Homeಕರ್ನಾಟಕಅಂಬೇಡ್ಕರ್‌ರನ್ನು ಉಲ್ಲೇಖಿಸುವ ಸಿಎಂ ಲ್ಯಾಟರಲ್‌ ಎಂಟ್ರಿ ಮಾದರಿಯ ವ್ಯವಸ್ಥೆ ತರುತ್ತಿದ್ದಾರೆ: ಶಿಕ್ಷಣ ತಜ್ಞ ಶ್ರೀಪಾದ ಭಟ್

ಅಂಬೇಡ್ಕರ್‌ರನ್ನು ಉಲ್ಲೇಖಿಸುವ ಸಿಎಂ ಲ್ಯಾಟರಲ್‌ ಎಂಟ್ರಿ ಮಾದರಿಯ ವ್ಯವಸ್ಥೆ ತರುತ್ತಿದ್ದಾರೆ: ಶಿಕ್ಷಣ ತಜ್ಞ ಶ್ರೀಪಾದ ಭಟ್

- Advertisement -
- Advertisement -

“ಅಂಬೇಡ್ಕರ್ ಅವರನ್ನು ಉಲ್ಲೇಖಿಸುವ ಮುಖ್ಯಮಂತ್ರಿ ಪ್ರೊಫೆಸರ್ ಆಫ್ ಪ್ರಾಕ್ಟೀಸ್‌ ಅನ್ನು ನೇಮಕ ಮಾಡುತ್ತೇವೆ ಎನ್ನುತ್ತಿದ್ದಾರೆ. ಇದು ಕೂಡಾ ಲ್ಯಾಟರಲ್‌ ಎಂಟ್ರಿ ಮಾದರಿಯ ವ್ಯವಸ್ಥೆಯಾಗಿದೆ. ಅಂಬೇಡ್ಕರ್‌ ಅವನ್ನು ಮೊದಲನೇ ಪುಟದಲ್ಲಿ ಉಲ್ಲೇಖ ಮಾಡಿ, ಕೊನೆಯ ಪುಟದಲ್ಲಿ ಪ್ರೊಫೆಸರ್‌ ಆಫ್ ಪ್ರಾಕ್ಟೀಸ್ ಅನ್ನು ಜಾರಿಗೆ ತರುತ್ತೇವೆ ಎಂದರೆ ಎಂತಹ ಸಮಾನ ಶಿಕ್ಷಣ ಸಾಧ್ಯವಾಗುತ್ತದೆ ಎಂದು ಶಿಕ್ಷಣ ತಜ್ಞ ಶ್ರೀಪಾದ ಭಟ್ ಅವರು ಗುರುವಾರ ಕೇಳಿದರು. ಅಂಬೇಡ್ಕರ್‌ರನ್ನು ಉಲ್ಲೇಖಿಸುವ

‘ಸಂಯುಕ್ತ ಹೋರಾಟ-ಕರ್ನಾಟಕ’ ಬೆಂಗಳೂರಿನ ಗಾಂಧಿ ಭವನದಲ್ಲಿ ಆಯೋಜಿಸಿದ್ದ ಎರಡು ದಿನಗಳ ‘ಜನ ಚಳವಳಿಗಳ ಬಜೆಟ್ ಅಧಿವೇಶನ’ದಲ್ಲಿ ‘ಸಮಾನ ಶಿಕ್ಷಣ ಮತ್ತು ಬಜೆಟ್’ ಎಂಬ ವಿಚಾರದ ಬಗ್ಗೆ ಗುರುವಾರ ಶ್ರೀಪಾದ ಭಟ್ ಅವರು ಮಾತನಾಡಿದರು. ಅಂಬೇಡ್ಕರ್‌ರನ್ನು ಉಲ್ಲೇಖಿಸುವ

