Homeಮುಖಪುಟಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ : ದೇಶವ್ಯಾಪಿ ಅಸಹಕಾರ ಚಳವಳಿಯ ಅಗತ್ಯವಿದೆ

ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ : ದೇಶವ್ಯಾಪಿ ಅಸಹಕಾರ ಚಳವಳಿಯ ಅಗತ್ಯವಿದೆ

- Advertisement -
- Advertisement -

ಭೂ ಸುಧಾರಣಾ ಕಾಯ್ದೆಯ ತಿದ್ದುಪಡಿ ಮಾಡುವ ಹುನ್ನಾರಕ್ಕೆ ಬಿಜೆಪಿ ಸರ್ಕಾರ ಕೈ ಹಾಕಿದೆ. ಮೋದಿ ಸರ್ಕಾರದ ಅಣತಿಯಂತೆ ಈ ರೈತ ವಿರೋಧೀ ಕಾರ್ಯಕ್ರಮ ಕೈಗೊಳ್ಳಲಾಗುತ್ತಿದೆ.

ದೊಡ್ಡ ದೊಡ್ಡ ಜಮೀನ್ದಾರರು ಕರ್ನಾಟಕದಲ್ಲಿ ನಿರ್ಗತಿಕರಿಗೆ 2-3 ಎಕರೆ ಜಮೀನು ಮಾಡಲು ಕೊಟ್ಟು ಅವರನ್ನು ನಿರಂತರ ಗುಲಾಮಗಿರಿಗೆ ನೂಕಿದ್ದರು. ಬಡವರನ್ನು ಖಾಯಂ ಆಗಿ ಬಡವರನ್ನಾಗಿಡುವ ಕೆಲಸ ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಅವ್ಯಾಹತವಾಗಿ ನಡೆಯುತ್ತಿತ್ತು. ಈ ಬಡ ಗೇಣಿದಾರರನ್ನು ಸಂಘಟನೆ ಮಾಡಿದ ಮೊದಲಿಗರಲ್ಲಿ ಕಡಿದಾಳ್ ಮಂಜಪ್ಪನವರು, ಬಸವಾನಿ ರಾಮಶರ್ಮರು ಮತ್ತು ಗಣಪತಿಯಪ್ಪ ಮೊದಲಿಗರು. ಆನಂತರ ಶಾಂತವೇರಿ ಗೋಪಾಲಗೌಡರು ಮುಂತಾದ ಸೋಷಿಯಲಿಸ್ಟ್ ಮುಖಂಡರು ಗೇಣೀದಾರರರನ್ನು ಸಂಘಟನೆ ಮಾಡಿ, ಜಮೀನ್ದಾರರ ವಿರುದ್ಧವಾಗಿ, ಗೇಣೀ ಪದ್ದತಿ ರದ್ದತಿಗಾಗಿ ಚಳವಳಿ ಮಾಡಿದರು. ಮುಂದೆ ದೇವರಾಜ ಅರಸರು ಮುಖ್ಯಮಂತ್ರಿಯಾಗಿ ಆಯ್ಕೆಯಾದ ಸಂದರ್ಭದಲ್ಲಿ ಗೇಣಿ ಪದ್ದತಿ ರದ್ದುಗೊಳಿಸುವ ಶಾಸನ ಜಾರಿಗೆ ತಂದರು. ಈ ಜಮೀನ್ದಾರರ ಜಮೀನುಗಳಲ್ಲಿ ದುಡಿಯುತ್ತಿದ್ದ ಬಡ ರೈತರನ್ನು ಅವರು ಮಾಡುತ್ತಿದ್ದ ಜಮೀನುಗಳಿಗೆ ಒಡೆಯರನ್ನಾಗಿ ಮಾಡಿದರು. ಉಳುವವನಿಗೆ ಭೂಮಿ ಎಂದು ಘೋಷಣೆ ಮಾಡಿದರು. ಈ Slogan ದೊಡ್ಡ ಜಮೀನ್ದಾರರ ಭೂಮಿಗೆ ಮಾತ್ರ ಸೀಮಿತವಾಗಿತ್ತು.

