Homeಮುಖಪುಟದೆಹಲಿ ಹೈಕೋರ್ಟ್ ಛೀಮಾರಿ: ನ್ಯೂಸ್ ಲಾಂಡ್ರಿ ಪತ್ರಕರ್ತೆಯರ ವಿರುದ್ಧದ ಪೋಸ್ಟ್ ತೆಗೆಯಲು ಅಭಿಜಿತ್ ಅಯ್ಯರ್ ಒಪ್ಪಿಗೆ

ದೆಹಲಿ ಹೈಕೋರ್ಟ್ ಛೀಮಾರಿ: ನ್ಯೂಸ್ ಲಾಂಡ್ರಿ ಪತ್ರಕರ್ತೆಯರ ವಿರುದ್ಧದ ಪೋಸ್ಟ್ ತೆಗೆಯಲು ಅಭಿಜಿತ್ ಅಯ್ಯರ್ ಒಪ್ಪಿಗೆ

- Advertisement -
- Advertisement -

ಡಿಜಿಟಲ್ ಸುದ್ದಿ ವೇದಿಕೆ ನ್ಯೂಸ್‌ ಲಾಂಡ್ರಿಯ ಪತ್ರಕರ್ತೆಯರನ್ನು ‘ವೇಶ್ಯೆಯರು’ ಮತ್ತು ಅವರು ಕೆಲಸ ಮಾಡುವ ಸ್ಥಳವನ್ನು ‘ವೇಶ್ಯಾಗೃಹ’ ಎಂದು ನಿಂದಿಸಿ ಪೋಸ್ಟ್ ಹಾಕಿದ್ದ ರಾಜಕೀಯ ವಿಶ್ಲೇಷಕ ಅಭಿಜಿತ್‌ ಅಯ್ಯರ್‌ ಮಿತ್ರಗೆ ದೆಹಲಿ ಹೈಕೋರ್ಟ್‌ ಬುಧವಾರ (ಮೇ.21) ಛೀಮಾರಿ ಹಾಕಿದೆ ಎಂದು ವರದಿಯಾಗಿದೆ.

ನಿಂದನೀಯ ಪೋಸ್ಟ್‌ಗಳನ್ನು ತೆಗೆದು ಹಾಕುವಂತೆ ಅಭಿಜಿತ್‌ಗೆ ಸೂಚಿಸಿರುವ ಕೋರ್ಟ್, ಪೋಸ್ಟ್ ತೆಗೆಯುವರೆಗೆ ಅವರ ವಾದ ಆಲಿಸುವುದಿಲ್ಲ ಎಂದಿರುವುದಾಗಿ livelaw.in ವರದಿ ಮಾಡಿದೆ.

ಅಭಿಜಿತ್‌ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ತಮ್ಮ ವಿರುದ್ದ ಲೈಂಗಿಕ ನಿಂದನಾತ್ಮಕ ಪೋಸ್ಟ್ ಹಾಕಿದ್ದಾರೆ ಎಂದು ಪತ್ರಕರ್ತೆಯರು ಆರೋಪಿಸಿದ್ದಾರೆ.

ಅಭಿಜಿತ್ ಅವರ ಎಕ್ಸ್  ಪೋಸ್ಟ್‌ಗಳನ್ನು ಪರಿಶೀಲಿಸಿದ ನ್ಯಾಯಮೂರ್ತಿ ಪುರುಷೀಂದ್ರ ಕುಮಾರ್ ಕೌರವ್ ಅವರು “ನೀವು ನಿಮ್ಮ ಪೋಸ್ಟ್ ಅನ್ನು ಸಮರ್ಥಿಸಿಕೊಳ್ಳುತ್ತೀರಾ? ಹಿನ್ನೆಲೆ ಏನೇ ಇರಲಿ, ಮಹಿಳೆಯರ ವಿರುದ್ದ ಈ ರೀತಿಯ ಪದಗಳನ್ನು ಬಳಸುವುದು ಈ ಸಮಾಜದಲ್ಲಿ ಅನುವದನೀಯವೇ? ಮೊದಲು ನೀವು ನಿಮ್ಮ ಪೋಸ್ಟ್ ತೆಗೆದು ಹಾಕಿ, ಆ ನಂತರ ನಿಮ್ಮ ಮಾತು ಕೇಳುತ್ತೇವೆ” ಎಂದು ಅಭಿಜಿತ್‌ ಅಯ್ಯರ್‌ಗೆ ಮೌಖಿವಾಗಿ ಹೇಳಿದ್ದಾರೆ.

