ಮೋದಿ ಸರ್ಕಾರವನ್ನು ‘ಕೇಂದ್ರ ಸರ್ಕಾರ’ ಎಂದು ಉಲ್ಲೇಖಿಸುವುದನ್ನು ಕೈಬಿಟ್ಟ ತಮಿಳುನಾಡು! | NaanuGauri

ತಮಿಳುನಾಡಿನ ಡಿಎಂಕೆ ಸರ್ಕಾರ ಮೋದಿ ಸರ್ಕಾರವನ್ನು ‘ಕೇಂದ್ರ ಸರ್ಕಾರ’(Centre Government) ಎಂದು ಕರೆಯುವುದನ್ನು ನಿಲ್ಲಿಸಿದ್ದು, ಬದಲಾಗಿ ‘ಒಕ್ಕೂಟ ಸರ್ಕಾರ’(Union Government) ಎಂದು ಉಲ್ಲೇಖಿಸುತ್ತಿದೆ. ಕೆಲವು ಬಿಜೆಪಿ ಬೆಂಬಲಿಗರು ಇದನ್ನು ಎನ್‌ಡಿಎ ನೇತೃತ್ವದ ಸರ್ಕಾರದ ವಿರುದ್ಧದ ರಾಜಕೀಯ ನಡೆ ಎಂದು ಟೀಕೆ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಡಿಎಂಕೆ, ತಾನು ಸಂವಿಧಾನದಲ್ಲಿ ಬರೆಯಲ್ಪಟ್ಟದ್ದನ್ನು ಮಾತ್ರ ಅನುಸರಿಸುತ್ತಿದ್ದೇನೆ ಎಂದು ಸ್ಪಷ್ಟಪಡಿಸಿದೆ.

ಜನಪ್ರಿಯ ನಂಬಿಕೆಗೆ ವಿರುದ್ಧವಾದ ನಡೆಯನ್ನು ಸಂವಿಧಾನ ತಜ್ಞ ಸುಭಾಷ್ ಕಶ್ಯಪ್ ಸಮರ್ಥಿಸಿದ್ದಾರೆ. ‘ಕೇಂದ್ರ’ ಎಂಬ ಪದವು ಸಂವಿಧಾನದಲ್ಲಿಲ್ಲ ಮತ್ತು ಅದನ್ನು ಬಳಸುವುದು ನಿಖರವಾಗಿಲ್ಲ ಎಂದು ಅವರು ತಿಳಿಸಿದ್ದಾರೆ ಎಂದು ನ್ಯೂಸ್ ಮಿನಿಟ್ ವರದಿ ಮಾಡಿದೆ.

ಇದನ್ನೂ ಓದಿ: ಬಿಬಿಸಿ ಪತ್ರಕರ್ತನ್ನು ಬೆನ್ನಟ್ಟಿ ‘ದೇಶದ್ರೋಹಿ’ ಎಂದ ಪ್ರತಿಭಟನಾಕಾರರು!

‘ಕೇಂದ್ರ’ ಎಂಬ ಪದವು ವೃತ್ತದ ಮಧ್ಯದಲ್ಲಿರುವ ಒಂದು ಬಿಂದುವಿಗೆ ಹೇಳಲಾಗುತ್ತದೆ. ಸರ್ಕಾರವನ್ನು ಉಲ್ಲೇಖಿಸಲು ‘ಕೇಂದ್ರ’ ಎಂಬ ಪದವನ್ನು ಬಳಸುವುದರಿಂದ ಸರ್ಕಾರವು ಕೇಂದ್ರ ಬಿಂದುವಾಗಿದೆ ಮತ್ತು ರಾಜ್ಯಗಳು ಅದರ ಪರಿಧಿಯಲ್ಲಿವೆ ಎಂದು ಸೂಚಿಸುತ್ತದೆ. ಮತ್ತೊಂದೆಡೆ, ‘ಒಕ್ಕೂಟ’ ಎಂಬ ಪದವು ‘ಇಡೀ ವಲಯ’ವನ್ನು ಉಲ್ಲೇಖಿಸುತ್ತದೆ. ‘ಒಕ್ಕೂಟ ಸರ್ಕಾರ’ ಎಂಬ ಪದವನ್ನು ಬಳಸುವುದರಿಂದ ಮೋದಿ ನೇತೃತ್ವದ ಸರ್ಕಾರ ಮತ್ತು ರಾಜ್ಯಗಳನ್ನೂ ಉಲ್ಲೇಖಿಸಿದಂತಾಗುತ್ತದೆ.

‘ಕೇಂದ್ರ’ ಎಂಬ ಪದವು ಭಾರತೀಯ ಸಂವಿಧಾನದಲ್ಲಿಲ್ಲ ಎಂದು ನ್ಯೂಸ್ ಮಿನಿಟ್ ವರದಿ ಮಾಡಿದೆ. ಸಂವಿಧಾನದ ಕರ್ತೃರು ಅದನ್ನು ಉದ್ದೇಶಪೂರ್ವಕವಾಗಿ ತ್ಯಜಿಸಿ ‘ಯೂನಿಯನ್’ ಪದವನ್ನು ಬಳಸಿದ್ದಾರೆ.

