Homeಅಂತರಾಷ್ಟ್ರೀಯಇಸ್ರೇಲ್‌ನ ಅತೀ ದೊಡ್ಡ ಬಂದರು ‘ಅದಾನಿ ಗ್ರೂಪ್’ ವಶಕ್ಕೆ

ಇಸ್ರೇಲ್‌ನ ಅತೀ ದೊಡ್ಡ ಬಂದರು ‘ಅದಾನಿ ಗ್ರೂಪ್’ ವಶಕ್ಕೆ

- Advertisement -
- Advertisement -

ಇಸ್ರೇಲ್‌ನ ಗಡೋಟ್ ಗ್ರೂಪ್‌ನ ಸಹಭಾಗಿತ್ವದೊಂದಿಗೆ ಅದಾನಿ ಗ್ರೂಪ್ ನೇತೃತ್ವದ ಒಕ್ಕೂಟವು ಇಸ್ರೇಲ್‌‌ ದೇಶದ ಹೈಫಾ ಬಂದರಿನ ಕಾರ್ಯಾಚರಣೆಗಳನ್ನು ಖಾಸಗೀಕರಣಗೊಳಿಸುವ ಬಿಡ್ ಅನ್ನು ಗೆದ್ದಿದೆ.

2054 ರವರೆಗಿನ ರಿಯಾಯಿತಿ ಅವಧಿಗೆ 1.8 ಬಿಲಿಯನ್‌ ಡಾಲರ್‌ಗೆ ಹೈಫಾ ಪೋರ್ಟ್ ಕಂಪನಿ ಲಿಮಿಟೆಡ್‌ನ 100% ಷೇರುಗಳನ್ನು ಖರೀದಿಸುವ ಹಕ್ಕನ್ನು ಬಹುರಾಷ್ಟ್ರೀಯ ಕಂಪನಿಯು ಗೆದ್ದಿದೆ. ಇದರಲ್ಲಿ ಅದಾನಿ ಪೋರ್ಟ್ಸ್ ವಿಶೇಷ ಆರ್ಥಿಕ ವಲಯ ಲಿಮಿಟೆಡ್ (APSEZ) ಮತ್ತು ಗಡೋಟ್ ಗ್ರೂಪ್ ಒಕ್ಕೂಟದಲ್ಲಿ ಕ್ರಮವಾಗಿ 70% ಮತ್ತು 30% ಷೇರುಗಳನ್ನು ಹೊಂದಿವೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಹೈಫಾ ಇಸ್ರೇಲ್‌ನ ಎರಡು ದೊಡ್ಡ ವಾಣಿಜ್ಯ ಬಂದರುಗಳಾಗಿದ್ದು, ಇದು ದೇಶದ ಅರ್ಧದಷ್ಟು ಕಂಟೈನರ್ ಸರಕುಗಳ ವ್ಯವಹರವನ್ನು ನಡೆಸುತ್ತದೆ. ಇದು ಪ್ರಯಾಣಿಕ ಮತ್ತು ಕ್ರೂಸ್ ಹಡಗುಗಳಿಗೆ ಪ್ರಮುಖ ಬಂದರಾಗಿದೆ. ಈ ಬಂದರು ದೇಶದ ಮೂರನೇ ಅತಿ ದೊಡ್ಡ ನಗರದಲ್ಲಿದ್ದು, ರಾಜಧಾನಿ ಟೆಲ್ ಅವಿವ್‌ನಿಂದ 90 ಕಿಮೀ ದೂರದ ಬಂದಾಗಿದೆ. ಜೊತೆಗೆ ಇಸ್ರೇಲ್‌ನ ಪ್ರಮುಖ ಕೈಗಾರಿಕಾ ಪ್ರದೇಶದ ಹತ್ತಿರದಲ್ಲಿದೆ.