“ಪ್ರೊಫೆಸರ್ ಆಫ್ ಪ್ರಾಕ್ಟೀಸ್ ಎಂದರೆ ಕೈಗಾರಿಕೆ ಮತ್ತು ಕಾರ್ಪೋರೇಟ್‌ಗಳಲ್ಲಿ ಇರುವ ಪ್ರಮುಖ ವೃತ್ತಿಪರ ವ್ಯಕ್ತಿಗಳನ್ನು ಅಧ್ಯಾಪಕರನ್ನಾಗಿ ನೇಮಕ ಮಾಡುವುದಾಗಿದೆ. ಅವರು ಬಂದು ನಮ್ಮ ವಿದ್ಯಾರ್ಥಿಗಳಿಗೆ ಪಾಠ ಮಾಡುವ ವ್ಯವಸ್ಥೆ ಇದಾಗಿದೆ. ಸರ್ಕಾರ ಇದರಲ್ಲಿ ಮೀಸಲಾತಿಯಿದೆ ಎಂದು ಅದನ್ನು ಸಮರ್ಥನೆ ಮಾಡುತ್ತಿದೆ, ಆದರೆ ಯಾವ ಕೈಗಾರಿಕೆಯಲ್ಲಿ ಜನರಲ್ ಮ್ಯಾನೇಜರ್‌ ಸೇರಿದಂತೆ ದೊಡ್ಡ ಕಂಪನಿಯ ದೊಡ್ಡ ಹುದ್ದೆಗಳಲ್ಲಿ ದಲಿತರಿದ್ದಾರೆ” ಎಂದು ಅವರು ಕೇಳಿದರು

“ಸರ್ಕಾರಗಳು ಬಜೆಟ್ ಮಂಡಿಸಬೇಕಾದಾಗ ಪ್ರಾದೇಶಿಕ, ಸಾಮಾಜಿಕ ಅಸಮತೋಲನವನ್ನು ಗಮನಿಸಬೇಕಾಗಿತ್ತು. ಆದರೆ ಈ ಸರ್ಕಾರಗಳು ಅದನ್ನು ಮಾಡುತ್ತಿಲ್ಲ. ಈ ವರ್ಷದ ಬಜೆಟ್‌ನಲ್ಲಿ ಶಿಕ್ಷಣಕ್ಕೆ 45,800 ಕೋಟಿ ನೀಡಲಾಗಿದೆ ಎಂದು ಎಂದು ಹೇಳುತ್ತಿದ್ದಾರೆ. ಆದರೆ ಇದರಲ್ಲಿ ಉನ್ನತ ಮತ್ತು ಪ್ರಾಥಮಿಕ ಶಿಕ್ಷಣಕ್ಕೆ ಎಷ್ಟು ಎಂಬುವುದು ಅವರಿಗೇ ಗೊತ್ತಿಲ್ಲ. ಕಾಂಗ್ರೆಸ್ ಆಗಲಿ, ಇತರ ಯಾವುದೆ ಸರ್ಕಾರವಾಗಲಿ ಶಿಕ್ಷಣದ ವಿಚಾರದಲ್ಲಿ ಸಾರ್ವಜನಿಕ ಶಿಕ್ಷಣದಿಂದ ಹೊರಹೋಗುತ್ತಿವೆ.” ಎಂದು ಅವರು ಹೇಳಿದರು.

“ಶಿಕ್ಷಣಗಳು ಕಾರ್ಪೋರೇಟ್‌ ಕೈಗಳಿಗೆ ಹೋಗುತ್ತಿವೆ. ಎನ್‌ಇಪಿ ಕೂಡಾ  ಅನಧೀಕೃತವಾಗಿ ತಯಾರಾಗಿದ್ದು ಅಜೀಂ ಪ್ರೇಮ್‌ಜಿ ಯುನಿವರ್ಸಿಟಿಯಲ್ಲಾಗಿದೆ. ಶಾಲೆಗಳನ್ನು ದಾನಿಗಳು ದತ್ತು ತೆಗೆದುಕೊಳ್ಳುತ್ತಿರುವುದು ಕೂಡಾ ಅಪಾಯಕಾರಿಯಾಗಿದೆ. ಇದರ ಬಗ್ಗೆ ಸರ್ಕಾರಕ್ಕೆ ಯಾವುದೇ ಯೋಜನೆ ಇಲ್ಲ. ಜೊತೆಗೆ ತರಗತಿಗಳನ್ನು ಕೂಡಾ ಎನ್‌ಜಿಒಗಳು ದತ್ತು ತೆಗೆದುಕೊಳ್ಳುತ್ತಿವೆ.” ಎಂದು ಅವರು ಹೇಳಿದರು.