ಅದೇ ದೇವರಾಜ ಅರಸರು ಕರ್ನಾಟಕದ ಎಲ್ಲ ಕಡೆಗೂ ಅನ್ವಯಿಸುವ ಭೂ ಸುಧಾರಣಾ ಕಾಯ್ದೆಯನ್ನೂ ಅದೇ ಕಾಲಕ್ಕೆ ಜಾರಿಗೆ ತಂದರು ಈ ಕಾಯ್ದೆಯ ಪ್ರಕಾರ ಭೂಮಿತಿ ಶಾಸನವನ್ನು ಜಾರಿಗೆ ತಂದರೆ, ಎಲ್ಲಾ ಉಳುವರಿಗೂ ಭೂಮಿ ಎಂದು ಘೋಷಿಸಲಿಲ್ಲ. ಅಷ್ಟೇ ಅಲ್ಲ ಅವರು ಕೈಗೊಂಡ ಭೂಮಿತಿ ಶಾಸನ ಅವೈಜ್ಞಾನಿಕವೂ, ಅವಾಸ್ತವಿಕವೂ ಆಗಿತ್ತು. ಹಾಗಾಗಿ ಈ ಭೂಮಿತಿ ಶಾಸನದಿಂದ ಬಡವರಿಗೆ ಭೂಹೀನರಿಗೆ ಜಮೀನು ಸಿಕ್ಕಲಿಲ್ಲ.

ಕರ್ನಾಟಕದಲ್ಲಿ ಒಂದು ಎಕರೆ 2 ಎಕರೆ ಜಮೀನುಳ್ಳವರು ಶೇ.60 ಮಂದಿ ಇದ್ದಾರೆ. ಇವರು ಜಮೀನಿನಲ್ಲಿ ಸ್ವತಃ ದುಡಿದು ತಿನ್ನುವವರು. ಹೆಚ್ಚಿಗೆ ಜಮೀನು ಇರುವವರೆಲ್ಲ ದಿನಕ್ಕೆ 500 ರೂ ಕೂಲಿ ಕೊಟ್ಟು ಜಮೀನು ಮಾಡಿಸುವವರು. ಇವರೆಲ್ಲ ತಮಗಿರುವ ಎಲ್ಲಾ ಜಮೀನನ್ನೂ ಆಹಾರಧಾನ್ಯ ಬೆಳೆಯುವುದಕ್ಕೆ ಉಪಯೋಗಿಸುತ್ತಿಲ್ಲ. ಇವರು ತಿಂಗಳು ತಿಂಗಳು ಹಣ ನೀಡುವ ತರಕಾರಿ, ಹೂವು, ಶುಂಠಿ, ಅರಿಸಿನ, ಹಣ್ಣಿನ ಗಿಡಗಳನ್ನು ಬೆಳೆಸುವವರು ಮತ್ತು ಪರಾವಲಂಬಿಗಳು. ಒಂದು ಎರಡು ಎಕರೆ ಜಮೀನುಳ್ಳವರು ಸ್ವತಃ ವ್ವವಸಾಯ ಮಾಡುವರಾದರೂ ಅವರಿಗೆ ಇರುವ ಸಣ್ಣ ಜಮೀನಿನಲ್ಲಿ ತಮ್ಮ ಹೊಟ್ಟೆಗೆ ಬೇಕಾದಷ್ಟನ್ನು ಬೆಳೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಈ ಬಡ ರೈತರಿಗೆ ಕನಿಷ್ಟ 5 ಎಕರೆ ಖುಷ್ಕಿ ಜಮೀನು ಬೇಕು. ಹೀಗೆ ಮಾಡುವುದರಿಂದ ಅವರು ತಾವೇ ದುಡಿದು ತಮ್ಮ ಉಪಜೀವನ ನಡೆಸಿಕೊಳ್ಳುವುದರ ಜೊತೆಗೆ ಸಮಾಜಕ್ಕೂ ಅಷ್ಟೂ ಇಷ್ಟೋ ಆಹಾರ ಒದಗಿಸಿಯಾರು.

