Homeಕರ್ನಾಟಕಸಾಮೂಹಿಕ ಅತ್ಯಾಚಾರ ಪ್ರಕರಣ: ಯುವತಿ ಅಲ್ಲಿಗೆ ಹೋಗಬಾರದಿತ್ತು ಎಂದು ಗೃಹ ಸಚಿವರ ಬೇಜವಾಬ್ದಾರಿ ಹೇಳಿಕೆ

ಸಾಮೂಹಿಕ ಅತ್ಯಾಚಾರ ಪ್ರಕರಣ: ಯುವತಿ ಅಲ್ಲಿಗೆ ಹೋಗಬಾರದಿತ್ತು ಎಂದು ಗೃಹ ಸಚಿವರ ಬೇಜವಾಬ್ದಾರಿ ಹೇಳಿಕೆ

ನಿರ್ಭಯಾ ಗೈಡ್‌ಲೈನ್ಸ್‌ ಪ್ರಕಾರ ಜವಾಬ್ದಾರಿಯುತ ಸ್ಥಾನದಲ್ಲಿರುವವರು, ಅಧಿಕಾರಿಗಳು ಸಂತ್ರಸ್ತರ ವಿರುದ್ಧ ಹೇಳಿಕೆ ಕೊಡುವಂತಿಲ್ಲ. ಗೃಹ ಸಚಿವರು ಅದನ್ನು ಉಲ್ಲಂಘಿಸಿದ್ದಾರೆ..

- Advertisement -
- Advertisement -

ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ವಿದ್ಯಾರ್ಥಿನಿಯೊರ್ವಳ ಮೇಲೆ ಅಮಾನವೀಯ ಸಾಮೂಹಿಕ ಅತ್ಯಾಚಾರ ನಡೆದಿದ್ದು, ಪ್ರಕರಣವೀಗ ರಾಜಕೀಯ ಕೆಸರೆರಚಾಟ ಕಾರಣವಾಗಿದೆ. ನಿರ್ಜನ ಪ್ರದೇಶಕ್ಕೆ ಯುವತಿ ಆ ಸಮಯದಲ್ಲಿ ಅಲ್ಲಿಗೆ ಹೋಗಿದ್ದು ತಪ್ಪು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಬೇಜವಾಬ್ದಾರಿ ಹೇಳಿಕೆ ನೀಡಿ ವಿವಾದಕ್ಕೆ ಸಿಲುಕಿಕೊಂಡಿದ್ದಾರೆ.

“ಯುವಕ-ಯುವತಿ 7, 7:30ಯ ಸಮಯಕ್ಕೆ ಅಲ್ಲಿಗೆ ಹೋಗಿದ್ದಾರೆ. ಅದು ನಿರ್ಜನವಾದ ಪ್ರದೇಶ. ಅವರು ಹೋಗಬಾರದಿತ್ತು. ಯಾರನ್ನು ಅಲ್ಲಿಗೆ ಹೋಗಬೇಡಿ ಎಂದು ತಡೆಯಲು ನಮಗೆ ಆಗುವುದಿಲ್ಲ. ಅವರು ಹೋಗಿದ್ದಾರೆ” ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಯುವತಿ ಅಲ್ಲಿಗೆ ಹೋಗಿದ್ದೆ ತಪ್ಪು, ಸಂಜೆಯ ವೇಳೆ ಹೊರ ಬಂದಿದ್ದೆ ತಪ್ಪು ಎನ್ನುವಂತೆ ಮಾತನಾಡಿದ್ದಾರೆ. ಗೃಹ ಸಚಿವರ ಹೇಳಿಕೆಗೆ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿದೆ.

ಇನ್ನು ಪ್ರಕರಣ ಕುರಿತು ತನಿಖೆಗೆ ಒತ್ತಾಯಿಸಿದ ಕಾಂಗ್ರೆಸ್ ವಿರುದ್ಧ ಗೃಹ ಸಚಿವ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. “ಕಾಂಗ್ರೆಸ್‌ನವರು ನನ್ನ ಮೇಲೆ ರೇಪ್ ಮಾಡಲು ಪ್ರಯತ್ನಿಸುತ್ತಿದ್ದಾರೆ. ಗೃಹ ಸಚಿವರನ್ನು ರೇಪ್ ಮಾಡಲು ಪ್ರಯತ್ನಿಸುತ್ತಿದ್ದಾರೆ. ರಾಜಕೀಯ ಲಾಭ ಪಡೆಯಲು ಅಮಾನುಷವಾದ ಕೆಲಸ ಮಾಡುತ್ತಿದ್ದಾರೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಕೊರೊನಾ ಲಾಕ್‌ಡೌನ್; ಹೆಚ್ಚುತ್ತಿರುವ ಬಡತನ ಮತ್ತು ಬಾಲ್ಯವಿವಾಹದ ರಣನರ್ತನ

ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ಹೇಳಿಕೆ ಹೀಗಿದೆ.

