Homeಕಥೆಸಣ್ಣ ಕಥೆ: ತ್ರೀ ಸೆವೆಂಟಿ ದೇಶದೊಳು...

ಸಣ್ಣ ಕಥೆ: ತ್ರೀ ಸೆವೆಂಟಿ ದೇಶದೊಳು…

- Advertisement -
- Advertisement -

ಮಳೆ ಬಂದು ನಿಂತಿತ್ತು. ಒಂದು ವಾರದಿಂದಲೂ ಬಿಟ್ಟೂಬಿಡದೆ ಸುರಿದ ಪರಿಣಾಮ ಹೊರಗೆ ಬರಲು ಆಗಿರಲಿಲ್ಲ.

ಪರಮಗ್ರಂಥದ ಪಠಣವೂ ಅಷ್ಟಕ್ಕಷ್ಟೆ ಎನ್ನುವಂತಾಗಿತ್ತು. ಸಾವಿರಾರು ಮೈಲಿ ದೂರದಿಂದ ಬಂದು ಧರ್ಮಪ್ರಚಾರ ಮಾಡುವುದೆಂದರೆ ಸುಮ್ಮನೆ ಆದೀತೆ ?

ಅಪರೂಪಕ್ಕೆಂಬಂತೆ ಹೊರಬಂದ ಶುಭ್ರ ಶ್ವೇತ ವಸ್ತ್ರಧಾರಿ ಕಾಶ್ಮೀರಿ ಮುಲ್ಲಾರ ಮನಸ್ಸಿನಲ್ಲಿ ತಳಮಳವಿತ್ತು. ಆಗೊಮ್ಮೆ ಈಗೊಮ್ಮೆ ಬೆಳ್ಳಗಿನ ಮುಖದ ಅಂದ ಹೆಚ್ಚಿಸಿದ ಕಪ್ಪು ಗಡ್ಡವನ್ನೊಮ್ಮೆ ಸವರಿಕೊಳ್ಳುವರು. ಸುರಿದೂ ಸುರಿದು ಸುಸ್ತಾಗಿರುವಂತೆ ತೋರುವ ಮೋಡಗಳಿಗೆ ಮತ್ತೆ ಸುರಿಸುವ ತಾಕತ್ತಿರಲಿಲ್ಲ. ಮಳೆ ನಿಂತಿತೆಂದು ಹೊಂಬಣ್ಣದ ಸೂರ್ಯ ಮರೆಯಿಂದ ಬರಲು ಹವಣಿಸುತಿದ್ದ. ಅದ್ಯಾರು ಹೇಳಿದರೋ ಏನೋ… ಹಾವೇರಿಗೆ ಹಾಯಬಾರದು ಹಾನಗಲ್ಲನಲ್ಲಿ ಸಾಯಬಾರದು ಅಂತ!. ಎಂಥಾ ಆಹ್ಲಾದಕರ ಊರುಗಳಿವು! ಎಷ್ಟು ಒಳ್ಳೆಯ ಜನರಿವರು!.

ತುಂಬಿ ಹರಿವ ಧರ್ಮಾನದಿಯ ಕಾಲುವೆಯಲಿ ಇಳಿಬಿಟ್ಟ ತನ್ನ ಎರಡೂ ಕಾಲುಗಳನ್ನೊಮ್ಮೆ ನೋಡಿಕೊಳ್ಳುತ್ತ, ಅದೆಷ್ಟು ಹೊತ್ತು ಕುಳಿತಿದ್ದರೋ ….ದೂರದಲ್ಲಿನ ನೀರಿನ ಸೆಳೆತದ ಸದ್ದೂ ಕೇಳಿಸುತ್ತಿತ್ತು.

ತಲೆ ತುಂಬ ಏನೇನೋ ಯೋಚನೆಗಳು… ಸುಮ್ಮನೆ ತಲೆಯೆತ್ತಿ ಆಕಾಶ ನೋಡಿದರು. ಬೆಳ್ಳಗಿದ್ದ ಮೋಡಗಳೆಲ್ಲ ನಿಧಾನವಾಗಿ ಕಪ್ಪಗೆ ತಿರುಗುತ್ತಿದ್ದವು. ಮನಸ್ಸು ದುಗುಡಗೊಳ್ಳುತ್ತಾ ಹೋಯಿತು.

ಅನ್ಯಮನಸ್ಕರಾದ ಮುಲ್ಲಾರು ದೂರ ದಿಗಂತದತ್ತ ದಿಟ್ಟಿಸಿದರು. ಇಂತಹದೇ ಒಂದು ಸಂಜೆಯ ವಿಹಾರದಲ್ಲಿ ಪಂಡಿತರು “ಭೂಮಿ, ಆಕಾಶಗಳೆಲ್ಲವೂ ರೆಕ್ಕೆಬಿಚ್ಚಿ ಹಾರುತ್ತಿರುವ ಹಕ್ಕಿಗಳು ರಾಮನ, ಅಲ್ಲಾಹನ, ಯೇಸುವಿನ ಕೀರ್ತನೆಗಳನ್ನು ಹಾಡುವಂತೆ ಹಾರುವುದನ್ನು ನಾವು ನೋಡುತ್ತಿದ್ದೇವೆ. ಪ್ರತಿಯೊಂದು ಪ್ರಾಣಿ, ಪಕ್ಷಿಗಳಿಗೂ ನಮ್ಮ ಆರಾಧನೆ, ನಮಾಜಿನ ಕ್ರಮ: ಪ್ರಾರ್ಥನೆಗಳ ಕ್ರಮ ಗೊತ್ತಿದೆ. ಇವೆಲ್ಲವುಗಳನೂ ಆ ದೇವರು ಅರಿತಿರುತ್ತಾನೆ” ಎಂದು ಹೇಳಿದ್ದು ಎಷ್ಟು ಸತ್ಯವಲ್ಲವೆ? ತಾನು ಕುಳಿತಿದ್ದ ಜಾಗೆ, ಸುತ್ತಲಿನ ವಾತಾವರಣದ ಪ್ರಭಾವವೋ.. ಮುಸ್ಸಂಜೆಯಲಿ ಆವರಿಸಿದ ಕತ್ತಲಿಗೋ …ಮನಸ್ಸು ತೆರೆದುಕೊಳ್ಳತೊಡಗಿತ್ತು. ಅದರಲ್ಲೂ ಪಂಡಿತರು ದೂರವಾಣಿ ಕರೆ ಮಾಡಿ ಮಾತನಾಡಿದ ಕಾಲದಿಂದಲೂ ಹೀಗೆಯೇ ಮಡುಗಟ್ಟಿದ ದುಗುಡ ಮತ್ತಷ್ಟು ಹೆಚ್ಚಾಗುತ್ತಾ ಹೋಯಿತು.

