Homeಮುಖಪುಟಕುಂಭಮೇಳ: ನಕಲಿ ಕೊರೊನಾ ಪರೀಕ್ಷೆ ನಡೆಸಿದ್ದ ಪ್ರಯೋಗಾಲಯಗಳ ವಿರುದ್ಧ ಪ್ರಕರಣ

ಕುಂಭಮೇಳ: ನಕಲಿ ಕೊರೊನಾ ಪರೀಕ್ಷೆ ನಡೆಸಿದ್ದ ಪ್ರಯೋಗಾಲಯಗಳ ವಿರುದ್ಧ ಪ್ರಕರಣ

- Advertisement -
- Advertisement -

ಉತ್ತರಾಖಂಡದಲ್ಲಿ ನಡೆದ ಕುಂಭಮೇಳದಲ್ಲಿ ನಕಲಿ ಕೊರೊನಾ ಪರೀಕ್ಷೆಗಳನ್ನು ನಡೆಸಿದ ಆರೋಪ ಹೊತ್ತಿರುವ ಖಾಸಗಿ ಪ್ರಯೋಗಾಲಯಗಳ ವಿರುದ್ಧ ಪ್ರಕರಣ ದಾಖಲಿಸುವಂತೆ ಉತ್ತರಾಖಂಡ ಸರ್ಕಾರ ಹರಿದ್ವಾರ ಜಿಲ್ಲಾಡಳಿತಕ್ಕೆ ನಿರ್ದೇಶನ ನೀಡಿದೆ.

ಏಪ್ರಿಲ್ 1 ರಿಂದ 30 ರವರೆಗೆ ವಿಶ್ವದ ಅತಿದೊಡ್ಡ ಧಾರ್ಮಿಕ ಮೇಳಗಳಲ್ಲಿ ಒಂದಾದ ಕುಂಭ ಮೇಳದಲ್ಲಿ ಕೊರೊನಾ ಪರೀಕ್ಷೆಗಳನ್ನು ನಡೆಸಲು ಮುಖ್ಯವಾಗಿ ದೆಹಲಿ ಮತ್ತು ಹರಿಯಾಣ ಮೂಲದ ಖಾಸಗಿ ಪ್ರಯೋಗಾಲಯಗಳಿಗೆ ರಾಜ್ಯ ಸರ್ಕಾರ ಅನುಮತಿ ನೀಡಿತ್ತು.

“ಮಹಾಕುಂಭದ ಸಂದರ್ಭದಲ್ಲಿ ಕೋವಿಡ್ ಪರೀಕ್ಷಾ ಹಗರಣದಲ್ಲಿ ಎಫ್‌ಐಆರ್ ದಾಖಲಿಸುವಂತೆ ಉತ್ತರಾಖಂಡ ಸರ್ಕಾರ ಆದೇಶಿಸಿದೆ. ಕುಂಭಮೇಳ ಸಂದರ್ಭದಲ್ಲಿ ಹರಿದ್ವಾರದಲ್ಲಿ 5 ಸ್ಥಳಗಳಲ್ಲಿ ಪರೀಕ್ಷೆ ನಡೆಸಿದ ದೆಹಲಿ ಮತ್ತು ಹರಿಯಾಣದ ಪ್ರಯೋಗಾಲಯಗಳ ವಿರುದ್ಧ ಪ್ರಕರಣ ದಾಖಲಿಸುವಂತೆ ಆದೇಶ ಹೊರಡಿಸಲಾಗಿದೆ” ಎಂದು ರಾಜ್ಯ ಸರ್ಕಾರದ ವಕ್ತಾರ ಸುಬೋಧ್ ಯುನಿಯಾಲ್ ತಿಳಿಸಿದ್ದಾರೆ.

ಇದನ್ನೂ ಓದಿ: ಮೋದಿ ಸರ್ಕಾರವನ್ನು ‘ಕೇಂದ್ರ ಸರ್ಕಾರ’ ಎಂದು ಉಲ್ಲೇಖಿಸುವುದನ್ನು ಕೈಬಿಟ್ಟ ತಮಿಳುನಾಡು!

ಕುಂಭಮೇಳದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ನಕಲಿ ಕೊರೊನಾ ಪರೀಕ್ಷೆಗಳನ್ನು ನಡೆಸಲಾಗಿದೆ ಎಂಬ ವರದಿಗಳು ಹೊರಬಿದ್ದ ನಂತರ ಹರಿದ್ವಾರ್ ಜಿಲ್ಲಾಡಳಿತ ಕಳೆದ ವಾರ ತನಿಖೆಗೆ ಆದೇಶಿಸಿತ್ತು.

ವರದಿಗಳ ಪ್ರಕಾರ, ಉತ್ತರಾಖಂಡ ಹೈಕೋರ್ಟ್ ನಿಗದಿಪಡಿಸಿದ ದಿನಕ್ಕೆ 50,000 ಪರೀಕ್ಷೆಗಳ ಗುರಿಯನ್ನು ತಲುಪಲು ಈ ಖಾಸಗಿ ಪ್ರಯೋಗಾಲಯಗಳು ಈ ರೀತಿ ಕೊರೊನಾ ನಕಲಿ ಪರೀಕ್ಷೆಗಳನ್ನು ನಡೆಸಿವೆ ಎನ್ನಲಾಗಿದೆ. ಕುಂಭಮೇಳದ ಸಮಯದಲ್ಲಿ ಪರೀಕ್ಷೆ ನಡೆಸಲು ಇಪ್ಪತ್ತೆರಡು (22) ಖಾಸಗಿ ಲ್ಯಾಬ್‌ಗಳನ್ನು ನೇಮಿಸಲಾಗಿತ್ತು.