“ರೇಪ್ ಆಗಿದ್ದು ಅಲ್ಲಿ… ಕಾಂಗ್ರೆಸ್‌ ನನ್ನನ್ನು ರೇಪ್ ಮಾಡಲು ಪ್ರಯತ್ನಿಸುತ್ತಿದೆ. ಕಾಂಗ್ರೆಸ್ ಗೃಹ ಸಚಿವರನ್ನುರೇಪ್ ಮಾಡಲು ಪ್ರಯತ್ನಿಸುತ್ತಿದೆ. ರಾಜಕೀಯ ಲಾಭ ಪಡೆಯಲು ಪ್ರಯತ್ನಿಸುತ್ತಿರುವುದು ಅಮಾನುಷವಾದ ಕೆಲಸ. ಎಲ್ಲೋ ನಡೆಯುತ್ತದೆ. ನಾವೆಲ್ಲ ಮಾನವೀಯ ದೃಷ್ಠಿಯಿಂದ ಅದನ್ನು ತನಿಖೆ ಮಾಡಿಸುವುದು ಬಿಟ್ಟು ರಾಜಕೀಯ ಲಾಭ ಗಳಿಸುವ ಪ್ರಯತ್ನ ನಡೆಸುತ್ತಿರುವುದರ ಬಗ್ಗೆ ಜನ ಯೋಚನೆ ಮಾಡುತ್ತಾರೆ. ನಾವು ಏನು ಮಾಡಬೇಕು, ನಮ್ಮ ಪೊಲೀಸರು ಏನ್ ಮಾಡಬೇಕು ಅಂದರೆ, ಮುಂದೆ ಈ ರೀತಿಯಾಗದಂತೆ ಸಂದೇಶ ನೀಡಬೇಕು ಇದರ ಸೂಚನೆ ನೀಡಿದ್ದೇನೆ ಪೊಲೀಸರು ಹಾಗೆ ಮಾಡುತ್ತಾರೆ. ಅವರು 7, 7:30ಕ್ಕೆ ಅಲ್ಲಿಗೆ ಹೋಗಿದ್ದಾರೆ. ಅದು ನಿರ್ಜನವಾದ ಪ್ರದೇಶ. ಅವರು ಹೋಗಬಾರದಿತ್ತು. ಯಾರನ್ನು ಅಲ್ಲಿಗೆ ಹೋಗಬೇಡಿ ಎಂದು ತಡೆಯಲು ನಮಗೆ ಆಗುವುದಿಲ್ಲ. ಅವರು ಹೋಗಿದ್ದಾರೆ. ಹೋಗಿದ್ದಾಗ.. ಅಲ್ಲಿ ನಿರ್ಜನ ಪ್ರದೇಶ, ಹೇಳಿ ಕೇಳಿ ಯಾರು ಇರುವುದಿಲ್ಲ. ಅಲ್ಲಿ ಗರುಡ ವಾಹನ ತಿರುಗಬೇಕಿತ್ತು ಅಂತ ಹೇಳ್ತಿದ್ರು, ಅದು ಇರಲಿಲ್ಲ. ನಾನು ಇವತ್ತು ಅಲ್ಲಿಗೆ ಅಧಿಕಾರಿಗಳ ಜೊತೆಗೆ ಹೋಗ್ತಿದ್ದೇನೆ. ಎಲ್ಲಿ ಸಮಸ್ಯೆಗಳಿವೆ ಎಂಬುದನ್ನು ಚರ್ಚಿಸಿ ಮುಂದೆ ಹೀಗಾಗದಂತೆ ನೋಡಿಕೊಳ್ತೇವೆ” 

ಇದನ್ನೂ ಓದಿ: ಸಾಹಿತಿಯ ವೈಯಕ್ತಿಕ ಅನುಭವಗಳನ್ನು ಸಾರ್ವತ್ರಿಕಗೊಳಿಸಿ ಪ್ರತಿಪಾದಿಸುವ ಅಪಾಯ

ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿರುವ ಕಾಂಗ್ರೆಸ್, ರೇಪ್ ಮಾಡುವುದೇನಿದ್ದರೂ ಬಿಜೆಪಿಯ ಸಂಸ್ಕೃತಿಯೇ ಹೊರತು ಕಾಂಗ್ರೆಸ್‌ನದ್ದಲ್ಲ ಗೃಹಸಚಿವರೇ ಎಂದು ವ್ಯಂಗ್ಯವಾಡಿದೆ.