ಎನ್‌ಇಪಿಯನ್ನು ಕರ್ನಾಟಕ ಜಾರಿ ಮಾಡಿದೆ ಎಂದು ಕೇಂದ್ರ ಶಿಕ್ಷಣ ಸಚಿವ ಸಂಸತ್ತಿನಲ್ಲಿ ಹೇಳಿ ಮೂರು ದಿನವಾದರೂ, ಇದರ ಬಗ್ಗೆ ಕಾಂಗ್ರೆಸ್ ಸರ್ಕಾರ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ಶ್ರೀಪಾದ್ ಭಟ್ ಅವರು ಹೇಳಿದ್ದಾರೆ.

ಬಡವರಿಗೆ ಬೆಂಕಿಪೊಟ್ಟಣದ ರೀತಿಯ ಮನೆ ಕೊಟ್ಟರೆ ಸಾಕು ಎಂಬ ಭಾವನೆ ಸರ್ಕಾರಕ್ಕಿದೆ: ಹೋರಾಟಗಾರ ಕುಮಾರ್ ಸಮತಳ

ಜನ ಚಳವಳಿಗಳ ಅಧಿವೇಶನದಲ್ಲಿ ‘ವಸತಿ ಮತ್ತು ಬಜೆಟ್’ ವಿಚಾರದಲ್ಲಿ ಮಾತನಾಡಿದ ಹೋರಾಟಗಾರ ಕುಮಾರ್ ಸಮತಳ, “ವಸತಿ ಮತ್ತು ಭೂಮಿ ಕೊಡುವುದು ನಮ್ಮ ಆದ್ಯತೆ ಎಂದು ಬೆಳಗಾವಿ ಅಧಿವೇಶನದಲ್ಲಿ ಕಾಂಗ್ರೆಸ್ ಸರ್ಕರ ಹೇಳಿತ್ತು. ಆದರೆ ಈಗಿನ ಬಜೆಟ್‌ನಲ್ಲಿ ಈ ಭಗ್ಗೆ ಯಾವುದೇ ಘೋಷಣೆಯಿಲ್ಲ. ಜೊತೆಗೆ, ಬಡವರಿಗೆ ನೀಡುವ ವಸತಿ ಎಂದರೆ ಬೆಂಕಿಪೊಟ್ಟಣದ ರೀತಿಯಲ್ಲಿ ಒಂದರ ಮೇಲೆ ಒಂದು ಮನೆ ಕೊಟ್ಟರೆ ಸಾಕು ಎಂಬ ಭಾವನೆಯಿದೆ. ಅವರಿಗೆ ಖಾಸಗಿ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯವಾಗುತ್ತಿಲ್ಲ.” ಎಂದು ಹೇಳಿದರು.

“ವಸತಿ ಸಮಸ್ಯೆ ಒಂದು ಸಾಮಾಜಿಕ ಸಮಸ್ಯೆಯಾಗಿದೆ. ಪ್ರತಿ ಪಂಚಾಯತ್‌ನಲ್ಲೂ ಮುಂದಿನ 30 ವರುಷಕ್ಕೆ ವಸತಿಗೆ ಎಂದು ಭೂಮಿ ಮೀಸಲು ಇಡಬೇಕು. ಸರ್ಕಾರವು ಗೋಮಾಳದ ಮತ್ತು ಸರ್ಕಾರಿ ಭೂಮಿಯನ್ನು ಖಾಸಗಿಗೆ ಮತ್ತು ಮಠಗಳಿಗೆ ನೀಡುತ್ತದೆ. ಒಂದು ವೇಳೆ ಭೂಮಿ ಕೊಟ್ಟರೆ ಊರಿನ ಹೊರಗೆ ಕೊಡುತ್ತದೆ. ಅಲ್ಲಿ ವಾಸ ಮಾಡಲು ಕೂಡಾ ಸಾಧ್ಯವಿಲ್ಲ. ಬಡವರಿಗೆ ನೀಡುವ ಮನೆ 20/40 ಆದರೆ ಸಾಕು ಎನ್ನುವ ಸರ್ಕಾರದ ಶಾಸಕರು, ತಮ್ಮ ಮನೆಗಳನ್ನು ನಾಲ್ಕು ಎಕರೆಗಳಲ್ಲಿ ಕಟ್ಟಿಕೊಂಡಿರುತ್ತಾರೆ.” ಎಂದು ಹೇಳಿದರು.

