ದೆಹಲಿಯ ಆಮ್ ಆದ್ಮಿ ಪಕ್ಷದ ಸರ್ಕಾರವು ತಾವು ಅಭಿವೃದ್ದಿಪಡಿಸಿದ ಸರ್ಕಾರಿ ಶಾಲೆಗಳ ಫೋಟೊಗಳನ್ನು ಮೋದಿ ಸರ್ಕಾರವು ತನ್ನ ಜಾಹೀರಾತಿನಲ್ಲಿ ಬಳಸಿಕೊಂಡಿದೆ ಎಂದು ಆರೋಪಿಸಿ ‘ಥ್ಯಾಂಕ್ಯೂ ಮೋದಿಜೀ’ ಎಂದು ವ್ಯಂಗ್ಯವಾಡಿದೆ.

1-5 ಶ್ರೇಣಿಗಳಿಗೆ ಪರ್ಯಾಯ ಶೈಕ್ಷಣಿಕ ಕ್ಯಾಲೆಂಡರ್ ಎಂಬ ಹೆಡ್ಡಿಂಗ್‌ನಲ್ಲಿ ಶೈಕ್ಷಣಿಕ ಸಚಿವಾಲಯವು ಶಾಲಾ ಮಕ್ಕಳ ಫೋಟೊವಿರುವ ಚಿತ್ರವನ್ನು ಹಾಕಿದೆ. ಅದಕ್ಕೆ ಪ್ರತಿಕ್ರಿಯಿಸಿರುವ ಆಪ್ “ನಿಮ್ಮ ಜಾಹಿರಾತುಗಾಗಿ ದೆಹಲಿ ಸರ್ಕಾರಿ ಶಾಲೆಗಳ ಚಿತ್ರ ಬಳಸಿದ್ದಕ್ಕಾಗಿ ಧನ್ಯವಾದಗಳು ಮೋದಿಜೀ. ನಿಮಗೆ ಇನ್ನೂ ಹೆಚ್ಚಿನ ಚಿತ್ರಗಳು ಬೇಕಾದರೆ, ನಮ್ಮನ್ನು ಕೇಳಿ” ಎಂದು ಟ್ವೀಟ್ ಮಾಡಿದೆ.

ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ, ಶಿಕ್ಷಣ ಸಚಿವಾಲಯವು ಮಂಗಳವಾರ ರಾಷ್ಟ್ರೀಯ ಶಿಕ್ಷಣ ನೀತಿ (NEP 2020) ಜಾರಿಯ ಒಂದು ವರ್ಷದ ನೆನಪಿಗಾಗಿ ಇಂದು NEP ಅನುಷ್ಠಾನದ ಒಂದು ವರ್ಷದ ಸಾಧನೆಗಳ ಕಿರುಪುಸ್ತಕವನ್ನು ಬಿಡುಗಡೆ ಮಾಡಿದೆ. ಈ ಕಿರುಪುಸ್ತಕವನ್ನು ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಬಿಡುಗಡೆ ಮಾಡಿದರು. ಅದರಲ್ಲಿರುವ ಫೋಟೊಗಳು ದೆಹಲಿಯಲ್ಲಿ ಆಮ್ ಆದ್ಮಿ ಸರ್ಕಾರ ಅಭಿವೃದ್ದಿಪಡಿಸಿರುವ ಸರ್ಕಾರಿ ಶಾಲೆಗಳು ಚಿತ್ರಗಳು ಎಂದು ಆಪ್ ಸಾಕ್ಷಿ ಸಮೇತ ನಿರೂಪಿಸಿದೆ.

ಹೇಳಿಕೊಳ್ಳಲು ಯಾವ ಸಾಧನೆಯನ್ನೂ ಮಾಡದ ಬಿಜೆಪಿಯು ನಮ್ಮ ಅಭಿವೃದ್ದಿಯ ಫೋಟೊಗಳನ್ನು ಬಳಸಿಕೊಂಡು ತಾನು ಮಾಡಿದ್ದಾಗಿ ಪ್ರಚಾರ ಮಾಡಿಕೊಳ್ಳುತ್ತಿದೆ ಎಂದು ಆಪ್ ಆರೋಪಿಸಿದೆ.


ಇದನ್ನೂ ಓದಿ: ರೋಹಿಂಗ್ಯಾ ನಿರಾಶ್ರಿತರಿಗೆ ದೆಹಲಿ ಸರ್ಕಾರ ಸೌಲಭ್ಯಗಳನ್ನು ಒದಗಿಸಿದೆ ಎಂದು ಸುಳ್ಳು ಸುದ್ದಿ ಹಂಚುತ್ತಿರುವ ಬಿಜೆಪಿ

LEAVE A REPLY

Please enter your comment!
Please enter your name here