Homeಮುಖಪುಟಮೋದಿಯವರ ಪಕ್ಷ, ಸಂಘಪರಿವಾರ ಅತಿ ಹೆಚ್ಚು ದ್ವೇಷ ಭಾಷಣಗಳಲ್ಲಿ ತೊಡಗಿವೆ: ವರದಿ

ಮೋದಿಯವರ ಪಕ್ಷ, ಸಂಘಪರಿವಾರ ಅತಿ ಹೆಚ್ಚು ದ್ವೇಷ ಭಾಷಣಗಳಲ್ಲಿ ತೊಡಗಿವೆ: ವರದಿ

- Advertisement -
- Advertisement -

2014 ರಲ್ಲಿ ಮೋದಿ ಅಧಿಕಾರಕ್ಕೆ ಬಂದ ನಂತರ ದೇಶದಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ಎತ್ತಿ ತೋರಿಸುವ ವರದಿಯೊಂದು ಬಿಡುಗಡೆಯಾಗಿದೆ. ವರದಿ ಪ್ರಕಾರ, ಈ ವರ್ಷದ ಮೊದಲಾರ್ಧದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಮತ್ತು ಅಂಗಸಂಸ್ಥೆ ಗುಂಪುಗಳು ಹೆಚ್ಚಿನ ದ್ವೇಷ ಭಾಷಣಗಳನ್ನು ಮಾಡಿವೆ ಎಂದು ಹೇಳಿದೆ.

ವಾಷಿಂಗ್ಟನ್ ಡಿಸಿ ಮೂಲದ ಸಂಶೋಧನಾ ಸಂಸ್ಥೆಯು ಭಾರತದಲ್ಲಿ ಅಲ್ಪಸಂಖ್ಯಾತರ ವಿರುದ್ಧದ ದ್ವೇಷ ಭಾಷಣ ಮತ್ತು ಅಪರಾಧಗಳನ್ನು ಪತ್ತೆಹಚ್ಚುವ ”ಹಿಂದುತ್ವ ವಾಚ್” ಎನ್ನುವ ವರದಿಯನ್ನು ಸೋಮವಾರ ಬಿಡುಗಡೆ ಮಾಡಿದೆ.

2014ರಲ್ಲಿ ಮೋದಿ ಅಧಿಕಾರಕ್ಕೆ ಬಂದ ನಂತರ ಭಾರತದಲ್ಲಿ ಮುಸ್ಲಿಂ ವಿರೋಧಿ ಭಾಷಣಗಳು ಹೆಚ್ಚಾಗಿವೆ ಎಂದು ಸಂಶೋಧಕರು ಬರೆದಿದ್ದಾರೆ. ಈ ವರ್ಷ ದಾಖಲಿತ ಘಟನೆಗಳಲ್ಲಿ ಅರ್ಧಕ್ಕಿಂತ ಹೆಚ್ಚು ಪ್ರಕರಣಗಳು ಆಡಳಿತಾರೂಢ ಬಿಜೆಪಿ ಮತ್ತು ಬಜರಂಗ ದಳ ಸೇರಿದಂತೆ ಅಂಗಸಂಸ್ಥೆಗಳು ದ್ವೇಷಭಾಷಣ ಮಾಡುವೆ ಎಂದು ವರದಿಯು ಕಂಡುಹಿಡಿದಿದೆ. ಬಿಜೆಪಿಯ ಸೈದ್ಧಾಂತಿಕ ಪೋಷಕರಾದ ವಿಶ್ವ ಹಿಂದೂ ಪರಿಷತ್, ಸಕಲ ಹಿಂದೂ ಸಮಾಜ ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘ ಅಥವಾ ಆರ್‌ಎಸ್‌ಎಸ್‌ ಇಂತಹ ಹೇಳಿಕೆಗಳನ್ನು ಹೆಚ್ಚಾಗಿ ನೀಡುತ್ತವೆ ಎಂದು ವರದಿ ಹೇಳಿದೆ.

ಈ ವರದಿಯಲ್ಲಿ ಮುಸ್ಲಿಮರ ವಿರುದ್ಧ ದಾಖಲಾದ 255 ದ್ವೇಷದ ಭಾಷಣಗಳಲ್ಲಿ ಶೇಕಡಾ 80ರಷ್ಟು ಪ್ರಕರಣಗಳು ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ಸಂಭವಿಸಿವೆ ಎಂದು ಬಹಿರಂಗಪಡಿಸಿದೆಬ ಎಂದು ಬ್ಲೂಮ್‌ಬರ್ಗ್ ವರದಿ ಮಾಡಿದೆ.