“ಕಾಶ್ಮೀರದ ಸಮಸ್ಯೆಗೆ ಪರಿಹಾರಗಳೇನೂ ಇಲ್ಲವೇ?” ನಿಟ್ಟುಸಿರುಗೈದಿದ್ದೆ.
“ನೋಡಿ, ಇಪ್ಪತ್ತನೆ ಶತಮಾನವಿದೆಯಲ್ಲ ಇದು ಹಿಂಸಾತ್ಮಕ ಶತಮಾನ. ನಾವು ಮನುಷ್ಯರೇ
ಸೃಷ್ಟಿಸಿಕೊಂಡ ದುರಂತಗಳಿಂದಾಗಿ ಈಗಾಗಲೆ ಹದಿನೆಂಟು ಇಪ್ಪತ್ತು ಕೋಟಿ ಜನರ ಮಾರಣಹೋಮವಾಗಿದೆ. ಇಡೀ ಮನುಷ್ಯಕುಲವೇ ಶಾಶ್ವತವಾಗಿ ಹಿನ್ನಡೆ ಅನುಭವಿಸುವಂತಹ ಸ್ಥಿತಿಗೆ ತಲುಪಿದ್ದೇವೆ” ಎಂದಿದ್ದರು.

ಪಂಡಿತರು…ಪಂಡಿತರೇ.  ಎಷ್ಟೆಲ್ಲ ವಿಷಯಗಳನ್ನು ತಿಳಿದುಕೊಂಡಿರುವರಲ್ಲ ಎಂದು ಹೆಮ್ಮೆಯೆನಿಸುತ್ತಿತ್ತು.

* * *
ನಾಕರ ಕತ್ತರಿಯಲ್ಲಿ ಬಸ್ಸಿಗೆ ಕಾಯುತ್ತಿದ್ದವರ್ಯಾರೋ ಮಧ್ಯವಯಸ್ಕ ತಂದೆತಾಯಿ ಮಗುವನ್ನೆತ್ತಿಕೊಂಡು ಬಂದರು.

“ಊರಿಗೆ ಹೊಂಟಿದ್ವಿರೀ ಸಾಹೇಬರಾ ಮಗಂಗೆ ಉಸಾರಿಲ್ರಿ, ಹಲಕುರ್ಕಿ ಡಾಕುಟ್ರುತ್ರ ತೋರಿಸ್ಕಂದು, ಗ್ರಾಮದೇವತಿ ದ್ಯಾಮವ್ವ ಗುಡಿ ಪೂಜಾರತ್ರ ಅಂತ್ರ ಹಾಕಿಸ್ಕೊಂಡು ಬಂದ್ವಿ. ಅಂಗಾ ನೀವು ಕುಂತಿದ್ರೀ…ಆಶೀರ್ವಾದ ಮಾಡ್ಸಿದ್ರಾತು ಅನಕಂಡು ಬಂದೇವರಿ…ಆಶೀರ್ವಾದ ಮಾಡ್ರಿ ಸಾಹೇಬರ” ಒಂದೇಸಮನೆ ಮಾತಾಡುತ್ತಿದ್ದವರನ್ನೆ ದಿಟ್ಟಿಸಿದರು. ಅವರು ಹೇಳಿದ ಒಂದೂ ಮಾತು ತನಗೆ ತಿಳಿಯುವ ಭಾಷೆಯದ್ದಾಗಿರಲಿಲ್ಲ. ಭಾವಕ್ಕೆ ಭಾಷೆಯ ಹಂಗಿಲ್ಲವಲ್ಲ? ಎಲ್ಲವೂ ಅರ್ಥವಾಗಿತ್ತು.

ಕಣ್ಣುಮುಚ್ಚಿ ದೇವನ ಧ್ಯಾನಿಸಿ ಮಗುವಿನ ತಲೆಮೇಲೆ ಮೃದುವಾಗಿ ಕೈಯಿಟ್ಟು ಸವರಿದರು. ಹೆಗಲ ಮೇಲೆ ಮಲಗಿದ್ದ ಮಗು ಮಿಸುಕಾಡಿ ಎಚ್ಚರಗೊಂಡಿತು. ಎದುರಿಗಿನ ಗಡ್ಡಧಾರಿಯ ನೋಡಿ ಯಾರೀತ..? ಎಂಬಂತೆ ಅಪ್ಪನೆಡೆಗೊಮ್ಮೆ ಅವ್ವನೆಡೆಗೊಮ್ಮೆ ನೋಡಿ…ತುಟಿಯಂಚಿನಲ್ಲಿ ಆ ದಣಿವಿನಲ್ಲೂ ನಗೆಯ ಎಸಳು ಬಿಸಾಕಿ ಮತ್ತೆ ಹೆಗಲಿಗೊರಗಿತು.

ಅಷ್ಟಕ್ಕೆ ಆ ತಾಯಿಯ ಸಂಭ್ರಮ ಎಷ್ಟಿತ್ತು? ಬದುಕು ಸಾರ್ಥಕ ಅಂತನ್ನಿಸೋದು ಇಂತಹ ಕ್ಷಣಗಳಲ್ಲಿಯೇ.