‘ಕೇಂದ್ರ’ ಎಂಬ ಪದವು ವಸಾಹತುಶಾಹಿ ಕಾಲದಿಂದ ಉಳಿದಿದೆ ಬಂದಿದೆ ಎಂದು ಕಶ್ಯಪ್ ಹೇಳಿದ್ದಾರೆ. ನವದೆಹಲಿಯ ಸೆಕ್ರೆಟರಿಯಟ್ ಕಟ್ಟಡದಲ್ಲಿ ಕೆಲಸ ಮಾಡುವ ಅಧಿಕಾರಿ ವರ್ಗದವರು ‘ಕೇಂದ್ರ ಕಾನೂನುಗಳು’ ಮತ್ತು ‘ಕೇಂದ್ರ ಶಾಸಕಾಂಗ’ ಮುಂತಾದ ಪದಗಳನ್ನು ಪಾಲಿಸುತ್ತಾ ಬಳಸುತ್ತಲೇ ಇದ್ದಾರೆ.

ಇದನ್ನೂ ಓದಿ: ಪ್ರಚೋದನಾಕಾರಿ ಚುನಾವಣಾ ಭಾಷಣ: ಪೊಲೀಸರಿಂದ ನಟ ಮಿಥುನ್ ಚಕ್ರವರ್ತಿ ವಿಚಾರಣೆ

ಭಾರತದ ಸಂವಿಧಾನದಲ್ಲಿನ ಅಧ್ಯಾಯವು ನಿರ್ದಿಷ್ಟವಾಗಿ ‘ಒಕ್ಕೂಟ ಸರ್ಕಾರ’, ‘ಒಕ್ಕೂಟ ಮತ್ತು ರಾಜ್ಯ ಸಂಬಂಧಗಳು’ ಮತ್ತು ‘ಒಕ್ಕೂಟ ಶಾಸಕಾಂಗ’ ಎಂಬ ಪದಗಳನ್ನು ಬಳಸುತ್ತದೆ ಎಂದು ಸಂವಿಧಾನ ತಜ್ಞರು ಸ್ಪಷ್ಟಪಡಿಸಿದ್ದಾರೆ.

ಭಾರತವು ಫೆಡರಲ್ ಸರ್ಕಾರವಾಗಿದೆ, ಒಕ್ಕೂಟ ಸರ್ಕಾರವನ್ನು ‘ಕೇಂದ್ರ’ ಎಂದು ಕರೆಯುವುದರಲ್ಲಿ ಅರ್ಥವಿಲ್ಲ, ಏಕೆಂದರೆ ಇದು ದೆಹಲಿಯು ಕೇಂದ್ರವಾಗಿದ್ದು, ಉಳಿದೆ ಸರ್ಕಾರಗಳ ಮೇಲೆ ಅಧಿಕಾರವನ್ನು ಹೊಂದಿದೆ ಎಂಬ ತಪ್ಪು ಅಭಿಪ್ರಾಯವನ್ನು ನೀಡುತ್ತದೆ ಎಂದು ಅವರು ಸೂಚಿಸುತ್ತಾರೆ.

ಈ ಪದವು ರಾಜ್ಯಗಳಿಗೆ ಸಮಾನವಾದ ಸ್ಥಾನವಿಲ್ಲ ಎಂದು ಸಹ ಇದು ಸೂಚಿಸುತ್ತದೆ. “ಫೆಡರಲ್ ವ್ಯವಸ್ಥೆಯಲ್ಲಿ, ಅಧಿಕಾರವನ್ನು ಇಡೀ ದೇಶದ ನಡುವೆ ವಿಂಗಡಿಸಲಾಗಿದೆ. ರಾಜ್ಯಗಳು ಅಧೀನವಾಗಿಲ್ಲ, ಬದಲಾಗಿ ಸಮಾನವಾಗಿದೆ” ಎಂದು ವರದಿಯಲ್ಲಿ ಹೇಳಲಾಗಿದೆ.

ಇದನ್ನೂ ಓದಿ: ಪ್ರತಿಭಟಿಸುವುದು ಭಯೋತ್ಪಾದನೆಯಲ್ಲ ಎಂದ ದೆಹಲಿ ಹೈಕೋರ್ಟ್: ಸ್ವಾಗತಿಸಿದ ನ್ಯಾಯವಾದಿಗಳು ಮತ್ತು ಕಾನೂನು ತಜ್ಞರು

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
Avatar
ನಾನು ಗೌರಿ ಡೆಸ್ಕ್
+ posts

LEAVE A REPLY

Please enter your comment!
Please enter your name here