Homeಮುಖಪುಟನ್ಯಾಯಾಂಗ ವ್ಯವಸ್ಥೆಗೆ ಮಾರಕವಾಗುತ್ತಿದೆ ‘ಪಂಚಾಂಗ’!

ನ್ಯಾಯಾಂಗ ವ್ಯವಸ್ಥೆಗೆ ಮಾರಕವಾಗುತ್ತಿದೆ ‘ಪಂಚಾಂಗ’!

- Advertisement -
- Advertisement -

ರಾಜಪ್ರಭುತ್ವದ ಸಂಕೇತವಾದ ಸೆಂಗೋಲ್ ಈಗ ನಮ್ಮ ಸಂಸತ್ತಿನ ಭಾಗವಾಗಿದೆ. ಇದರಂತೆಯೇ ಜಾಮೀನು ಅರ್ಜಿಗಳನ್ನು ಪರಿಶೀಲಿಸುವ, ನ್ಯಾಯ ತೀರ್ಮಾನ ಮಾಡುವ ನ್ಯಾಯಾಲಯ ಕೂಡ ‘ಮಂಗಳ’ನ ಪ್ರಭಾವಕ್ಕೆ ಒಳಗಾಗಿದೆಯೇ ಎಂಬ ಪ್ರಶ್ನೆ ಸ್ವತಂತ್ರ ನ್ಯಾಯಾಂಗವನ್ನು ಬಯಸುವ ನಮ್ಮೆಲ್ಲರಿಗೂ ಕಾಡುತ್ತಿದೆ.

ಮೊಘಲರು ಬಂದನಂತರ ಸನಾತನ ನ್ಯಾಯವ್ಯವಸ್ಥೆಯಲ್ಲಿ ಬದಲಾವಣೆಯಾಯಿತು. ಅಂದಿಗೆ ಸಾಮ್ರಾಟರ ಕಾನೂನು ಅತ್ಯುನ್ನತವಾಗಿತ್ತು. ‘ಸುನ್ನಿ ಹನಿಫಿ ಸಂಪ್ರದಾಯ’ ಅಧಿಕೃತ ನ್ಯಾಯಿಕ ವ್ಯವಸ್ಥೆಯಾಗಿತ್ತು. ಇದರ ಜೊತೆಗೆಯೇ ‘ಶಿಯಾ ಮತ್ತು ಹಿಂದೂ’ ಕಾನೂನು ವ್ಯವಸ್ಥೆ ಸಹ ಆಚರಣೆಯಲ್ಲಿತ್ತು.

ಬ್ರಿಟಿಷರು ಬಂದನಂತರ ಕಾನೂನು ಸುವ್ಯವಸ್ಥೆ ಸಾಂಸ್ಥಿಕ ರೂಪ ಪಡೆಯುತ್ತಾ, ಧಾರ್ಮಿಕ ಕಟ್ಟುಪಾಡುಗಳು ಕೂಡ ವಿಕಸನ ಹೊಂದುತ್ತಾ ಸಾಗಿದವು. ದೇಶದೊಳಗಿನ ಕಾನೂನುಗಳನ್ನು ಸಂಹಿತೆಯಾಗಿಸಿ ಐಸಿಪಿ ಮತ್ತು ಸಿಆರ್‌ಪಿಸಿ ಕಾನೂನುಗಳ ಕರಡು ಬಂತು. ದೇಶ ಸ್ವತಂತ್ರಗೊಂಡ ನಂತರ, ‘ವಸಾಹತು ಕಾನೂನನ್ನು’ ಬದಲಿಸುವ ಮೂಲಕ ಸಂವಿಧಾನಾತ್ಮಕ ಕಾನೂನು ಮುನ್ನಲೆಗೆ ಬಂತು. ಇದು ಭಾರತೀಯ ಕಾನೂನು ಆಗಿ ಜೀವಂತವಾಗಿದೆ. ಇದು ‘ಧರ್ಮನಿರಪೇಕ್ಷ’ ಅಂಶಗಳನ್ನು ಒಳಗೊಂಡಿದೆ. ಇದು ದುರ್ಬಲವರ್ಗದ ವ್ಯಕ್ತಿಯನ್ನು ಸಬಲೀಕರಿಸುವ ಇರಾದೆಯನ್ನು ಒಳಗೊಂಡಿದೆ.

ಗ್ರಹಿಕೆ ಮತ್ತು ವ್ಯಾಖ್ಯಾನಗಳಲ್ಲಿನ ವ್ಯತ್ಯಾಸಗಳು ಹೊರತಾಗಿಯೂ, ಪ್ರಜಾಪ್ರಭುತ್ವ ರಾಷ್ಟ್ರಗಳ ಮೂಲಾಧಾರ ಕಾನೂನು ವ್ಯವಸ್ಥೆಯಾಗಿದೆ ಎಂಬುದನ್ನು ಸಾಂವಿಧಾನಿಕ ತಜ್ಞರು ಒಪ್ಪುತ್ತಾರೆ. ‘ಕಾನೂನಿನ ಆಳ್ವಿಕೆ’ ಎಂದರೆ ಪ್ರತಿಯೊಬ್ಬ ವ್ಯಕ್ತಿಯು ಕಾನೂನಿನ ನಿಯಮಕ್ಕೆ ತಲೆ ಬಾಗಬೇಕು; ಕಾನೂನು ಎಂಬುದು ಎಲ್ಲರಿಗೂ ಒಂದೇ ಆಗಿರುತ್ತದೆ. ಅಂದರೆ ಯಾರು ಎಷ್ಟೇ ದೊಡ್ಡ ಹುದ್ದೆಯಲ್ಲಿದ್ದರೂ, ಕಾನೂನು ಎಲ್ಲರನ್ನೂ ಮೀರಿದ ನಿಯಮವಾಗಿರುತ್ತದೆ.

