Homeಕರ್ನಾಟಕರವಿಕೃಷ್ಣಾ ರೆಡ್ಡಿಯವರಿಗೆ ಅಪಘಾತ: "ಚಲಿಸು ಕರ್ನಾಟಕ" ಸೈಕಲ್ ಯಾತ್ರೆ ತಾತ್ಕಾಲಿಕ ಸ್ಥಗಿತ

ರವಿಕೃಷ್ಣಾ ರೆಡ್ಡಿಯವರಿಗೆ ಅಪಘಾತ: “ಚಲಿಸು ಕರ್ನಾಟಕ” ಸೈಕಲ್ ಯಾತ್ರೆ ತಾತ್ಕಾಲಿಕ ಸ್ಥಗಿತ

ಕೊರೊನಾದಿಂದ ತತ್ತರಿಸಿರುವ ರಾಜ್ಯದ ಜನತೆಗೆ ಆಶಾವಾದ, ಚೈತನ್ಯ ತುಂಬಲು ಮತ್ತು ಜನಪರ ರಾಜಕಾರಣದ ಅವಶ್ಯಕತೆಯ ಬಗ್ಗೆ ತಿಳಿಸಲು, ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷವು (KRS) ರವಿಕೃಷ್ಣಾ ರೆಡ್ಡಿಯವರ ನೇತೃತ್ವದಲ್ಲಿ “ಚಲಿಸು ಕರ್ನಾಟಕ” ಎಂಬ 2700 ಕಿ.ಮೀ. ಸೈಕಲ್ ಯಾತ್ರೆಯನ್ನು ಹಮ್ಮಿಕೊಳ್ಳಲಾಗಿತ್ತು.

- Advertisement -
- Advertisement -

“ಚಲಿಸು ಕರ್ನಾಟಕ” ಎಂಬ 2700 ಕಿ.ಮೀ. ವಿಶೇಷ ಸೈಕಲ್ ಯಾತ್ರೆಯನ್ನು ಹಮ್ಮಿಕೊಂಡಿದ್ದ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಮುಖಂಡರಾದ ರವಿಕೃಷ್ಣಾ ರೆಡ್ಡಿಯವರಿಗೆ ಅಪಘಾತ ಉಂಟಾಗಿದ್ದು, ಸಧ್ಯಕ್ಕೆ ಈ ಯಾತ್ರೆಯನ್ನು ಸ್ಥಗಿತಗೊಳಿಸಲಾಗಿದೆ.

ಕೊರೊನಾದಿಂದ ತತ್ತರಿಸಿರುವ ರಾಜ್ಯದ ಜನತೆಗೆ ಆಶಾವಾದ, ಚೈತನ್ಯ ತುಂಬಲು ಮತ್ತು ಜನಪರ ರಾಜಕಾರಣದ ಅವಶ್ಯಕತೆಯ ಬಗ್ಗೆ ತಿಳಿಸಲು, ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷವು (KRS) ರವಿಕೃಷ್ಣಾ ರೆಡ್ಡಿಯವರ ನೇತೃತ್ವದಲ್ಲಿ ‘ಉಜ್ವಲ ಭವಿಷ್ಯದೆಡೆಗೆ, ಸುಭದ್ರ ಕರ್ನಾಟಕದೆಡೆಗೆ’ ಎಂಬ ಈ ಮಹತ್ವದ, 2700 ಕಿ.ಮೀ. ಸೈಕಲ್ ಯಾತ್ರೆಯನ್ನು ಹಮ್ಮಿಕೊಳ್ಳಲಾಗಿತ್ತು.

ಕರ್ನಾಟಕದಾದ್ಯಂತ 3 ಹಂತಗಳಲ್ಲಿ ಈ ಯಾತ್ರೆ ಹಮ್ಮಿಕೊಳ್ಳಲಾಗಿದ್ದು, ಸೆಪ್ಟೆಂಬರ್ 14 ರಿಂದು ಕೋಲಾರದಿಂದ ಮೊದಲ ಹಂತದ ಯಾತ್ರೆಗೆ ಚಾಲನೆ ನೀಡಲಾಗಿತ್ತು.

ಇದನ್ನೂ ಓದಿ: ಪೊಲೀಸರು ರವಿಕೃಷ್ಣಾರೆಡ್ಡಿ ಮೇಲೆ ಗೂಂಡಾಗಿರಿ ನಡೆಸಿದ್ದು, ತಮ್ಮ ಸೆಕ್ಸ್ ಹಗರಣ ಮುಚ್ಚಿಡುವುದಕ್ಕಾ!?