“ಭಾಳ ಛಲೋದಾತ್ರೀ.. ಸಾಬರೆ, ಮದ್ವಿಯಾಗಿ ಹದ್ನೈದು ವರ್ಸಕ್ಕ ಹುಟ್ಟ್ಯಾನ್ರೀ.. ಅಂಗಾಗಿ” ಎಂದವಳ ಮಾತು ನಿಲ್ಲಿಸಿ, ಸುಧಾರಿಸಿಕೊಂಡು ಮತ್ತೆ “ಮುಂಜಾಕಿಂದ ಮಕ್ಕಣದೆ ಮಾಡ್ತಾನರಿ,… ಇವಾಗ ನಿಮ್ಮನ ನೋಡಿ ನಕ್ಕುದ್ದು ನೋಡ್ರಿ” ಕೃತಜ್ಞತೆಯ ಭಾರದಿಂದ ಅವರ ಕಣ್ಣಾಲಿಗಳು ತುಂಬಿದ್ದವು.

ಆಯ್ತು… ನೀವಿನ್ನು ಹೋಗಿ ಬನ್ನಿ ಎನ್ನುವವರಂತೆ ಎದ್ದು ನಿಂತರು. ಅವರು ಹೋಗುವುದನ್ನೆ ಎಷ್ಟೋ ಹೊತ್ತು ನೋಡುತ್ತಾ ನಿಂತುಬಿಟ್ಟರು.
* * *

ಸೈತಾನನು ಯಾರ ತಲೆಯಲ್ಲಿ ಇರುತ್ತಾನೋ ಅವನು ಅನುಮಾನ ಪಡುತ್ತಾನೆ… ಎಂದೇನೋ ಇಂದು ಮುಂಜಾನೆ ಬೋಧಿಸಿದ್ದು ನೆನಪಾಯಿತು. ಹೌದು, ಈ ಮಾತೇಕೆ ಪದೇಪದೇ ನೆನಪಾಗುತ್ತಿದೆ? ಪಂಡಿತರ ಪೋನ್‌  ಕರೆ ಬಂದಾಗಿನಿಂದಲೂ ಹೀಗೆಯೇ ಆಗುತ್ತಿದೆ. ಕಾಶ್ಮೀರ ಬಿಟ್ಟು ಬಂದು ಎರಡು ತಿಂಗಳ ಮೇಲಾಯಿತು. ಮೊದಮೊದಲು ಇಲ್ಲಿಗೆ ಬಂದಾಗ ಹೇಗೋ ಏನೋ ಅನ್ನಿಸಿತ್ತು. ಭಾಷೆ, ಆಚಾರ ವಿಚಾರ ಎಲ್ಲದರ ಬಗ್ಗೆಯೂ ದುಗುಡ, ಆತಂಕದಿಂದಲೇ ಬಂದಿದ್ದರು. ಅಲ್ಲಿಗೆ ಬಂದ ಮೇಲೆಯೇ ಗೊತ್ತಾದದ್ದು, ದೇಶವೆಂಬ ಈ ತಾಯಿ ಗರ್ಭದೊಳಗೆ  ಎಷ್ಟೊಂದು ಧರ್ಮಗಳ ಭ್ರೂಣಗಳಿವೆ? ಎನಿಸಿತ್ತು. ಗೆಳೆಯ ಪದ್ಮಚರಣ ಪಂಡಿತರ ಮಾತುಗಳು, ಧರ್ಮಗ್ರಂಥಗಳ ಸರಳಾನುವಾದವನ್ನು ಸಂದರ್ಭಕ್ಕೆ ತಕ್ಕಂತೆ ಹೇಗೆಲ್ಲ ಬಳಸುತ್ತಿದ್ದರು. ನಾನು ಹೇಳಿದ ಪ್ರವಾದಿಗಳ ಮಾತುಗಳನ್ನೂ ಕೇಳಿಸಿಕೊಳ್ಳುತ್ತಿದ್ದರು. ಅಷ್ಟೇ ಅಲ್ಲ, ಧರ್ಮಗ್ರಂಥಗಳು ಬೇರೆಯಾದರೂ ಚಿಂತನಾಕ್ರಮದಲ್ಲಿನ ಸಾಮ್ಯತೆಯನ್ನು ಎತ್ತಿ ತೋರಿಸುತ್ತಿದ್ದರು. ತಾಸುಗಟ್ಟಲೆ ಪಂಡಿತರ ಮನೆಯಲ್ಲಿ, ನಮ್ಮ ಮನೆಯಲ್ಲಿ ಚರ್ಚೆಗಳಾಗುತ್ತಿದ್ದವು. ಆಗೆಲ್ಲ ಕಾಶ್ಮೀರವೂ…. ಸುಂದರವಾಗಿಯೇ ಇತ್ತು.
* * *

ರಾಜಕೀಯದ ಮಾತು ಬಂತೆಂದರೆ ಮುಗಿಯಿತು. ವೇಳೆ ಸರಿದದ್ದೇ ಗೊತ್ತಾಗುತ್ತಿರಲಿಲ್ಲ. ಆಗೆಲ್ಲ ಪದ್ಮಚರಣ ಪಂಡಿತರು ಹೇಳಿದ ಮಾತುಗಳು ಕಿವಿಯಲ್ಲಿ ಇನ್ನೂ ರಿಂಗಣಿಸುತ್ತಿವೆ.

