ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟ(ಎನ್‌ಡಿಎ)ದಿಂದ ಎಐಎಡಿಎಂಕೆ ಹೊರನಡೆದಿರುವ ಕುರಿತು ಮಂಗಳವಾರ ಬಿಜೆಪಿ ವಿರುದ್ಧ ರಾಜ್ಯಸಭಾ ಸಂಸದ ಕಪಿಲ್ ಸಿಬಲ್ ವಾಗ್ದಾಳಿ ನಡೆಸಿದರು.
ಮತ್ತೊಂದು ಮಿತ್ರ ಪಕ್ಷವು ಬಿಜೆಪಿಯನ್ನು ತೊರೆದಿದೆ. ಆದರೆ, ಇನ್ನೂ ಬಿಜೆಪಿ ಜೊತೆ ಇರುವವರು ಸೈದ್ಧಾಂತಿಕ ಬದ್ಧತೆಯಿಲ್ಲದ ಅವಕಾಶವಾದಿಗಳು ಮಾತ್ರ ಎಂದು ಹೇಳಿದ್ದಾರೆ.
ಬಿಜೆಪಿಯೊಂದಿಗಿನ ತನ್ನ ನಾಲ್ಕು ವರ್ಷಗಳ ಸಂಬಂಧವನ್ನು ಕೊನೆಗೊಳಿಸಿದ ಎಐಎಡಿಎಂಕೆ ಸೋಮವಾರ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟದಿಂದ ಹೊರನಡೆಯುವುದಾಗಿ ಘೋಷಿಸಿತು ಮತ್ತು 2024ರ ಲೋಕಸಭೆ ಚುನಾವಣೆಗೆ ಪ್ರತ್ಯೇಕ ರಂಗವನ್ನು ಮುನ್ನಡೆಸುವುದಾಗಿ ಹೇಳಿದೆ.
ಚೆನ್ನೈನ ಎಐಎಡಿಎಂಕೆ ಕೇಂದ್ರ ಕಚೇರಿಯಲ್ಲಿ ಪಕ್ಷದ ಮುಖ್ಯಸ್ಥ ಎಡಪ್ಪಾಡಿ ಕೆ ಪಳನಿಸ್ವಾಮಿ ನೇತೃತ್ವದಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಎನ್‌ಡಿಎಯಿಂದ ಹೊರಬರುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.
AIADMK exits NDA
Yet another ally leaves them !
Those still with them are opportunistic alliances with no ideological glue :
Pawar & Shinde in Maharashtra
& alliances in the North EastBJP is like the camel in the tent !
— Kapil Sibal (@KapilSibal) September 26, 2023
ಎಕ್ಸ್‌ನಲ್ಲಿನ ಪೋಸ್ಟ್‌ನಲ್ಲಿ, ಸಿಬಲ್, ”ಎಐಎಡಿಎಂಕೆ ಎನ್‌ಡಿಎಯಿಂದ ಹೊರಬಂದಿದೆ. ಮತ್ತೊಬ್ಬ ಮಿತ್ರ ಅವರನ್ನು ಬಿಟ್ಟು ಹೋಗುತ್ತಾನೆ! ಅವರೊಂದಿಗೆ ಇನ್ನೂ ಅವರ ಜೊತೆ ಇರುವವರು ಸೈದ್ಧಾಂತಿಕ ಬದ್ಧತೆಯಿಲ್ಲದ ಅವಕಾಶವಾದಿಗಳು ಮಾತ್ರ.. ಮಹಾರಾಷ್ಟ್ರದಲ್ಲಿ ಪವಾರ್ ಮತ್ತು ಶಿಂಧೆ ಮತ್ತು ಈಶಾನ್ಯದಲ್ಲಿ ಮೈತ್ರಿಗಳು. ಬಿಜೆಪಿ ಇದೀಗ ಒಂಟೆ ಇದ್ದಂತೆ” ಎಂದು ಹೇಳಿದ್ದಾರೆ.
ಯುಪಿಎ I ಮತ್ತು II ಅವಧಿಯಲ್ಲಿ ಕೇಂದ್ರ ಸಚಿವರಾಗಿದ್ದ ಸಿಬಲ್ ಕಳೆದ ವರ್ಷ ಮೇ ತಿಂಗಳಲ್ಲಿ ಕಾಂಗ್ರೆಸ್ ತೊರೆದು ಸಮಾಜವಾದಿ ಪಕ್ಷದ ಬೆಂಬಲದೊಂದಿಗೆ ಸ್ವತಂತ್ರ ಸದಸ್ಯರಾಗಿ ರಾಜ್ಯಸಭೆಗೆ ಆಯ್ಕೆಯಾದರು.
ಅನ್ಯಾಯದ ವಿರುದ್ಧ ಹೋರಾಡುವ ಉದ್ದೇಶದಿಂದ ಅವರು ಚುನಾವಣೇತರ ವೇದಿಕೆ ‘ಇನ್ಸಾಫ್’ ಎನ್ನುವ ಸಂಘಟನೆ ಮುನ್ನಡೆಸುತ್ತಿದ್ದಾರೆ.
ಇದನ್ನೂ ಓದಿ: ತಮಿಳುನಾಡು: NDA ಜೊತೆಗಿನ ಮೈತ್ರಿಯನ್ನು ಅಧಿಕೃತವಾಗಿ ಅಂತ್ಯಗೊಳಿಸಿದ ಎಐಎಡಿಎಂಕೆ


