“ಪ್ರಧಾನಿ ನರೇಂದ್ರ ಮೋದಿಯವರ ಭಾಷಣದ ವೇಳೆ ಟೆಲಿಪ್ರಾಮ್ಟರ್ ನಿಂತು ಹೋಗಿದೆ. ಹೀಗಾಗಿ ಭಾಷಣಕ್ಕೆ ಅಡಚಣೆಯಾಗಿದೆ” ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ವಿಡಿಯೊದ ಸತ್ಯಾಸತ್ಯತೆಯನ್ನು ‘ಆಲ್ಟ್ ನ್ಯೂಸ್’ ಬಯಲಿಗೆಳೆದಿದೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಜನವರಿ 17ರಂದು ವಿಶ್ವ ಆರ್ಥಿಕ ವೇದಿಕೆಯ (WEF) ದಾವೋಸ್ ಅಜೆಂಡಾ 2022 ಆನ್‌ಲೈನ್ ಶೃಂಗಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಮೋದಿ ತಮ್ಮ ಭಾಷಣದ ಮಧ್ಯದಲ್ಲಿ ಮಾತನಾಡುವುದನ್ನು ನಿಲ್ಲಿಸಿದ ಸುತ್ತಲೇ ಶೃಂಗಸಭೆಯ ಮುಖ್ಯಾಂಶಗಳು ಮತ್ತು ಸಾಮಾಜಿಕ ಮಾಧ್ಯಮದ ಟ್ರೆಂಡ್‌ಗಳು ಗಿರಿಕಿಹೊಡೆಯುತ್ತಿವೆ. ವಿರೋಧ ಪಕ್ಷಗಳ ನಾಯಕರು ಸೇರಿದಂತೆ ಸಾಮಾಜಿಕ ಮಾಧ್ಯಮ ಬಳಕೆದಾರರ ದೊಡ್ಡ ಗುಂಪು ಟೆಲಿಪ್ರಾಮ್ಟರ್ ವೈಫಲ್ಯವನ್ನು ಎತ್ತಿ ತೋರಿಸಿದ್ದಾರೆ. ” ಟೆಲಿಪ್ರಾಮ್ಟರ್ ಇಲ್ಲದೆ ಭಾಷಣ ಮಾಡಲು ಸಾಧ್ಯವಿಲ್ಲ” ಎಂದು ಪ್ರಧಾನಿ ಮೋದಿಯವರನ್ನು ಲೇವಡಿ ಮಾಡಲಾಗಿದೆ.
#TelepromptorPM ಹ್ಯಾಶ್‌ಟ್ಯಾಗ್‌ನೊಂದಿಗೆ ಲೈವ್ ಸ್ಟ್ರೀಮ್ ಸಮಯದಲ್ಲಿ ಅಡಚಣೆಯಾದ 37 ಸೆಕೆಂಡುಗಳ ವೀಡಿಯೊವನ್ನು ಕಾಂಗ್ರೆಸ್‌ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದೆ. #TelepromptorPM ಎಂಬ ಹ್ಯಾಶ್‌ಟ್ಯಾಗ್ ವೆರಿಫೈ ಮಾಡಲಾದ ಕಾಂಗ್ರೆಸ್ ಖಾತೆಗಳು ಬಳಸಿವೆ. ಕಾಂಗ್ರೆಸ್ ವಕ್ತಾರರಾದ ಶಾಮಾ ಮೊಹಮ್ಮದ್, ಪಶ್ಚಿಮ ಬಂಗಾಳ ಕಾಂಗ್ರೆಸ್, ಪಶ್ಚಿಮ ಬಂಗಾಳ ಪ್ರದೇಶ ಮಹಿಳಾ ಕಾಂಗ್ರೆಸ್, ಮಣಿಪುರ ಪ್ರದೇಶ ಕಾಂಗ್ರೆಸ್ ಸೇವಾದಳ ಮತ್ತು ತಮಿಳುನಾಡು ಪ್ರದೇಶ ಕಾಂಗ್ರೆಸ್ ಸೇವಾದಳ ಖಾತೆಗಳಲ್ಲೂ ಇದನ್ನೇ ಪ್ರತಿಪಾದನೆ ಮಾಡಲಾಗಿದೆ.