ಒಂದು ಪ್ರಜಾಸತ್ತಾತ್ಮಕ ರಾಷ್ಟ್ರ ಕಾನೂನಿನ ಮುಂದೆ ‘ಸಮಾನತೆ ಮತ್ತು ಉದಾರಮೌಲ್ಯ’ಗಳನ್ನು ಹೊಂದಿರಬೇಕೆಂಬುದು ಸಾಮಾನ್ಯ ಪರಿಕಲ್ಪನೆ. ಹೀಗಾಗಿಯೇ ‘ಪರಿಣಾಮಕಾರಿ ಆಡಳಿತ ವ್ಯವಸ್ಥೆ’ ಹಾಗೂ ‘ನ್ಯಾಯದಾನ’ ಇದರೊಳಗಡೆ ಸೇರಿದೆ. ನಮ್ಮಂತಹ ಪ್ರಜಾಸತ್ತಾತ್ಮಕ ರಾಷ್ಟ್ರಗಳು ಇಂತಹ ಚಿಂತನೆಗಳಿಗೆ ಬದ್ಧವಾಗಿರಬೇಕಿದೆ.

ನ್ಯಾಯಾಧೀಶರಿಗೂ ‘ನೀತಿಶಾಸ್ತ್ರ’ ಇದೆ. ಇವರು ‘ಸಂವಿಧಾನಿಕ ನೈತಿಕತೆ’ ಮಾತ್ರವಲ್ಲದೆ ‘ವೃತ್ತಿಧರ್ಮದ ನೈತಿಕತೆ’ಗೂ ಬದ್ಧರಾಗಿರಬೇಕು. ಬಹುತೇಕ ನ್ಯಾಯಾಧೀಶರು ನ್ಯಾಯಪೀಠದಲ್ಲಿ ನಿಸ್ಪೃಹತೆಯಿಂದ ‘ನ್ಯಾಯದಾನ’ ಮಾಡುತ್ತಾರೆ. ‘ನ್ಯಾಯದಾನ’ ಮಾಡುವಾಗ ಯಾವುದೇ ಬಗೆಯ ‘ಪೂರ್ವಾಗ್ರಹ ಹಿತಾಸಕ್ತಿ’ಗಳನ್ನು ಇಟ್ಟುಕೊಳ್ಳದೆ ನಿಷ್ಪಕ್ಷಪಾತವಾಗಿ ತೀರ್ಪನ್ನು ನೀಡುತ್ತಾರೆಂಬುದನ್ನು ಗೌರವಿಸಬೇಕು. ಆದರೂ ಇವರುಗಳು ದೇವರಲ್ಲ. ಬದಲಾಗಿ ನಮ್ಮಂತೆಯೇ ಕೆಲವರು, ಕೆಲವೊಮ್ಮೆ ಯೋಚಿಸುತ್ತಾರೆ. ಆದರೆ, ನ್ಯಾಯಾಧೀಶರು ತಮ್ಮ ಅಭಿಪ್ರಾಯ ಹೇಳುವಾಗ ಅದು ಯಾವಾಗಲೂ ‘ಸಂವಿಧಾನಿಕ ತತ್ವಗಳು’ ಮತ್ತು ಅದರ ಆಶಯಕ್ಕೆ ಅನುಗುಣವಾಗಿರಬೇಕು. ಹಾಗೆಯೇ ‘ನ್ಯಾಯದಾನ’ ಪ್ರಕ್ರಿಯೆಯಲ್ಲಿ ಒಂದು ವರ್ಗವನ್ನಾಗಲಿ, ಸಮಾಜವನ್ನಾಗಲಿ ಅಥವಾ ಒಂದು ನಂಬಿಕೆಯ ವ್ಯವಸ್ಥೆಯನ್ನು ಓಲೈಸಬಾರದು. ವಿಶೇಷವಾಗಿ ಯಾರ ಪರವನ್ನೂ ವೈಯಕ್ತಿಕವಾಗಿ ವಹಿಸಬಾರದು ಎಂಬುದು ಆಶಯ.