ಆದ್ದರಿಂದ ಈಗ ಭೂಮಿತಿ ಶಾಸನವನ್ನು ಪರಿಷ್ಕರಿಸಿ ಒಂದು ಎಕರೆಯಿಂದ ೩ ಎಕರೆ ಜಮೀನು ಕೊಳ್ಳಲು ಬಡ ರೈತರಿಗೂ ಭೂ ಕಾರ್ಮಿಕರಿಗೂ ತಲಾ 5 ಎಕರೆ ಜಮೀನು ದೊರೆಯುವಂತೆ ಶಾಸನ ಮಾಡಬೇಕು. ಹಾಗೆ ಮಾಡದಿದ್ದರೆ ಈ ಅಪಾರ ಸಂಖ್ಯೆಯ ಬಡವರೂ ಕೂಡ ವಲಸಿಗ ಕಾರ್ಮಿಕರಾಗಿ ಪಟ್ಟಣ ಸೇರುವುದು ಖಚಿತ. ಸರ್ಕಾರಗಳು 70 ವರ್ಷದಿಂದ ಒಂದೇ ಸಮನೆ ಬೆಳೆ ಬೆಳೆಯುವ ಜಮೀನುಗಳನ್ನು ರಸ್ತೆ ನಿರ್ಮಿಸುವ, ಅಗಲ ಮಾಡುವ ಉದ್ಯಮಗಳಿಗಾಗಿ ವಶ ಪಡಿಸಿಕೊಂಡು ವ್ಯವಸಾಯದ ಭೂಮಿಯನ್ನು ನುಂಗಿ ಹಾಕುತ್ತಿವೆ.

ಈಗ ಸರ್ಕಾರ ಕೈಗೊಳ್ಳುವ ಭೂ ಸುಧಾರಣೆ ಕಾಯ್ದೆಯೂ ಈ ಬಡ ರೈತರನ್ನೆಲ್ಲ ವಲಸೆ ಹೋಗಬೇಕಾದ ಅನಿವಾರ್ಯತೆಗೆ ಅಣಿಗೊಳಿಸುತ್ತದೆ. ಈ ಸುಧಾರಣೆಯ ಕಾಯ್ದೆ ಜಾರಿಗೆ ಬಂದರೆ ಬಡಜನರ ಜಮೀನೆಲ್ಲ ಶ್ರೀಮಂತರ ಅಥವಾ ಕಾರ್ಪೋರೇಟ್ ಜಗತ್ತಿನವರ ವಶವಾಗುತ್ತದೆ. ಕಾರ್ಪೋರೇಟ್ ಕಂಪನಿಗಳು consolidation holding ಅನ್ನು ಬೆಂಬಲಿಸುತ್ತವೆ. ಬಡವರಿಗೆ ಆಮಿಷವೊಡ್ಡಿ ಅವರ ಜಮೀನನ್ನೆಲ್ಲ ದೊಡ್ಡ ಜಮೀನ್ದಾರರ ಅಥವಾ ಕಾರ್ಪೋರೇಟ್ ಕಂಪನಿಗಳ ವಶಕ್ಕೆ ನೀಡುವ ಹುನ್ನಾರ ಇದು. ಕಾಪೋರೇಟ್ ಕಂಪನಿಗಳು ವ್ಯವಸಾಯಕ್ಕೆ ಬೇಕಾದ ಅತ್ಯುತ್ತಮ ಸಾಧನಗಳನ್ನು ಈ ಶ್ರೀಮಂತ ರೈತರಿಗೆ ಒದಗಿಸಿ ಕೆಲವೇ ಜನ ಕೂಲಿಗಳ ಅವಶ್ಯಕತೆ ಬೀಳುವಂತೆ ಮಾಡುತ್ತಾರೆ. ಭೂಮಿ ಕಳೆದುಕೊಂಡವರೆಲ್ಲ ಗ್ರಾಮಬಿಟ್ಟು ಪಟ್ಟಣ ಸೇರಬೇಕಾದ ಅನಿವಾರ್ಯತೆ ಉಂಟು ಮಾಡುತ್ತಾರೆ. ಹೆಚ್ಚಿನ ಜಮೀನುಳ್ಳ ರೈತರನ್ನು ಹಣವಂತರು, ಕಾರ್ಪೋರೇಟ್‌ಗಳು ಸಂಧಿಸಿ, ತಾವು ಹೇಳುವ ಬೆಳೆ ಬೆಳೆದು ಕೊಟ್ಟರೆ, ಅವರು ನೀರೀಕ್ಷಿಸುವ ದರ ನೀಡುವುದಾಗಿ ಹೇಳುತ್ತಾರೆ. ಅರ್ಥಾತ್ ಈ ಜಮೀನುದಾರರನ್ನು ತಮ್ಮ ಕೂಲಿಯಾಳುಗಳನ್ನಾಗಿ ಪರಿವರ್ತಿಸುತ್ತಾರೆ. ವ್ಯವಸಾಯ ಪ್ರಧಾನವಾದ ಭಾರತ ದೇಶವನ್ನು ಅಮೆರಿಕ ಮಾಡುವ ಸನ್ನಾಹ ಮೋದಿಯವರದು ಯಡಿಯೂರಪ್ಪನವರದು.

