Homeಮುಖಪುಟಬ್ಯಾಂಕ್‌ಗಳ ಖಾಸಗೀಕರಣಕ್ಕೆ ವಿರೋಧ: ಮಾರ್ಚ್‌ 15, 16ಕ್ಕೆ 10 ಲಕ್ಷ ಬ್ಯಾಂಕ್ ನೌಕರರ ಮುಷ್ಕರ

ಬ್ಯಾಂಕ್‌ಗಳ ಖಾಸಗೀಕರಣಕ್ಕೆ ವಿರೋಧ: ಮಾರ್ಚ್‌ 15, 16ಕ್ಕೆ 10 ಲಕ್ಷ ಬ್ಯಾಂಕ್ ನೌಕರರ ಮುಷ್ಕರ

- Advertisement -
- Advertisement -

ಬ್ಯಾಂಕುಗಳನ್ನು ಖಾಸಗೀಕರಣಗೊಳಿಸುವ ಕೇಂದ್ರ ಸರ್ಕಾರದ ನಿರ್ಧಾರವನ್ನು ವಿರೋಧಿಸಿ ಅಖಿಲ ಭಾರತ ಬ್ಯಾಂಕ್ ನೌಕರರ ಸಂಘವು ಮಾ.15-16 ರಂದು ಪ್ರತಿಭಟನೆ ನಡೆಸಲಿದೆ.

ಬ್ಯಾಂಕ್ ನೌಕರರ ಯೂನಿಯನ್‌ಗಳು ಮತ್ತು ಕೇಂದ್ರ ಸರ್ಕಾರದ ನಡುವೆ ಮಾ.4, 9 ಮತ್ತು 10ರಂದು ನಡೆದಿದ್ದ ಸಂಧಾನ ಮಾತುಕತೆಗಳು ವಿಫಲಗೊಂಡಿದ್ದವು. ಹಾಗಾಗಿ ಸಾರ್ವಜನಿಕ ಕ್ಷೇತ್ರದ ಬ್ಯಾಂಕುಗಳ ಖಾಸಗೀಕರಣಕ್ಕೆ ಮುಂದಾಗಿರುವ ಸರ್ಕಾರದ ನಿರ್ಧಾರವನ್ನು ವಿರೋಧಿಸಿ ಸುಮಾರು 10 ಲಕ್ಷ ಬ್ಯಾಂಕ್ ನೌಕರರು ಮಾ.15 ಮತ್ತು 16ರಂದು ಮುಷ್ಕರ ನಡೆಸಲಿದ್ದಾರೆ ಎಂದು ಅಖಿಲ ಭಾರತ ಬ್ಯಾಂಕ್ ನೌಕರರ ಸಂಘ (ಎಐಬಿಇಎ)ವು ಗುರುವಾರ ತಿಳಿಸಿದೆ.

ಸಾರ್ವಜನಿಕ ಕ್ಷೇತ್ರದ ಬ್ಯಾಂಕುಗಳನ್ನು ಖಾಸಗೀಕರಿಸುವ ತನ್ನ ನಿರ್ಧಾರವನ್ನು ಮರುಪರಿಶೀಲಿಸಲು ಸರ್ಕಾರವು ಒಪ್ಪಿಕೊಂಡರೆ ಮುಷ್ಕರದ ಕರೆಯನ್ನು ಹಿಂತೆಗೆದುಕೊಳ್ಳುವ ಬಗ್ಗೆ ಪರಿಶೀಲಿಸುವುದಾಗಿ ಯೂನಿಯನ್‌ಗಳು ಹೇಳಿವೆ.

ಇಷ್ಟು ದಿನ ಬ್ಯಾಂಕುಗಳ ವಿಲೀನದಲ್ಲಿ ತೊಡಗಿದ್ದ ಕೇಂದ್ರ ಸರ್ಕಾರ ಈಗ ಸರ್ಕಾರಿ ಬ್ಯಾಂಕುಗಳ ಖಾಸಗೀಕರಣ ಮಾಡಲು ಮುಂದಾಗಿದೆ. ಈ ಕುರಿತು ನೀತಿ ಆಯೋಗವು ಕೇಂದ್ರ ಸರ್ಕಾರಕ್ಕೆ ಸಲಹೆ ನೀಡಿದ್ದು, ಸರ್ಕಾರಿ ಸಾಮ್ಯದ ಬ್ಯಾಂಕುಗಳನ್ನು ಖಾಸಗೀಕರಣಗೊಳಿಸುವ ಯೋಜನೆ ಸಿದ್ದವಾಗುತ್ತಿದೆ ಎನ್ನಲಾಗುತ್ತಿದೆ.