ಇವತ್ತು ಜನ ‘ಅಪರಾಧಿಕ ನ್ಯಾಯ ವ್ಯವಸ್ಥೆ’ಯಲ್ಲಿ ನಂಬಿಕೆ ಕಳೆದುಕೊಳ್ಳದಂತೆ ನೋಡಿಕೊಳ್ಳುವ ಅಗತ್ಯವೂ ಹೆಚ್ಚಾಗಿದೆ. ನಮ್ಮ ದೇಶದಲ್ಲಿ ಅಪರಾಧ ಜರುಗಿದ ಬಳಿಕ, ಅಪರಾಧಿಕ ಪ್ರಕ್ರಿಯೆಗಳು ಆರಂಭವಾದ ಕೂಡಲೇ ‘ಅಪರಾಧಿ’ಯ ಕಡೆಗೆ ಎಲ್ಲರ ಗಮನ ಹರಿಯುತ್ತದೆ. ಆಪಾದಿತನಿಗೆ ಎಲ್ಲಾ ಹಂತದಲ್ಲಿಯೂ ರಕ್ಷಣೆ ಲಭಿಸುತ್ತದೆ. ಅದು ವಿಚಾರಣೆ ಪೂರ್ವದಲ್ಲಿ ಮತ್ತು ‘ಅಪರಾಧಿಕ ನ್ಯಾಯ’ದ ವಿಚಾರಣೆಯ ನಂತರವೂ ಸಿಗುತ್ತದೆ. ಆಪಾದಿತ ಬಂಧನಕ್ಕೆ ಒಳಗಾದರಂತೂ, ಅವನಿಗೆ ಹಕ್ಕುಗಳ ಮಹಾಪೂರವೇ ಹರಿದುಬರುತ್ತದೆ. ಅವುಗಳಲ್ಲಿ ತನ್ನನ್ನು ‘ಪ್ರತಿನಿಧಿಸಿಕೊಳ್ಳುವ ಹಕ್ಕು’, ‘ವೈದ್ಯಕೀಯ ಪರೀಕ್ಷೆಯ ಹಕ್ಕು’, ಬಂಧನವಾದ 24 ಗಂಟೆಯೊಳಗಡೆ ನ್ಯಾಯಾಧೀಶರ ಮುಂದೆ ಹಾಜರುಪಡಿಸುವ ಹಾಗೂ ಬಂಧನಕ್ಕೆ ಕಾರಣಗಳನ್ನು ಕೇಳುವ ಹಕ್ಕು ಲಭಿಸುತ್ತದೆ. ಸಂತ್ರಸ್ತರ ಹಕ್ಕುಗಳು ಮತ್ತು ಅಪರಾಧ ತಡೆಗಟ್ಟಲು ಸಮಾಜ ಸೃಷ್ಟಿಸುವ ವಿಧಾನಗಳ ನಡುವೆ ಸಮತೋಲನ ತರಲು ‘ನ್ಯಾಯಶಾಸ್ತ್ರ’ ಪ್ರಯತ್ನಿಸುತ್ತದೆ. ಕಾರಣ ಅಪರಾಧಿಕ ನ್ಯಾಯ ವ್ಯವಸ್ಥೆ ಎಲ್ಲರಿಗೂ ನ್ಯಾಯ ಒದಗಿಸಲು ರೂಪಿಸಲಾಗಿದೆ.

ಇದನ್ನೂ ಓದಿ: ನೂತನ ಸಂಸತ್ ಭವನ ಉದ್ಘಾಟನೆಯ ಆಚರಣೆಗಳು; ಜಾತ್ಯತೀತ ಮೌಲ್ಯಗಳಿಗೆ ತಿಲಾಂಜಲಿ

ಇವೆಲ್ಲವನ್ನೂ ಏಕೆ ಹೇಳುತ್ತಿರುವೆನೆಂದರೆ, ಅಲಹಾಬಾದ್ ಉಚ್ಚ ನ್ಯಾಯಾಲಯದ ನ್ಯಾಯಾಧೀಶ ಬ್ರಿಜ್‌ರಾಜ್ ಸಿಂಗ್ ಅವರು ‘ಅತ್ಯಾಚಾರ ಸಂತ್ರಸ್ತೆ ಮಹಿಳೆ’ ಅಂಗಾರಕ ದೋಷ ಹೊಂದಿರುವರೇ ಅಥವಾ ಇಲ್ಲವೇ ಎಂಬುದರ ಬಗ್ಗೆ ಲಕ್ನೋ ಜ್ಯೋತಿಷ್ಯ ವಿಶ್ವವಿದ್ಯಾಲಯದಿಂದ ವರದಿ ಕೇಳಿದ್ದರು. ಮದುವೆಯಾಗುವುದಾಗಿ ಸುಳ್ಳು ಭರವಸೆ ನೀಡಿ ಲೈಂಗಿಕವಾಗಿ ಬಳಸಿಕೊಂಡ ಆರೋಪಿಯ ಜಾಮೀನು ಅರ್ಜಿ ವಿಚಾರಣೆ ಸಂದರ್ಭದಲ್ಲಿ ಇಂತಹದ್ದೊಂದು ಘಟನೆ ನಡೆದಿದೆ. ಯುವತಿ ಕುಜ ದೋಷಪೂರಿತಳಾದ್ದರಿಂದ ಮದುವೆಯಾಗಲು ಸಾಧ್ಯವಿಲ್ಲವೆಂದು ಅತ್ಯಾಚಾರಿ ನ್ಯಾಯಾಲಯಕ್ಕೆ ಮನವಿ ಮಾಡಿದ್ದ! ಯುವತಿ ಜಾತಕದಲ್ಲಿ ‘ಕುಜ ದೋಷ’ ಹೊಂದಿರುವುದರಿಂದ, ಅದು ಸುಖವೈವಾಹಿಕ ಜೀವನಕ್ಕೆ ಅಡ್ಡಿಯನ್ನುಂಟುಮಾಡುತ್ತದೆ. ಹೀಗಾಗಿ ನನ್ನ ಕಕ್ಷಿದಾರ ಆಕೆಯನ್ನು ವಿವಾಹವಾಗಲು ಬಯಸಿಲ್ಲ ಎಂದು ಆರೋಪಿ ಪರ ವಕೀಲ ವಿವೇಕ್‌ಕುಮಾರ್ ಸಿಂಗ್ ತಿಳಿಸಿದ್ದರು. ಹಿಂದೂ ಸಂಪ್ರದಾಯದಲ್ಲಿ ಮದುವೆಗೆ ಪರಿಪೂರ್ಣ ಜಾತಕ ಹೊಂದಾಣಿಕೆ ನೋಡಲಾಗುತ್ತದೆ. ‘ಕುಂಡಲಿ’ ಅಥವಾ ‘ಜಾತಕ’ ಎಂಬ ಅಂಶಗಳು ಮದುವೆ ಸೇರಿದಂತೆ ಮನುಷ್ಯ ಅಸ್ತಿತ್ವದ ಎಲ್ಲ ಸಂಗತಿಗಳನ್ನೂ ನಿಯಂತ್ರಿಸುತ್ತವೆ. ‘ಮಂಗಳ ಗ್ರಹ’ದ ಪ್ರಭಾವದಡಿಯಲ್ಲಿ ಜನಿಸಿದ ವ್ಯಕ್ತಿಗೆ ‘ಮಂಗಳ ದೋಷ’ವನ್ನು ‘ಅಂಗಾರಕ ದೋಷ’, ‘ಕುಜ ದೋಷ’, ‘ಭೂಮಿ ದೋಷ’ ಎಂದು ಕರೆಯುತ್ತಾರೆ. ‘ಅಂಗಾರಕ ದೋಷ’ ಹೊಂದಿದವರನ್ನು ವಿವಾಹ ಆಗುವುದು ದುರದೃಷ್ಟಕರ ಎಂದು ಭಾವಿಸಲಾಗಿದೆ.