ಇಲ್ಲಿ ಕ್ಲಿಕ್ ಮಾಡಿ

ಇದನ್ನೂಓದಿ:  SCSP/TSP ನಿಂದ ಯಾವ ದಲಿತ ಉದ್ಧಾರ ಆಗಿದ್ದಾರೆ ಎಂದು ಮೌಲ್ಯಮಾಪನ ಮಾಡಬೇಕಾಗಿದೆ: ದಲಿತ ಹಕ್ಕುಗಳ ಹೋರಾಟಗಾರ ಗುರುಪ್ರಸಾದ್ ಕೆರಗೋಡು

SCSP/TSP ನಿಂದ ಯಾವ ದಲಿತ ಉದ್ಧಾರ ಆಗಿದ್ದಾರೆ ಎಂದು ಮೌಲ್ಯಮಾಪನ ಮಾಡಬೇಕಾಗಿದೆ: ದಲಿತ ಹಕ್ಕುಗಳ ಹೋರಾಟಗಾರ ಗುರುಪ್ರಸಾದ್ ಕೆರಗೋಡು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಮುಂಬೈ ಮಹಾರಾಷ್ಟ್ರ ನಗರವಲ್ಲ’: ಅಣ್ಣಾಮಲೈ ಹೇಳಿಕೆಗೆ ಶಿವಸೇನೆಯಿಂದ ತೀವ್ರ ಆಕ್ರೋಶ

ಮುಂಬೈ: ಐಪಿಎಸ್ ಅಧಿಕಾರಿಯಿಂದ ರಾಜಕಾರಣಿಯಾಗಿ ಬದಲಾದ ಕೆ.ಅಣ್ಣಾಮಲೈ ಅವರು "ಬಾಂಬೆ ಮಹಾರಾಷ್ಟ್ರ ನಗರವಲ್ಲ, ಅಂತರರಾಷ್ಟ್ರೀಯ ನಗರ" ಎಂದು ಹೇಳಿದ್ದು, ಇದು ಮುಂಬೈನಲ್ಲಿ ವಿವಾದ ಸೃಷ್ಟಿಸಿದೆ.  ಇದಕ್ಕೆ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ (ಯುಬಿಟಿ)...

ಮೂರನೇ ಅತ್ಯಾಚಾರ ಪ್ರಕರಣ ದಾಖಲು : ಉಚ್ಛಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಾಂಕೂಟತ್ತಿಲ್ ಬಂಧನ

ಅತ್ಯಾಚಾರ ಆರೋಪ ಕೇಳಿ ಬಂದ ಬಳಿಕ ಕಾಂಗ್ರೆಸ್‌ನಿಂದ ಉಚ್ಛಾಟನೆಗೊಂಡಿರುವ ಕೇರಳದ ಪಾಲಕ್ಕಾಡ್‌ನ ಶಾಸಕ ರಾಹುಲ್ ಮಾಂಕೂಟತ್ತಿಲ್ ಅವರನ್ನು ಭಾನುವಾರ (ಜ.11) ಬಂಧಿಸಲಾಗಿದೆ. ಪಾಲಕ್ಕಾಡ್‌ನ ಕೆಪಿಎಂ ರೀಜೆನ್ಸಿ ಹೋಟೆಲ್‌ನಿಂದ ಬೆಳಗಿನ ಜಾವ 12.30ರ ಸುಮಾರಿಗೆ ಮಾಂಕೂಟತ್ತಿಲ್...