ಇದನ್ನೂ ಓದಿ: “ಯೆಸ್ ಬ್ಯಾಂಕ್ ಪುನಶ್ಚೇತನಕ್ಕೆ ಕೇಂದ್ರ ತೆಗೆದುಕೊಂಡಿರುವ ಕ್ರಮಗಳು ಭವಿಷ್ಯದಲ್ಲಿ ಜನರಲ್ಲಿ ಅಪನಂಬಿಕೆಯನ್ನು ಹುಟ್ಟಿಸುತ್ತವೆ”

2017 ರಿಂದಲೂ ಕೇಂದ್ರ ಸರ್ಕಾರ ಈ ಬಗ್ಗೆ ಯೋಚಿಸುತ್ತಿದೆ. ಆದರೆ ಬ್ಯಾಂಕ್‌ ನೌಕರರ ವ್ಯಾಪಕ ವಿರೋಧದಿಂದಾಗಿ ಕ್ರಮಕ್ಕೆ ಮುಂದಾಗಿರಲಿಲ್ಲ. ಈಗ ಪ್ರಸ್ತುತ ಇರುವ ಕೊರೊನಾ ಲಾಕ್‌ಡೌನ್‌ನ ಲಾಭ ಪಡೆದು ಖಾಸಗೀಕರಣಗೊಳಿಸಲು ಸಜ್ಜಾಗಿದೆ ಎಂದು ಮೂಲಗಳು ತಿಳಿಸಿವೆ.

ಮೊದಲ ಹಂತದಲ್ಲಿ ಪಂಜಾಬ್ ಸಿಂಧ್‌ ಬ್ಯಾಂಕ್, ಬ್ಯಾಂಕ್ ಆಫ್ ಮಹಾರಾಷ್ಟ್ರ ಮತ್ತು ಇಂಡಿಯನ್ ಓವರ್ ಸೀಸ್ ಬ್ಯಾಂಕುಗಳನ್ನು ಪ್ರಾಯೋಗಿಕವಾಗಿ ಖಾಸಗೀಕರಣಗೊಳಿಸಲಾಗುತ್ತದೆ. ಹಂತ ಹಂತವಾಗಿ ಇತರೆ ಬ್ಯಾಂಕುಗಳನ್ನು ಖಾಸಗೀಕರಣ ಮಾಡಲಾಗುತ್ತದೆ ಎನ್ನಲಾಗಿದೆ.

ನೀತಿ ಆಯೋಗವು ಬ್ಯಾಂಕಿಂಗ್ ಕ್ಷೇತ್ರದಲ್ಲಿ ಖಾಸಗಿಯವರು ದೀರ್ಘಕಾಲದ ಬಂಡವಾಳ ಹೂಡಲು ಅವಕಾಶ ಮಾಡಿಕೊಡುವಂತೆ ಹಾಗೂ ಆಯ್ದ ಕೆಲ ಕೈಗಾರಿಕಾ ಸಂಸ್ಥೆಗಳ ಸಮೂಹಗಳಿಗೆ ಸಾಲ ಕೊಡದಂತೆ ತಾಕೀತು ಮಾಡಿ ಖಾಸಗೀಕರಗೊಳಿಸಬೇಕು ಎಂದು ಶಿಫಾರಸ್ಸು ಮಾಡಿದೆ.


ಇದನ್ನೂ ಓದಿ: ಶಿಕ್ಷಣದ ಖಾಸಗೀಕರಣ, ಕೇಂದ್ರೀಕರಣ ತೀವ್ರಗೊಳಿಸುವ ಬಜೆಟ್: SFI

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...