ಅಯ್ಯರ್ ಪರ ಹಾಜರಿದ್ದ ವಕೀಲ ಜೈ ಅನಂತ್ ದೇಹಾದ್ರಾಯಿ ವಾದ ಮಂಡಿಸಿ “ನಮ್ಮ ಕಕ್ಷಿದಾರರ ಒಂದೇ ಒಂದು ಪೋಸ್ಟ್ ಕೂಡ ಪತ್ರಕರ್ತರಿಗೆ ವೈಯಕ್ತಿಕವಾಗಿ ಸಂಬಂಧಿಸಿಲ್ಲ” ಎಂದಿದ್ದಾರೆ.

ಈ ವಾದವನ್ನು ಒಪ್ಪಿಕೊಳ್ಳದ ನ್ಯಾಯಾಧೀಶರು, “ನೀವು ಆ ರೀತಿ ಅಂದುಕೊಂಡಿದ್ದರೆ, ಅದು ಪ್ರತಿವಾದಿಗಳಿಗೆ (ಪತ್ರಕರ್ತರಿಗೆ) ನೇರವಾಗಿ ಸಂಬಂಧಿಸಿವೆ ಎಂದು ನಾನು ಹೇಳುತ್ತೇನೆ” ಎಂದಿದ್ದಾರೆ.

ಈ ವೇಳೆ ಪ್ರತಿಕ್ರಿಯೆ ನೀಡಿದ ವಕೀಲ ದೇಹಾದ್ರಾಯಿ, “ನ್ಯೂಸ್ ಲಾಂಡ್ರಿ ಹೇಳಿಕೊಳ್ಳುವಂತಹ ಸಂಸ್ಥೆಯೇನು ಅಲ್ಲ. ಅದರ ಆದಾಯದ ಪ್ರಶ್ನಾರ್ಹ ಮೂಲಗಳ ಬಗ್ಗೆಯೂ ಅಯ್ಯರ್ ಹಲವಾರು ಟ್ವೀಟ್‌ಗಳನ್ನು ಮಾಡಿದ್ದಾರೆ” ಎಂದಿದ್ದಾರೆ.

ಮುಂದುವರಿದು, “ಆ ಸಂಸ್ಥೆಯ ಆದಾಯ ಮೂಲಗಳ ವಿಶ್ವಾಸಾರ್ಹತೆಯ ಬಗ್ಗೆ ಪ್ರಶ್ನೆಯಿದೆ. ಹಾಗಾಗಿ, ಅದನ್ನು ವೇಶ್ಯಾಗೃಹ ಎಂದು ಉಲ್ಲೇಖಿಸಲಾಗಿದೆ” ಎಂಬ ದಾಟಿಯಲ್ಲಿ ಅಯ್ಯರ್ ಪೋಸ್ಟ್ ಅನ್ನು ಸಮರ್ಥಿಸಿಕೊಂಡಿದ್ದಾರೆ.

