Homeಚಳವಳಿರೈತ ಹೋರಾಟ: ತಾಳ್ಮೆ, ಬದ್ಧತೆ, ಶಿಸ್ತಿನ ಐತಿಹಾಸಿಕ ಹೋರಾಟಕ್ಕೆ 9 ತಿಂಗಳು

ರೈತ ಹೋರಾಟ: ತಾಳ್ಮೆ, ಬದ್ಧತೆ, ಶಿಸ್ತಿನ ಐತಿಹಾಸಿಕ ಹೋರಾಟಕ್ಕೆ 9 ತಿಂಗಳು

ಸಿಂಘು ಗಡಿಯಲ್ಲಿ ಗುರುವಾರದಿಂದ 2 ದಿನಗಳ ರಾಷ್ಟ್ರೀಯ ಸಮಾವೇಶವನ್ನು ರೈತರು ಆಯೋಜಿಸಿದ್ದಾರೆ

- Advertisement -
- Advertisement -

ಒಕ್ಕೂಟ ಸರ್ಕಾರದ ಮೂರು ವಿವಾದಾತ್ಮಕ ಕೃಷಿ ಕಾನೂನುಗಳ ವಿರುದ್ಧ ರೈತರು ನಡೆಸುತ್ತಿರುವ ತಾಳ್ಮೆ, ಬದ್ಧತೆ, ಶಿಸ್ತಿನ ಐತಿಹಾಸಿಕ ಹೋರಾಟಕ್ಕೆ ಒಂಬತ್ತು ತಿಂಗಳು ತುಂಬಿದೆ. ಈ ಹಿನ್ನೆಲೆಯಲ್ಲಿ ಪ್ರತಿಭಟನಾ ಸ್ಥಳ ಸಿಂಘು ಗಡಿಯಲ್ಲಿ ರಾಷ್ಟ್ರೀಯ ಸಮಾವೇಶವನ್ನು ರೈತರು ಆಯೋಜಿಸಿದ್ದಾರೆ.

ರೈತರು, ಮಹಿಳೆಯರು, ಯುವಕರು ಮತ್ತು ಕಾರ್ಮಿಕರ ಸಂಘಟನೆಗಳ 1,500 ಪ್ರತಿನಿಧಿಗಳು ಭಾಗವಹಿಸುವ ಈ ಕಾರ್ಯಗಾರವು ಎರಡು ದಿನಗಳು ನಡೆಯಲಿದೆ. ವಿವಾದಾತ್ಮಕ ಕೃಷಿ ಕಾನೂನುಗಳ ವಿರುದ್ಧ ನಡೆಯುತ್ತಿರುವ ಚಳುವಳಿಯ ತೀವ್ರತೆ ಮತ್ತು ವಿಸ್ತರಣೆಯ ಗುರಿಯನ್ನು ಈ ಕಾರ್ಯಗಾರ ಹೊಂದಿದೆ.

ಸಮಾವೇಶದ ಭಾಗವಾಗಿ, ಉದ್ಘಾಟನಾ ಅಧಿವೇಶನ ಸೇರಿದಂತೆ ಮೂರು ಗೋಷ್ಠಿಗಳು ಗುರುವಾರ ನಡೆಯಲಿದೆ.  ಕೈಗಾರಿಕಾ ಕಾರ್ಮಿಕರ ಸಮಸ್ಯೆಗಳ ಬಗ್ಗೆ ಒಂದು ಗೋಷ್ಠಿ. ಕೃಷಿ ಕಾರ್ಮಿಕ, ಗ್ರಾಮೀಣ, ಬಡ ಮತ್ತು ಬುಡಕಟ್ಟು ಜನರ ಕುರಿತು ಮತ್ತೆರಡು ಗೋಷ್ಠಿಗಳು ನಡೆಯಲಿವೆ.

ಇದನ್ನೂ ಓದಿ: ಕೃಷಿ ಕಾಯ್ದೆ, ಎಂಎಸ್‌ಪಿ ಬೇಡಿಕೆ ಈಡೇರದಿದ್ದರೆ ಸೆ.8 ರಿಂದ ಪ್ರತಿಭಟನೆ: ಕೇಂದ್ರಕ್ಕೆ RSS ಅಂಗಸಂಸ್ಥೆ ಬಿಕೆಎಸ್ ಎಚ್ಚರಿಕೆ