ಇರಾನ್‌ ಹಿಂಸಾಚಾರ : ಸಾವಿನ ಸಂಖ್ಯೆ 116ಕ್ಕೆ ಏರಿಕೆ

ಕಳೆದ ಎರಡು ವಾರಗಳಿಂದ ಇರಾನ್‌ನಲ್ಲಿ ನಡೆಯುತ್ತಿರುವ ಸರ್ಕಾರಿ ವಿರೋಧಿ ಪ್ರತಿಭಟನೆಗಳಲ್ಲಿ ಕನಿಷ್ಠ 116 ಜನರು ಸಾವನ್ನಪ್ಪಿದ್ದಾರೆ. ಅಧಿಕಾರಿಗಳು ಪ್ರತಿಭಟನಾ ನಿರತರ ಮೇಲೆ ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದಾರೆ ಎಂದು ವರದಿಯಾಗಿದೆ. ಡಿಸೆಂಬರ್ 28ರಂದು ಪ್ರಾರಂಭವಾದ...

ಪಾಕಿಸ್ತಾನದ ಸಿಂಧ್‌ನಲ್ಲಿ 23 ವರ್ಷದ ಹಿಂದೂ ರೈತನನ್ನು ಗುಂಡಿಕ್ಕಿ ಕೊಂದ ಭೂಮಾಲೀಕರು 

ಕರಾಚಿ: ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ 23 ವರ್ಷದ ಹಿಂದೂ ರೈತನೊಬ್ಬ ತನ್ನ ಜಮೀನಿನಲ್ಲಿ ಆಶ್ರಯ ಮನೆ ನಿರ್ಮಿಸಿದ್ದಕ್ಕಾಗಿ ಆತನ ಮನೆ ಮಾಲೀಕರು ಗುಂಡಿಕ್ಕಿ ಕೊಂದಿದ್ದಾರೆ, ಇದು ಹಿಂದೂ ಸಮುದಾಯದಿಂದ ವ್ಯಾಪಕ ಪ್ರತಿಭಟನೆಗೆ ಎಂದು...

ದ್ವೇಷ ಭಾಷಣ ಮಸೂದೆ ರಾಜ್ಯಪಾಲರಿಂದ ತಿರಸ್ಕೃತವಾಗಿಲ್ಲ: ಸಿಎಂ ಸಿದ್ದರಾಮಯ್ಯ

ದ್ವೇಷ ಭಾಷಣ ಮಸೂದೆ ಸರ್ವಾನುಮತದಿಂದ ಅಂಗೀಕಾರವಾಗಿದ್ದು, ರಾಜ್ಯಪಾಲರು ಅದನ್ನು ವಾಪಸ್ ಕಳಿಸಿಲ್ಲ, ತಿರಸ್ಕರಿಸಿಲ್ಲ, ಅಂಕಿತವನ್ನೂ ಹಾಕಿಲ್ಲ. ಅವರು ಕರೆದಾಗ ಈ ಬಗ್ಗೆ ವಿವರಣೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಭಾನುವಾರ (ಜ.11) ಮಂಗಳೂರಿನಲ್ಲಿ...

ಐಸಿಸ್ ಗುರಿ ಮಾಡಿ ಸಿರಿಯಾ ಮೇಲೆ ವೈಮಾನಿಕ ದಾಳಿ ನಡೆಸಿದ ಅಮೆರಿಕ

ಸಿರಿಯಾದ ಇಸ್ಲಾಮಿಕ್ ಸ್ಟೇಟ್ (ಐಎಸ್) ಗುಂಪಿನ ತಾಣಗಳ ಮೇಲೆ ಅಮೆರಿಕ ಮತ್ತು ಅದರ ಪಾಲುದಾರ ಪಡೆಗಳು ದೊಡ್ಡ ಪ್ರಮಾಣದ ದಾಳಿಗಳನ್ನು ನಡೆಸಿವೆ ಎಂದು ಅಮೆರಿಕದ ಸೆಂಟ್ರಲ್ ಕಮಾಂಡ್ (ಸೆಂಟ್‌ಕಾಮ್) ಘೋಷಿಸಿದೆ. ಡಿಸೆಂಬರ್ 13ರಂದು ಸಿರಿಯಾದಲ್ಲಿ...