ಇದೇ ಹೊತ್ತಿನಲ್ಲಿ ‘ಜ್ಯೋತಿಷ್ಯ’ ವೈಜ್ಞಾನಿಕವೇ ಎಂಬುದನ್ನು ಪರಿಶೀಲಿಸುವ ಗೋಜಿಗೆ ಹೋಗುವುದಿಲ್ಲವೆಂದು ನ್ಯಾಯಮೂರ್ತಿ ಸುಧಾಂಶು ಧುಲಿಯಾ ಮತ್ತು ಪಂಕಜ್ ಮಿತ್ತಲ್ ಅವರನ್ನು ಒಳಗೊಂಡ ಸುಪ್ರೀಂಕೋರ್ಟ್ ರಜಾಕಾಲದ ಪೀಠ ಸ್ಪಷ್ಟಪಡಿಸಿದೆ. ಅಲ್ಲದೆ, ಇದು ಖಾಸಗಿತನದ ಹಕ್ಕಿನ ಉಲ್ಲಂಘನೆ, ಖಗೋಳ ಏನು ಮಾಡಬೇಕಿದೆ ಎಂದು ಚರ್ಚಿಸುವುದಿಲ್ಲ ಎಂದು ನ್ಯಾಯಪೀಠ ಹೇಳಿತ್ತು. ಹಾಗೆಯೇ ಯಾವ ಉದ್ದೇಶದಿಂದ ‘ಜ್ಯೋತಿಷ್ಯ ವರದಿ’ಯನ್ನು ಕರಲಾಗಿದೆ ಎನ್ನುವುದು ಅರ್ಥವಾಗುತ್ತಿಲ್ಲ ಎಂದು ನ್ಯಾಯಾಧೀಶ ಮಿತ್ತಲ್ ನುಡಿದಿದ್ದರು.

ಸುಪ್ರೀಂಕೋರ್ಟ್ ಪ್ರಕರಣವನ್ನು ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡು, ಮಧ್ಯ ಪ್ರವೇಶಿಸಿದ್ದು ಸ್ವಾಗತಾರ್ಹವಾದದ್ದು. ಇಲ್ಲಿ ಹೈಕೋರ್ಟ್ ನ್ಯಾಯಾಧೀಶರೊಂದಿಗೆ ಒಂದು ಹಂತದಲ್ಲಿ ಸಾಲಿಸಿಟರ್ ಜನರಲ್ ಕೂಡ ಜ್ಯೋತಿಷ್ಯವನ್ನು ವಿಜ್ಞಾನ ಎಂಬುದನ್ನು ಭಾಗಶಃ ಒಪ್ಪಿದ್ದರು. ಇನ್ನೂ ಆಶ್ಚರ್ಯ ಎಂದರೆ, ದೂರುದಾರರ ಪರ ವಕೀಲರ ಒಪ್ಪಿಗೆಯನ್ನು ಪಡೆದು ‘ಅಂಗಾರಕ ದೋಷ’ ಪರೀಕ್ಷೆ ಮಾಡಲು ನ್ಯಾಯಾಲಯ ಆದೇಶಿಸಿದ್ದು ಕೂಡ ಆಶ್ಚರ್ಯ ಮೂಡಿಸುತ್ತದೆ.

