Homeದಿಟನಾಗರಫ್ಯಾಕ್ಟ್‌ಚೆಕ್: ನಾಟಕೀಯ ವಿಡಿಯೋಗಳ ಬಗ್ಗೆ ಗಮನವಿರಲಿ.. ಹಂಚುವ ಮುನ್ನ ಪರಿಶೀಲಿಸಿ

ಫ್ಯಾಕ್ಟ್‌ಚೆಕ್: ನಾಟಕೀಯ ವಿಡಿಯೋಗಳ ಬಗ್ಗೆ ಗಮನವಿರಲಿ.. ಹಂಚುವ ಮುನ್ನ ಪರಿಶೀಲಿಸಿ

ಸೂಟ್‌ಕೇಸ್‌ನಲ್ಲಿ ಬಾಲಕಿಯ ಅಪರಹಣ ಎಂಬುದು ನಿಜವಾಗಿ ನಡೆದ ಘಟನೆಯಲ್ಲ. ಅದು ನಟಿಸಿದ ವಿಡಿಯೋ ಆಗಿದೆ.

- Advertisement -
- Advertisement -

ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಒಂದು ವಿಡಿಯೋ ಸಂಚಲನ ಮೂಡಿಸಿತ್ತು. ಅದೇನೆಂದರೆ ಒಬ್ಬ ವ್ಯಕ್ತಿ ಅಪ್ರಾಪ್ತ ಬಾಲಕಿಯನ್ನು ಸೂಟ್ ಕೇಸ್ ನಲ್ಲಿ ತುಂಬಿ ಅಪಹರಣ ಮಾಡಿದಂತಹ ವೀಡಿಯೋವನ್ನು ರಾಣಾ ಜಸ್ ವೀರ್ ಎಂಬುವವರು ತಮ್ಮ ಟ್ಟಿಟರ್ ಖಾತೆಯಲ್ಲಿ ಶೇರ್ ಮಾಡಿದ್ದರು. ಆನಂತರ ಅದು ಫೇಸ್‌ಬುಕ್‌ ವಾಟ್ಸಾಪ್‌ಗಳಲ್ಲಿ ವೈರಲ್ ಆಗತೊಡಗಿದೆ. ಸಾವಿರಾರು ಜನರು ಈ ವಿಡಿಯೋವನ್ನು ವೀಕ್ಷಿಸಿರುವುದು ಕಂಡುಬಂದಿದೆ.

ಈ ವಿಡಿಯೋದ ಮೂಲ ಹಿಡಿದು ಹೊರಟಿದಾಗ ಭಗವಂತ್ ಸಿಂಗ್ ರುಪಾಲ್, ಪಂಜಾಬ್ ಮೂಲದ ರೋಜಾನಾ ಸ್ಪೋಕ್ಸ್‌ಮ್ಯಾನ್ ಎಂಬ ಪತ್ರಿಕೆಯ ಫ್ಯಾಕ್ಟ್ ಚೆಕ್ ನಡೆಸುವವರು ಇದು ನಾಟಕೀಯ ವಿಡಿಯೋವಾಗಿದೆ ಎಂದು ಖಚಿತ ಪಡಿಸಿದ್ದಾರೆ. ಭಾರ್ತಿ ಪ್ರಾಂಕ್ ಎಂಬ ಯೂಟ್ಯೂಬ್ ಚಾನೆಲ್‌ ಮೂಲಕ ಹಲವಾರು ನಾಟಕೀಯ ಅಭಿಯನದ ವಿಡಿಯೋಗಳನ್ನು ಅವರು ಹಂಚಿಕೊಂಡಿರುವುದು ಕಂಡುಬಂದಿದೆ.

ಆ ಚಾನೆಲ್‌ನಲ್ಲಿ ಇದರ ಮೂಲ ವಿಡಿಯೋದ ದೊರಕಿದೆ. ಈ ವೀಡಿಯೋದ ಅಸಲಿಯತ್ತು ಏನಂದ್ರೆ ಇದೊಂದು ಪ್ರಾಂಕ್ ವೀಡಿಯೋ. ರಾಜು ಭಾರ್ತಿ ಎಂಬುವವರು ಸಾಮಾಜಿಕ ಜಾಗೃತಿ ಮೂಡಿಸು ಸಲುವಾಗಿ ಕೆಲವು ವೀಡಿಯೋಗಳನ್ನು ಮಾಡಿ ತಮ್ಮ ಸೋಶಿಯಲ್ ಮೀಡಿಯಾಗಳಲ್ಲಿ ಶೇರ್ ಮಾಡುತ್ತಿದ್ದರು. ಮತ್ತು ಇದೊಂದು ಸ್ಕ್ರಿಪ್ಟೆಡ್ ಎಂಬ ಕ್ಯಾಪ್ಷನ್ ಕೂಡ ನೀಡಿದ್ದರು. ಅವರು “ಈ ಪುಟವು ಕಾಲ್ಪನಿಕ ವೀಡಿಯೊಗಳನ್ನು ಒಳಗೊಂಡಿದೆ; ವೀಡಿಯೊದಲ್ಲಿ ಕಾಣಿಸಿಕೊಳ್ಳುವ ಎಲ್ಲಾ ಪಾತ್ರಗಳು ಕಾಲ್ಪನಿಕವಾಗಿವೆ. ಮಾಡಿದ ವೀಡಿಯೊಗಳು ನೈಜ ಘಟನೆಗಳಿಂದ ಪ್ರೇರಿತವಾಗಿವೆ ಮತ್ತು ಸಾಮಾಜಿಕ ಜಾಗೃತಿಯನ್ನು ಹರಡುವ ಧ್ಯೇಯವಾಕ್ಯದೊಂದಿಗೆ ಮಾಡಲಾಗಿದೆ. ಯಾವುದೇ ಧರ್ಮ, ಜಾತಿ, ರಾಷ್ಟ್ರೀಯತೆ, ಲಿಂಗ ಅಥವಾ ಯಾವುದೇ ವ್ಯಕ್ತಿಯನ್ನು ಯಾವುದೇ ರೀತಿಯಲ್ಲಿ ಮಾನಹಾನಿ ಮಾಡುವುದು, ಅಗೌರವಿಸುವುದು ನಮ್ಮ ಉದ್ದೇಶವಲ್ಲ” ಎಂದು ಬರೆದುಕೊಂಡಿದ್ದಾರೆ. ಈ ವಿಡಿಯೋವನ್ನು ಸುಮಾರು 2 ಕೋಟಿ ಜನ ವೀಕ್ಷಿಸಿದ್ದಾರೆ.

