ಕೇಂದ್ರ ಸರ್ಕಾರದ ವಿರುದ್ಧ ಮತ್ತು ಕೃಷಿ ಕಾನೂನುಗಳ ವಿರುದ್ಧ ರಾಷ್ಟ್ರ ರಾಜಧಾನಿಯಲ್ಲಿ ಲಕ್ಷಾಂತರ ರೈತರು ಪ್ರತಿಭಟನೆ ನಡೆಸುತ್ತಿದ್ದು, ಈ ಪ್ರತಿಭಟನೆಗೆ ದೇಶದಾದ್ಯಂತ ಇರುವ ಇನ್ನಷ್ಟು ರೈತರು ಸೇರಿಕೊಳ್ಳುತ್ತಿದ್ದಾರೆ. ಹಾಗಾಗಿ ದೆಹಲಿಯ ಗಡಿಯಲ್ಲಿ ರೈತ ಹೋರಾಟ ಮತ್ತಷ್ಟು ತೀವ್ರಗೊಳ್ಳುತ್ತಿದೆ.
ಮಹಾರಾಷ್ಟ್ರದ ರೈತರು ಇಂದು ದೆಹಲಿಯ ಪ್ರತಿಭಟನೆಗೆ ಸೇರಿಕೊಳ್ಳಲು ಸಾಗರೋಪಾದಿಯಲ್ಲಿ ತೆರಳುತ್ತಿರುವ ವೀಡಿಯೋವನ್ನು ಈ ಕೆಳಗೆ ನೋಡಬಹುದು.
ಇದನ್ನೂ ಓದಿ:ಪ್ರತಿಭಟನಾ ಸ್ಥಳದಲ್ಲಿಯೇ ಈರುಳ್ಳಿ ಬಿತ್ತನೆ: ಹೋರಾಟದಲ್ಲಿಯೂ ಕೃಷಿ ಬಿಡಲೊಪ್ಪದ ರೈತರು!
ಇದನ್ನೂ ಓದಿ:ರೈತಸಂಘದ ನೂರಾರು ಕಾರ್ಯಕರ್ತರೊಂದಿಗೆ ಸಾಮೂಹಿಕವಾಗಿ Jio ಸಿಮ್‌ನಿಂದ ಪೋರ್ಟ್ ಆಗಲು ಮುಂದಾದ ಎಚ್.ಆರ್ ಬಸವರಾಜಪ್ಪ
ಈ ಕುರಿತು ಫೇಸ್‌ಬುಕ್‌ನಲ್ಲಿ ಪತ್ರಿಕಾ ವರದಿಯೊಂದನ್ನು ಹಂಚಿಕೊಂಡಿರುವ ಚಿಂತಕರು ಮತ್ತು ಹೋರಾಟಗಾರರಾದ ಶ್ರೀಪಾದ್ ಭಟ್, “ಮಹಾರಾಷ್ಟ್ರದ ರೈತರು ಜೇಬಿನಲ್ಲಿ 100ರೂ.ಇಟ್ಟುಕೊಂಡು, ಸಾವಿರಾರು ಕಿ.ಮೀ. ಪ್ರಯಾಣಿಸಿ ದೆಹಲಿಗೆ ಬರುತ್ತಿದ್ದಾರೆ. ಸಂಘಿಗಳೇ ನಿಮಗೆ ನೆನಪಿದೆಯೇ? ಎರಡು ವರ್ಷಗಳ ಹಿಂದೆ ಇದೇ 35,000 ರೈತರು 700 ಕಿ.ಮೀ.ನ ‘ಲಾಂಗ್ ಮಾರ್ಚ್’ನ ಮೂಲಕ ಮುಂಬೈಗೆ ಮುತ್ತಿಗೆ ಹಾಕಿದ್ದರು. ನಿಮ್ಮ ವಟು ಫಡ್ನವೀಸ್‌ನ ಬೆವರಿಳಿಸಿದ್ದರು. ಈಗ ದೆಹಲಿಗೆ ಬರುತ್ತಿದ್ದಾರೆ. ಕಷ್ಟವಿದೆ ನಿಮಗೆ” ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ:ಮಾಧ್ಯಮಗಳ ಪ್ರಕಾರ ಹೇಳುವುದಾದರೆ ಅಲ್ಲಿ ಹೋರಾಡುತ್ತಿರುವವರು ರೈತರೇ ಅಲ್ಲ: ಪೇಜಾವರ ಮಠದ ಸ್ವಾಮೀಜಿ
ಇನ್ನು ಪಶ್ಚಿಮ ಬಂಗಾಳದ ನಂದಿಗ್ರಾಮದಿಂದಲೂ ದೆಹಲಿಯ ಸಿಂಘು ಗಡಿಗೆ ಸಾವಿರಾರು ರೈತರು ಬರುತ್ತಿದ್ದಾರೆ. ಈ ವಾರಾಂತ್ಯದಲ್ಲಿ ಪಂಜಾಬ್, ಹರಿಯಾಣ ಮತ್ತು ರಾಜಸ್ಥಾನಗಳಲ್ಲಿ ಸುಗ್ಗೀ ಕಾಲ ಮುಗಿಯಲಿದ್ದು, ದೊಡ್ಡ ಸಂಖ್ಯೆಯಲ್ಲಿ ರೈತರು ಹೋರಾಟದಲ್ಲಿ ಭಾಗಿಯಾಗುವ ನಿರೀಕ್ಷೆಯಿದೆ ಎಂದು ಪ್ರತಿಧ್ವನಿ ವರದಿ ಮಾಡಿದೆ.
ರೈತರ ಹೋರಾಟವನ್ನು ಹತ್ತಿಕ್ಕುವ ಸಲುವಾಗಿ ಕೇಂದ್ರ ಸರ್ಕಾರ ಮತ್ತು ಬಿಜೆಪಿಯು ಏನೆಲ್ಲಾ ಪ್ರಯತ್ನಪಟ್ಟರೂ ರೈತರನ್ನು ತಡೆಯಲು ಸಾಧ್ಯವಾಗುತ್ತಿಲ್ಲ. ಇದರ ನಡುವೆಯೇ ರೈತರ ಪ್ರತಿಭಟನೆ ಒಂದು ತಿಂಗಳನ್ನು ಪೂರೈಸಿದೆ.
ಡಿಸಂಬರ್ 29 ರಂದು ರೈತ ಮುಖಂಡರೊಂದಿಗೆ ಕೇಂದ್ರ ಸರ್ಕಾರವು ಮಾತುಕತೆ ನಡೆಸಲಿದ್ದು, ಇದು ನಿರ್ಣಾಯಕ ಸಭೆಯಾಗಲಿದೆ ಎಂದು ರೈತರು ಹೇಳಿದ್ದಾರೆ. ಜೊತೆಗೆ ಕೃಷಿ ಕಾನೂನುಗಳನ್ನು ಹಿಂಪಡೆಯಬೇಕು ಎನ್ನುವ ನಿಲುವಿನಿಂದ ಹಿಂದೆ ಸರಿಯುವುದಿಲ್ಲ ಎಂದೂ ಹೇಳಿದ್ದಾರೆ.
ಇದನ್ನೂ ಓದಿ:ಮತಾಂತರ ನಿಷೇಧ ಕಾಯ್ದೆ: ಉತ್ತರಪ್ರದೇಶ ತೊರೆಯುತ್ತಿರುವ ಅಂತರ್‌ಧರ್ಮೀಯ ಸಂಗಾತಿಗಳು!


