Homeಕರ್ನಾಟಕದಿಟ್ಟ ಪತ್ರಕರ್ತೆ ಗೌರಿ ಲಂಕೇಶ್‌ ಹೆಸರಿನಲ್ಲಿ ಆಂಬುಲೆನ್ಸ್‌‌ ಸೇವೆ ಲೋಕಾರ್ಪಣೆ

ದಿಟ್ಟ ಪತ್ರಕರ್ತೆ ಗೌರಿ ಲಂಕೇಶ್‌ ಹೆಸರಿನಲ್ಲಿ ಆಂಬುಲೆನ್ಸ್‌‌ ಸೇವೆ ಲೋಕಾರ್ಪಣೆ

- Advertisement -

ಅಖಿಲ ಭಾರತ ಶ್ರಮಿಕ ಸ್ವರಾಜ್ ಕೇಂದ್ರ – ಕರ್ನಾಟಕವು ಹುತಾತ್ಮ ದಿಟ್ಟ ಪತ್ರಕರ್ತೆ ಗೌರಿ ಲಂಕೇಶ್‌‌‌ ಅವರ ಹೆಸರಿನಲ್ಲಿ ವಲಸೆ ಕಾರ್ಮಿಕರಿಗೆ ಅನುಕೂಲವಾಗಲೆಂದು ಉಚಿತ ಆಂಬುಲೆನ್ಸ್‌‌ ಒಂದನ್ನು ಶನಿವಾರ ಲೋಕಾರ್ಪಣೆ ಮಾಡಿದೆ. ಗೌರಿ ಲಂಕೇಶ್‌ ಹೆಸರಿನ ಆಂಬುಲೆನ್ಸ್‌ ಅನ್ನು ಗೌರಿ ಲಂಕೇಶ್‌ ಅವರ ಸಹೋದರಿ ಕವಿತಾ ಲಂಕೇಶ್ ಅವರು ಉದ್ಘಾಟನೆ ಮಾಡಿದ್ದಾರೆ.

ಉತ್ತರ ಕರ್ನಾಟಕ ಮತ್ತು ಉತ್ತರ ಭಾರತದಿಂದ ಬೆಂಗಳೂರಿಗೆ ವಲಸೆ ಬಂದು ನೆಲೆ ಕಂಡುಕೊಂಡಿರುವ ಬಡ ವಲಸೆ ಕಾರ್ಮಿಕರಿಗೆ ಈ ಉಚಿತ ಆಂಬುಲೆನ್ಸ್ ಸೇವೆ ಒದಗಿಸಲಿದೆ.

ಇದನ್ನೂ ಓದಿ:ಪತ್ರಕರ್ತೆ ಗೌರಿ ಲಂಕೇಶ್ ಹೆಸರಿನಲ್ಲಿ ವಲಸೆ ಕಾರ್ಮಿಕರಿಗೆ ಉಚಿತ ಆಂಬುಲೆನ್ಸ್ ಸೇವೆ

ಕೋವಿಡ್ ಸಾಂಕ್ರಾಮಿಕದ ನಂತರ ಬಡಜನರಿಗೆ ಆರೋಗ್ಯ ಸೇವೆಗಳು ಸುಲಭಕ್ಕೆ ಸಿಗುತ್ತಿಲ್ಲ. ಬೆಂಗಳೂರಿನ ಮಹಾದೇವಪುರ ಸುತ್ತಾ-ಮುತ್ತಾ ಉತ್ತರ ಕರ್ನಾಟಕ ಮತ್ತು ಉತ್ತರ ಭಾರತದಿಂದ ಕೆಲಸ ಅರಸಿ ವಲಸೆ ಬಂದ ಸಾವಿರಾರು ಜನರು ಗುಡಿಸಲುಗಳಲ್ಲಿ ವಾಸಿಸುತ್ತಿದ್ದಾರೆ. ಕೋವಿಡ್ ಭಯವಿರುವುದರಿಂದ ಅವರಿಗೆ ಉಪಯೋಗವಾಗಲೆಂದು ಉಚಿತ ಆಂಬುಲೆನ್ಸ್ ಸೇವೆ ಒದಗಿಸುತ್ತಿದ್ದೇವೆ ಎಂದು ಅಖಿಲ ಭಾರತ ಶ್ರಮಿಕ ಸ್ವರಾಜ್‌ ಕೇಂದ್ರದ ಕಲೀಂ-ಉಲ್ಲಾ ಅವರು ತಿಳಿಸಿದ್ದರು.