ನೋಡು ಗೆಳೆಯಾ, ಕಾಶ್ಮೀರದಲ್ಲಿ ಹಿಂದೂ ಮುಸ್ಲಿಂ ಧರ್ಮಗಳ ಸಂಘರ್ಷಕ್ಕಿಂತಲೂ ಜನಾಂಗೀಯ ಸಂಘರ್ಷ ಹುಟ್ಟುಹಾಕಿದ ಪ್ರಭುತ್ವ ಎಲ್ಲರಿಗೂ ಗೊತ್ತಿರುವಂಥದ್ದೆ. ಆ ಸಂದರ್ಭದಲ್ಲಿ ಶ್ರೀನಗರದ ಬೀದಿಯೊಂದರಲ್ಲಿ ಪಂಡಿತರ ಹೆಣ ಬಿತ್ತು. ಧರ್ಮಸಂಘರ್ಷದಲ್ಲಿ ಅಸುನೀಗಿದ ಆ ಬಡಪಾಯಿ ಪಂಡಿತನ ಹೆಣದ ಅಂತ್ಯಸಂಸ್ಕಾರಕ್ಕೂ ಯಾರೂ ಬರಲಿಲ್ಲ. ಅಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಆಗ ಒಬ್ಬ ಯುವಕ, ಲಂಡನ್ನಿನಲ್ಲಿ ವಿದ್ಯಾಭ್ಯಾಸ ಮಾಡಿಬಂದಿದ್ದ ಯುವಕನೊಬ್ಬನೆ ಆ ಬೀದಿಯಲ್ಲಿ ಅನಾಥವಾಗಿ ಬಿದ್ದಿದ್ದ ಹೆಣವನ್ನು ಹೆಗಲ ಮೇಲೆ ಹೊತ್ತು, ಕಾಶ್ಮೀರಿ ಪಂಡಿತರ ಧರ್ಮದನುಸಾರವೇ ಅಂತ್ಯಸಂಸ್ಕಾರವನ್ನು ನೆರವೇರಿಸುತ್ತಾನೆ. ಆತ ಬೇರಾರೂ ಅಲ್ಲ ಷೇಕ್ ಅಬ್ದುಲ್ಲಾ!. ಇಂತಹ ಅನೇಕ ವಿಷಯಗಳನ್ನು ಹೇಳ್ತಿರ್ತಾರೆ. ಪಂಡಿತರ ಜೊತೆ ಮಾತಾಡ್ತ ಕುಳಿತರೆ ವೇಳೆಯ ಪರಿವೇ ಇರುವುದಿಲ್ಲ. ವರ್ತಮಾನದ ರಾಜಕೀಕರಣಗೊಂಡ ಧರ್ಮಗಳ ಸ್ಥಿತಿ ನೆನೆದು, ಬಲಿಪಶುವಾಗುವ ಮುಗ್ಧಜನರ ನೆನೆದು ದುಃಖಿತರಾಗುತ್ತಿದ್ದುದೂ ಉಂಟು.

ಆಗ ನನಗೆ ಗೊತ್ತಿರುವ ಪ್ರವಾದಿಗಳ ಕೆಲಸಾಲುಗಳನ್ನು ಉಲ್ಲೇಖಿಸುತ್ತಿದ್ದೆ.

“ಹೆದರಬೇಡ, ನಾನು ರಾಜನಲ್ಲ. ನಿನ್ನಂತೆಯೇ ಸಾಮಾನ್ಯ ಮನುಷ್ಯ. ನೀನು ತಿನ್ನುವ ವಸ್ತುಗಳನ್ನೇ ನಾನೂ ತಿನ್ನುತ್ತೇನೆ. ನಿನ್ನ ಮೇಲೆ ಬೀರುವ ಸೂರ್ಯನೇ ನನ್ನ ಮೇಲೆಯೂ ಪ್ರಕಾಶ ಬೀರುತ್ತಾನೆ”ಎಂದು ಮಹಮ್ಮದರು ಹೇಳಿದ್ದನ್ನು ಹೇಳುತ್ತಿದ್ದೆ.

ಆದರೆ, ಈಗ್ಗೆ ಎರಡು ತಿಂಗಳಿಂದ ಮಾತಾಡಲು ಸಾಧ್ಯವಾಗಿಲ್ಲ. ಫೋನಿನಲ್ಲಿ  ಮಾತನಾಡಿದ್ದರೂ ಎಷ್ಟು ಮಾತಾಡಬಹುದು? ಉಭಯರ ಕುಶಲೋಪರಿಯಲ್ಲಿ ವೇಳೆ ಸರಿದುಹೋಗಿರುತ್ತದೆ.

ಈ ದಿನದ ಕರೆ…. ಎಂದಿನಂತಿರಲಿಲ್ಲ. ಧ್ವನಿಯ ತರಂಗಗಳಲ್ಲಿಯೆ ಪಂಡಿತರ ಆತಂಕವನ್ನು ಗ್ರಹಿಸಬಲ್ಲವ ನಾನು. ಪಂಡಿತರ ಗ್ರಹಿಕೆಯಂತೂ ಭಾಳ ವಿಶಿಷ್ಟದ್ದು. ವಿಭಿನ್ನ ಗ್ರಹಿಕೆಗಳನ್ನು ಒಟ್ಟುಗೂಡಿಸಿ ತೋರಿಸುವ ಮೂಲಕ ನಾವು ಎಂದೂ ಯೋಚಿಸಿರದ ಹೊಸ ಭಾರತವೊಂದನ್ನು ತೋರಿಸುತ್ತಿದ್ದರು. ನಾನು ನಿರಾಶನಾದಾಗಲೆಲ್ಲ” ಇಲ್ಲ ಸಹೋದರ, ಭಾರತಕ್ಕೆ ಉಜ್ವಲ ಭವಿಷ್ಯವಿದೆ” ಎಂದೇ ಹೇಳುತ್ತಿದ್ದರು. ಅವರ ಇಂಥಾ ಆಶಾವಾದ ಎಷ್ಟರಮಟ್ಟಿಗೆ ಪ್ರಭಾವ ಬೀರುತ್ತಿತ್ತೆಂದರೆ ಆ ದಿನ ನಾನು ನೆಮ್ಮದಿಯಿಂದ ನಿದ್ದೆ ಮಾಡುತ್ತಿದ್ದೆ. ಅವರೊಂದಿಗೆ ಮಾತಾಡದೆ ಇರಲು ಸಾಧ್ಯವೇ ಇರಲಿಲ್ಲ.

ಮಧ್ಯಾಹ್ನದ ಸಂಭಾಷಣೆ ಮತ್ತೆ ಮತ್ತೆ ಕೇಳುತಿದೆ.
“ಟೀವಿ ನೋಡಿದಿರಾ..? ಇವತ್ತು?” ಆ ಕಡೆಯಿಂದ ಪಂಡಿತರ ಧ್ವನಿ ಎಂದಿನಂತಿರಲಿಲ್ಲ.
“ಹ್ಞೂಂ.. ನೋಡಿದೆ ಪಂಡಿತರೆ…. ಏನ್ ಸಮಾಚಾರ..?”
ಅಲ್ಲಿ ತಾವು ಹೇಗಿದ್ದೀರಿ ?

“ನನಗೇನೂ ತೊಂದರೆಯಿಲ್ಲ. ಕರ್ನಾಟಕವೆಂದರೆ ಸೌಹಾರ್ದತೆಗೆ ಇನ್ನೊಂದು ಹೆಸರು” ಎಂದಿದ್ದಕ್ಕೆ ಸಮಾಧಾನದ ಉಸಿರೆಳೆದ ಸದ್ದೂ ಕೇಳಿಸಿತ್ತು.

ತಾವು…. ಕುಟುಂಬ ಎಲ್ಲರೂ ಸೌಖ್ಯವಾಗಿದ್ದೀರಿ ತಾನೆ? ಕೇಳಿದ್ದೆ.
“ಎಲ್ಲಾ ಸರಿಯಿದೆ.

ಮನೇಲೇನೂ ತೊಂದ್ರೆಯಿಲ್ಲ…. ಆದರೆ ಊರು ಬೂದಿ ಮುಚ್ಚಿದ ಕೆಂಡದಂತಿದೆ. ಯಾವಾಗ ಏನಾಗುತ್ತೋ ಗೊತ್ತಿಲ್ಲ. ಇಲ್ಲಿನ ಚಿಂತೆ ನನಗೆ ಬಿಡಿ, ನಾನು ಎರಡೂ ಮನೆ ಕಡೆ ನೋಡಿಕೊಳ್ಳುವೆ. ನೀವು ಸದ್ಯ ಇಲ್ಲಿಗೆ ಬರುವುದು ಬೇಡ….” ಕರೆ ನಿಂತುಹೋಯಿತು. ಇನ್ನೂ ಏನೇನು ಹೇಳುತ್ತಿದ್ದರೋ ಏನೋ ಪಂಡಿತರು… ಮಕ್ಕಳು ಮನೆ… ಎಲ್ಲವೂ ದೂರವಾಗುತ್ತಿರುವ ಹಾಗೆ ಭಾಸವಾಯಿತು.

ಪಂಡಿತರ ಮಾತಿನಲ್ಲಿ ದುಗುಡ ಆವರಿಸಿತ್ತೆ..?
ಈಗ ತಾನು ಅವರೊಡನೆ ಇರಬೇಕಿತ್ತು… ಛೇ.. ಎಂಥಾ ಕಷ್ಟವೋ ಏನೋ.. ಮನಸ್ಸು ಚಡಪಡಿಸತೊಡಗಿತು.

” ಓ…ಸತ್ಯ ವಿಶ್ವಾಸಿಗಳೇ…. ನೀವು ನ್ಯಾಯದ ದೃಢವಾಹಕರೂ ಅಲ್ಲಾಹನಿಗಾಗಿ ಸಾಕ್ಷ್ಯವಹಿಸುವವರೂ ಆಗಿರಿ…” ಪ್ರಾರ್ಥಿಸುವುದರ ಹೊರತು ಬೇರೆ ದಾರಿಯಿರಲಿಲ್ಲ.
* * *

ಪ್ರತಿ ಬಾರಿಯೂ ಇಲ್ಲಿಗೆ ಬಂದಾಗಲೊಮ್ಮೆ ಹೋಗುವಾಗ ಗೆಳೆಯ ಪದ್ಮಚರಣ ಪಂಡಿತರಿಗೆ ಏನಾದರೊಂದು ಗಿಫ್ಟ್ ತೆಗೆದುಕೊಂಡು ಹೋಗಿ ಕೊಡುವುದು ಹವ್ಯಾಸವಾಗಿತ್ತು. ಆಗೆಲ್ಲ ಪಂಡಿತರು ಮುಜುಗರದಿಂದಲೆ ಪಡೆದುಕೊಂಡು ಸಂತೋಷಿಸಿ ಮನೆಮಂದಿಗೆಲ್ಲ ತೋರಿಸಿ ಖುಷಿಪಡುತ್ತಿದ್ದರು.

ಆಗಲೂ ಪಂಡಿತರು, ಸುಲೇಮಾನ್ ಅಮೀರ್ ಅಲ್ಲಾಹನ ಪ್ರವಾದಿ ಏನು ಹೇಳಿದ್ದಾರೆ ಗೊತ್ತೆ..? ಎಂದು ಕೇಳಿ,

“ರಕ್ತ ಸಂಬಂಧಿಯಲ್ಲದ ವ್ಯಕ್ತಿಗೆ ಏನಾದರೂ ಕೊಡುಗೆ ನೀಡುವುದು ದಾನವಾಗಿದೆ” ಎಂದು ಹೇಳಿದ್ದಾರೆ ಎನ್ನುವಾಗ ಎಲಾ… ಗೆಳೆಯರೇ.. ಅದ್ಯಾವಾಗ ಕುರಾನನ್ನು ಇಷ್ಟು ಚೆನ್ನಾಗಿ ಪಠಣ ಮಾಡಿದ್ದಾರೆ ಎಂದು ಅಭಿಮಾನವುಂಟಾಗುತ್ತಿತ್ತು.
ಪಂಡಿತ ಗೆಳೆಯಾ… ನೀವು ರಕ್ತಸಂಬಂಧಿಗಿಂತಲೂ ಹೆಚ್ಚು ನಮಗೆ… ಎಂದಿದ್ದೆ.
ಪಂಡಿತ ಪದ್ಮಚರಣರು ನನ್ನ ಕೈಯನ್ನು ಹಿಡಿದು ಮೆದುವಾಗಿ ಒತ್ತಿದ್ದರು.
* * *

ಮೋಡಗಳೀಗ ಸಂಪೂರ್ಣ ಕಪ್ಪಾಗಿದ್ದವು. ದುಃಖ ಮಡುಗಟ್ಟಿದವನು ಯಾವಾಗ ಬೇಕಾದರೂ ಮತ್ತೆ ಅಳುವವನಂತೆ ತೋರುತ್ತಿದ್ದವು. ಸಂಜೆ ಕತ್ತಲೊಳಗೆ ಲೀನವಾಗುವ ಸಮಯ.