ಬಿಜೆಪಿಯ ನಾಯಕತ್ವದಲ್ಲಿ, ಭಾರತದ ಮುಸ್ಲಿಮರು ಜನಸಂಖ್ಯೆಯು ತಾರತಮ್ಯ ಮತ್ತು ಧಾರ್ಮಿಕ ಕಿರುಕುಳವನ್ನು ಎದುರಿಸುತ್ತಿದೆ ಎಂದು ವರದಿ ಹೇಳಿದೆ. ಬಿಜೆಪಿ ಹಾಗೂ ಅದರ ಅಂಗಸಂಸ್ಥೆಗಳ ಕಾರ್ಯಸೂಚಿಯ ಭಾಗವಾಗಿ ಮುಸ್ಲಿಮರನ್ನು ಕೊನೆಯ ದರ್ಜೆಯ ಪ್ರಜೆಗಳನ್ನಾಗಿಸುವುದು ಮತ್ತು ಭಾರತವನ್ನು ಹಿಂದೂ ರಾಷ್ಟ್ರವಾಗಿ ಸ್ಥಾಪಿಸುವುದಾಗಿದೆ.

ಇದನ್ನೂ ಓದಿ: ಬಿಜೆಪಿ-ಜೆಡಿಎಸ್ ಮೈತ್ರಿ: ದಳದಲ್ಲಿ ಭಿನ್ನಮತ, ರಾಜೀನಾಮೆಗೆ ಮುಂದಾದ್ರಾ ಮುಸ್ಲಿ ಮುಖಂಡರು?

2017ರಲ್ಲಿ ಭಾರತದ ಕ್ರೈಮ್ ಬ್ಯೂರೋ ದ್ವೇಷದ ಅಪರಾಧದ ಡೇಟಾವನ್ನು ಸಂಗ್ರಹಿಸುವುದನ್ನು ನಿಲ್ಲಿಸಲಾಯಿತು. ಅದಾದ ಬಳಿಕ ಮುಸ್ಲಿಂ ವಿರೋಧಿ ಭಾಷಣದ ನಿದರ್ಶನಗಳನ್ನು ದಾಖಲಿಸಿರುವ ಮೊದಲ ವರದಿ ಇದಾಗಿದೆ.

ಹಿಂದುತ್ವ ವಾಚ್ ಡೇಟಾವನ್ನು ಸಂಗ್ರಹಿಸುವಲ್ಲಿ ಸಾಮಾಜಿಕ ಮಾಧ್ಯಮ ಮತ್ತು ಸುದ್ದಿವಾಹಿನಿಗಳನ್ನು ಅವಲಂಬಿಸಿದೆ. ಇದು ದ್ವೇಷ ಭಾಷಣದ ಘಟನೆಗಳ ಪರಿಶೀಲಿಸಬಹುದಾದ ವೀಡಿಯೊಗಳನ್ನು ಪತ್ತೆಹಚ್ಚಲು ಡೇಟಾ ಸ್ಕ್ರ್ಯಾಪಿಂಗ್ ತಂತ್ರಗಳನ್ನು ಬಳಸಿತು ಮತ್ತು ನಂತರ ಪತ್ರಕರ್ತರು ಮತ್ತು ಸಂಶೋಧಕರ ಮೂಲಕ ಘಟನೆಗಳ ಆಳವಾದ ತನಿಖೆಯನ್ನು ನಡೆಸಿತು.

ದ್ವೇಷದ ಭಾಷಣಕ್ಕೆ ಭಾರತವು ಅಧಿಕೃತ ವ್ಯಾಖ್ಯಾನವನ್ನು ಹೊಂದಿಲ್ಲವಾದರೂ, ಸಂಶೋಧನಾ ಗುಂಪು ವಿಶ್ವಸಂಸ್ಥೆಯ ಭಾಷೆಯನ್ನು ಬಳಸಿದೆ. ಇದು ದ್ವೇಷದ ಭಾಷಣವನ್ನು “ಯಾವುದೇ ರೀತಿಯ” ಸಂವಹನ ಎಂದು ನಿರೂಪಿಸುತ್ತದೆ, ಅದು ಧರ್ಮ, ಜನಾಂಗೀಯತೆ, ರಾಷ್ಟ್ರೀಯತೆ ಮತ್ತು ಜನಾಂಗದ ಪೂರ್ವಾಗ್ರಹ ಪೀಡಿತ ಅಥವಾ ತಾರತಮ್ಯದ ಭಾಷೆಯನ್ನು ಒಂದು ಧಾರ್ಮದ ವಿರುದ್ಧ ಬಳಸುತ್ತದೆ.