ಅಮೆರಿಕ ಉದ್ಯಮಗಳ ದೇಶ. ಕೈಗಾರಿಕ ಪ್ರಧಾನ ದೇಶ. ವ್ಯವಸಾಯ ಪ್ರಧಾನ ದೇಶವಲ್ಲ. ಅಲ್ಲಿ ವ್ಯವಸಾಯದಲ್ಲಿ ಜನ ತೊಡಗಿಕೊಳ್ಳುವುದಿಲ್ಲ. ಆದ್ದರಿಂದ ಕೆಲವರು ಮಾತ್ರ ಸಾವಿರ ಸಾವಿರ ಎಕರೆ ಜಮೀನು ಮಾಲಿಕರಾಗಿದ್ದಾರೆ. ಅವರು ಜಮೀನನ್ನೆಲ್ಲ ಪವರ್ ಟಿಲ್ಲರ್‌ನಲ್ಲಿ ಉಳುತ್ತಾರೆ. ಬೀಜವನ್ನು ಹೆಲಿಕಾಪ್ಟರ್‌ನಿಂದ ಬಿತ್ತುತ್ತಾರೆ. ಡ್ರೈಯರ್‌ಗಳನ್ನು ಧಾನ್ಯವನ್ನು ತೂರುವ ಯಂತ್ರಗಳನ್ನು ಬೀಜ ಬಿಡಿಸುವ ಯಂತ್ರಗಳನ್ನು ಇಟ್ಟುಕೊಂಡಿದ್ದಾರೆ. ಮನೆ ಮಂದಿಯೇ 1000 ಎಕರೆ ಜಮೀನಿನ ನಿರ್ವಹಣೆಯನ್ನು ಮಾಡುತ್ತಾರೆ.

