ದೇಶದಲ್ಲಿ ಖಾಸಗೀಕರಣ ಬಿರುಸಿನಿಂದ ನಡೆಯುತ್ತಿದೆ. ಸರ್ಕಾರಿ, ಸ್ವಾಯತ್ತ ಸಂಸ್ಥೆಗಳನ್ನು ಖಾಸಗಿ ಸಹಭಾಗಿತ್ವದಲ್ಲಿ ನಡೆಸುವ ಹೊಸ ಆರ್ಥಿಕ ನೀತಿಯನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಳವಡಿಸಿಕೊಂಡಿದೆ. ಈಗಾಗಲೇ ದೇಶದ ಪ್ರಸಿದ್ಧ ಏರ್ ಇಂಡಿಯಾ, ಎಲ್‌ಐಸಿ, ಬಂದರುಗಳು ಮತ್ತು ವಿಮಾನ ನಿಲ್ಧಾಣಗಳನ್ನು ಖಾಸಗಿ ಉದ್ದಿಮೆ ಸಂಸ್ಥೆಗಳ ನಿರ್ವಹಣೆಗೆ ಹಸ್ತಾತಂತರಿಸಲಾಗಿದೆ. ಅದಕ್ಕೆ ಹೊಸ ಸೇರ್ಪಡೆ ಮುಂಬೈ ವಿಮಾನ ನಿಲ್ಧಾಣ.
ಮುಂಭೈ ಅಂತರಾಷ್ಟ್ರೀಯ ವಿಮಾನ ನಿಲ್ಧಾಣವನ್ನು ಸರ್ಕಾರ ಅದಾನಿ ಏರ್‌ಪೋರ್ಟ್ ಹೋಲ್ಡಿಂಗ್ ಲಿಮಿಟೆಡ್ ( AAHL) ಹಸ್ತಾಂತರಿಸಿದೆ. ಅದಾನಿ ಉದ್ಯಮ ಸಮೂಹದ ಮುಖ್ಯಸ್ಥ ಗೌತಮ್ ಅದಾನಿ ಈ ಕುರಿತು ಮಂಗಳವಾರ ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ.
We are delighted to take over management of the world class Mumbai International Airport. We promise to make Mumbai proud. The Adani Group will build an airport ecosystem of the future for business, leisure and entertainment. We will create thousands of new local jobs.
— Gautam Adani (@gautam_adani) July 13, 2021
ಇದನ್ನೂ ಓದಿ: ಬ್ಯಾಂಕ್‌ಗಳ ಖಾಸಗೀಕರಣಕ್ಕೆ ವಿರೋಧ: ಮಾರ್ಚ್ 15, 16ಕ್ಕೆ 10 ಲಕ್ಷ ಬ್ಯಾಂಕ್ ನೌಕರರ ಮುಷ್ಕರ
ಅಂತರಾಷ್ಟ್ರೀಯ ಗುಣಮಟ್ಟದ ಮೂಲ ಸೌಕರ್ಯ ಮತ್ತು ಉದ್ಯಮ ಸ್ನೇಹಿ ವಾತಾವರಣವನ್ನು ನಿರ್ಮಿಸುವುದೇ ನಮ್ಮ ಗುರಿ ಎಂದು ಗೌತಮ್ ಅದಾನಿ ಟ್ವೀಟ್ ಮಾಡಿದ್ದಾರೆ. ಈ ಹಿಂದೆ ಮಂಗಳೂರಿನ ಬಚ್ಪೆ ವಿಮಾನ ನಿಲ್ಧಾಣವನ್ನೂ ಅದಾನಿ ಸಮೂಹ ಪಡೆದುಕೊಂಡಿತ್ತು.
ಕೇಂದ್ರ ಸರ್ಕಾರದ ಖಾಸಗೀಕರಣ ನೀತಿ ವಿರುದ್ಧ ಸಾರ್ವಜನಿಕ ವಲಯದಲ್ಲಿ ವಿರೋಧ ವ್ಯಕ್ತವಾಗುತ್ತಿದ್ದರು ದೇಶದ ಆರ್ಥಿಕ ಮಂತ್ರಿಗಳು ಖಾಸಗೀಕರಣದತ್ತ ಹೆಚ್ಚು ಒಲವು ತೋರಸಿಸುತ್ತಿದ್ದಾರೆ ಎಂದು ವಿರೋಧಪಕ್ಷಗಳು ಆರೋಪಿಸಿವೆ. ಸಾರ್ವಜನಿಕ ವಲಯದ ಉದ್ದಿಮೆ ಮತ್ತು ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವ ಸಕಾಧರಿ ಉದ್ಯೋಗಿಗಳು ಖಾಸಗೀಕರಣದಿಂದ ತೊಂದರೆಗೆ ಒಳಗಾಗುವ ಆತಂಕ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಪ್ರಮುಖ ಸಚಿವಾಲಯಗಳು ಮೋದಿ ಸರ್ಕಾರದ ಖಾಸಗೀಕರಣ ನೀತಿಯನ್ನು ವಿರೋಧಿಸಿವೆ: ವರದಿ