ಮಹಾರಾಷ್ಟ್ರ, ಕರ್ನಾಟಕ, ಮಧ್ಯಪ್ರದೇಶ, ರಾಜಸ್ಥಾನ ಮತ್ತು ಗುಜರಾತ್‌ನಲ್ಲಿ ದ್ವೇಷಪೂರಿತ ಭಾಷಣಗಳ ಹೆಚ್ಚಿನ ಸಂಖ್ಯೆಯ ಸಭೆಗಳು ನಡೆದಿವೆ ಎಂದು ವರದಿಯು ಕಂಡುಹಿಡಿದಿದೆ. ಹಿಂದುತ್ವ ವಾಚ್ 15 ರಾಜ್ಯಗಳು ಮತ್ತು ಎರಡು ಕೇಂದ್ರಾಡಳಿತ ಪ್ರದೇಶಗಳಲ್ಲಿನ ಚಟುವಟಿಕೆಗಳನ್ನು ಮೇಲ್ವಿಚಾರಣೆ ಮಾಡಿದೆ. ಸುಮಾರು 64 ಪ್ರತಿಶತ ಘಟನೆಗಳು ಮುಸ್ಲಿಂ ವಿರೋಧಿ “ಪಿತೂರಿ ಸಿದ್ಧಾಂತಗಳನ್ನು” ಪ್ರಚಾರ ಮಾಡಿದೆ ಎಂದು ವರದಿ ಮಾಡಿದೆ. ಮುಸ್ಲಿಮರು ಹಿಂದೂ ಮಹಿಳೆಯರನ್ನು ಮತಾಂತರಿಸಲು ಮದುವೆಗೆ ಆಮಿಷ ಒಡ್ಡುತ್ತಿದ್ದಾರೆ ಎಂಬ ಹೇಳಿಕೆಯೂ ಸೇರಿದೆ.

33 ಪ್ರತಿಶತ ಘಟನೆಗಳಲ್ಲಿ ಮುಸ್ಲಿಮರ ವಿರುದ್ಧ ಹಿಂಸಾಚಾರವನ್ನು ಉಂಟುಮಾಡಲು ಒಂದು ರ್ಯಾಲಿಗೂ ಕರೆ ನೀಡಲಾಗಿತ್ತು ಎಂದು ವರದಿ ಹೇಳಿದೆ ಮತ್ತು 11% ಹಿಂದೂಗಳು ಮುಸ್ಲಿಮರನ್ನು ಬಹಿಷ್ಕರಿಸಲು ಮನವಿಗಳನ್ನು ಒಳಗೊಂಡಿದೆ. ಉಳಿದ ಪ್ರಕರಣಗಳಲ್ಲಿ ಮುಸ್ಲಿಂ ಮಹಿಳೆಯರನ್ನು ಗುರಿಯಾಗಿಸಿಕೊಂಡು “ದ್ವೇಷ ತುಂಬಿದ ಮತ್ತು ಲೈಂಗಿಕತೆಯ ಭಾಷಣ”ಗಳನ್ನು ಮಾಡಲಾಗಿದೆ ಎಂದು ವರದಿ ತಿಳಿಸಿದೆ.

”ದ್ವೇಷದ ಭಾಷಣವನ್ನು ತಡೆಯಬೇಕಿದ್ದ ಸರ್ಕಾರಿ ಅಧಿಕಾರಿಗಳು, ತಾವು ಅವರೊಂದಿಗೆ ಸೇರಿಕೊಂಡಿದ್ದಾರೆ” ಎಂದು ವರದಿ ಹೇಳಿದೆ. ಈ ವರದಿಯು ದಾಖಲಿಸಿರುವಂತೆ, ದ್ವೇಷದ ಭಾಷಣದ ಕೆಲವು ಪ್ರಚಾರಕರಲ್ಲಿ ಮುಖ್ಯಮಂತ್ರಿಗಳು, ಶಾಸಕರು ಮತ್ತು ಆಡಳಿತಾರೂಢ ಬಿಜೆಪಿಯ ಹಿರಿಯ ನಾಯಕರು ಸೇರಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಅಮೇಥಿ ಕಾಂಗ್ರೆಸ್ ಕಚೇರಿ ಮೇಲೆ ದಾಳಿ, ಕಾರ್ಯಕರ್ತನಿಗೆ ಹಲ್ಲೆ: ಬಿಜೆಪಿ ಮುಖಂಡರು ಸೇರಿ 10...

0
ಉತ್ತರ ಪ್ರದೇಶದ ಅಮೇಥಿಯಲ್ಲಿ ಕಾಂಗ್ರೆಸ್ ಪಕ್ಷದ ಕಚೇರಿ ಮೇಲೆ ಭಾನುವಾರ (ಮೇ 5) ಮಧ್ಯರಾತ್ರಿ ಅಪರಿಚಿತ ದುಷ್ಕರ್ಮಿಗಳ ಗುಂಪೊಂದು ದಾಳಿ ಮಾಡಿದೆ. ಪಕ್ಷದ ಕಚೇರಿಯ ಹೊರಗೆ ನಿಲ್ಲಿಸಿದ್ದ ಹಲವು ವಾಹನಗಳನ್ನು ಧ್ವಂಸಗೊಳಿಸಿದ ದುಷ್ಕರ್ಮಿಗಳು,...