ನ್ಯಾಯಾಧೀಶರು ನ್ಯಾಯಾಂಗ ತರಬೇತಿ ಅಕಾಡೆಮಿಗಳಲ್ಲಿ ತರಬೇತಿ ಹೊಂದಿರುತ್ತಾರೆ. ಕೆಲವು ನ್ಯಾಯಾಧೀಶರು ಪಕ್ಷಪಾತಗಳಿಂದಾಗಿ ಜನರ ಮಧ್ಯೆ ಚರ್ಚೆಗೆ ಒಳಗಾಗುತ್ತಿದ್ದಾರೆ. ‘ಕೊಲಿಜಿಯಂ’ ಆಯ್ಕೆಯ ಬಗ್ಗೆ ಸರ್ಕಾರದ ವಾದ ಸರಿಯೇ ಎಂಬುದರ ಬಗ್ಗೆಯೂ ಯೋಚಿಸುವಂತೆ ಮಾಡಿಬಿಡುತ್ತದೆ.

ಇದು ಬಹಳ ಹಿಂದೆ ನಡೆದಿದ್ದಲ್ಲ. ಮಧ್ಯ ಪ್ರದೇಶದ ಉಚ್ಚ ನ್ಯಾಯಾಲಯ ಅತ್ಯಾಚಾರಿಗೆ ಜಾಮೀನು ನೀಡಲು ‘ಸಂತ್ರಸ್ತೆಯಿಂದ ರಾಖಿ ಕಟ್ಟಿಸಿಕೊಳ್ಳಬೇಕೆಂಬ ಷರತ್ತು’ ವಿಧಿಸಿತ್ತು. ಇವೆರಡು ಪ್ರಕರಣಗಳನ್ನು ಮಾತ್ರ ಉಲ್ಲೇಖಿಸಿ ಹೇಳುತ್ತಿಲ್ಲ. 7 ತಿಂಗಳ ಭ್ರೂಣವನ್ನು ಗರ್ಭಪಾತ ಮಾಡಲು ಬಯಸಿದ್ದ 16 ವರ್ಷದ ಅಪ್ರಾಪ್ತ ಮಕ್ಕಳ ವಿಚಾರಣೆಯ ಹೊತ್ತಿನಲ್ಲಿ ಗುಜರಾತ್ ಹೈಕೋರ್ಟ್‌ನ ನ್ಯಾಯಾಧೀಶರಾದ ಸಮೀರ್ ದವೆ ಅವರು ‘ಮನುಸ್ಮೃತಿ’ಯನ್ನು ಉಲ್ಲೇಖಿಸಿ ಎಲ್ಲರ ಹುಬ್ಬೇರುವಂತೆ ಮಾಡಿದ್ದರು. ಹುಡುಗಿಯರು 14 ವರ್ಷಕ್ಕೆ ಮದುವೆಯಾಗುವರು; 17 ವರ್ಷಕ್ಕೆ ಮಗುವಿಗೆ ಜನ್ಮ ನೀಡುವುದು ಸಾಮಾನ್ಯ ಎಂದಿದ್ದರು. ಭ್ರೂಣ ಮತ್ತು ತಾಯಿ ಆರೋಗ್ಯವಾಗಿರುವುದರಿಂದ ಗರ್ಭಪಾತಕ್ಕೆ ಅವಕಾಶ ನೀಡುವುದಿಲ್ಲ ಎಂದು ತಿಳಿಸಿದ್ದರು. ಜೊತೆಗೆ ಸಂತ್ರಸ್ತೆ ಮತ್ತು ಆರೋಪಿಯ ನಡುವೆ ರಾಜಿಯಾಗುವ ಸಾಧ್ಯತೆಯಿದೆಯೇ ಎಂದು ಕೇಳಿದ್ದರು. ಇದರಿಂದ ಮೂರು ಜೀವಗಳನ್ನು ಉಳಿಸಬಹುದೆಂದು ಸೂಚಿಸಿದ್ದರು.

ಸುಪ್ರೀಂಕೋರ್ಟಿನ ಮುಖ್ಯ ನ್ಯಾಯಾಧೀಶರಾಗಿದ್ದ ಹೊತ್ತಲ್ಲಿ ಶರದ್ ಬೊಬ್ಡೆ ಅವರು ಸಂತ್ರಸ್ತೆಯನ್ನು ವಿವಾಹ ಆಗುವಿರಾ ಎಂದು ಸರ್ಕಾರಿ ನೌಕರನಾಗಿದ್ದ ಅತ್ಯಾಚಾರ ಆರೋಪಿಯನ್ನು ಕೇಳಿದ್ದರು. ಆಗ ಮಹಿಳಾ ಗುಂಪುಗಳು ಆಕ್ರೋಶವನ್ನು ಹೊರಹಾಕಿ ಸಿಜೆಐ ರಾಜೀನಾಮೆಗೆ ಒತ್ತಾಯಿಸಿದ್ದವು. ಆರೋಪಿಯ ಮನಸ್ಥಿತಿಯನ್ನು ಕಂಡುಹಿಡಿಯಲು ಸಿಆರ್‌ಪಿಸಿಯಲ್ಲಿ ನಿಗದಿಪಡಿಸಿರುವ ವಿಧಾನವನ್ನು ಅನುಸರಿಸಿದ್ದೇನೆಂದು ಜಡ್ಜ್ ಸ್ಪಷ್ಟಪಡಿಸಿದ್ದರು. ನವಿಲು ಭಾರತದ ರಾಷ್ಟ್ರೀಯ ಪಕ್ಷಿ. ಕಾರಣ ಅದು ‘ಬ್ರಹ್ಮಚಾರಿ ಪಕ್ಷಿ’ ಎಂದು ಜಸ್ಟೀಸ್ ಮಹೇಶ್‌ಚಂದ್ರ ಶರ್ಮ ತಮ್ಮ ಸೇವಾ ವಿದಾಯದ ಸಂದರ್ಭದಲ್ಲಿ ಹೇಳಿದ್ದರು.

