Homeಮುಖಪುಟಪ್ರಚೋದನಾಕಾರಿ ಚುನಾವಣಾ ಭಾಷಣ: ಪೊಲೀಸರಿಂದ ನಟ ಮಿಥುನ್ ಚಕ್ರವರ್ತಿ ವಿಚಾರಣೆ

ಪ್ರಚೋದನಾಕಾರಿ ಚುನಾವಣಾ ಭಾಷಣ: ಪೊಲೀಸರಿಂದ ನಟ ಮಿಥುನ್ ಚಕ್ರವರ್ತಿ ವಿಚಾರಣೆ

'ನಾನು ಒಂದ್‍ ಹೊಡೆದೆ ಅಂದ್ರೆ ಅಷ್ಟೇ, ಸುಡಾಗಾಡಲ್ಲಿ ನಿಮ್ಮ ಹೆಣ ಇರ್ತದೆ’ ಎಂಬ ಸಿನಿಮಾ ಸಂಭಾಷಣೆಯನ್ನು ಮಿಥುನ್‍ ರಾಜಕೀಯ ವೇದಿಕೆಯಿಂದ ಹೇಳಿದ್ದರು.

- Advertisement -
- Advertisement -

ಏಪ್ರಿಲ್-ಮೇನಲ್ಲಿ ನಡೆದೆ ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಬಿಜೆಪಿಯ ಸ್ಟಾರ್ ಪ್ರಚಾರಕರಲ್ಲಿ ಒಬ್ಬರಾಗಿದ್ದ ಬಾಲಿವುಡ್‍ ಮತ್ತು ಬಂಗಾಳಿ ಸಿನಿಮಾ ನಟ ಮಿಥುನ್ ಚಕ್ರವರ್ತಿಯವರನ್ನು ಕೊಲ್ಕೊತ್ತಾ ಪೊಲೀಸರು ವಿಚಾರಣೆ ನಡೆಸಿದ್ದಾರೆ.

ಬಿಜೆಪಿಎಗೆ ಸೇರಿದ ನಂತರ ಮಾರ್ಚ್ 7ರಂದು ಮಾಡಿದ ಭಾಷಣಕ್ಕೆ ಸಂಬಂಧಿಸಿದಂತೆ ಅವರ ವಿರುದ್ಧ ದಾಖಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಲ್ಕೊತ್ತಾ ಪೊಲೀಸರು ಅವರನ್ನು ಪ್ರಶ್ನಿಸಿದ್ದಾರೆ.

ಏಪ್ರಿಲ್-ಮೇ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್‍ ಭರ್ಜರಿ ಜಯವನ್ನು ದಾಖಲಿಸಿದ ನಂತರದ ಹಿಂಸಾಚಾರವನ್ನು ಪ್ರಚೋದಿಸುವಲ್ಲಿ ಇವರ ಭಾಷಣವು ಪಾತ್ರ ವಹಿಸಿದೆ ಎಂದು ಎಫ್‍ಐಆರ್‌ನಲ್ಲಿ ಆರೋಪ ಮಾಡಲಾಗಿದೆ.

ಎಫ್‌ಐಆರ್ ರದ್ದು ಮಾಡಬೇಕು ಎಂದು ಮಿಥುನ್ ಚಕ್ರವರ್ತಿ ಕೊಲ್ಕೊತ್ತಾ ಹೈಕೋರ್ಟ್ ಮೊರೆ ಹೋಗಿದ್ದರು. ಆಗ ಮಿಥುನ್‍ ಅವರನ್ನು ಆ ಭಾಷಣದ ಕುರಿತು ಪ್ರಶ್ನಿಸುವಂತೆ ನ್ಯಾಯಾಲಯ ತನಿಖಾ ಅಧಿಕಾರಿಗೆ ನಿರ್ದೇಶನ ನೀಡಿತ್ತು.

ತಮ್ಮ ಭಾಷಣದಲ್ಲಿ ಚಲನಚಿತ್ರ ಸಂಭಾಷಣೆಗಳನ್ನು ಮಾತ್ರ ಹೇಳಿದ್ದೇನೆ ಮತ್ತು ಇವು ಅಕ್ಷರಶಃ ವಾಸ್ತವವಲ್ಲ ಎಂದು ಮಿಥುನ್‍ ಹೇಳಿಕೊಂಡಿದ್ದಾರೆ.

ಅವರ 2006ರ ಚಲನಚಿತ್ರ “ಎಂಎಲ್ಎ ಫಟಕೇಶ್ಟೋ”ದ ಒಂದು ಸಾಲನ್ನು ಎಫ್‍ಐಆರ್ ನಲ್ಲಿದೆ. ‘ನಾನು ಒಂದ್‍ ಹೊಡೆದೆ ಅಂದ್ರೆ ಅಷ್ಟೇ, ಸುಡಾಗಾಡಲ್ಲಿ ನಿಮ್ಮ ಹೆಣ ಇರ್ತದೆ’ ಎಂಬ ಸಿನಿಮಾ ಸಂಭಾಷಣೆಯನ್ನು ಮಿಥುನ್‍ ರಾಜಕೀಯ ವೇದಿಕೆಯಿಂದ ಹೇಳಿದ್ದರು.

ಹುಚ್ಚುಚ್ಚಾಗಿ ಹುರಿದುಂಬಿಸಿದ ಭಾಷಣದಲ್ಲಿ, ಅವರು ಈ ಸಾಲುಗಳನ್ನು ಸಹ ಹೇಳಿದ್ದಾರೆ: “ನಿರುಪದ್ರವ ಹಾವು ಅಂತ ನನ್ನನ್ನು ತಪ್ಪಾಗಿ ಗ್ರಹಿಸಬೇಡಿ, ನಾನು ಶುದ್ಧ ನಾಗರಹಾವು, ಒಮ್ಮೆ ಕಚ್ಚಿದರೆ ನೀವು ಫೋಟೊ ಅಷ್ಟೇ….’’

ಚುನಾವಣಾ ಫಲಿತಾಂಶದ ನಂತರ ಬಂಗಾಳದ ಹಲವಾರು ಭಾಗಗಳಲ್ಲಿ ತೃಣಮೂಲ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಬಡಿದಾಟಗಳು ನಡೆದವು.

ಹಿಂಸಾಚಾರದಲ್ಲಿ ಕನಿಷ್ಠ 16 ಜನರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕಳೆದ ತಿಂಗಳು ಹೇಳಿದ್ದರು.


ಇದನ್ನೂ ಓದಿ; ರೊನಾಲ್ಡೊ ಮಾಡಿದ ಒಂದು ಸಣ್ಣ ಕೆಲಸಕ್ಕೆ 4 ಬಿಲಿಯನ್ ಡಾಲರ್ ಕಳೆದುಕೊಂಡ ಕೋಕೊ-ಕೋಲಾ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೋಕಸಭೆ ಚುನಾವಣೆ: ಇಂದು ಮೊದಲ ಹಂತದ ಮತದಾನ

0
ಬಹು ನಿರೀಕ್ಷಿತ ಲೋಕಸಭೆ ಚುನಾವಣೆಯ ಮೊದಲ ಹಂತದ ಮತದಾನ ಇಂದು (ಏ.19) ನಡೆಯಲಿದೆ. ದೇಶದ 17 ರಾಜ್ಯಗಳು ಮತ್ತು 4 ಕೇಂದ್ರಾಡಳಿತ ಪ್ರದೇಶಗಳ 16.63 ಕೋಟಿ ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ. ದೇಶದ 107...