ನನ್ನ ಪ್ರೀತಿಯ ಬಂಧುಗಳೇ, ನನ್ನ ಸುಂದರ ಕಾಶ್ಮೀರದಲ್ಲಿ ಯಾವುದೇ ಗಲಾಟೆಗಳಿಲ್ಲ, ದೊಂಬಿಗಳೂ ಇಲ್ಲ. ಈ ಪ್ರದೇಶದ ಸೌಂದರ್ಯ ಸವಿಯಲು, ಶಿವನ ದರುಶನಕೆ ಈ ಶಿವರಾತ್ರಿಗೆ ಕುಟುಂಬ ಸಮೇತರಾಗಿ ಭೇಟಿ ಕೊಡಿ…. ಹೀಗೆ ಒಂದು ಮಧ್ಯರಾತ್ರಿಯ ಹೊತ್ತಲ್ಲಿ ಮಗಳು ಆಯೇಷಾ ಹದಿನೈದು ಪೈಸೆಯ ಕಾರ್ಡುಗಳಲಿ ಬರೆದೇ ಬರೆಯುತ್ತಿದ್ದಳು. ಹೌದು ಮಗಳೇ, ಕಾಶ್ಮೀರಕ್ಕೆ, ಇಲ್ಲಿನ ಕಾಕಾನ ಅಂಗಡಿಗೆ ಜನ ಬಂದು ಹೋದರೆ ಮಾತ್ರ ಹೊಟ್ಟೆ ತುಂಬೋದು! ಎಂಥಾ ಸತ್ಯ ಮಕ್ಕಳಿಗೆ ಅರ್ಥವಾಗಿದೆ. ನಮ್ಮನ್ನಾಳುವವರಿಗೇಕೆ ಅರ್ಥವಾಗುತ್ತಿಲ್ಲ ಎನ್ನಿಸಿತ್ತು. ಗಾಢ ಚಿಂತೆಯಲ್ಲಿ ಮೈಮರೆತಿದ್ದವರಿಗೆ ಕಾಲಬುಡದಲ್ಲಿ ಏನೋ ಹೋದಂತಾಗಿ ವಾಸ್ತವಕ್ಕೆ ಬಂದರು. ತಿರುಗಿ ನೋಡಿದರೆ ಸಣ್ಣ ಗಾತ್ರದ ಮೊಲವೊಂದು ಓಡುತ್ತಿತ್ತು.

ಭಾರವಾದ ಹೆಜ್ಜೆಗಳೊಂದಿಗೆ ಊರಕಡೆಗೆ ಬಂದರು.

ಕಲಾಲರ ಶ್ರೀ ಭವಾನಿ ಸ್ಟೋರ್ಸ್‍ನಲ್ಲಿ ಪ್ರತಿ ಬಾರಿ ಹೀಗೆ ಊರಿಗೆ ಮರಳುವಾಗ ಏನಾದರೂ ಕೊಳ್ಳುವುದು ವಾಡಿಕೆ. ಗೆಳೆಯ ಪದ್ಮಚರಣ ಪಂಡಿತರಿಗೆ ಕೈ ಗಡಿಯಾರ ಕೊಡುವ ಮನಸ್ಸಾಯಿತು. ಕಲಾಲರ ಮಗ ಗಲ್ಲಾಪೆಟ್ಟಿಗೆ ಮೇಲೆ ಕುಳಿತಿದ್ದ. ಹಣೆಯಲ್ಲಿ ಕೆಂಪು ತಿಲಕವಿತ್ತು. ಪಂಡಿತರ ಹಣೆಯಲ್ಲಿ ಇದ್ದರೂ.. ಆಪ್ಯಾಯಮಾನವೆನಿಸುತ್ತಿತ್ತು. ಆದರೆ… ಕಲಾಲರ ಮಗ ಮುಲ್ಲಾರನ್ನೊಮ್ಮೆ ಅಪಾದಮಸ್ತಕ ದಿಟ್ಟಿಸಿದವನೆ ನಿರ್ಲಕ್ಷಿಸಿದವನಂತೆ ಕುಳಿತ. ಅವರಿಗೆ ಏನು ಬೇಕೋ ಕೇಳಿ ಕೊಡು ಎಂದು ಅಂಗಡಿಯಲಿದ್ದ ಆಳಿಗೆ ಹೇಳಿದ. ಮಾಲೀಕ ಕಲಾಲರಿದ್ದಿದ್ದರೆ.. ಹೀಗೆ ಮಾಡುತ್ತಿರಲಿಲ್ಲ. ಇರಲಿಯೆಂದು ನಿಟ್ಟುಸಿರುಗೈದರು. ಕೆಲಸದವನು ತೋರಿಸಿದ ಕೈ ಗಡಿಯಾರಗಳ ಪೈಕಿ ಒಂದನ್ನು ಖರೀದಿಸಿದರು.
* * *

ಕೈ ಗಡಿಯಾರದ ಮುಳ್ಳು ತಿರುಗುತ್ತಿದ್ದವು. ಎದೆಯ ಸದ್ದೂ ಕೇಳಿಸುತ್ತಿತ್ತು. ಕಣ್ಣಂಚಿನಲ್ಲಿದ್ದ ನೀರು ಇಳಿಯುವುದಕ್ಕೂ ಅವಡುಗಚ್ಚಿ ತಡೆಹಿಡಿದಿದ್ದ ಮಡುಗಟ್ಟಿದ್ದ ಮೋಡಗಳು ಸುರಿಯುವುದಕ್ಕೂ ಸರಿಹೋಯಿತು.