ಮೇ 23ರ ಅಲಹಾಬಾದ್ ನ್ಯಾಯಾಲಯದ ಪ್ರಕರಣ ಕಂಡ ನಂತರ ನನ್ನಂತಹ ಹಲವರು ನೋವುಂಡಿರಬಹುದು. ಆದರೆ ಸುಪ್ರೀಂಕೋರ್ಟಿನ ತೀರ್ಪು ನ್ಯಾಯಾಲಯಗಳ ಬಗೆಗಿನ ನಮ್ಮೆಲ್ಲರ ಆಶಾಭಾವನೆಯ ‘ನಂಬಿಕೆ’ಯನ್ನು ಮತ್ತಷ್ಟು ಗಟ್ಟಿಗೊಳಿಸಿದೆ.

ಎಷ್ಟೋ ನ್ಯಾಯಾಲಯಗಳಲ್ಲಿ ಜಾಮೀನು ನೀಡಲು ವಿಧಿಸುತ್ತಿರುವ ಷರತ್ತುಗಳು, ಪ್ರಕರಣಗಳ ವಿಚಾರಣೆಗಳ ನಂತರ ನೀಡುತ್ತಿರುವ ಆದೇಶಗಳು ಪಿತೃಪ್ರಧಾನ ಕಲ್ಪನೆಯನ್ನು ಅವಲಂಬಿಸಿದೆ. ಲೈಂಗಿಕ ಸಂಬಂಧಿತ ಅಪರಾಧಗಳ ವಿಚಾರಣೆಯ ಹೊತ್ತಲ್ಲಿ ಅನುಸರಿಸಬೇಕಾದ ಮಾರ್ಗಸೂಚಿಗಳನ್ನು ನ್ಯಾಯಾಲಯವೇ ನೀಡಿದೆ. ಜನರ ನಂಬಿಕೆಯನ್ನು ‘ತರ್ಕ’ಕ್ಕೆ ಒಳಪಡಿಸುವುದು ನ್ಯಾಯಾಧೀಶರ ಕೆಲಸವಲ್ಲ. ಇಂತಹವನ್ನು ತಡೆಯಬೇಕು. ಕಾನೂನು ಹೊರತುಪಡಿಸಿ ಇತರೆ ಮಾನದಂಡಗಳನ್ನು ಬಳಸಬಾರದು. ಇಂತಹವು ‘ಬಹುಸಂಸ್ಕೃತಿ’ಯ ದೇಶದಲ್ಲಿ ದುಬಾರಿಯಾಗುತ್ತದೆ.

ಡಾ. ಎಂ.ಎಸ್. ಮಣಿ

ಡಾ. ಎಂ.ಎಸ್. ಮಣಿ
ಸಾಮಾಜಿಕ ಮತ್ತು ಸಂಶೋಧನಾತ್ಮಕ ಲೇಖನಗಳನ್ನು ಬರೆಯುವ ಡಾ.ಎಂ.ಎಸ್.ಮಣಿ ಅವರು ಪತ್ರಕರ್ತರ ಸಂಘಟನೆಗಳಲ್ಲೂ ತೊಡಗಿಸಿಕೊಂಡಿದ್ದಾರೆ. ಇವರ ತಲ್ಲಣ, ಹರಿವು, ಒಡಲಾಗ್ನಿ, ಭಾವಭಿತ್ತಿ, ಮನುಭಾರತ ಪುಸ್ತಕಗಳು ಪ್ರಕಟವಾಗಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಜಾನಪದ ಕಲಾವಿದ ಡಿಂಗ್ರಿ ನರಸಪ್ಪ, ಬೆಂಗಳೂರಿನ ಚಂದ್ರಮ್ಮ ಸೇರಿದಂತೆ ಐದು ಜನರಿಗೆ ಬಾಬು ಜಗಜೀವನ್‌ ರಾಮ್‌ ಪ್ರಶಸ್ತಿ

ಹಿರಿಯ ಜಾನಪದ ಕಲಾವಿದ ಡಿಂಗ್ರಿ ನರಸಪ್ಪ, ಬೆಂಗಳೂರಿನ ಚಂದ್ರಮ್ಮ ಸೇರಿದಂತೆ ಐದು ಜನ ಹಿರಿಯ ಸಾಧಕರು 2026ನೇ ಸಾಲಿನ ಬಾಬು ಜಗಜೀವನ್‌ ರಾಮ್‌ ಪ್ರಶಸ್ತಿಗೆ ಭಾಜನರಾಗಿದ್ದಾರೆ. ರಾಯಚೂರು ಜಿಲ್ಲೆಯ ಹಿರಿಯ ದಲಿತ ಹೋರಾಟಗಾರ...