ಆಂಬುಲೆನ್ಸ್‌ ಉದ್ಘಾಟನೆ ನಂತರ ನಾನುಗೌರಿ.ಕಾಂ ಜೊತೆ ಮಾತನಾಡಿದ ಕಲೀಂ ಉಲ್ಲಾ ಅವರು, “ಗೌರಿ ಲಂಕೇಶ್‌ ಅವರನ್ನು ಹತ್ಯೆ ಮಾಡಿದಾಗ ‘ನಾನು ಗೌರಿ-ನಾವೆಲ್ಲಾ ಗೌರಿ’ ಎಂದು ಹೇಳಿದ್ದೆವು. ಹಾಗಾಗಿಯೇ, ಬಡವರ ಪರವಾಗಿ ಹೋರಾಟ ನಡೆಸುತ್ತಿದ್ದ ಗೌರಿ ಲಂಕೇಶ್‌ ಅವರ ಹೆಸರಲ್ಲಿ ಇದನ್ನು ಮಾಡುತ್ತಿದ್ದೇವೆ. ಗೌರಿ ಅವರು ಇದ್ದರೆ ಏನು ಮಾಡುತ್ತಿದ್ದರೋ ಅದನ್ನೇ ನಾವು ಮಾಡುತ್ತಿದ್ದೇವೆ. ಪ್ರಸ್ತುತ ಈ ಸೇವೆ ಮಾಡುತ್ತಿರುವುದು ನಾವಲ್ಲ ಗೌರಿ ಲಂಕೇಶ್‌ ಅವರೇ ಆಗಿದ್ದಾರೆ” ಎಂದು ಹೇಳಿದರು.

“ಗೌರಿ ಲಂಕೇಶ್‌ ಹೆಸರಲ್ಲಿ ನಾವು ಮತ್ತಷ್ಟು ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ನಾಳೆ ಸುಮಾರು 200 ಜನರು ಗೌರಿ ಲಂಕೇಶ್‌ ಹೆಸರಲ್ಲಿ ರಕ್ತದಾನ ಕೂಡಾ ಮಾಡಲಿದ್ದಾರೆ” ಎಂದು ಕಲೀಂ ಉಲ್ಲಾ ಅವರು ತಿಳಿಸಿದರು.

ಆಂಬುಲೆನ್ಸ್‌ ಉದ್ಘಾಟನಾ ಸಮಾರಂಭದಲ್ಲಿ ಕವಿತಾ ಲಂಕೇಶ್‌, ಕಲೀಂ ಮುಲ್ಲಾ, ಲಿಂಗತ್ವ ಅಲ್ಪಸಂಖ್ಯಾತ ಹೋರಾಟಗಾರರಾದ ಅಕ್ಕೈ ಪದ್ಮಶಾಲಿ, ಸಾಮಾಜಿಕ ಕಾರ್ಯಕರ್ತರಾದ ಚೇ ಬಾಲು, ರೈತ ಸಂಘಟನೆ ಮುಖಂಡರಾದ ವೀರಸಂಗಯ್ಯ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ಇದನ್ನೂ ಓದಿ:ಸೆಪ್ಟೆಂಬರ್‌ 5 ‘ಗೌರಿ ಲಂಕೇಶ್‌ ದಿನ’ ಎಂದು ಘೋಷಿಸಿದ ಕೆನಡಾದ ಬರ್ನಾಬಿ ನಗರ!

+ posts

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

ಎಸ್‌‌ಪಿ ನಾಯಕ ಮುಲಾಯಂ ಸೊಸೆ ಬಿಜೆಪಿಗೆ ಸೇರ್ಪಡೆ: ಮಾಧ್ಯಮಗಳಲ್ಲಿ ಮರೆಯಾದ ಒಂದು ಅಂಶ!

ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ, ಸಮಾಜವಾದಿ ಪಕ್ಷದ ಸಂಸ್ಥಾಪಕ ಮುಲಾಯಂ ಸಿಂಗ್‌ ಯಾದವ್ ಅವರ ಸೊಸೆ ಅಪರ್ಣಾ ಯಾದವ್‌ ಅವರು ಬಿಜೆಪಿ ಸೇರಿರುವುದನ್ನು ಮಾಧ್ಯಮಗಳು ವರದಿ ಮಾಡಿವೆ. ಎಸ್‌ಪಿಗೆ ಹಿನ್ನೆಡೆಯಾಗುವ ಸಾಧ್ಯತೆ ಎಂದು ಕೆಲವು...
Wordpress Social Share Plugin powered by Ultimatelysocial