ಪ್ರಧಾನಿ ಮೋದಿ ಅವರ ಆಪ್ತ ಉದ್ಯಮಿ ಅದಾನಿ ಅವರ ಅದಾನಿ ಗ್ರೂಪ್ ವಿರುದ್ಧ ಬಹಕೋಟಿ ವಂಚನೆಗೆ ಸಂಬಂಧಿಸಿ ಅಮೆರಿಕದಲ್ಲಿ ಮಾಡಲಾಗಿದ್ದ ದೋಷಾರೋಪಣೆಯ ಹಿಂದಿರುವ ಅಟಾರ್ನಿ ಬ್ರಿಯಾನ್ ಪೀಸ್ ಅವರು ಜನವರಿ 10ರಿಂದ ಜಾರಿಗೆ ಬರುವಂತೆ ತಮ್ಮ ಹುದ್ದೆಗೆ ರಾಜೀನಾಮೆಯನ್ನು ಘೋಷಿಸಿದ್ದಾರೆ ಎಂದು ವರದಿಯಾಗಿದೆ. ಅಮೆರಿಕ
2021ರಲ್ಲಿ ಅಮೆರಿಕದ ಅಧ್ಯಕ್ಷ ಜೋ ಬಿಡೆನ್ ಅವರು ಬ್ರಿಯಾನ್ ಪೀಸ್ ಅವರನ್ನು ಸರಕಾರಿ ವಕೀಲರಾಗಿ ನೇಮಕ ಮಾಡಿದ್ದರು. ಡೊನಾಲ್ಡ್ ಟ್ರಂಪ್ ಅಮೆರಿಕದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳುವ ಕೆಲವೇ ದಿನಗಳ ಮೊದಲು ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ನವೆಂಬರ್‌ನಲ್ಲಿ ಬ್ರಿಯಾನ್ ಪೀಸ್ ಅವರು ಗೌತಮ್ ಅದಾನಿ ಮತ್ತು ಇತರರ ವಿರುದ್ಧ ಸೌರ ಗುತ್ತಿಗೆ ಒಪ್ಪಂದಕ್ಕೆ ಸಂಬಂಧಿಸಿ ವಂಚನೆ ಮತ್ತು ಲಂಚದ ಆರೋಪವನ್ನು ಮಾಡಿದ್ದರು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಬ್ರಿಯಾನ್ ಪೀಸ್ ಅವರು ಗೌತಮ್ ಅದಾನಿ ವಿರುದ್ಧದ ದೋಷಾರೋಪಣೆ ಪ್ರಕರಣಗಳಲ್ಲಿ ಮಹತ್ತರ ಪಾತ್ರ ವಹಿಸಿದ್ದರು. ಅವರು ಆಗಸ್ಟ್‌ನಲ್ಲಿ ಜಾರ್ಜ್ ಸ್ಯಾಂಟೋಸ್ ಹಣವನ್ನು ದುರುಪಯೋಗಪಡಿಸಿಕೊಂಡ ಬಗ್ಗೆ ಮಾಡಿದ್ದೆ ಆರೋಪ ಸಾಬೀತಾಗಿತ್ತು. ಅಲ್ಲದೆ, ಲೈಂಗಿಕ ಪ್ರಕರಣಕ್ಕೆ ಸಂಬಂಧಿಸಿ 2022ರಲ್ಲಿ ಹಿಪ್ ಹಾಪ್ ತಾರೆ ಕೆಲ್ಲಿ ಅವರಿಗೆ 30 ವರ್ಷ ಜೈಲು ಶಿಕ್ಷೆ ವಿಧಿಸಲಾಗಿತ್ತು.
ಗೌತಮ್ ಅದಾನಿ, ಅವರ ಸೋದರಳಿಯ ಸಾಗರ್ ಅದಾನಿ ಮತ್ತು ಇತರ ಆರು ಮಂದಿಯನ್ನು ನ್ಯೂಯಾರ್ಕ್‌ನಲ್ಲಿರುವ ಈಸ್ಟರ್ನ್ ಡಿಸ್ಟ್ರಿಕ್ಟ್‌ನ ಯುನೈಟೆಡ್ ಸ್ಟೇಟ್ಸ್ ಅಟಾರ್ನಿ ಕಚೇರಿಯು ಕಳೆದ ತಿಂಗಳು ದೋಷಾರೋಪಣೆ ಮಾಡಿತ್ತು. ಭಾರತದಲ್ಲಿ ಸೋಲಾರ್ ಯೋಜನೆ ಒಪ್ಪಂದ ಪಡೆಯಲು ಅವರು 2020 ರ ನಡುವೆ ಭಾರತೀಯ ಸರ್ಕಾರಿ ಅಧಿಕಾರಿಗಳಿಗೆ 265 ಮಿಲಿಯನ್ ಡಾಲರ್ ಅಥವಾ ಸುಮಾರು 2,236 ಕೋಟಿ ರೂಪಾಯಿಗಳನ್ನು ಲಂಚವಾಗಿ ಪಾವತಿಸಲು ಒಪ್ಪಿಕೊಂಡಿದ್ದರು ಎಂದು ಅಮೆರಿಕದ ನ್ಯಾಯಾಲಯ ಹೇಳಿದೆ.
ಈ ಒಪ್ಪಂದಗಳ ಕಾರಣಕ್ಕೆ 20 ವರ್ಷಗಳಲ್ಲಿ ಅದಾನಿ $2 ಶತಕೋಟಿ ಅಥವಾ ಸುಮಾರು 16,880 ಕೋಟಿ ರೂ.ಗಳ ಲಾಭವನ್ನು ಮಾಡಲಿದ್ದಾರೆ ಎಂದು ನಿರೀಕ್ಷಿಸಲಾಗಿತ್ತು. ಆರೋಪಕ್ಕೆ ಸಂಬಂಧಿಸಿದಂತೆ ಯುನೈಟೆಡ್ ಸ್ಟೇಟ್ಸ್ ಸೆಕ್ಯುರಿಟೀಸ್ ಮತ್ತು ಎಕ್ಸ್ಚೇಂಜ್ ಕಮಿಷನ್ ಗೌತಮ್ ಅದಾನಿ ಮತ್ತು ಸಾಗರ್ ಅದಾನಿ ಅವರಿಗೆ ಸಮನ್ಸ್ ನೀಡಿದೆ. ಆದರೆ, ಅದಾನಿ ಗ್ರೂಪ್ ಆರೋಪಗಳನ್ನು ನಿರಾಕರಿಸಿದೆ, ಅವುಗಳನ್ನು “ಆಧಾರರಹಿತ” ಎಂದು ಕರೆದಿದೆ. ಅಮೆರಿಕ
ಇದನ್ನೂ ಓದಿ: ಸಂಸತ್‌ನ ಗೇಟ್‌ಗಳಲ್ಲಿ ಪ್ರತಿಭಟನೆ ನಿಷೇಧ – ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಆದೇಶ
ಸಂಸತ್‌ನ ಗೇಟ್‌ಗಳಲ್ಲಿ ಪ್ರತಿಭಟನೆ ನಿಷೇಧ – ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಆದೇಶ


