ಮಕ್ಕಳಿಗೆ ಕೊರೊನಾ ಚಿಕಿತ್ಸೆ ನೀಡಲು ಒಕ್ಕೂಟ ಸರ್ಕಾರ ಬುಧವಾರ ವಿವರವಾದ ಮಾರ್ಗಸೂಚಿಗಳನ್ನು ಹೊರಡಿಸಿದ್ದು, ವಯಸ್ಕರಿಗೆ ಬಳಸುವ ಹೆಚ್ಚಿನ ಔಷಧಿಗಳನ್ನು ಮಕ್ಕಳಿಗೆ ಶಿಫಾರಸು ಮಾಡುವುದಿಲ್ಲ ಎಂದು ಒತ್ತಿ ಹೇಳಿದೆ. ವಯಸ್ಕ ರೋಗಿಗಳಿಗೆ ಸೂಚಿಸಲಾದ ಐವರ್ಮೆಕ್ಟಿನ್, ಹೈಡ್ರಾಕ್ಸಿಕ್ಲೋರೋಕ್ವಿನ್, ಫೆವಿಪಿರವಿರ್, ಡಾಕ್ಸಿಸೈಕ್ಲಿನ್ ಮತ್ತು ಅಜಿಥ್ರೊಮೈಸಿನ್ ಮುಂತಾದ ಔಷಧಿಗಳನ್ನು ಮಕ್ಕಳ ಮೇಲೆ ಪರೀಕ್ಷಿಸಲಾಗಿಲ್ಲ ಎಂದು ಅದು ಹೇಳಿದೆ.
ಆದಾಗ್ಯೂ, ಒಕ್ಕೂಟ ಸರ್ಕಾರ ರೆಮ್‌ಡೆಸಿವಿರ್‌ನ ನಿರ್ಬಂಧಿತ ಬಳಕೆಗೆ ಅನುಮತಿಸಿದೆ. ಮಕ್ಕಳಿಗೆ ಲಸಿಕೆಗಳನ್ನು ಅನುಮೋದಿಸಿದ ನಂತರ, ಸಹ-ಅಸ್ವಸ್ಥತೆ ಹೊಂದಿರುವವರು ಮತ್ತು ತೀವ್ರ ರೋಗಲಕ್ಷಣಗಳನ್ನು ಹೊಂದಿರುವವರಿಗೆ ಲಸಿಕೆಯನ್ನು ಆದ್ಯತೆ ಮೇರೆಗೆ ನೀಡಲಾಗುವುದು ಎಂದು ಮಾರ್ಗಸೂಚಿ ತಿಳಿಸಿವೆ.
ಇದನ್ನೂ ಓದಿ: ಕೇರಳ ಬಿಜೆಪಿ ರಾಜ್ಯಾಧ್ಯಕ್ಷನ ಮೇಲೆ ಲಂಚ ಪ್ರಕರಣ ದಾಖಲಿಸಲು ಕೋರ್ಟ್ ಆದೇಶ
ಮಕ್ಕಳಿಗೆ ಚಿಕಿತ್ಸೆ ನೀಡುವ ಸೌಲಭ್ಯಗಳನ್ನು ಹೆಚ್ಚಿಸಲು ಸಾರ್ವಜನಿಕ ಮತ್ತು ಖಾಸಗಿ ವಲಯಗಳಿಂದ ಒಟ್ಟಾಗಿ ಪ್ರಯತ್ನಿಸಬೇಕು ಎಂದು ಸರ್ಕಾರ ಕರೆ ನೀಡಿದೆ. “ಮುಂದಿನ ಮೂರು ನಾಲ್ಕು ತಿಂಗಳುಗಳಲ್ಲಿ ಲಾಕ್‌ಡೌನ್ ಅನ್ನು ಹಿಂತೆಗೆದುಕೊಂಡ ನಂತರ ಭವಿಷ್ಯದಲ್ಲಿ ಉಂಟಾಗುವು ಸೋಂಕಿನ ಯಾವುದೇ ಉಲ್ಬಣವನ್ನು ನಿರ್ವಹಿಸಲು ಖಾಸಗಿ ಮತ್ತು ಸಾರ್ವಜನಿಕ ವಲಯದ ಸಂಯೋಜಿತ ಪ್ರಯತ್ನದ ಅಗತ್ಯವಿದೆ” ಎಂದು ಹೇಳಿದೆ,
ರೆಮ್‌ಡೆಸಿವಿರ್ ಅನ್ನು ಈ ಹಿಂದೆ ಮಕ್ಕಳಿಗೆ ಶಿಫಾರಸು ಮಾಡಿರಲಿಲ್ಲ
ಈ ಹಿಂದೆ ಆಂಟಿವೈರಲ್ ಔಷಧಿ ರೆಮ್ಡೆಸಿವಿರ್ ಅನ್ನು ಮಕ್ಕಳಿಗೆ ಶಿಫಾರಸು ಮಾಡಿಲ್ಲ ಎಂದು ಕೇಂದ್ರ ಹೇಳಿದೆ. ಆಸ್ಪತ್ರೆಗಳಲ್ಲಿ ಮಧ್ಯಮ ತೀವ್ರ ಮತ್ತು ಗಂಭೀರ ಅನಾರೋಗ್ಯ ಪೀಡಿತ ರೋಗಿಗಳಿಗೆ ಮಾತ್ರ ಚಿಕಿತ್ಸೆ ನೀಡಲು ಸ್ಟೀರಾಯ್ಡ್‌ಗಳನ್ನು ಬಳಸಬೇಕು ಎಂದು ಅದು ಹೇಳಿತ್ತು.
ಇದನ್ನೂ ಓದಿ: ಲಸಿಕೆಯಿಂದ ದೇಹದಲ್ಲಿ ಅಯಸ್ಕಾಂತೀಯ ಗುಣ ಸಾಬೀತುಪಡಿಸಿದರೆ 1 ಲಕ್ಷ ಬಹುಮಾನ: ಪ್ರೊ.ನರೇಂದ್ರ ನಾಯಕ್ ಸವಾಲು