ಕುಂಭಮೇಳದ ಸಮಯದಲ್ಲಿ ಪರೀಕ್ಷೆಗಳನ್ನು ನಡೆಸುವ ಜವಾಬ್ದಾರಿಯನ್ನು ವಹಿಸಿಕೊಂಡಿದ್ದ ಎಲ್ಲಾ ಲ್ಯಾಬ್‌ಗಳಿಗೆ ಹಣ ಪಾವತಿಯನ್ನು ಸರ್ಕಾರ ತಡೆ ಹಿಡಿದಿದೆ. ನಕಲಿ ಕೊರೊನಾ ಪರೀಕ್ಷೆ ಬಗ್ಗೆ ತನಿಖೆ ನಡೆಯುತ್ತಿರುವುದರಿಂದ ಸದ್ಯಕ್ಕೆ ತಡೆಹಿಡಿಯಲಾಗಿದೆ ಎಂದು ಹರಿದ್ವಾರ ಜಿಲ್ಲಾ ಮ್ಯಾಜಿಸ್ಟ್ರೇಟ್ ಸಿ.ರವಿಶಂಕರ್ ಹೇಳಿದ್ದಾರೆ.

ದೇಶದಲ್ಲಿ ಕೊರೊನಾ ಎರಡನೇ ಅಲೆ ತೀವ್ರಗತಿಯಲ್ಲಿದ್ದ ಸಮಯದಲ್ಲಿಯೇ ದೇಶದ ವಿವಿಧ ಭಾಗಗಳಿಂದ ಅತ್ಯಧಿಕ ಸಂಖ್ಯೆಯಲ್ಲಿ ಭಾಗವಹಿಸುವ ಕುಂಭಮೇಳವನ್ನು ನಡೆಸಲಾಯಿತು. ಹರಿದ್ವಾರದಲ್ಲಿ ನಡೆದ ಈ ಕುಂಭಮೇಳದಲ್ಲಿ ಕನಿಷ್ಠ 70 ಲಕ್ಷ ಭಕ್ತರು ಭಾಗವಹಿಸಿದ್ದಾರೆಂದು ಹೇಳಲಾಗಿದೆ.

ಈ ಬಾರಿಯ ಹರಿದ್ವಾರದ ಕುಂಭಮೇಳದಲ್ಲಿ ವೈದ್ಯಕೀಯ ಸಿಬ್ಬಂದಿ ನಡೆಸಿದ ಸುಮಾರು ಎರಡು ಲಕ್ಷ ಪರೀಕ್ಷೆಗಳಲ್ಲಿ ಸುಮಾರು 2,600 ಭಕ್ತರಲ್ಲಿ ಕೊರೊನಾ ಸೋಂಕು ಕಂಡು ಬಂದಿತ್ತು. ಈಗ ಕೊರೊನಾ ನಕಲಿ ಪರೀಕ್ಷೆಗಳನ್ನು ನಡೆಸಲಾಗಿದೆ ಎಂಬ ಮಾಹಿತಿ ಹೊರ ಬಿದ್ದಿದ್ದು, ಪ್ರಯೋಗಾಲಯಗಳ ವಿರುದ್ಧ ಪ್ರಕರಣ ದಾಖಲಿಸಲು ಉತ್ತರಾಖಂಡ ಸರ್ಕಾರ ಆದೇಶಿಸಿದೆ.


ಇದನ್ನೂ ಓದಿ: ರಾಜ್ಯದಲ್ಲಿ ಸಿಎಂ ಬದಲಾವಣೆ ಇಲ್ಲ, ಬಿಜೆಪಿಯಲ್ಲಿ ಭಿನ್ನಮತವಿಲ್ಲ; ಅರುಣ್ ಸಿಂಗ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

2ಜಿ ತರಂಗಾಂತರ ತೀರ್ಪಿನ ಸ್ಪಷ್ಟನೆ ಕೋರಿದ್ದ ಕೇಂದ್ರದ ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್ ರಿಜಿಸ್ಟ್ರಿ

0
2ಜಿ ತರಂಗಾಂತರ ಹಂಚಿಕೆ ಪ್ರಕರಣಕ್ಕೆ ಸಂಬಂಧಪಟ್ಟಂತೆ 2012ರಲ್ಲಿ ನೀಡಿರುವ ತೀರ್ಪಿನ ಸ್ಪಷ್ಟನೆ ಕೋರಿ ಕೇಂದ್ರ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಸ್ವೀಕರಿಸಲು ಸುಪ್ರೀಂ ಕೋರ್ಟ್‌ನ ರಿಜಿಸ್ಟ್ರಾರ್ ನಿರಾಕರಿಸಿದ್ದಾರೆ. ಕೆಲ ಸಂದರ್ಭಗಳಲ್ಲಿ ಸಾರ್ವಜನಿಕ ಹರಾಜು ಹೊರತುಪಡಿಸಿ...