ಮುಲ್ಲಾರ ಕಣ್ಣು ತುಂಬಿ ಹರಿಯುತ್ತಿದ್ದುದನ್ನು ಆ ಕತ್ತಲಲ್ಲಿ ಯಾರೂ ಗುರುತಿಸಲಿಲ್ಲ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೋಟ್ಯಾಂತರ ವಿದ್ಯಾರ್ಥಿಗಳ ಭವಿಷ್ಯದ ಜೊತೆ NTA ಚೆಲ್ಲಾಟ: RTI ನಲ್ಲಿ ಬಯಲಾಯ್ತು NTA ಕರ್ಮಕಾಂಡ

ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (NTA) ಎನ್ನುವ ಈ ಸರ್ಕಾರಿ ಸಂಸ್ಥೆಯ ಮೇಲೆ ಪ್ರತಿವರ್ಷ ಕೋಟ್ಯಂತರ ವಿದ್ಯಾರ್ಥಿಗಳು ತಮ್ಮ ಭವಿಷ್ಯದ ಕನಸುಗಳನ್ನು ಇಟ್ಟುಕೊಳ್ಳುತ್ತಾರೆ. 2018ರಲ್ಲಿ ಸ್ಥಾಪನೆಯಾದ ದಿನದಿಂದ ಇಲ್ಲಿಯವರೆಗೆ ಎನ್‌ಟಿಎ ಸುಮಾರು 270ಕ್ಕೂ ಹೆಚ್ಚು...

ಬಾಗಲಕೋಟೆ: ಪತಿಯಿಂದ 23 ವರ್ಷದ ಪತ್ನಿಯ ಕ್ರೂರ ಕೊಲೆ, ಪೋಷಕರಿಗೆ ವೀಡಿಯೊ ಕರೆ ಮಾಡಿ ಮಗಳ ಸಾವು-ಬದುಕಿನ ಹೋರಾಟ ತೋರಿಸಿದ ವಿಕೃತ ಪತಿ

ಬಾಗಲಕೋಟೆ: ಪತಿಯೋರ್ವ ತನ್ನ 23 ವರ್ಷದ ಪತ್ನಿಯ ಮೇಲೆ ವಿವಾಹೇತರ ಅನೈತಿಕ ಸಂಬಂಧದ ಶಂಕೆ ವ್ಯಕ್ತಪಡಿಸಿ, ಆಕೆಯ ಮೇಲೆ ಮರದ ದಿಮ್ಮಿಯಿಂದ ಕ್ರೂರವಾಗಿ ಹಲ್ಲೆ ನಡೆಸಿ, ತದನಂತರ ನೇಣಿಗೆ ಬಿಗಿದು ಅತ್ಯಂತ ಅಮಾನವೀಯವಾಗಿ...

ಕಾನೂನು-ಸುವ್ಯವಸ್ಥೆಗೆ ವಿದ್ಯಾರ್ಥಿಗಳು ಸಮಸ್ಯೆಯಾಗುತ್ತಾರೆ ಎಂದು ಪರಿಗಣಿಸಿದ್ದು ಏಕೆ: ಅಭಿಷೇಕ್ ಬ್ಯಾನರ್ಜಿ

ರಾಷ್ಟ್ರ ರಾಜಧಾನಿ ದೆಹಲಿ ಮತ್ತು ದೆಶದಾದ್ಯಂತ ಕಾಕ್ರೋಚ್ ಜನತಾ ಪಕ್ಷದ (ಸಿಜೆಪಿ) ನೇತೃತ್ವದಲ್ಲಿ ನಡೆದ ಪ್ರತಿಭಟನೆಗಳ ಸಂದರ್ಭದಲ್ಲಿ ವಿದ್ಯಾರ್ಥಿಗಳ ಮೇಲೆ ನಡೆದ ಭಾರೀ ಪೊಲೀಸ್ ಬಲಪ್ರಯೋವನ್ನು ವಿಪಕ್ಷಗಳು ಇಂದು ಲೋಕಸಭೆಯಲ್ಲಿ ಖಂಡಿಸಿವೆ. ವಿದ್ಯಾರ್ಥಿಗಳ...

ಪಬ್ಲಿಕ್ ಟಿವಿ ನಿರೂಪಕ ಅರುಣ್ ಬಡಿಗೇರ್ ವಿರುದ್ದ ಮೈಸೂರಿನಲ್ಲಿ ದೂರು ದಾಖಲು

ಸಂವಿಧಾನಬದ್ಧ ಮೀಸಲಾತಿಯ ಕುರಿತು ಅತ್ಯಂತ ನಿಂದನಾತ್ಮಕ, ಅವಹೇಳನಕಾರಿ ಹಾಗೂ ಸಮಾಜದಲ್ಲಿ ದ್ವೇಷ ಪ್ರಚೋದಿಸುವ ರೀತಿಯ ಹೇಳಿಕೆ ನೀಡಿರುವ 'ಪಬ್ಲಿಕ್ ಟಿವಿ' ನಿರೂಪಕ ಅರುಣ್ ಬಡಿಗೇರ್ ವಿರುದ್ಧ ಮೈಸೂರಿನಲ್ಲಿ ಕಾನೂನು ಕ್ರಮಕ್ಕೆ ಆಗ್ರಹಿಸಿ ಪೊಲೀಸ್‌...

