2015ರಲ್ಲಿ ಮಹಮ್ಮದ್ ಅಖ್ಲಾಕ್ ತನ್ನ ಮನೆಯಲ್ಲಿ ದನ ಮಾಂಸ ಶೇಖರಿಸಿದ್ದಾರೆ ಎಂದು ಆರೋಪಿಸಿ ಅವರನ್ನು ಗುಂಪು ಹಲ್ಲೆ ನಡೆಸಿ ಕೊಲೆ ಮಾಡಲಾಗಿತ್ತು. ಈ ಪ್ರಕರಣ ದೇಶದೆಲ್ಲೆಡೆ ಗುಂಪು ಹಲ್ಲೆಗಳ ವಿರುದ್ದ (ಮಾಬ್ ಲಿಂಚಿಂಗ್) ದೊಡ್ಡ ಪ್ರತಿರೋಧ ತೋರಲಾಗಿತ್ತು. 19 ಜನರ ಮೇಲೆ ಕೊಲೆ ಆರೋಪದ ಪ್ರಕರಣ ದಾಖಲಿಸಲಾಗಿತ್ತು. 19 ಜನ ಆರೋಪಿಗಳಲ್ಲಿ ಉತ್ತರ ಪ್ರದೇಶದ ಸ್ಥಳೀಯ ಬಿಜೆಪಿ ನಾಯಕ ಸಂಜಯ್ ರಾಣಾ ಪುತ್ರ ವಿಶಾಲ್ ರಾಣಾ ಸೇರಿದ್ದಾರೆ.
ಗೌತಮ್ ಬುದ್ದ ನ್ಯಾಯಾಲಯದಲ್ಲಿ ಉತ್ತರ ಪ್ರದೇಶದ ಬಿಜೆಪಿ ಸರ್ಕಾರ ಎಲ್ಲಾ ಆರೋಪಿಗಳ ಮೇಲೆ ದಾಖಲಾಗಿದ್ದ ಗುಂಪು ಹತ್ಯೆ ಪ್ರಕರಣದ ಆರೋಪವನ್ನು ಹಿಂಪಡೆಯಲು ಅರ್ಜಿ ಸಲ್ಲಿಸಲಾಗಿತ್ತು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಡಿ.18ಕ್ಕೆ ವಿಚಾರಣೆಯನ್ನು ಮುಂದೂಡಲಾಗಿದೆ ಎಂದು ಪ್ರಾಸಿಕ್ಯೂಶನ್ ಪರ ವಕೀಲ ಯೂಸುಫ್ ಸೈಫಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ ಹಲವಾರು ಸೆಕ್ಷನ್‌ಗಳ ಅಡಿಯಲ್ಲಿ ಆರೋಪ ಹೊರಿಸಲಾಗಿತ್ತು, ಈಗ ಅದನ್ನು ಭಾರತೀಯ ನ್ಯಾಯ ಸಂಹಿತಾದಿಂದ ಬದಲಾಯಿಸಲಾಗಿದೆ, ಇದರಲ್ಲಿ 302 (ಕೊಲೆ), 307 (ಕೊಲೆಗೆ ಪ್ರಯತ್ನ), 323 (ಸ್ವಯಂಪ್ರೇರಣೆಯಿಂದ ನೋವುಂಟುಮಾಡುವುದು), 504 (ಉದ್ದೇಶಪೂರ್ವಕ ಅವಮಾನ) ಮತ್ತು 506 (ಕ್ರಿಮಿನಲ್ ಬೆದರಿಕೆ) ಸೇರಿವೆ.
ಆಗಸ್ಟ್ 26 ರ ದಿನಾಂಕದ ಪತ್ರದ ಮೂಲಕ ರಾಜ್ಯ ಸರ್ಕಾರ ನೀಡಿದ ನಿರ್ದೇಶನಗಳನ್ನು ಅನುಸರಿಸಿ, ಗೌತಮ್ ಬುದ್ಧ ನಗರದ ಸಹಾಯಕ ಜಿಲ್ಲಾ ಸರ್ಕಾರಿ ವಕೀಲ ಭಾಗ್ ಸಿಂಗ್ ಅವರು ಅಕ್ಟೋಬರ್ 15 ರಂದು ಹಿಂಪಡೆಯುವಿಕೆ ವಿನಂತಿಯನ್ನು ಸಲ್ಲಿಸಿದರು.
#ಅಖ್ಲಾಕ್ #ಮಾಬ್‌ಲಿಂಚ್ #Akhlaq #MobLynch #UttarPradesh #ಉತ್ತರಪ್ರದೇಶ
ಕಾರ್ಯಕಾರಿ ಸಂಪಾದಕ, ನಾನುಗೌರಿ.ಕಾಮ್


