“ಆದಿವಾಸಿಗಳು ಹಿಂದೂಗಳಲ್ಲ, ಅವರು ಹಿಂದೂಗಳಾಗಲು ಎಂದಿಗೂ ಸಾಧ್ಯವಿಲ್ಲ, ಈ ಬಗ್ಗೆ ಯಾವದೇ ಗೊಂದಲಗಳು ಇರಬಾರದು” ಎಂದು ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಭಾನುವಾರ ಹೇಳಿದ್ದಾರೆ. ಈ ಸಮುದಾಯವು ಯಾವಾಗಲೂ ಪ್ರಕೃತಿ ಆರಾಧಕರಾಗಿದ್ದು, ಇದರಿಂದಲೆ ಅವರನ್ನು “ಸ್ಥಳೀಯ ಜನರು” ಎಂದು ಪರಿಗಣಿಸಲಾಗುತ್ತದೆ ಎಂದು ಅವರು ಹೇಳಿದ್ದಾರೆ.
ಶನಿವಾರ ರಾತ್ರಿ ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ನಡೆದ 18 ನೇ ವಾರ್ಷಿಕ ಭಾರತ ಸಮ್ಮೇಳನದಲ್ಲಿ ಬುಡಕಟ್ಟು ಜನಾಂಗದವರು ಹಿಂದೂಗಳೇ ಎಂಬ ಪ್ರಶ್ನೆಗೆ ಅವರು ಉತ್ತರಿಸುತ್ತಿದ್ದರು. ಅಧಿವೇಶನವನ್ನು ಹಾರ್ವರ್ಡ್ ಕೆನಡಿ ಶಾಲೆಯ ಹಿರಿಯ ಸಹವರ್ತಿ ಸೂರಜ್ ಯೆಂಗ್ಡೆ ನಿರ್ವಹಿಸಿದ್ದರು.
“ನಮ್ಮ ರಾಜ್ಯದಲ್ಲಿ 32 ಬುಡಕಟ್ಟು ಸಮುದಾಯಗಳಿವೆ, ಆದರೆ ಜಾರ್ಖಂಡ್ನಲ್ಲಿ ನಮ್ಮ ಭಾಷೆ, ಸಂಸ್ಕೃತಿಯನ್ನು ಉತ್ತೇಜಿಸಲು ನಮಗೆ ಸಾಧ್ಯವಾಗಲಿಲ್ಲ” ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಜಿಎಸ್‌ಟಿ ಪರಿಹಾರ: ಕೇಂದ್ರವು ರಾಜ್ಯಗಳನ್ನು ಬಂಜರುಗೊಳಿಸಿದೆ – ಹೇಮಂತ್ ಸೊರೆನ್
ಮುಂದಿನ ಜನಗಣತಿಯಲ್ಲಿ ಆದಿವಾಸಿಗಳಿಗೆ ಪ್ರತ್ಯೇಕ ಕಾಲಂ ಒಂದನ್ನು ತಮ್ಮ ಸರ್ಕಾರ ಕೇಂದ್ರ ಸರ್ಕಾರದಿಂದ ಕೋರಿದೆ, ಇದರಿಂದ ಅವರು ತಮ್ಮ ಸಂಪ್ರದಾಯ ಮತ್ತು ಸಂಸ್ಕೃತಿಯನ್ನು ಸಂಪೂರ್ಣ ಸುರಕ್ಷತೆಯೊಂದಿಗೆ ಮುಂದುವರಿಸಬಹುದು ಎಂದು ಹೇಳಿದ್ದಾರೆ.
“ಆದಿವಾಸಿಗಳು ಎಂದಿಗೂ ಹಿಂದೂಗಳಲ್ಲ ಮತ್ತು ಅವರು ಹಿಂದೂಗಳಾಗಳು ಎಂದಿಗೂ ಸಾಧ್ಯವಿಲ್ಲ. ಜನಗಣತಿಯ ಯಾವ ಕಾಲಂನಲ್ಲಿ ಅವರು ಬರೆಯುತ್ತಾರೆ. ಅವರು ಹಿಂದೂ, ಸಿಖ್, ಜೈನ್, ಮುಸ್ಲಿಂ, ಕ್ರಿಶ್ಚಿಯನ್ ಎಂದು ಬರೆಯಲಾಗುತ್ತದೆಯೆ? ಕೇಂದ್ರ ಸರ್ಕಾರ ‘ಇತರರು’ ಎಂಬ ಕಾಲಂ ಅನ್ನು ತೆಗೆದುಹಾಕಿದ್ದಾರೆ ಎಂದು ನನಗೆ ತಿಳಿದಿದೆ. ಇದು ಆದಿವಾಸಿಗಳು ಇದ್ದುದರಲ್ಲೇ ಹೊಂದಿಕೊಳ್ಳಬೇಕು ಎಂಬುದಕ್ಕಾಗಿದೆ ಎಂದು ತೋರುತ್ತಿದೆ” ಎಂದು ಮುಖ್ಯಮಂತ್ರಿ ಹೇಳಿದ್ದಾರೆ.
ತನ್ನ ಮಾತುಗಳಲ್ಲಿ ಅವರು ಹಿಂದಿನ ಬಿಜೆಪಿ ಸರ್ಕಾರವನ್ನು ಕೂಡಾ ತರಾಟೆಗೆ ಪಡೆದಿದ್ದಾರೆ. ತನ್ನ ರಾಜಕೀಯ ಕಾರ್ಯಸೂಚಿಯನ್ನು ಸಾಧಿಸಲು ಕಾನೂನನ್ನು ಬಳಸಿ ಹೋರಾಟಗಾರ ಫಾದರ್ ಸ್ಟಾನ್ ಸ್ವಾಮಿಯನ್ನು ಸಂಚುಕೋರ ಎಂದು ಹಣೆಪಟ್ಟಿ ಕಟ್ಟಿ ಜೈಲಿಗೆ ಹಾಕಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಜಾರ್ಖಂಡ್‌ನ ಯಾರೊಬ್ಬರೂ ಶಿಕ್ಷಣದಿಂದ ವಂಚಿತರಾಗಬಾರದು: ಹೇಮಂತ್ ಸೊರೆನ್