ರಾಜು ಭಾರ್ತಿಯವರು ತಾವು ಕೂಡ ವಿಡಿಯೋದಲ್ಲಿ ಅಭಿನಯಿಸಿ ಹಲವು ವಿಡಿಯೋಗಳನ್ನು ಮಾಡಿರುವುದುನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು. ಒಟ್ಟಿನಲ್ಲಿ ಸೂಟ್‌ಕೇಸ್‌ನಲ್ಲಿ ಬಾಲಕಿಯ ಅಪರಹಣ ಎಂಬುದು ನಿಜವಾಗಿ ನಡೆದ ಘಟನೆಯಲ್ಲ. ಅದು ನಟಿಸಿದ ವಿಡಿಯೋ ಆಗಿದೆ.

ಆದರೆ ಕಲವು ವ್ಯಕ್ತಿಗಳು ಈ ವೀಡಿಯೋದ ಅಸಲಿಯತ್ತು ತಿಳಿಯದೆ ಅಪಹರಣವು ನಿಜವೆಂದು ಭಾವಿಸಿ ತಮ್ಮ ತಮ್ಮ ಸೋಶಿಯಲ್ ಮೀಡಿಯಾಗಳ ಮೂಲಕ ಸುಳ್ಳು ಸುದ್ದಿ ಹರಿಯಬಿಟ್ಟಿದ್ದಾರೆ. ಸಾಮಾಜಿಕ ಸ್ವಾಸ್ಥ್ಯವನ್ನು ಹಾಳುಮಾಡಲು ಬಳಸಿಕೊಂಡಿರುವುದು ವಿಷಾದನೀಯ. ಇಂತವು ಸುಳ್ಳು ಸುದ್ದಿಯ ವೀಡಿಯೋಗಳ ಬಗ್ಗೆ ಜನ ಹೆಚ್ಚು ಜಾಗೃತಗೊಳ್ಳಬೇಕಿದೆ. ಈ ರೀತಿಯ ನಾಟಕೀಯ ವಿಡಿಯೋಗಳ ಬಗ್ಗೆ ಗಮನವಿರಲಿ.. ಹಂಚುವ ಮುನ್ನ ಪರಿಶೀಲಿಸಿ..

ಈ ಹಿಂದೆಯೂ ಸಹ ಇದೇ ರೀತಿಯ ನಾಟಕೀಯ ವಿಡಿಯೋವನ್ನು ಮುಸ್ಲಿಂ ಯುವಕರು ಹಿಂದೂ ಯುವತಿಯರನ್ನು ಟ್ಯ್ರಾಪ್‌‌ ಮಾಡುತ್ತಿದ್ದಾರೆ ಎಂದು ತಪ್ಪಾಗಿ ವಿಡಿಯೊ ಶೇರ್‌ ಮಾಡಲಾಗುತ್ತಿದೆ ಎಂದು ಸುಳ್ಳು ಹಬ್ಬಿಸಲಾಗಿತ್ತು. ಅದನ್ನು ನಾನುಗೌರಿ.ಕಾಂ ಅಲ್ಲಗೆಳೆದಿತ್ತು.


ಇದನ್ನೂ ಓದಿ: ಫ್ಯಾಕ್ಟ್‌ಚೆಕ್: ಪಾಕಿಸ್ತಾನದ ಸಂಸತ್‌ನಲ್ಲಿ ಮೋದಿ ಮೋದಿ ಎಂಬ ಘೋಷಣೆ ಕೂಗಿದ್ದು ನಿಜವೇ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ದ್ವೇಷವನ್ನು ಸೋಲಿಸುವ ಮೂಲಕ ‘ಮೊಹಬ್ಬತ್ ಕಿ ದುಕಾನ್’ ತೆರೆಯಿರಿ: ರಾಹುಲ್ ಗಾಂಧಿ

0
ಇಂದಿನಿಂದಆರಂಭವಾಗುತ್ತಿರುವ 2024ರ ಲೋಕಸಭೆ ಚುನಾವಣೆಯ ಮೊದಲ ಹಂತದ ಮತದಾನದ ದಿನದಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಪ್ರಜಾಪ್ರಭುತ್ವವನ್ನು ಬಲಪಡಿಸಲು ಮತ್ತು ದ್ವೇಷವನ್ನು ಸೋಲಿಸುವ ಮೂಲಕ ದೇಶದ ಮೂಲೆಮೂಲೆಗಳಲ್ಲಿ 'ಪ್ರೀತಿಯ ಅಂಗಡಿ' (ಮೊಹಬ್ಬತ್...