ಮೂರು ಕಾರ್ಪೊರೇಟ್ ಕೃಷಿ ಕಾನೂನುಗಳನ್ನು ರದ್ದುಗೊಳಿಸುವುದು, ಎಲ್ಲಾ ಬೆಳೆಗಳ ಎಂಎಸ್‌ಪಿಗೆ ಕಾನೂನು ಖಾತರಿ ಮಾಡುವುದು, 2021-ವಿದ್ಯುತ್ ಬಿಲ್ ರದ್ದು ಮತ್ತು ಎನ್‌ಸಿಆರ್‌ನಲ್ಲಿನ ವಾಯು ಗುಣಮಟ್ಟ ನಿರ್ವಹಣೆಯ ಆಯೋಗದ ಅಡಿಯಲ್ಲಿ ರೈತರ ವಿರುದ್ಧ ಕಾನೂನು ಕ್ರಮ ಜರುಗಿಸುವುದರ ಕುರಿತು ಸಮಾವೇಶದಲ್ಲಿ ಚರ್ಚಿಸಲು ನಿರ್ಧರಿಸಲಾಗಿದೆ.

ಗುರುವಾರ ಹೋರಾಟಕ್ಕೆ 9 ತಿಂಗಳು ತುಂಬಿದ ಹಿನ್ನೆಲೆ ಟ್ವಿಟರ್‌ನಲ್ಲಿ #9MonthsOfFarmersProtest ಮತ್ತು #FarmersProtest ಹ್ಯಾಶ್‌ಟ್ಯಾಗ್‌ ಟಾಪ್ ಒನ್ ಟ್ರೆಂಡಿಂಗ್‌ನಲ್ಲಿದೆ.

ಕಳೆದ ವರ್ಷ ನವೆಂಬರ್ ನಿಂದ ಮೂರು ವಿವಾದಿತ ಕಾನೂನುಗಳನ್ನು ರದ್ದುಗೊಳಿಸಬೇಕೆಂದು ಆಗ್ರಹಿಸಿ ರೈತರು ದೆಹಲಿ ಗಡಿಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಕಾನೂನುಗಳು ಕನಿಷ್ಠ ಬೆಂಬಲ ಬೆಲೆಯನ್ನು (ಎಂಎಸ್‌ಪಿ) ರದ್ದುಗೊಳಿಸುತ್ತದೆ. ಮತ್ತು ಕಾರ್ಪೋರೇಟರ್‌ಗಳಿಗೆ ಹೆಚ್ಚಿನ ಲಾಭ ನೀಡುತ್ತವೆ ಎಂದು ಪ್ರತಿಭಟನಾ ನಿರತ ರೈತರು ಆರೋಪಿಸಿದ್ದಾರೆ.

ಈ ಕುರಿತು ರೈತರು ಮತ್ತು ಒಕ್ಕೂಟ ಸರ್ಕಾರದೊಂದಿಗೆ 11 ಸುತ್ತಿನ ಮಾತುಕತೆಗಳು ನಡೆದಿವೆ. ಆದರೆ, ಕಾನೂನುಗಳು ರದ್ದತಿಯೊಂದೆ ಮುಖ್ಯ ಎಂದಿರುವ ರೈತರು ಪಟ್ಟು ಹಿಡಿದು ಪ್ರತಿಭಟನ ನಡೆಸುತ್ತಿದ್ದಾರೆ.


ಇದನ್ನೂ ಓದಿ: ಅಪ್ಪಂದಿರ ಹೊಲಗಳಲ್ಲಿನ ಪರಿಶ್ರಮ, ಒಲಿಂಪಿಕ್ಸ್‌ನಲ್ಲಿ ಮಕ್ಕಳ ಪ್ರತಿಫಲ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕೋವಿಡ್ ಭ್ರಷ್ಟ ಸುಧಾಕರ್ ಪರವಾಗಿ ಮತ ಕೇಳಲು ಪ್ರಧಾನಿ ಮೋದಿ ಚಿಕ್ಕಬಳ್ಳಾಪುರಕ್ಕೆ ಬರುತ್ತಿದ್ದಾರೆ :...

0
ಪ್ರಧಾನಿ ಮೋದಿಯವರು ಹತ್ತು ವರ್ಷದಲ್ಲಿ ಕೊಟ್ಟ ಒಂದೂ ಆಶ್ವಾಸನೆಯನ್ನೂ ಈಡೇರಿಸದೆ ಭಾರತೀಯರ ನಂಬಿಕೆಗಳಿಗೆ ದ್ರೋಹ ಬಗೆದಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಬಾಗೇಪಲ್ಲಿಯಲ್ಲಿ ನಡೆದ ಪ್ರಜಾಧ್ವನಿ-2 ಬೃಹತ್ ಜನ ಸಮಾವೇಶದಲ್ಲಿ...