ಇದಕ್ಕೆ ಖಾರವಾಗಿ ಪ್ರತಿಕ್ರಿಯೆ ನ್ಯಾಯಾಧೀಶರು,”ಪ್ರಶ್ನಾರ್ಹ ಆದಾಯ ಏನೇ ಇರಲಿ, ಇಂದು ಇಲ್ಲಿ ಪ್ರಶ್ನಿಸದ ಯಾವುದನ್ನೂ ಪರಿಶೀಲಿಸಲು ಸಾಧ್ಯವಿಲ್ಲ. ವೇಶ್ಯಾಗೃಹದ ವ್ಯಾಖ್ಯಾನವನ್ನು ಅವರು (ಅಭಿಜಿತ್ ಅಯ್ಯರ್) ಅರ್ಥಮಾಡಿಕೊಂಡಿದ್ದಾರಾ? ಪ್ರಶ್ನಾರ್ಹ ಮೂಲಗಳಿಂದ ಹಣಕಾಸಿನ ನೆರವು ಪಡೆಯುವ ಏನೇ ಆದರೂ ಅದನ್ನು ವೇಶ್ಯಾಗೃಹ ಎಂದು ಕರೆಯಬಹುದೇ?. ಪ್ರತಿವಾದಿಯ ವಿರುದ್ದ ಹಲವು ದೂರುಗಳು ಮತ್ತು ನಿಮ್ಮ ಕಕ್ಷಿದಾರರ ಪರ ಹಲವು ಸಮರ್ಥನೀಯ ವಾದಗಳು ನಿಮ್ಮಲ್ಲಿ ಇರಬಹುದು. ಹಾಗಾಂತ, ನಿಮ್ಮ ಕಕ್ಷಿದಾರರು ಬಳಕೆ ಮಾಡಿರುವ ಪದಗಳು ಸಮಾಜದಲ್ಲಿ ಸಮರ್ಥನೀಯವಲ್ಲ. ಯಾರಿಗೆ ಸಂಬಂಧಿಸದಿದ್ದರೂ, ಯಾವುದೇ ಕಲ್ಪನೆಯ ಮೇಲೆಯೂ ಸಾರ್ವಜನಿಕ ವೇದಿಕೆಯಲ್ಲಿ ಅಂತಹ ಪದ ಬಳಕೆ ಮಾಡಬಾರದು” ಎಂದು ಹೇಳಿದ್ದಾರೆ.

ಸಾರ್ವಜನಿಕ ವೇದಿಕೆಯಲ್ಲಿ ಮಹಿಳೆಯರ ವಿರುದ್ಧ ನಿಂದನೀಯ ಪದಗಳನ್ನು ಬಳಸಿದ್ದಕ್ಕಾಗಿ ಅಯ್ಯರ್ ವಿರುದ್ಧ ಸ್ವಯಂಪ್ರೇರಿತವಾಗಿ ಎಫ್‌ಐಆರ್ ದಾಖಲಿಸುವಂತೆ ಆದೇಶಿಸಲು ಪೀಠ ಮುಂದಾದಾಗ, ಪೋಸ್ಟ್‌ಗಳನ್ನು ತಕ್ಷಣವೇ ತೆಗೆದುಹಾಕಲು ಅಯ್ಯರ್ ಪರ ವಕೀಲರು ಒಪ್ಪಿಕೊಂಡರು. ನ್ಯಾಯಾಲಯ ವಿಚಾರಣೆಯನ್ನು ಮುಂದಿನ ವಾರಕ್ಕೆ ನಿಗದಿ ಮಾಡಿದ್ದಾರೆ.

ನ್ಯೂಸ್ ಲಾಂಡ್ರಿಯ ಪತ್ರಕರ್ತೆಯರು ಹೂಡಿರುವ ಮಾನನಷ್ಟ ಮೊಕದ್ದಮೆಯಲ್ಲಿ ಅಯ್ಯರ್‌ ಮಿತ್ರಗೆ ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು, ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳನ್ನು ತೆಗೆಯಬೇಕು ಮತ್ತು ಪರಿಹಾರವಾಗಿ 2 ಕೋಟಿ ರೂಪಾಯಿ ನೀಡಬೇಕು ಎಂದು ಕೋರಲಾಗಿದೆ.

ಮಹಿಳಾ ಪತ್ರಕರ್ತರಾದ ಮನೀಶಾ ಪಾಂಡೆ, ಇಶಿತಾ ಪ್ರದೀಪ್, ಸುಹಾಸಿನಿ ಬಿಸ್ವಾಸ್, ಸುಮೇಧಾ ಮಿತ್ತಲ್, ಟಿಸ್ತಾ ರಾಯ್ ಚೌಧರಿ, ತಸ್ನೀಮ್ ಫಾತಿಮಾ, ಪ್ರಿಯಾ ಜೈನ್, ಜಯಶ್ರೀ ಅರುಣಾಚಲಂ ಮತ್ತು ಪ್ರಿಯಾಲಿ ಧಿಂಗ್ರಾ ಮೊಕದ್ದಮೆ ಹೂಡಿದ್ದಾರೆ. ಪ್ರಕರಣದ ಪಕ್ಷಕಾರರಲ್ಲಿ ನ್ಯೂಸ್ ಲಾಂಡ್ರಿಯೂ ಸೇರಿದೆ.

ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಅಭಿಜಿತ್ ಅಯ್ಯರ್ ಹಾಕಿರುವ ಪೋಸ್ಟ್‌ಗಳು ಮಾನಹಾನಿಕರ ಆಧಾರರಹಿತ ಮತ್ತು ತಪ್ಪು ಕಲ್ಪನೆಯಿಂದ ಕೂಡಿದ್ದು, ಮಹಿಳಾ ಉದ್ಯೋಗಿಗಳ ಘನತೆ ಮತ್ತು ಖ್ಯಾತಿಗೆ ಹಾನಿ ಮಾಡುವ ಉದ್ದೇಶ ಹೊಂದಿದೆ ಎಂದು ಮೊಕದ್ದಮೆಯಲ್ಲಿ ತಿಳಿಸಲಾಗಿದೆ.

ಪತ್ರಿಕೋದ್ಯಮದ ಕೆಲಸದ ಬಗ್ಗೆ ನ್ಯಾಯಯುತ ಟೀಕೆ ಸ್ವಾಗತಾರ್ಹವಾದರೂ, ಯಾರೂ ವೈಯಕ್ತಿಕವಾಗಿ ಅವಮಾನಕ್ಕೊಳಗಾಗಲು ಅರ್ಹರಲ್ಲ ಎಂದು ಪತ್ರಕರ್ತೆಯರು ಹೇಳಿದ್ದಾರೆ.

ಅಭಿಜಿತ್ ಅಯ್ಯರ್ ತನ್ನ ಸರಣಿ ಎಕ್ಸ್‌ ಪೋಸ್ಟ್‌ನಲ್ಲಿ ಮಹಿಳಾ ಉದ್ಯೋಗಿಗಳ ವಿರುದ್ದ ದುರುದ್ದೇಶಪೂರಿತ ಮತ್ತು ನಿಂದನೀಯ ಪದಗಳನ್ನು ಬಳಸಿದ್ದಾರೆ. ನಮ್ಮನ್ನು ವೇಶ್ಯೆಯರು ಮತ್ತು ನಾನು ಕೆಲಸ ಮಾಡುವ ಸ್ಥಳವನ್ನು ವೇಶ್ಯಾಗೃಹ ಎಂದು ಕರೆದಿರುವುದಾಗಿ ತಿಳಿಸಿದ್ದಾರೆ.

ವೈದ್ಯರಿಂದ ಹಿಡಿದು ವಕೀಲರು, ನ್ಯಾಯಾಧೀಶರು, ಶಿಕ್ಷಕರು, ವಿಜ್ಞಾನಿಗಳು, ವಾಸ್ತುಶಿಲ್ಪಿಗಳು, ಇಂಜಿನಿಯರ್‌ಗಳು ಮತ್ತು ಇತರರ ವರ್ಗದವರು ಎಂಬ ಗೌರವ ಇಲ್ಲದೆ, ನ್ಯೂಸ್ ಲಾಂಡ್ರಿಯ ಎಲ್ಲಾ ಚಂದಾದಾರರನ್ನು ‘ವೇಶ್ಯೆಯರು’ ಎಂದು ಉಲ್ಲೇಖಿಸಿರುವುದಾಗಿ ವಿವರಿಸಿದ್ದಾರೆ.

ಲೈಂಗಿಕ ಕಾರ್ಯಕರ್ತೆಯರಿಗೂ ಸಹ ಘನತೆ ಇದೆ. ‘ವೇಶ್ಯೆ’ ಎಂಬ ಪದವು ಮಹಿಳಾ ಪತ್ರಕರ್ತರ ಮೇಲಿನ ದಾಳಿ ಮಾತ್ರವಲ್ಲ, ಲೈಂಗಿಕ ಕಾರ್ಯಕರ್ತೆಯರ ವಿರುದ್ಧದ ಅಸಹನೆ ಮತ್ತು ಹಿಂಸಾತ್ಮಕ ಮನೋಭಾವವನ್ನು ಬಿಂಬಿಸುತ್ತದೆ. ಈಗಾಗಲೇ ಅನೇಕ ಲೈಂಗಿಕ ಕಾರ್ಯಕರ್ತೆಯರ ಈ ರೀತಿಯ ಹಿಂಸೆಗಳನ್ನು ಅನುಭವಿಸುತ್ತಿದ್ದಾರೆ ಎಂದು ತಮ್ಮ ಅರ್ಜಿಯಲ್ಲಿ ಪತ್ರಕರ್ತೆಯರ ಹೇಳಿದ್ದಾರೆ.

