Homeಮುಖಪುಟಉಗ್ರ ರೂಪ ಪಡೆದ ಸಿಎಬಿ ವಿರೋಧಿ ಹೋರಾಟಗಳು: ಶಿಲ್ಲಾಂಗ್‌ ಭೇಟಿ ರದ್ದು ಮಾಡಿದ ಅಮಿತ್‌ ಶಾ

ಉಗ್ರ ರೂಪ ಪಡೆದ ಸಿಎಬಿ ವಿರೋಧಿ ಹೋರಾಟಗಳು: ಶಿಲ್ಲಾಂಗ್‌ ಭೇಟಿ ರದ್ದು ಮಾಡಿದ ಅಮಿತ್‌ ಶಾ

- Advertisement -
- Advertisement -

ವಿವಾದಾತ್ಮಕ ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ಪ್ರತಿಭಟನೆಗಳು ಈಶಾನ್ಯ ಭಾರತದಲ್ಲಿ ಉಗ್ರರೂಪ ತಳೆಯುತ್ತಿದ್ದಂತೆ, ಮುನ್ನೆಚ್ಚರಿಕೆಯಾಗಿ ಗೃಹ ಸಚಿವ ಅಮಿತ್ ಶಾ ಅವರು ಮೇಘಾಲಯದ ರಾಜಧಾನಿ ಶಿಲ್ಲಾಂಗ್‌ಗೆ ತಮ್ಮ ಭೇಟಿಯನ್ನು ರದ್ದುಗೊಳಿಸಿದ್ದಾರೆ. ಅವರು ಭಾನುವಾರ ಈಶಾನ್ಯ ಪೊಲೀಸ್ ಅಕಾಡೆಮಿಗೆ ಭೇಟಿ ನೀಡಬೇಕಿತ್ತು.

ಈ ನಡುವೆ ಪ್ರತಿಭಟನೆಗಳನ್ನು ಹತ್ತಿಕ್ಕುತ್ತಿರುವ ಸಿಎಪಿಎಫ್ ಅನ್ನು ಬೆಂಬಲಿಸಲು ಅಸ್ಸಾಂನಲ್ಲಿ 26 ಸೇನಾ ಕಾಲಮ್‌ಗಳನ್ನು ನಿಯೋಜಿಸಲಾಗಿದೆ.

ಇನ್ನು ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಎರೂ ಕಡೆ ಪಾಸ್‌ ಆಗಿ ರಾಷ್ಟ್ರಪತಿಗಳ ಅಂಕಿತ ಪಡೆದ ಪೌರತ್ವ ಕಾಯ್ದೆಯ ವಿರುದ್ಧ ಸುಪ್ರೀಂ ಕೋರ್ಟ್‌‌ನಲ್ಲಿ ಈವರೆಗೆ 11 ಅರ್ಜಿಗಳು ದಾಖಲಾಗಿವೆ. ಟಿಎಂಸಿ ಮೊಹುವಾ ಮೊಯಿತ್ರ, ಮಧ್ಯಪ್ರದೇಶದ ಮುಖ್ಯಮಂತ್ರಿ ಕಮಲನಾಥ್‌ ಸೇರಿದಂತೆ ಹಲವರು ಕಾಯ್ದೆ ವಿರೋಧಿಸಿ ಸುಪ್ರೀಂ ಮೆಟ್ಟಿಲೇರಿದ್ದಾರೆ.

ಈ ಹಿಂದೆ, ಅಸ್ಸಾಂ ಸಿಎಂ ಸರ್ಬಾನಂದ ಸೋನೊವಾಲ್ ಅವರು ರಾಜ್ಯದ ಮೂಲನಿವಾಸಿಗಳ ಹಕ್ಕುಗಳನ್ನು ರಕ್ಷಿಸಲು ಬದ್ಧರಾಗಿದ್ದಾರೆಂದು ಪ್ರತಿಪಾದಿಸಿದ್ದರು. ಮತ್ತು ಹಿಂಸಾತ್ಮಕವಾಗಿ ಪರಿಣಮಿಸುವ ಯಾವುದೇ ಆಂದೋಲನಕ್ಕೆ ಸೇರದಂತೆ ಮನವೊಲಿಸಿ ಎಂದು ವಿದ್ಯಾರ್ಥಿಗಳ ಪೋಷಕರನ್ನು ಒತ್ತಾಯಿಸಿದ್ದಾರೆ.

ಆದರೆ ಪ್ರತಿಭಟನೆಗಳು ದಿನೇ ದಿನೇ ರಂಗೇರುತ್ತಿದ್ದು ಜಪಾನ್‌ ಪ್ರಧಾನಿ ಶಿಂಜೋ ಅಬೆಯವರ ಭಾರತ ಭೇಟಿ ಕೂಡ ಮುಂದೂಡಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

ಕಾಂಗ್ರೆಸ್ ಪ್ರಣಾಳಿಕೆ ಬಗ್ಗೆ ವಿವರಿಸಲು ಸಮಯಾವಕಾಶ ಕೋರಿ ಪ್ರಧಾನಿಗೆ ಖರ್ಗೆ ಪತ್ರ

0
ಲೋಕಸಭೆ ಚುನಾವಣೆಯ ಕಾಂಗ್ರೆಸ್ ಪ್ರಣಾಳಿಕೆ 'ನ್ಯಾಯಪತ್ರ'ದ ಕುರಿತು ಪ್ರಧಾನಿ ಮೋದಿ ಸರಣಿ ಹೇಳಿಕೆಗಳನ್ನು ಕೊಡುತ್ತಿದ್ದು, ಈ ಹಿನ್ನೆಲೆ ಪ್ರಣಾಳಿಕೆಯ ಕುರಿತು ವಿವರಿಸಲು ಸಮಯ ಕೋರಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪತ್ರ ಬರೆದಿದ್ದಾರೆ. ಖರ್ಗೆ...