Homeಕರೋನಾ ತಲ್ಲಣಫ್ಯಾಕ್ಟ್‌ಚೆಕ್: ನಾನಾವತಿ ಆಸ್ಪತ್ರೆಯ ಸಿಬ್ಬಂದಿಗೆ ಅಮಿತಾಬ್ ಧನ್ಯವಾದ ಹೇಳಿದ್ದು ನಿಜವೆ?

ಫ್ಯಾಕ್ಟ್‌ಚೆಕ್: ನಾನಾವತಿ ಆಸ್ಪತ್ರೆಯ ಸಿಬ್ಬಂದಿಗೆ ಅಮಿತಾಬ್ ಧನ್ಯವಾದ ಹೇಳಿದ್ದು ನಿಜವೆ?

ಈ ವಿಡಿಯೋವನ್ನು ಹಲವಾರು ಸುದ್ದಿ ಮಾಧ್ಯಮಗಳು ಸೇರಿದಂತೆ ಸಾಮಾಜಿಕ ಜಾಲತಾಣದಲದಾದ್ಯಂತ ಹಂಚಲ್ಪಡುತ್ತಿದ್ದು, ಕೊರೊನಾ ಪಾಸಿಟಿವ್ ಆದ ನಂತರ ಇದನ್ನು ಅಮಿತಾಬ್ ಮಾಡಿದ್ದಾರೆ ಎಂದು ಹೇಳುತ್ತಿದ್ದಾರೆ.

- Advertisement -
- Advertisement -

ನಟ ಅಮಿತಾಬ್ ಬಚ್ಚನ್ ಅವರು ನಾನಾವತಿ ಆಸ್ಪತ್ರೆಯ ವೈದ್ಯರು, ದಾದಿಯರು ಮತ್ತು ಸಿಬ್ಬಂದಿ ವರ್ಗದವರಿಗೆ ಧನ್ಯವಾದ ಹೇಳುವ ವಿಡಿಯೋವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು, ಇದು ಅಮಿತಾಬ್ ಅವರಿಗೆ ಕೊರೊನಾ ದೃಡಪಟ್ಟ ನಂತರದ ವಿಡಿಯೋ ಎಂದು ಹೇಳಲಾಗಿದೆ.

ಆದರೆ ನಿಜಕ್ಕೂ ಈ ವಿಡಿಯೊದ ವೀಡಿಯೊ ಏಪ್ರಿಲ್ ತಿಂಗಳಿನಲ್ಲಿ ವೈರಸ್ ವಿರುದ್ಧ ಹೋರಾಡುತ್ತಿರುವ ಹಾಗೂ ಜನರಿಗೆ ಸಹಾಯ ಮಾಡಿದ್ದಕ್ಕಾಗಿ ವೈದ್ಯರಿಗೆ ಧನ್ಯವಾದ ಹೇಳುತ್ತಿರುವ ವಿಡಿಯೊವಾಗಿದೆ. ಇದನ್ನು ಲಾಕ್‌ಡೌನ್ ಸಮಯದಲ್ಲಿ ಅಮಿತಾನ್ ಬಚ್ಚನ್ ಅವರಿಂದ ರೆಕಾರ್ಡ್ ಮಾಡಲಾಗಿದೆ.

ವೀಡಿಯೊದಲ್ಲಿ ನಟ ವೈರಸ್ ವಿರುದ್ಧ ಹೋರಾಡಿದ ವೈದ್ಯರಿಗೆ ಧನ್ಯವಾದಗಳು ಹೇಳಿರುವುದನ್ನು ಕಾಣಬಹುದು. “ಈ ಸಮಯದಲ್ಲಿ ಅವರು ಮಾಡುತ್ತಿರುವ ಅದ್ಭುತ ಕಾರ್ಯಗಳಿಗಾಗಿ ನಾನಾವತಿ ಆಸ್ಪತ್ರೆಯ ವೈದ್ಯರು, ದಾದಿಯರು ಮತ್ತು ಸಿಬ್ಬಂದಿಗೆ ನಾನು ಧನ್ಯವಾದ ಹೇಳುತ್ತೇನೆ. ಸಾಂಕ್ರಾಮಿಕ ಸಮಯದಲ್ಲಿ ಆರೋಗ್ಯ ಕಾರ್ಯಕರ್ತರು ದೇವರ ಸಾಕಾರವಾಗಿದ್ದಾರೆ” ಎಂದು ಅವರು ಹೇಳಿದ್ದಾರೆ.

ವೀಡಿಯೊ ಹಂಚಿಕೊಂಡವರಲ್ಲಿ ನ್ಯೂಸ್ ಔಟ್ಲುಕ್ ಮತ್ತು ಆಜ್‌ತಕ್ ಸೇರಿದಂತೆ ಹಲವಾರು ಸುದ್ದಿ ವೆಬ್‌ಸೈಟ್‌ಗಳಿದ್ದು. ಈ ವಿಡಿಯೋವನ್ನು ಟ್ವಿಟರ್ ಮತ್ತು ಫೇಸ್‌ಬುಕ್‌ನಲ್ಲಿ ಬೃಹತ್ ಪ್ರಮಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ.


ಇದನ್ನೂ ಓದಿ: ಛತ್ರಪತಿ ಶಿವಾಜಿಯ ಹಾಸ್ಯ: ಹಾಸ್ಯನಟಿ ಜೋಶುವಾ ಅವರಿಗೆ ಅತ್ಯಾಚಾರದ ಬೆದರಿಕೆ


 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

2023ರಲ್ಲಿ ತೀವ್ರ ಹಸಿವಿನಿಂದ ತತ್ತರಿಸಿದ 282 ಮಿಲಿಯನ್ ಜನರು: ಆಹಾರದ ಅಭಾವಕ್ಕೆ ವಿಶ್ವಸಂಸ್ಥೆ ಉಲ್ಲೇಖಿಸಿದ...

0
ಕಳೆದ ವರ್ಷ ಪ್ರಪಂಚದಾದ್ಯಂತ ಆಹಾರ ಅಭದ್ರತೆ ಸ್ಥಿತಿ ಭಾರೀ ಹದಗೆಟ್ಟಿದೆ, 2023ರಲ್ಲಿ ಸುಮಾರು 282 ಮಿಲಿಯನ್ ಜನರು ತೀವ್ರ ಹಸಿವಿನಿಂದ ಬಳಲಿದ್ದಾರೆ, ಇದರಲ್ಲಿ ವಿಶೇಷವಾಗಿ ಯುದ್ಧಪೀಡಿತ ಗಾಝಾ ಮತ್ತು ಸುಡಾನ್‌ನಲ್ಲಿ ಹೆಚ್ಚಿನ ಜನರು...