ಈ ಯಾತ್ರೆಯಲ್ಲಿದ್ದ ರವಿಕೃಷ್ಣಾ ರೆಡ್ಡಿಯವರಿಗೆ ಅಪಘಾತವಾಗಿದ್ದು, ಸಧ್ಯಕ್ಕೆ ಈ ಯಾತ್ರೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಸ್ವತಃ ಅವರೇ ಟ್ವೀಟ್ ಮಾಡಿದ್ದಾರೆ.

“ಇತ್ತೀಚಿನ ತಿಂಗಳುಗಳಲ್ಲಿ ಜನಜೀವನವು ಏಳುಬೀಳುಗಳೊಂದಿಗೆ ನಡೆಯುತ್ತಿದೆ. ಕೆಲವರದು ಸ್ತಬ್ಧವಾಗಿದ್ದರೆ, ಬಹುತೇಕರದು ಮುಗ್ಗರಿಸಿದೆ. ಇದನ್ನು ಸರಿಪಡಿಸುವಲ್ಲಿ ಮತ್ತು ಜನರ ಬದುಕನ್ನು ಮೇಲೆತ್ತುವಲ್ಲಿ ಸರ್ಕಾರಗಳು ಮತ್ತು ಅಧಿಕಾರ-ಕೇಂದ್ರಿತ ರಾಜಕಾರಣಿಗಳು ಹಾಗೂ ಜನಪ್ರತಿನಿಧಿಗಳು ದಾರುಣವಾಗಿ ವಿಫಲರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಸೈಕಲ್ ಯಾತ್ರೆಯನ್ನು ಹಮ್ಮಿಕೊಂಡಿದೆ. ನಾನೂ ಸೇರಿದಂತೆ ನಮ್ಮ ಪಕ್ಷದ ಹಲವು ಪದಾಧಿಕಾರಿಗಳು, ಸದಸ್ಯರು ಮತ್ತು ಬೆಂಬಲಿಗರು ರಾಜ್ಯದ ಎಲ್ಲಾ 30 ಜಿಲ್ಲೆಗಳಲ್ಲಿ ‘ಚಲಿಸು ಕರ್ನಾಟಕ’ ಯಾತ್ರೆಯ ಭಾಗವಾಗಿ ಮುಂದಿನ ಮೂರು ತಿಂಗಳ ಕಾಲ ಸಂಚರಿಸಲಿದ್ದೇವೆ” ಎಂದು ರವಿಕೃಷ್ಣಾ ರೆಡ್ಡಿ ತಿಳಿಸಿದ್ದರು.


ಇದನ್ನೂ ಓದಿ: KRS ಪಕ್ಷದಿಂದ ‘ಚಲಿಸು ಕರ್ನಾಟಕ’ ಅಭಿಯಾನ: 2700 ಕಿ.ಮೀ. ವಿಶೇಷ ಸೈಕಲ್ ಯಾತ್ರೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

2023ರಲ್ಲಿ ತೀವ್ರ ಹಸಿವಿನಿಂದ ತತ್ತರಿಸಿದ 282 ಮಿಲಿಯನ್ ಜನರು: ಆಹಾರದ ಅಭಾವಕ್ಕೆ ವಿಶ್ವಸಂಸ್ಥೆ ಉಲ್ಲೇಖಿಸಿದ...

0
ಕಳೆದ ವರ್ಷ ಪ್ರಪಂಚದಾದ್ಯಂತ ಆಹಾರ ಅಭದ್ರತೆ ಸ್ಥಿತಿ ಭಾರೀ ಹದಗೆಟ್ಟಿದೆ, 2023ರಲ್ಲಿ ಸುಮಾರು 282 ಮಿಲಿಯನ್ ಜನರು ತೀವ್ರ ಹಸಿವಿನಿಂದ ಬಳಲಿದ್ದಾರೆ, ಇದರಲ್ಲಿ ವಿಶೇಷವಾಗಿ ಯುದ್ಧಪೀಡಿತ ಗಾಝಾ ಮತ್ತು ಸುಡಾನ್‌ನಲ್ಲಿ ಹೆಚ್ಚಿನ ಜನರು...