ಕೇರಳ: ತಪ್ಪು ಪ್ರಕರಣದಲ್ಲಿ ಪೊಲೀಸರಿಂದ ಚಿತ್ರಹಿಂಸೆ: 29 ವರ್ಷದ ಮುಸ್ಲಿಂ ಯುವಕ ಸಾವು: ಕುಟುಂಬಕ್ಕಿದ್ದ ಒಂದೇ ಆಧಾರ ಕಳೆದುಕೊಂಡ ಪೋಷಕರು

ತಪ್ಪು ಗ್ರಹಿಕೆಯಿಂದ ಪೊಲೀಸ್ ಕಸ್ಟಡಿಗೆ ಪಡೆದ 29 ವರ್ಷದ ಮುಸ್ಲಿಂ ಯುವಕನೋರ್ವ, ಪೊಲೀಸರ ಕಠೋರ ಕಸ್ಟಡಿ ಚಿತ್ರಹಿಂಸೆಯಿಂದಾಗಿ ಪಕ್ಕೆಲುಬು ಮುರಿತಕ್ಕೊಳಗಾಗಿ, ಶ್ವಾಸಕೋಶದ ಸೋಂಕು ತೀವ್ರಗೊಂಡು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿರುವ ಅಮಾನವೀಯ ಹಾಗೂ ಆಘಾತಕಾರಿ...

ಮಾಧ್ಯಮ ತನಿಖಾ ವರದಿಗೆ ಹೆದರಿ ₹ 99 ಲಕ್ಷ ಸಬ್ಸಿಡಿ ವಾಪಸ್ ಮಾಡಿದ ಕೇಂದ್ರ BJP ಸಚಿವ

ತಮ್ಮದೇ ಸಚಿವಾಲಯದ ಯೋಜನೆಯಡಿ ಬರೋಬ್ಬರಿ 99 ಲಕ್ಷ ರೂಪಾಯಿ ಸರ್ಕಾರಿ ಸಬ್ಸಿಡಿ ಪಡೆದು ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದ್ದ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವ ಭಾಗೀರಥ್ ಚೌಧರಿ, ಕೊನೆಗೂ ಆ...

ಕಾಮನ್‌ವೆಲ್ತ್ ಕ್ರೀಡಾಕೂಟ: ಚಿನ್ನದ ಪದಕ ಗೆದ್ದ ಭಾರತದ ಮೊದಲ ಪ್ಯಾರಾ-ಅಥ್ಲೀಟ್ ಶರ್ಮಿಳಾ ಧನ್ಖರ್

ಎರಡು ವರ್ಷವಿದ್ದಾಗ ಪೋಲಿಯೊದಿಂದ ಅಂಗವಿಕಲಳಾಗಿ, ಬಾಲ್ಯದಲ್ಲಿ ದೌರ್ಜನ್ಯಕ್ಕೊಳಗಾದ, ವಿವಾಹದ ಆಘಾತದಿಂದ ಬದುಕುಳಿದ ಮಹಿಳೆ ಶರ್ಮಿಳಾ ಧನ್ಖರ್, ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದ ಭಾರತದ ಮೊದಲ ಪ್ಯಾರಾ-ಅಥ್ಲೀಟ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಗ್ಲ್ಯಾಸ್ಗೋದಲ್ಲಿ...

ಬಿಹಾರ: ವಿದ್ಯಾರ್ಥಿಗಳ ವಿರುದ್ಧ ಎಕೆ-47 ರೈಫಲ್ ಬಳಕೆ: ಗುಂಡು ಹಾರಿಸಲು ಆದೇಶಿಸಿದವರ ವಿರುದ್ಧ ತನಿಖೆಗೆ ಮನೋಜ್ ಝಾ ಆಗ್ರಹ; ಸುಪ್ರೀಂ ಮೆಟ್ಟಿಲೇರಿದ ಪ್ರಕರಣ

ನೀಟ್ (NEET) ಪ್ರಶ್ನೆ ಪತ್ರಿಕೆ ಸೋರಿಕೆ ಆರೋಪವನ್ನು ಖಂಡಿಸಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ, ಬಿಹಾರದ ಸಿವಾನ್ ಜಿಲ್ಲೆಯಲ್ಲಿ ಪೊಲೀಸ್ ಸಿಬ್ಬಂದಿಯೊಬ್ಬರು ಎಕೆ-47 ರೈಫಲ್‌ನಿಂದ ಗಾಳಿಯಲ್ಲಿ ಗುಂಡು ಹಾರಿಸುತ್ತಿದ್ದ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್...

ಧರ್ಮೇಂದ್ರ ಪ್ರಧಾನ್ ಖಾತೆ ಬದಲಾವಣೆ ಪ್ರಸ್ತಾವನೆ ತಿರಸ್ಕರಿಸಿದ್ದ ಸಿಜೆಪಿ: ವರದಿ

ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಜುಲೈ 25 ರಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ತಮ್ಮ ರಾಜೀನಾಮೆ ಸಲ್ಲಿಸಿದ್ದಾರೆ. ಆದರೆ, ಅದಕ್ಕೂ ಮೊದಲು ಕೇಂದ್ರ ಸರ್ಕಾರವು ಕಾಕ್ರೋಚ್ ಜನತಾ ಪಕ್ಷ (ಸಿಜೆಪಿ)...

ಹೈದರಾಬಾದ್| ಎಕ್ಸ್‌ಪ್ರೆಸ್‌ವೇನಲ್ಲಿ ನೇಮಕಾತಿ ಪರೀಕ್ಷೆ ಓಎಂಆರ್ ಹಾಳೆಗಳು ಪತ್ತೆ: ತನಿಖೆಗೆ ಆದೇಶ

ನೇಮಕಾತಿ ಪರೀಕ್ಷೆಯ ಮೂಲ ಆಪ್ಟಿಕಲ್ ಮಾರ್ಕ್ ರೆಕಗ್ನಿಷನ್ (ಒಎಂಆರ್) ಹಾಳೆಗಳು ಹೈದರಾಬಾದ್‌ನ ರಸ್ತೆಬದಿಯಲ್ಲಿ ರಾಶಿ ರಾಶಿಯಾಗಿ ಬಿದ್ದಿರುವುದು ಕಂಡುಬಂದ ನಂತರ ತೆಲಂಗಾಣ ಸಾರ್ವಜನಿಕ ಸೇವಾ ಆಯೋಗ (ಟಿಜಿಪಿಎಸ್‌ಸಿ) ತನಿಖೆಗೆ ಆದೇಶಿಸಿದೆ. 2018 ರ ಹಾಸ್ಟೆಲ್...