್ಷ 88 ರೂ ಗೆ ಒಂದು ಕೆಜಿ ಪ್ರೀಮಿಯಂ ಸೇಬು ಖರೀದಿಸುತ್ತಿದ್ದ ಅದಾನಿ ಕಂಪನಿ ಈಗ ಕೇವಲ 72 ರೂ ಖರೀದಿಸಲು ಮುಂದಾಗಿದೆ. ರೈತರು ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಂಡ ಕಾರಣ ನಷ್ಟವಾದರೂ ಅಲ್ಲಿಯೇ ಮಾರಬೇಕಾಗಿದೆ. ಇನ್ನೊಂದೆಡೆ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ಅವನ್ನ ನಿರ್ನಾಮ ಮಾಡಲಾಗುತ್ತಿದೆ. ಈ ರೀತಿಯಾಗಿ ರೈತರು ಕಾರ್ಪೊರೇಟ್ ಕಂಪನಿಗಳ ಅಡಿಯಾಳಾಗಬೇಕಾಗುತ್ತದೆ. ಹಾಗಾಗಿ ಕೃಷಿ ಕಾನೂನುಗಳು ಬೇಡ ಮತ್ತು ಎಪಿಎಂಸಿಗಳು ಗಟ್ಟಿಯಾಗಬೇಕು, ಅಲ್ಲಿನ ಭ್ರಷ್ಟಾಚಾರ ನಿಲ್ಲಬೇಕು ಎಂಬುದು ರೈತರ ಆಗ್ರಹವಾಗಿದೆ. ಅದಕ್ಕಾಗಿಯೇ ದೆಹಲಿಯಲ್ಲಿ ತೀವ್ರ ಹೋರಾಟ ನಡೆಸುತ್ತಿದ್ದಾರೆ.


ಇದನ್ನೂ ಓದಿ: ರೈತ ಹೋರಾಟ: ತಾಳ್ಮೆ, ಬದ್ಧತೆ, ಶಿಸ್ತಿನ ಐತಿಹಾಸಿಕ ಹೋರಾಟಕ್ಕೆ 9 ತಿಂಗಳು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...

ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು ಬಿಸಿಯೂಟ ಯೋಜನೆಯಿಂದ ಹೊರಕ್ಕೆ : ಸಂಸತ್ತಿಗೆ ತಿಳಿಸಿದ ಕೇಂದ್ರ

ಕಳೆದ ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು 'ಪ್ರಧಾನಮಂತ್ರಿ ಪೋಷಣ್ ಯೋಜನೆ'ಯಿಂದ (ಮಧ್ಯಾಹ್ನದ ಬಿಸಿಯೂಟ) ಹೊರ ಬಿದ್ದಿವೆ. 2020-21ರಲ್ಲಿ 11.19 ಲಕ್ಷ ಇದ್ದ ಶಾಲೆಗಳ ಸಂಖ್ಯೆ 2024-25ರಲ್ಲಿ 10.35ಕ್ಕೆ ಕುಸಿದಿದೆ ಎಂದು...

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...

ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳಕ್ಕೆ 3 ಲಕ್ಷ ರೂ. ದಂಡ ವಸೂಲಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣವೊಂದರ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಿವಾಸಿಗಳಿಂದ ದಂಡ ವಸೂಲಿ ಮಾಡಿದ ಮತ್ತು ಅಪರಾಧಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಕುಂಬಳಗೋಡು...

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...