ಗಡೋಟ್ ಜೊತೆಗಿನ ಪಾಲುದಾರಿಕೆಯ ಕುರಿತು ಮಾತನಾಡಿದ ಗೌತಮ್ ಅದಾನಿ ಅವರ ಮಗ, ಅದಾನಿ ಬಂದರುಗಳು ಮತ್ತು ವಿಶೇಷ ಆರ್ಥಿಕ ವಲಯ ಲಿಮಿಟೆಡ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿರುವ ಕರಣ್ ಅದಾನಿ, ಈ ಸಂಸ್ಥೆಯು ವರ್ಷಗಳಿಂದ ತಮ್ಮ ವಿಶ್ವಾಸಾರ್ಹ ಪಾಲುದಾರ ಎಂದು ಹೇಳಿದ್ದಾರೆ.

“ದೀರ್ಘಾವಧಿಯಲ್ಲಿ, ಯುರೋಪ್ ಮತ್ತು ಮಧ್ಯಪ್ರಾಚ್ಯ ಎರಡಕ್ಕೂ ಇಸ್ರೇಲ್ ಸಂಪರ್ಕವಾಗುವುದನ್ನು ನಾವು ನಿರೀಕ್ಷಿಸುತ್ತಿರುವುದರಿಂದ ಇದು ಒಂದು ಪ್ರಚಂಡ ಬಂದರು” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಅದಾನಿಗೆ ಗುತ್ತಿಗೆ ನೀಡಲು ಶ್ರೀಲಂಕಾ ಅಧ್ಯಕ್ಷರ ಮೇಲೆ ಮೋದಿ ಒತ್ತಡ; ಆರೋಪ ಮಾಡಿದ್ದ ಅಧಿಕಾರಿ ರಾಜೀನಾಮೆ

ಬಂದರು ಸರಕುಗಳನ್ನು ವೈವಿಧ್ಯಗೊಳಿಸಲು ಮತ್ತು ವ್ಯಾಪಾರವನ್ನು ಸುಗಮಗೊಳಿಸುವುದಕ್ಕೆ ಸಹಾಯ ಮಾಡಲು, ಭಾರತ ಮತ್ತು ಹೈಫಾ ಬಂದರುಗಳ ನಡುವೆ ಕಾರ್ಯತಂತ್ರದ ವ್ಯಾಪಾರ ಮಾರ್ಗಗಳನ್ನು ಅಭಿವೃದ್ಧಿಪಡಿಸಲು ಅದಾನಿ ಗ್ರೂಪ್ ಎದುರು ನೋಡುತ್ತಿದೆ ಎಂದು ಅವರು ಹೇಳಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮ್ಯಾನೇಜ್‌ಮೆಂಟ್‌ ಸರ್ಕಾರ| ಆಡಿಯೊ ನನ್ನದೇ, ರಾಜೀನಾಮೆ ಕೇಳಿದರೆ ಕೊಡುವೆ- ಮಾಧುಸ್ವಾಮಿ

0
ರಾಜ್ಯದ ಕಾನೂನು ಸಚಿವ ಮಾಧುಸ್ವಾಮಿ ಅವರ ಆಡಿಯೊವೊಂದು ಸೋರಿಕೆಯಾಗಿರುವ ಪರಿಣಾಮ ಬಿಜೆಪಿ ಸರ್ಕಾರ ತೀವ್ರ ಮುಜುಗರಕ್ಕೊಳಗಾಗಿದ್ದು ಸರ್ಕಾರದೊಳಗೆ ಆಕ್ರೋಶ ಭುಗಿಲೆದ್ದಿದೆ. ಬಿಜೆಪಿ ನಾಯಕರು ಮಾಧುಸ್ವಾಮಿ ಹೇಳಿಕೆಗೆ ಭಿನ್ನಾಭಿಪ್ರಾಯ ವ್ಯಕ್ತಪಡಿಸುತ್ತಿದ್ದು, ಮಾಧುಸ್ವಾಮಿಯವರೂ ಪ್ರಕರಣಕ್ಕೆ ಸಂಬಂಧಿಸಿದಂತೆ...