Teleprompter guy: Achha chalta hun, duaon mein yaad rakhna#TeleprompterPM pic.twitter.com/1Zy11MF984
— Congress (@INCIndia) January 17, 2022
ಕಾಂಗ್ರೆಸ್ ನಾಯಕ ರೇವಂತ್ ರೆಡ್ಡಿ ಎರಡು ವೀಡಿಯೊ ಕ್ಲಿಪ್‌ಗಳ ಜೋಡನೆಯನ್ನು ಟ್ವೀಟ್ ಮಾಡಿದ್ದಾರೆ. “ಮೋದಿ ಮಾತನಾಡಲು ಟೆಲಿಪ್ರಾಮ್ಟರ್ ಬಳಸುತ್ತಾರೆ” ಎಂದು ಆರೋಪಿಸಿರುವ ರಾಹುಲ್ ಗಾಂಧಿಯವರ ಹಳೆಯ ವೀಡಿಯೊ ಮತ್ತು ಬಲಭಾಗದಲ್ಲಿ ದಾವೋಸ್‌ನಲ್ಲಿ ಪ್ರಧಾನಿ ಮೋದಿಯವರ ಅಡ್ಡಿಪಡಿಸಿದ ಭಾಷಣದ ವೀಡಿಯೊವನ್ನು ಇವರ ಟ್ವೀಟ್‌ನಲ್ಲಿ ಕಾಣಬಹುದು. ಈ ವೀಡಿಯೊವನ್ನು ಕಾಂಗ್ರೆಸ್ ನಾಯಕರಾದ ಸಲ್ಮಾನ್ ನಿಜಾಮಿ, ರಾಮ್‌ಕಿಶನ್ ಓಜಾ, ಛತ್ತೀಸ್‌ಗಢ ಪ್ರದೇಶ ಕಾಂಗ್ರೆಸ್ ಸೇವಾದಳ ಮತ್ತು ಪಂಜಾಬ್ ಪ್ರದೇಶ ಕಾಂಗ್ರೆಸ್ ಸೇವಾದಳ ಖಾತೆಗಳೂ ಹಂಚಿಕೊಂಡಿವೆ.
As always Rahul ji’s prediction about PM has come true…
— Revanth Reddy (@revanth_anumula) January 18, 2022
This is embarrassing for all Indians.
#TeleprompterPM pic.twitter.com/bfloBs8GnG
ಎಎಪಿ ನಾಯಕ ಸಂಜಯ್ ಸಿಂಗ್ ಮತ್ತು ಹಿರಿಯ ವಕೀಲ ಪ್ರಶಾಂತ್ ಭೂಷಣ್ ಕೂಡ ಇದೇ ಪ್ರತಿಪಾದನೆ ಮಾಡಿದ್ದಾರೆ.
अरे Teleprompter जी
— Sanjay Singh AAP (@SanjayAzadSln) January 18, 2022
“आम कैसे खाया जाता है?”
PLZ बताओ न। pic.twitter.com/5GiWO9uvrL
ಮಹುವಾ ಮೊಯಿತ್ರಾ ಅಭಿಮಾನಿಗಳು [4 ಲಕ್ಷಕ್ಕೂ ಹೆಚ್ಚು ಫಾಲೋಯರ್ಸ್], ಪ್ರಿಯಾಂಕಾ ಗಾಂಧಿ ಅಭಿಮಾನಿಗಳ ಪುಟ [7 ಲಕ್ಷಕ್ಕೂ ಹೆಚ್ಚು ಫಾಲೋಯರ್ಸ್]; ಲೈ ಲಾಮಾ [1.5 ಲಕ್ಷಕ್ಕೂ ಹೆಚ್ಚು ಫಾಲೋಯರ್ಸ್]; ವೆಲ್ ಸನ್ನಿ [9 ಸಾವಿರಕ್ಕಿಂತ ಹೆಚ್ಚು ಫಾಲೋಯರ್ಸ್‌ಗಳು] ಖಾತೆಗಳಲ್ಲೂ ಇದೇ ಪ್ರತಿಪಾದನೆ ಮಾಡಲಾಗಿದೆ.
ಟೆಲಿಪ್ರಾಮ್ಟರ್ ದೋಷದಿಂದಾಗಿ ಅಡೆಚಣೆಯಾಗಿಲ್ಲ
ವರ್ಲ್ಡ್ ಎಕನಾಮಿಕ್ ಫೋರಮ್ (ಡಬ್ಲ್ಯುಇಎಫ್) ಆನ್‌ಲೈನ್ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿಯವರ ಭಾಷಣಕ್ಕೆ ಸಂಬಂಧಿಸಿದ ವಿವಾದವನ್ನು ಅರ್ಥಮಾಡಿಕೊಳ್ಳಲು, ತಾಂತ್ರಿಕ ದೋಷದ ಕಾರಣಗಳ ಅನುಕ್ರಮವನ್ನು ಆಲ್ಟ್ ನ್ಯೂಸ್ ಪರಿಶೀಲಿಸಿದೆ.