ಗಾಜಾ; ಗೊಂಬೆಯೊಂದಿಗೆ ‘ಅಂತ್ಯಕ್ರಿಯೆ’ ಆಟ ಆಡುವ ಎಳೆಯ ಮಕ್ಕಳ ವಿಡಿಯೋ ವೈರಲ್; ಸುತ್ತಲಿನ ಘಟನೆಯನ್ನು ಪುನರಾವರ್ತಿಸುವ ಮಕ್ಕಳು

ಅಕ್ಟೋಬರ್ 2023 ರಲ್ಲಿ ಇಸ್ರೇಲಿ ಮಿಲಿಟರಿ ದಾಳಿಯನ್ನು ಪ್ರಾರಂಭಿಸಿದ ನಂತರ ಗಾಜಾದಿಂದ ದುಃಖಕರ ದೃಶ್ಯಗಳು ಹೊರಹೊಮ್ಮುತ್ತಿವೆ. ಇತ್ತೀಚಿನ ಒಂದು ಘಟನೆಯಲ್ಲಿ, ಚಿಕ್ಕ ಮಕ್ಕಳು ಅಂತ್ಯಕ್ರಿಯೆಗಾಗಿ ಗೊಂಬೆಯನ್ನು ಹೊತ್ತುಕೊಂಡು ಹೋಗುವುದನ್ನು ಕಾಣಬಹುದು - ಇದು ಅವರು...

ದೆಹಲಿ| ಆಳವಾದ ಚರಂಡಿಗೆ ಬಿದ್ದು ನೈರ್ಮಲ್ಯ ಕಾರ್ಮಿಕ ಸಾವು; ನ್ಯಾಯಕ್ಕೆ ಆಗ್ರಹಿಸಿದ ಮೃತನ ಕುಟುಂಬ

ಮಾರ್ಚ್ 30 ರಂದು ಪೂರ್ವ ದೆಹಲಿಯ ದಿಲ್ಶಾದ್ ಗಾರ್ಡನ್ ಪ್ರದೇಶದಲ್ಲಿ ಸುರಕ್ಷತಾ ಸಾಧನಗಳಿಲ್ಲದೆ ಆಳವಾದ ಚರಂಡಿ ಸ್ವಚ್ಛಗೊಳಿಸುವ ಸಮಯದಲ್ಲಿ ಯುವ ನೈರ್ಮಲ್ಯ ಕಾರ್ಮಿಕ ರಾಹುಲ್ ಎಂಬುವವರು ಸಾವನ್ನಪ್ಪಿದ್ದಾರೆ. ಮಧ್ಯಾಹ್ನ 2:00 ರ ಸುಮಾರಿಗೆ...

ನಿವೃತ್ತ ನ್ಯಾಯಮೂರ್ತಿ ಸಂತೋಷ್‌ ಹೆಗ್ಡೆ ಆಸ್ಪತ್ರೆಗೆ ದಾಖಲು; ಕಾರ್ಯಕ್ರಮದಲ್ಲಿ ಏಕಾಏಕಿ ಕುಸಿದು ಬಿದ್ದು ಅಸ್ವಸ್ಥ

ಬೆಂಗಳೂರು: ಕರ್ನಾಟಕದ ನಿವೃತ್ತ ಲೋಕಾಯುಕ್ತ ಎನ್‌.ಸಂತೋಷ್‌ ಹೆಗ್ಡೆ ಅವರ ಆರೋಗ್ಯದಲ್ಲಿ ಏರುಪೇರು ಉಂಟಾಗಿದ್ದು, ಭಾಷಣದ ವೇಳೆ ಕುಸಿದು ಬಿದ್ದು ಅಸ್ವಸ್ಥರಾಗಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಏಪ್ರಿಲ್ 4ರ, ಶುಕ್ರವಾರ ಬೆಂಗಳೂರಿನ ಕೊಂಡಜಿ ಬಸಪ್ಪ ಸಭಾಂಗಣದಲ್ಲಿ...

ಎಸ್‌ಎಸ್‌ಎಲ್‌ಸಿಯಲ್ಲಿ ತೃತೀಯ ಭಾಷೆಗೆ ಗ್ರೇಡ್: ನಿರ್ಧಾರ ಪರಿಶೀಲಿಸುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿದ ರಾಜ್ಯಪಾಲ ಗೆಹ್ಲೋಟ್ 

ಬೆಂಗಳೂರು: 10ನೇ ತರಗತಿ ಪರೀಕ್ಷೆಯಲ್ಲಿ ತೃತೀಯ ಭಾಷೆಯ ವಿಷಯಕ್ಕೆ ಅಂಕಗಳನ್ನು ಬದಲಿಸುವ ನಿರ್ಧಾರವನ್ನು ಮರುಪರಿಶೀಲಿಸುವಂತೆ ಕರ್ನಾಟಕ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ರಾಜ್ಯ ಸರ್ಕಾರವನ್ನು ಕೇಳಿದ್ದಾರೆ. ಸರ್ಕಾರವು ಈ ನಿರ್ಧಾರವನ್ನು "ಸಮಗ್ರವಾಗಿ ಪರಿಶೀಲಿಸಬೇಕು" ಎಂದು ಲೋಕಭವನವು...