ಯಾವುದೇ ವ್ಯಕ್ತಿ/ ಮಹಿಳೆ ಅವಮಾನವೀಯ ಕೃತ್ಯಗಳಿಗೆ ಒಳಪಡಬೇಕಾದವರಲ್ಲ. ಯಾವುದೇ ವೃತ್ತಿಯನ್ನು ಅವಮಾನವೆಂದು ಶಸ್ತ್ರಸಜ್ಜಿತಗೊಳಿಸಲು ಸಾಧ್ಯವಿಲ್ಲ. ಅಭಿಜಿತ್ ಅಯ್ಯರ್ ಪೋಸ್ಟ್ ಪತ್ರಕರ್ತರಾಗಿರಲಿ ಅಥವಾ ಲೈಂಗಿಕ ಕಾರ್ಯಕರ್ತರಾಗಿರಲಿ ಮಹಿಳೆಯರ ಸಂಸ್ಥೆ, ಗೌರವವನ್ನು ಕಸಿದುಕೊಳ್ಳುತ್ತದೆ. ಅಭಿವ್ಯಕ್ತಿ ಸ್ವಾತಂತ್ರ್ಯ, ಪತ್ರಿಕೋದ್ಯಮ ಟೀಕೆ ಅಥವಾ ವಿಡಂಬನೆ ಅಥವಾ ನ್ಯಾಯಯುತ ಹೇಳಿಕೆ ಎಂದು ಇದನ್ನು ಸಮರ್ಥಿಸಲು ಸಾಧ್ಯವಿಲ್ಲ ಎಂದಿದ್ದಾರೆ.

ಅಭಿಜಿತ್ ಅವರ ಪೋಸ್ಟ್ ನ್ಯೂಸ್ ಲಾಂಡ್ರಿಯ ಮಹಿಳಾ ವೃತ್ತಿಪರರನ್ನು ಅವಮಾನಿಸುವ ಗುರಿಯನ್ನು ಹೊಂದಿರುವ ಲೈಂಗಿಕ ನಿಂದನೆಗಳಾಗಿವೆ. ನ್ಯೂಸ್ ಲಾಂಡ್ರಿಯ ಮೇಲಿನ ದಾಳಿಯ ಹೊರತಾಗಿ, ಭಯ ಅಥವಾ ಲೈಂಗಿಕ ಕಿರುಕುಳವಿಲ್ಲದೆ ಕೆಲಸ ಮಾಡುವ ಮಹಿಳೆಯರ ಘನತೆ ಮತ್ತು ಹಕ್ಕಿನ ಮೇಲಿನ ನೇರ ದಾಳಿಯಾಗಿದೆ ಎಂದು ಹೇಳಿದ್ದಾರೆ.

ಪತ್ರಕರ್ತೆಯರು ವಕೀಲ ಉದ್ಧವ್ ಖನ್ನಾ ಮತ್ತು ಧ್ರುವ ವಿಗ್ ಮೂಲಕ ಈ ಮೊಕದ್ದಮೆ ಹೂಡಿದ್ದಾರೆ. ವರದಿಗಳ ಪ್ರಕಾರ, ನ್ಯಾಯಾಲಯದ ಕ್ಷಮೆ ಕೇಳಿರುವ ಅಭಿಜಿತ್ ಅಯ್ಯರ್ ಪರ ವಕೀಲ ದೇಹದ್ರಾಯ್‌ ಅವರು, 5 ಗಂಟೆಗಳ ಒಳಗೆ ಪೋಸ್ಟ್ ಅಳಿಸಿಹಾಕುವುದಾಗಿ ತಿಳಿಸಿದ್ದಾರೆ.

ನಗದು ಪತ್ತೆ ಪ್ರಕರಣ | ನ್ಯಾಯಮೂರ್ತಿ ವಿರುದ್ಧ ಎಫ್‌ಐಆರ್ ಕೋರಿ ಸಲ್ಲಿಸಲಾಗಿದ್ದ ಅರ್ಜಿ ವಜಾ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...