ನರೇಂದ್ರ ಮೋದಿ, ದೂರದರ್ಶನ ನ್ಯಾಷನಲ್ ಮತ್ತು ವರ್ಲ್ಡ್ ಎಕನಾಮಿಕ್ ಫೋರಮ್ (ಡಬ್ಲ್ಯುಇಎಫ್) ಯೂಟ್ಯೂಬ್ ಚಾನೆಲ್‌ಗಳಲ್ಲಿ ಪ್ರಧಾನಿ ಮೋದಿಯವರ ಭಾಷಣ ಲಭ್ಯವಿದೆ. ಡಿಡಿ ಮತ್ತು ಡಬ್ಲ್ಯುಇಎಫ್ ಚಾನೆಲ್‌ಗಳಲ್ಲಿ ಕಾಣಬಹುದಾದ ಅಡಚಣೆಯನ್ನು ನರೇಂದ್ರ ಮೋದಿ ಯೂಟ್ಯೂಬ್ ಚಾನೆಲ್‌ನಲ್ಲಿ ಕಾಣಲು ಸಾಧ್ಯವಾಗಿಲ್ಲ.
ಡಿಡಿ ಆವೃತ್ತಿಯ ವೀಡಿಯೊದಲ್ಲಿ ಪ್ರಧಾನಿ ಈಗಾಗಲೇ ಆರು ನಿಮಿಷಗಳ ಕಾಲ ಮಾತನಾಡಿದ ಭಾಗವನ್ನು WEFನ ಯೂಟ್ಯೂಬ್ ಚಾನೆಲ್‌ನಲ್ಲಿ ಪ್ರಸಾರ ಮಾಡಲಾಗಿಲ್ಲ ಎಂದು ಆಲ್ಟ್‌ನ್ಯೂಸ್ ಗಮನಿಸಿದೆ. ವಾಸ್ತವವಾಗಿ, ಲೈವ್ ಸ್ಟ್ರೀಮ್ ಆದ WEFನ ಆವೃತ್ತಿಯ ಮೊದಲ ಎಂಟು ನಿಮಿಷಗಳು ಬ್ಲಾಕ್ ಆಗಿವೆ. ಲೈವ್ ಸ್ಟ್ರೀಮ್ ಪ್ರಾರಂಭವಾದಾಗ, PM ಈಗಾಗಲೇ ಭಾಷಣದ ಮಧ್ಯಭಾಗದಲ್ಲಿರುವುದನ್ನು ಕಾಣಬಹುದು. WEFನ ಯೂಟ್ಯೂಬ್ ಚಾನೆಲ್‌ನಲ್ಲಿ ಪ್ರಧಾನಮಂತ್ರಿಯವರ ಭಾಷಣದ ಆರಂಭಿಕ ಭಾಗವನ್ನು ಲೈವ್-ಸ್ಟ್ರೀಮ್ ಮಾಡದ ಕಾರಣ ತಾಂತ್ರಿಕ ದೋಷವಿತ್ತು ಎಂದು ತಿಳಿಯಬಹುದು.
ಆಲ್ಟ್ ನ್ಯೂಸ್ ಜಾಲತಾಣವು WEF ಕಾರ್ಯಕ್ರಮದ ಅನುಕ್ರಮವನ್ನು ಪರಿಶೀಲಿಸಿದ್ದು DD ಮತ್ತು WEF ಯೂಟ್ಯೂಬ್ ಚಾನೆಲ್ ವೀಡಿಯೊಗಳನ್ನು ಪರಿಶೀಲಿಸಿದೆ.
