ಬಹುಮತ ಸಾಬೀತು ಪಡಿಸುವಂತೆ ಸುಪ್ರೀಂ ಕೋರ್ಟ್ ಕಟ್ಟುನಿಟ್ಟಿನ ಆದೇಶ ನೀಡಿದ ಬೆನ್ನಲ್ಲೇ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಸ್ಥಾನಕ್ಕೆ ಅಜಿತ್ ಪವಾರ್ ರಾಜಿನಾಮೆ ನೀಡಿದ್ದಾರೆ. ಅಲ್ಲದೇ ಈಗ ಮಧ್ಯಾಹ್ನ 3.30 ಕ್ಕೆ ದೇವೇಂದ್ರ ಫಡ್ನವೀಸ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಲಿದ್ದು ಅವರು ಕೂಡ ರಾಜೀನಾಮೆ ನೀಡುವ ಸಂಭವವಿದೆ ಎನ್ನಲಾಗುತ್ತಿದೆ.
ಅಜಿತ್ ಪವಾರ್‌ರನ್ನು ಎನ್‌ಸಿಪಿಯ ಕೆಲ ನಾಯಕರು ಮನವೊಲಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಅವರು ಸುಪ್ರೀಂ ಕೋರ್ಟ್ ತೀರ್ಪಿನ ಬಳಿಕೆ ನೇರ ದೇವೇಂದ್ರ ಫಡ್ನವಿಸ್‌ರವರ ಮನಗೆ ತೆರಳಿ ರಾಜಿನಾಮೆ ಸಲ್ಲಿಸಿದ್ದರೆ. ಆ ಪತ್ರವನ್ನು ರಾಜ್ಯಪಾಲರಿಗೆ ಕಳಿಸಿಕೊಡಲಾಗಿದೆ.
ಸಂವಿಧಾನ ದಿನಾಚರಣೆಯ ಸಂಸತ್ತಿನ ಸಮಾರಂಭದಲ್ಲಿದ್ದ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾರವರನ್ನು ಸುಪ್ರೀಂಕೋರ್ಟ್‌ನ ಆದೇಶದ ನಂತರ ತಕ್ಷಣವೇ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಭೇಟಿಯಾಗಿದ್ದಾರೆ. ಫಡ್ನವಿಸ್‌ಗೆ ಮೋದಿ-ಶಾ ಏನೋ ಸಂದೇಶ ತಲುಪಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇದು ಬಿಜೆಪಿ ಒಂದು ರೀತಿಯ ಸೋಲಾಗಿ ಪರಿಣಮಿಸಲಿದ್ದು, ಹಠಕ್ಕೆ ಬಿದ್ದು ಸರ್ಕಾರ ರಚಿಸುವ ಅವಕಾಶ ಉಳಿಸಿಕೊಂಡ ಎನ್‌ಸಿಪಿ-ಕಾಂಗ್ರೆಸ್ ಮತ್ತು ಶಿವಸೇನೆಗೆ ದೊರೆತ ಗೆಲುವಾಗಿದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.