ವ್ಯವಸಾಯ ಪ್ರಧಾನವಾದ ಭಾರತದಲ್ಲಿ ಅಮೆರಿಕದ ಪ್ರಯೋಗವನ್ನು ಮಾಡುವುದು ಸರಿಯಲ್ಲ. ಆಹಾರಧಾನ್ಯಕ್ಕಾಗಿ ಭಿಕ್ಷಾಪಾತ್ರೆ ತೆಗೆದುಕೊಂಡು ಅನ್ಯ ದೇಶಗಳಲ್ಲಿ ದೇಹಿ ಎಂದು ಬೇಡುವುದೂ ಅಪಮಾನಕರ. ಇಂತಹ ಅವಿವೇಕದ ಭೂಸುಧಾರಣೆಯನ್ನು ಭಾರತದಲ್ಲಿ ಜಾರಿ ಮಾಡುವುದನ್ನು ತಡೆಗಟ್ಟಬೇಕಾದ್ದು ಈ ದೇಶದ ಎಲ್ಲ ಜನರ ಕರ್ತವ್ಯವೇ ಆಗಿದೆ.

ಮುಖ್ಯವಾಗಿ ಭಾರತದಾದ್ಯಂತ ಇರುವ ಎಲ್ಲ ರೈತ ಸಂಘಟನೆಗಲೂ ಒಂದುಗೂಡಿ ಒಂದು ಸಂಘರ್ಷ ಸಮಿತಿಯನ್ನು ರಚಿಸಬೇಕು. ಭಾರತದ ಬಡ ರೈತರ ಹಿತ ದೃಷ್ಟಿಯುಳ್ಳ ಎಲ್ಲರೂ ಶ್ರೀಮಂತರು ಬಡವರ ಭೂಮಿಯನ್ನು ಕೊಳ್ಳುವುದಕ್ಕೆ ಸರ್ಕಾರ ಅವಕಾಶ ಮಾಡಿಕೊಡುವ ಶಾಸನ ಮಾಡುವುದು ಜನದ್ರೋಹ ಕೆಲಸ ಎಂದು ಸಾರಿ ಹೇಳಬೇಕು. ಅದಕ್ಕಾಗಿ ದೇಶವ್ಯಾಪಿ ಅಸಹಕಾರ ಚಳವಳಿ ಆರಂಭಿಸಬೇಕು ಭಾರತದ ಸ್ವಾಯತ್ತತೆಯನ್ನು ಬಯಸುವ ಎಲ್ಲಾ ಜನರೂ, ರೈತ ಸಂಘಟನೆಗಳ ಜೊತೆಗೆ ಕೈ ಜೋಡಿಸಬೇಕು.

  • ಎಚ್.ಎಸ್‌ ದೊರೆಸ್ವಾಮಿ

ಇದನ್ನೂ ಓದಿ: ಕೋಆಪರೇಟೀಕರಣದತ್ತ ಹೊರಳಬೇಕಿದ್ದ ಕೃಷಿ ಕಾರ್ಪೋರೇಟೀಕರಣದತ್ತ: ಈ ವಿನಾಶದ ಪರಿಣಾಮಗಳೇನು?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...

ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು ಬಿಸಿಯೂಟ ಯೋಜನೆಯಿಂದ ಹೊರಕ್ಕೆ : ಸಂಸತ್ತಿಗೆ ತಿಳಿಸಿದ ಕೇಂದ್ರ

ಕಳೆದ ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು 'ಪ್ರಧಾನಮಂತ್ರಿ ಪೋಷಣ್ ಯೋಜನೆ'ಯಿಂದ (ಮಧ್ಯಾಹ್ನದ ಬಿಸಿಯೂಟ) ಹೊರ ಬಿದ್ದಿವೆ. 2020-21ರಲ್ಲಿ 11.19 ಲಕ್ಷ ಇದ್ದ ಶಾಲೆಗಳ ಸಂಖ್ಯೆ 2024-25ರಲ್ಲಿ 10.35ಕ್ಕೆ ಕುಸಿದಿದೆ ಎಂದು...

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...

ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳಕ್ಕೆ 3 ಲಕ್ಷ ರೂ. ದಂಡ ವಸೂಲಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣವೊಂದರ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಿವಾಸಿಗಳಿಂದ ದಂಡ ವಸೂಲಿ ಮಾಡಿದ ಮತ್ತು ಅಪರಾಧಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಕುಂಬಳಗೋಡು...

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...