ಡಿಡಿಯ ಯೂಟ್ಯೂಬ್ ಚಾನೆಲ್‌ನಲ್ಲಿನ ವೀಡಿಯೊದ ಆರಂಭಿಕ ನಾಲ್ಕು ನಿಮಿಷಗಳಲ್ಲಿ, ಪಿಎಂ ಮೋದಿ ಮತ್ತು ಆತಿಥೇಯ ಡಬ್ಲ್ಯುಇಎಫ್ ಎಕ್ಸಿಕ್ಯೂಟಿವ್ ಚೇರ್ಮನ್ ಕ್ಲಾಸ್ ಶ್ವಾಬ್, ಕುಶಲೋಪರಿ ವಿನಿಮಯ ಮಾಡಿಕೊಂಡರು. 5:04 ನಿಮಿಷಗಳಿಗೆ ಪ್ರಧಾನಮಂತ್ರಿಯವರು ತಮ್ಮ ಭಾಷಣವನ್ನು ಪ್ರಾರಂಭಿಸುತ್ತಾರೆ. ಆದಾಗ್ಯೂ, ಕೆಲವು ಸೆಕೆಂಡುಗಳ ಮೊದಲು [5:00 ರಿಂದ 5:01 ನಿಮಿಷ ನೋಡಿ], ಒಬ್ಬ ವ್ಯಕ್ತಿಯು ಇಂಗ್ಲಿಷ್‌ನಲ್ಲಿ “… ಗ್ರಾಫಿಕ್ಸ್… ಸರ್?” ಎನ್ನುವುದನ್ನು ಕೇಳಬಹುದು. ಅದರ ನಂತರ ನರೇಂದ್ರಮೋದಿಯವರು 5:12 ನಿಮಿಷಕ್ಕೆ ತಮ್ಮ ಇಯರ್‌ಫೋನ್ ತೆಗೆದು ತಮ್ಮ ಭಾಷಣವನ್ನು ಪ್ರಾರಂಭಿಸುತ್ತಾರೆ.
7:07 ನಿಮಿಷದ ಅವಧಿಯಲ್ಲಿ, ಪ್ರಧಾನಿ ಮೋದಿ ಎಡಕ್ಕೆ ನೋಡುತ್ತಾರೆ ಮತ್ತು ಮಾತನಾಡುವುದನ್ನು ನಿಲ್ಲಿಸುತ್ತಾರೆ. ಸುಮಾರು, 7:15ರ ನಿಮಿಷದಲ್ಲಿ ಆತಿಥೇಯರನ್ನು ಮೋದಿ ಸಂಭೋದಿಸುತ್ತಾರೆ. “ನೀವು ನನ್ನನ್ನು ಆಲಿಸುತ್ತಿದ್ದೀರಾ?” ಎಂದು ಕೇಳುತ್ತಾರೆ. ಆಲಿಸುತ್ತಿರುವುದಾಗಿ ಶ್ವಾಬ್ ಖಚಿತಪಡಿಸಿದ್ದಾರೆ. ಆಗ ಪ್ರಧಾನಮಂತ್ರಿಯವರು ಕೇಳುತ್ತಾರೆ, “ನಮ್ಮ ಇಂಟರ್ಪ್ರಿಟರ್ ಕೂಡ ಕೇಳಬಲ್ಲರೇ?”. ಶ್ವಾಬ್ ದೃಢೀಕರಿಸುತ್ತಾರೆ. “ಸಂಗೀತದೊಂದಿಗೆ ಒಂದು ಸಣ್ಣ ಪರಿಚಯ…”. ನಂತರ ಅಧಿಕೃತವಾಗಿ ಅಧಿವೇಶನವು ಮತ್ತೆ ಪ್ರಾರಂಭವಾಗುತ್ತದೆ (7:45 ನಿಮಿಷದಲ್ಲಿ ಪರಿಶೀಲಿಸಿ).
10:49 ನಿಮಿಷದ ಅವಧಿಯಲ್ಲಿ ಪ್ರಧಾನಿ ಮೋದಿ ತಮ್ಮ ಭಾಷಣವನ್ನು ಪುನರಾರಂಭಿಸುತ್ತಾರೆ. ಅವರ ಭಾಷಣದ 5:04 ನಿಮಿಷದಲ್ಲಿ ನೋಡಿದ ಹೇಳಿಕೆಯನ್ನು ಮತ್ತೆ ಗಮನಿಸಬಹುದು.
