- Advertisement -
- Advertisement -
ಗೃಹಬಳಕೆಯ ಅಡುಗೆ ಅನಿಲ (LPG) ದರದಲ್ಲಿ ಮತ್ತೆ 50 ರೂ. ಏರಿಕೆ ಮಾಡಲಾಗಿದೆ. ಹಾಗಾಗಿ 14.2 ಕೆಜಿ ಸಬ್ಸಿಡಿ ಸಿಲಿಂಡರ್ ಬೆಲೆ ಈಗ ದೆಹಲಿಯಲ್ಲಿ 1,053 ರೂ ಮುಟ್ಟಿದೆ.
ಈ ವರ್ಷದ ಮೇ 07 ರಂದು ಅನಿಲ ದರದಲ್ಲಿ 50 ರೂ ಹೆಚ್ಚಳ ಮಾಡಲಾಗಿತ್ತು. ಅದಕ್ಕೂ ಮುನ್ನ ಮಾರ್ಚ್‌ನಲ್ಲಿ 50 ರೂ ಏರಿಸಲಾಗಿತ್ತು. ಈಗ ಮತ್ತೆ 50 ರೂ ಹೆಚ್ಚಳ ಮಾಡಿದ್ದು ಗ್ರಾಹಕರಿಗೆ ಹೊರೆಯಾಗಿ ಪರಿಣಮಿಸಲಿದೆ.
ಗೃಹಬಳಕೆಯ 5ಕೆಜಿ ಸಿಲಿಂಡರ್ ಬೆಲೆಯಲ್ಲಿ 18 ರೂ ಹೆಚ್ಚಳವಾದರೆ, 19 ಕೆಜಿಯ ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆ 8.50 ರೂ ಹೆಚ್ಚಾಗಿದೆ.
ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆಯನ್ನು ಏಪ್ರಿಲ್‌ನಲ್ಲಿ 250 ರೂ ಹೆಚ್ಚಿಸಲಾಗಿತ್ತು. ಮತ್ತೆ ಮೇ ತಿಂಗಳಿನಲ್ಲಿ 02 ರೂ ಏರಿಕೆ ಮಾಡಲಾಗಿತ್ತು. ಆನಂತರ ಜುಲೈ 1 ರಂದು 198 ರೂ ಕಡಿಮೆ ಮಾಡಿತ್ತು.
ಇದನ್ನೂ ಓದಿ: ಸಂಘಪರಿವಾರ ಅಡ್ಡಿಪಡಿಸಿದ ‘ಜೊತೆಗಿರುವನು ಚಂದಿರ’ ನಾಟಕ ಕೈದಿಗಳ ಬಾಳಿಗೆ ಬೆಳಕಾಗಿದ್ದು ಹೀಗೆ…