ವೆನೆಜುವೆಲಾದ ತೈಲ ಖರೀದಿಗೆ ಅಮೆರಿಕದ ಅನುಮತಿ ಪಡೆಯಲು ರಿಲಯನ್ಸ್ ಮಾತುಕತೆ : ವರದಿ

ಭಾರತದ ರಿಲಯನ್ಸ್ ಇಂಡಸ್ಟ್ರೀಸ್ ವೆನೆಜುವೆಲಾದ ಕಚ್ಚಾ ತೈಲ ಖರೀದಿಯನ್ನು ಪುನರಾರಂಭಿಸಲು ಅಮೆರಿಕದ ಅನುಮೋದನೆಯನ್ನು ಕೋರುತ್ತಿದೆ ಎಂದು ಈ ವಿಷಯದ ಬಗ್ಗೆ ಗೊತ್ತಿರುವ ಎರಡು ಮೂಲಗಳು ಶುಕ್ರವಾರ ತಿಳಿಸಿವೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್...

ಐ-ಪ್ಯಾಕ್‌ ಮೇಲೆ ದಾಳಿ | ಇಡಿ ಅಧಿಕಾರಿಗಳ ವಿರುದ್ಧ ತನಿಖೆ ಪ್ರಾರಂಭಿಸಿದ ಕೋಲ್ಕತ್ತಾ ಪೊಲೀಸರು : ಸುಪ್ರೀಂ ಕೋರ್ಟ್‌ನಲ್ಲಿ ಕೇವಿಯಟ್ ಸಲ್ಲಿಸಿದ ಪ. ಬಂಗಾಳ ಸರ್ಕಾರ

ಐ-ಪ್ಯಾಕ್ ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ ನಡೆಸಿದ ಸಂದರ್ಭದಲ್ಲಿ ದಾಖಲೆಗಳ ಕಳ್ಳತನದ ಆರೋಪದ ಮೇಲೆ ಕೋಲ್ಕತ್ತಾ ಪೊಲೀಸರು ಶನಿವಾರ (ಜ.10)...

ಟ್ರಂಪ್ ಸಂಚಿಗೆ ತಿರುಗೇಟು : ನಾವು ಯಾರ ಅಡಿಯಾಳಾಗಲು ಸಿದ್ದರಿಲ್ಲ ಎಂದ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು

ವೆನೆಜುವೆಲಾ ಬಳಿಕ ಖನಿಜ-ಸಮೃದ್ಧ ಡ್ಯಾನಿಶ್ (ಡೆನ್ಮಾರ್ಕ್‌) ಸ್ವಾಯತ್ತ ಪ್ರದೇಶವಾದ ಗ್ರೀನ್‌ ಲ್ಯಾಂಡ್‌ ಮೇಲೆ ಬಲಪ್ರಯೋಗ ಮಾಡಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಯೋಜಿಸುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು...

ಮತ್ತೆ ಒಂದಾದ ಎನ್‌ಸಿಪಿ ಬಣಗಳು : ಸುಪ್ರಿಯಾ ಸುಳೆ ಜೊತೆ ವೇದಿಕೆ ಹಂಚಿಕೊಂಡ ಅಜಿತ್ ಪವಾರ್, ಜಂಟಿ ಪ್ರಣಾಳಿಕೆ ಬಿಡುಗಡೆ

ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಮತ್ತು ಅವರ ಚಿಕ್ಕಪ್ಪ ಶರದ್ ಪವಾರ್ ನೇತೃತ್ವದ ಎನ್‌ಸಿಪಿ (ಎಸ್‌ಪಿ) ಶನಿವಾರ (ಜ.10) ಪುಣೆ ಮಹಾನಗರ ಪಾಲಿಕೆಗೆ ನಡೆಯಲಿರುವ ಚುನಾವಣೆಗೆ ಜಂಟಿ ಪ್ರಣಾಳಿಕೆಯನ್ನು ಬಿಡುಗಡೆ...