Homeಚಳವಳಿಜಾರ್ಖಂಡ್‌ನ ಯಾರೊಬ್ಬರೂ ಶಿಕ್ಷಣದಿಂದ ವಂಚಿತರಾಗಬಾರದು: ಹೇಮಂತ್‌ ಸೊರೆನ್...

ಜಾರ್ಖಂಡ್‌ನ ಯಾರೊಬ್ಬರೂ ಶಿಕ್ಷಣದಿಂದ ವಂಚಿತರಾಗಬಾರದು: ಹೇಮಂತ್‌ ಸೊರೆನ್…

- Advertisement -
- Advertisement -

ಜಾರ್ಖಂಡ್‌ನಲ್ಲಿ ಬಡವರಾಗಲಿ ಅಥವಾ ಬೇರೆ ಯಾರೇ ಆಗಲಿ ಶಿಕ್ಷಣದಿಂದ ವಂಚಿತರಾಗಬಾರದು ಎಂಬುದು ನನ್ನ ಸಂಕಲ್ಪ ಎಂದು ನೂತನ ಮುಖ್ಯಮಂತ್ರಿಯಾಗಲಿರುವ ಹೇಮಂತ್‌ ಸೊರೆನ್‌ ತಿಳಿಸಿದ್ದಾರೆ.

ಇತ್ತೀಚೆಗೆ ನಡೆದ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಜೆಎಂಎಂ ಮೈತ್ರಿಕೂಟವು ಭರ್ಜರಿ ಜಯಗಳಿಸಿತ್ತು. ಅದರ ಮುಖ್ಯ ರೂವಾರಿಯಾದ ಹೇಮಂತ್‌ ಸೊರೆನ್‌ರವರಿಗೆ ಅದಕ್ಕಾಗಿ ಅಭಿನಂದನೆಗಳ ಸುರಿಮಳೆ ಹರಿದುಬಂದಿತ್ತು. ಆ ಸಂದರ್ಭದಲ್ಲಿ ಬಹಳಷ್ಟು ಜನರು ಪುಷ್ಟಗುಚ್ಛವನ್ನು ನೀಡಿದ್ದರು.

ಇದನ್ನು ಉಲ್ಲೇಖಿಸಿ ಟ್ವೀಟ್‌ ಮಾಡಿದ್ದ ಅವರು “ಜಾರ್ಖಂಡ್ ಜನರ ಪ್ರೀತಿ ಮತ್ತು ಗೌರವಗಳಲ್ಲಿ ನಾನು ಮುಳುಗಿದ್ದೇನೆ. ಆದರೆ ನನ್ನ ಅತ್ಯಂತ ಉತ್ಸಾಹಭರಿತ ಪ್ರಾರ್ಥನೆಗಳಲ್ಲಿ ಒಂದನ್ನು ಅರ್ಪಿಸಲು ನಾನು ಬಯಸುತ್ತೇನೆ, ಅದೆಂದರೆ ಪುಷ್ಪಗುಚ್ಛಗಳ ಬದಲಾಗಿ ದಯವಿಟ್ಟು ನಿಮ್ಮ ಆಯ್ಕೆಯ ಜ್ಞಾನದಿಂದ ತುಂಬಿದ ಯಾವುದೇ ಪುಸ್ತಕವನ್ನು ನನಗೆ ನೀಡಿ. ನಿಮ್ಮ ಹೂವುಗಳನ್ನು ನಿಭಾಯಿಸಲು ನನಗೆ ಸಾಧ್ಯವಾಗುತ್ತಿಲ್ಲ” ಎಂದು ಮನವಿ ಮಾಡಿದ್ದರು.

ನೀವು ನೀಡುವ ಪುಸ್ತಕಗಳಲ್ಲಿ ನಿಮ್ಮ ಹೆಸರನ್ನು ಬರೆಯಿರಿ. ನಿಮ್ಮ ಪುಸ್ತಕಗಳು ಗ್ರಂಥಾಲಯ ಸೇರುತ್ತವೆ. ನಿಮ್ಮ ಪ್ರೀತಿಯ ಈ ಉಡುಗೊರೆ ಯಾವಾಗಲೂ ನಮ್ಮೆಲ್ಲರಿಗೂ ಜ್ಞಾನವನ್ನು ನೀಡುತ್ತವೆ ಎಂದು ಅವರು ತಿಳಿಸಿದ್ದರು.

ಅದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಅವರ ಹಿತೈಷಿಗಳು, ಅಭಿಮಾನಿಗಳು ಸಾಕಷ್ಟು ಪುಸ್ತಕಗಳನ್ನು ಕಳಿಸಿಕೊಟ್ಟಿದ್ದಾರೆ. ಪುಷ್ಪಗುಚ್ಛದ ಬದಲಿಗೆ ಪುಸ್ತಕ ಅರ್ಪಿಸಿದ್ದಕ್ಕಾಗಿ ನಿಮ್ಮೆಲ್ಲರಿಗೂ ದಯೆಯಿಂದ ಧನ್ಯವಾದಗಳು ಎಂದು ಅವರು ಇಂದು ಟ್ವೀಟ್‌ ಮಾಡಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...