WEFನ ಯೂಟ್ಯೂಬ್ ಚಾನೆಲ್‌ನಲ್ಲಿ ಅದೇ ವೀಡಿಯೊವನ್ನು ವೀಕ್ಷಿಸಿದ ನಂತರ, ಪಿಎಂ ಮೋದಿ ಎಡಕ್ಕೆ ನೋಡಿದ ನಿಖರವಾದ ಸಮಯವನ್ನು ಗುರುತಿಸಬಹುದು. ಕಾರ್ಯಕ್ರಮ ನಿರ್ವಹಣಾ ತಂಡದ ಯಾರೋ ಒಬ್ಬರು, “ಪ್ರಧಾನ ಮಂತ್ರಿಯವರು ಎಲ್ಲರೂ ಸೇರಿದ್ದಾರೆಯೇ ಅಥವಾ ಇಲ್ಲವೇ ಎಂದು ಕೇಳಬೇಕು” ಎಂದು ಸಲಹೆ ನೀಡುತ್ತಾರೆ. ಹಿಂದಿಯಲ್ಲಿ ಒಂದು ಧ್ವನಿಯು ಪ್ರಧಾನಿ ಮೋದಿಯನ್ನು ಉದ್ದೇಶಿಸಿ, “ಸರ್, ಎಲ್ಲರೂ ಸೇರಿದ್ದರೆ ಅವರನ್ನು ಒಮ್ಮೆ ಕೇಳಿ…” ಎನ್ನುವುದನ್ನು ಗಮನಿಸಬಹುದು. ಇದಾದ ನಂತರವೇ ಪ್ರಧಾನಿಯವರು ತಮ್ಮ ಭಾಷಣ ಮತ್ತು ದ್ವಿಭಾಷಿಯ ಧ್ವನಿಯ ಕುರಿತು ವಿಚಾರಿಸುತ್ತಾರೆ. ಹೀಗಾಗಿ, ಪ್ರಧಾನಿ ಮೋದಿ ಮಾತನಾಡುವುದನ್ನು ನಿಲ್ಲಿಸಲು- ಕಾರ್ಯಕ್ರಮವನ್ನು ನಿರ್ವಹಿಸುವ ತಂಡದ ಮಧ್ಯಪ್ರವೇಶವೇ ಕಾರಣವಾಗಿದೆ.
ಅಡಚಣೆ ಇರುವುದನ್ನು ಮನಗಂಡ ಕ್ಲಾಸ್ ಶ್ವಾಬ್ ಪ್ರಧಾನಿಯನ್ನು ಪರಿಚಯಿಸುತ್ತಾರೆ. ಪಿ.ಎಂ. ಮತ್ತೆ ಭಾಷಣ ಆರಂಭಿಸುತ್ತಾರೆ. ಕಾರ್ಯಕ್ರಮದಲ್ಲಿ ಉಂಟಾದ ತಾಂತ್ರಿಕ ದೋಷದಿಂದಾಗಿ ಅಡಚಣೆಯಾಗಿದೆ. ಆದರೆ ಟೆಲಿಪ್ರಾಮ್ಟರ್ ಸಮಸ್ಯೆಯಾಗಿದೆ ಎಂಬುದು ಸತ್ಯಕ್ಕೆ ದೂರವಾಗಿದೆ.
ತಾಂತ್ರಿಕ ಸಮಸ್ಯೆ ಏನೇ ಇರಲಿ, ಮೋದಿ ಟೆಲೆಫ್ರಾಂಪ್ಟರ್ ಬಳಸುತ್ತಾರೆ ಎಂಬುದು ಸಾಬೀತಾಯಿತು. ಡಾ.ಮನಮೋಹನ್ ಸಿಂಗ್ ಎಂದೂ ಟೆಲೆಫ್ರಾಂಪ್ಟರ್ ಬಳಸುತ್ತಲೇ ಇರಲಿಲ್ಲ!
ನೆಹರು ಸಹಾ ಟೆಲೆ ಫ್ರಾಂಪ್ಟರ್ ಬಳಸುತ್ತಿದ್ದರು ಎಂದು ಭಕ್ತರು ಹೇಳುತ್ತಿದ್ದಾರೆ !!!☺️😊☺️😊😢
ಇಲ್ಲಿಯ ವರೆಗೆ ಜನರು ಮೋದಿ ಅನಕ್ಷರಸ್ಥ ಎಂದು ತಿಳಿದಿದ್ದರು. ಆದರೆ ಮೋದಿಗೆ ಓದಲು ಬರೆಯಲು ಬರುತ್ತದೆ ಎಂದು ಈಗ ದೇಶದ ಜನಕ್ಕೆ ಗೊತ್ತಾಗಿ ಸಂತೋಷವಾಯಿತು !!.
ಥ್ಯಾಂಕ್ಸ್ ಟೆಲೆಫ್ರಾಂಪ್ಟರ್ ! ☺️😊☺️😊😢
ನೆಲಕ್ಕೆ ಬಿದ್ದರೂ ಮೂಗು ಮೇಲೆಯಾಗ ಬೇಕು
first time ,, this website supporting modi ..