“ರೇಪ್ ಮಾಡುವುದೇನಿದ್ದರೂ ಬಿಜೆಪಿಯ ಸಂಸ್ಕೃತಿಯೇ ಹೊರತು ಕಾಂಗ್ರೆಸ್‌ನದ್ದಲ್ಲ ಗೃಹಸಚಿವರೇ. ಕಳೆದ ಬಾರಿಯ ಅಧಿಕಾರಾವಧಿಯಲ್ಲಿ ನಿಮ್ಮ ಶಾಸಕರೊಬ್ಬರು ಅತ್ಯಾಚಾರವೆಸಗಿದ್ದರು.  ಈ ಬಾರಿ ನಿಮ್ಮ ಮಾಜಿ ಸಚಿವರೊಬ್ಬರು ಉದ್ಯೋಗ ಕೇಳಿದ ಯುವತಿಯನ್ನು ಅತ್ಯಾಚಾರವೆಸಗಿದ್ದರು. ಅತ್ಯಾಚಾರಿಗಳೇ ತುಂಬಿರುವ ಬಿಜೆಪಿಯಿಂದ ಇನ್ನೆಂತಹ ಹೇಳಿಕೆ ನಿರೀಕ್ಷಿಸಲಾದೀತು!” ಎಂದು ಕಿಡಿ ಕಾರಿದೆ.

7.30ರ ಸಮಯದಲ್ಲಿ ಯುವತಿ ಅಲ್ಲಿಗೆ ಹೋಗಬಾರದಿತ್ತು ಎಂಬ ಗೃಹ ಸಚಿವರ ಬೇಜವಾಬ್ದಾರಿ ಹೇಳಿಕೆಗೆ, “ರಾತ್ರಿ 7.30ರ ಸಮಯದಲ್ಲಿ ಅವರು ಅಲ್ಲಿಗೆ ಹೋಗಲೇಬಾರದಿತ್ತು! ರಾಜ್ಯದ ರಕ್ಷಣೆ ಹೊತ್ತ ಗೃಹಸಚಿವರೇ, ಇಂತಹ ಅಯೋಗ್ಯತನದ ಹೇಳಿಕೆ ಕೊಡಲು ನಾಚಿಕೆ ಆಗುವುದಿಲ್ಲವೇ..? ಬಿಜೆಪಿ ಆಡಳಿತದಲ್ಲಿ ರಾಜ್ಯದಲ್ಲಿ 7.30ರ ಸಂಜೆಯೂ ಅಪಾಯಕಾರಿ ಎಂದು ಸ್ವತಃ ಅವರೇ ಒಪ್ಪಿದ್ದಾರೆ. ಇಂತಹ ಅಸಮರ್ಥ ಬಿಜೆಪಿಯಿಂದ ರಾಜ್ಯದ ಜನತೆಯ ರಕ್ಷಣೆ ಸಾಧ್ಯವೇ ಇಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದೆ.

“ನಿರ್ಭಯಾ ಗೈಡ್‌ಲೈನ್ಸ್‌ ಪ್ರಕಾರ ಜವಾಬ್ದಾರಿಯುತ ಸ್ಥಾನದಲ್ಲಿರುವವರು, ಅಧಿಕಾರಿಗಳು ಸಂತ್ರಸ್ತರ ವಿರುದ್ಧ ಹೇಳಿಕೆ ಕೊಡುವಂತಿಲ್ಲ. ಇಲ್ಲಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರವಾಗಿದ್ದರೂ ಅದು ಒಂದು ಸರ್ಕಾರದ ವಿರುದ್ಧದ ಕೃತ್ಯ. ಅಲ್ಲಿ ವಿದ್ಯಾರ್ಥಿನಿ ಸಂತ್ರಸ್ತೆ ಅಷ್ಟೇ. ಇಂತಹ ಸಮಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವುದು ರಾಜ್ಯದ ಕೆಲಸ. ಅದರಲ್ಲಿ ವಿಫಲವಾಗಿದ್ದಕ್ಕೆ ಕೊಲೆ, ಅತ್ಯಾಚಾರಗಳು ನಡೆಯುತ್ತವೆ. ಇಂತಹ ಸಂದರ್ಭದಲ್ಲಿ ಗೃಹ ಸಚಿವರ ಹೇಳಿಕೆ ತನಿಖೆ ಮೇಲೆ ಪ್ರಭಾವ ಬಿರುತ್ತದೆ ಮತ್ತು ಆರೋಪಿಗಳ ಪರವಾಗಿದೆ. ಇದು ಕಾನೂನಿನ ಸ್ಪಷ್ಟ ಉಲ್ಲಂಘನೆಯಾಗಿದೆ” ಎಂದು ಹೆಸರು ಹೇಳಲು ಇಚ್ಛಿಸದ ವಕೀಲರು ಪ್ರತಿಕ್ರಿಯಿಸಿದ್ದಾರೆ.


ಇದನ್ನೂ ಓದಿ: ಮೈಸೂರಿನಲ್ಲಿ ವೈದ್ಯ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ: ಪ್ರಕರಣ ದಾಖಲು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...