ತಿರುಚ್ಚಿ ಪೂರ್ವದ ಪೆರಂಬೂರಿನಲ್ಲಿ ಟಿವಿಕೆ ಸಂಸ್ಥಾಪಕ ವಿಜಯ್ ಸಲ್ಲಿಸಿದ ಅಫಿಡವಿಟ್‌ಗಳಲ್ಲಿ ಹಲವು ವ್ಯತ್ಯಾಸಗಳಿರುವುದಾಗಿ ವರದಿ  

ಚೆನ್ನೈ: ನಟ ಮತ್ತು ಟಿವಿಕೆ ಸಂಸ್ಥಾಪಕ ವಿಜಯ್ ಸಲ್ಲಿಸಿದ ಎರಡು ಪ್ರತ್ಯೇಕ ಚುನಾವಣಾ ಅಫಿಡವಿಟ್‌ಗಳಲ್ಲಿ ವ್ಯತ್ಯಾಸಗಳು ಕಾಣಿಸಿಕೊಂಡಿದ್ದು, ವಿಧಾನಸಭಾ ಚುನಾವಣೆಗೆ ಮುನ್ನ ಕಾನೂನು ಮತ್ತು ರಾಜಕೀಯ ಪರಿಶೀಲನೆಗೆ ಅವಕಾಶ ನೀಡುವ ಸಾಧ್ಯತೆಯಿದೆ. ಪೆರಂಬೂರು ಮತ್ತು...

ಉತ್ತಮ್ ನಗರದಲ್ಲಿ ಶಾಂತಿ ಕಾಪಾಡುವಲ್ಲಿ ದೆಹಲಿ ಪೊಲೀಸರ ಪ್ರಯತ್ನಗಳನ್ನು ಶ್ಲಾಘಿಸಿದ ಎಪಿಸಿಆರ್

ಈದ್ ಅಲ್-ಫಿತರ್, ರಾಮ ನವಮಿ ಮತ್ತು ಹನುಮಾನ್ ಜಯಂತಿ ಸೇರಿದಂತೆ ಧಾರ್ಮಿಕ ಹಬ್ಬಗಳ ಆಚರಣೆಯ ಸಂದರ್ಭದಲ್ಲಿ ರಾಷ್ಟ್ರ ರಾಜಧಾನಿಯ ಉತ್ತಮ್ ನಗರ ಪ್ರದೇಶದಲ್ಲಿ ಶಾಂತಿ ಮತ್ತು ಭದ್ರತೆಯನ್ನು ಕಾಪಾಡಿದ್ದಕ್ಕಾಗಿ ನಾಗರಿಕ ಹಕ್ಕುಗಳ ರಕ್ಷಣಾ...

ದಲಿತ ಸಮುದಾಯಕ್ಕೆ ಕ್ಷಮೆಯಾಚಿಸಿದ ನೇಪಾಳದ ಹೊಸ ಸರ್ಕಾರ

ಪ್ರಧಾನಿ ಬಾಲೇಂದ್ರ ಶಾ ಅವರ ನೇಪಾಳದ ಹೊಸ ಸರ್ಕಾರದ 100 ಅಂಶಗಳ ಸುಧಾರಣಾ ಕಾರ್ಯಸೂಚಿಯಡಿಯಲ್ಲಿ, ಮುಂದಿನ 15 ದಿನಗಳ ಒಳಗೆ ದಲಿತರು ಮತ್ತು ಐತಿಹಾಸಿಕವಾಗಿ ಹೊರಗಿಡಲ್ಪಟ್ಟ ಇತರೆ ಸಮುದಾಯಗಳಿಗೆ 'ಔಪಚಾರಿಕ ಕ್ಷಮೆಯಾಚನೆ' ಕೇಳುವುದಾಗಿ...

‘ಯಾರು ಹೆದರುತ್ತಾನೋ ಅವನು ಸತ್ತಂತೆ’: ರಾಘವ್ ಛಡ್ಡಾಗೆ ತೀವ್ರವಾಗಿ ಪ್ರತಿಕ್ರಿಯೆ ನೀಡಿದ ಎಎಪಿ ನಾಯಕ ಸೌರಭ್ ಭಾರದ್ವಾಜ್ 

ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕ ಮತ್ತು ದೆಹಲಿ ಘಟಕದ ಮುಖ್ಯಸ್ಥ ಸೌರಭ್ ಭಾರದ್ವಾಜ್ ಅವರು ವೀಡಿಯೊ ಸಂದೇಶದಲ್ಲಿ ಆಪ್ ಸಂಸದ ರಾಘವ್ ಛಡ್ಡಾ ಅವರು ಸಂಸತ್ತಿನಲ್ಲಿ "ಸಾಫ್ಟ್ ಪಿಆರ್" ನಲ್ಲಿ ತೊಡಗಿದ್ದಾರೆ...

ಚಂಡೀಗಢ ಬಿಜೆಪಿ ಕಚೇರಿ ಸ್ಫೋಟ: ಪಂಜಾಬ್ ಕೌಂಟರ್ ಇಂಟೆಲಿಜೆನ್ಸ್ ಪಡೆಯಿಂದ ಇಬ್ಬರು ಶಂಕಿತರ ಮನೆಗಳ ಮೇಲೆ ದಾಳಿ

ಚಂಡೀಗಢದಲ್ಲಿರುವ ಪಂಜಾಬ್ ಬಿಜೆಪಿ ಕಚೇರಿಯ ಹೊರಗೆ ಸ್ಫೋಟ ನಡೆಸಿದ ಆರೋಪದ ಮೇಲೆ ಇಬ್ಬರು ಶಂಕಿತರ ಮನೆಗಳ ಮೇಲೆ  ಪಂಜಾಬ್ ಪೊಲೀಸರ ಗುಪ್ತಚರ ನಿಗ್ರಹ ದಳವು ಇಂದು ಮುಂಜಾನೆ ದಾಳಿ ನಡೆಸಿದೆ.  ರೋಪರ್ ಜಿಲ್ಲೆಯ ಮೊರಿಂಡಾ ಪ್ರದೇಶದ...