Homeಕರ್ನಾಟಕತಮ್ಮ ರಾಜಿನಾಮೆ ಅಂಗೀಕಾರವಾಗುವುದು ಆನಂದ್ ಸಿಂಗ್ ಮತ್ತು ರಮೇಶ್ ಜಾರಕಿಹೊಳಿಯವರಿಗೆ ಬೇಕಿಲ್ಲವೇ?

ತಮ್ಮ ರಾಜಿನಾಮೆ ಅಂಗೀಕಾರವಾಗುವುದು ಆನಂದ್ ಸಿಂಗ್ ಮತ್ತು ರಮೇಶ್ ಜಾರಕಿಹೊಳಿಯವರಿಗೆ ಬೇಕಿಲ್ಲವೇ?

ಶಾಸಕರಾದ ಭೀಮಾನಾಯ್ಕ್ ಮತ್ತು ಅಮರೇಗೌಡ ಬಯ್ಯಾಪುರರವರು ನಮ್ಮ ಹೆಸರನ್ನು ನಿಮ್ಮ ಅತೃಪ್ತ ಶಾಸಕರ ಪಟ್ಟಿಯಿಂದ ಕೈಬಿಡಿ ಎಂದು ಮಾಧ್ಯಮಗಳಿಗೆ ಬೇಸರದಿಂದ ಪ್ರತಿಕ್ರಿಯಿಸಿದ್ದಾರೆ.

- Advertisement -
- Advertisement -

| ನಾನುಗೌರಿ ಡೆಸ್ಕ್ |

ಹೌದು ಇಂದು ಬೆಳಿಗ್ಗೆಯಿಂದಲೇ ಟಿವಿ ವಾಹಿನಿಗಳಲ್ಲಿ ಎರಡು ವಿಕೆಟ್ ಪತನ ಎಂಬ ಜೋರು ಸುದ್ದಿಗಳು ಅಬ್ಬರದ ರೀತಿಯಲ್ಲಿ ಕೇಳಿಬರುತ್ತಿದ್ದರೂ ಸಹ ರಮೇಶ್ ಜಾರಕಿಹೊಳಿ, ಆನಂದ್ ಸಿಂಗ್ ಕೊಟ್ಟಿರುವ ರಾಜೀನಾಮೆ ಅಸಿಂಧುವಾಗಿವೆ. ಏಕೆಂದರೆ ಅವರಿಬ್ಬರೂ ರಾಜಿನಾಮೆ ಕೊಟ್ಟ ರೀತಿಯೇ ಅದು ಅಂಗೀಕಾರವಾಗಬಾರದು ಎಂಬ ರೀತಿಯಲ್ಲಿದೆ.

ನೇರವಾಗಿ ಹೇಳುವುದಾದರೆ ಶಾಸಕ ಆನಂದ್ ಸಿಂಗ್ ತಮ್ಮ ರಾಜಿನಾಮೆಯನ್ನು ಸ್ಪೀಕರ್‍ರವರಿಗೆ ಕೊಡುವುದು ಬಿಟ್ಟು ರಾಜ್ಯಪಾಲರಿಗೆ ನೀಡಿದ್ದಾರೆ. ಇನ್ನು ರಮೇಶ್ ಜಾರಕಿಹೊಳಿ ನೇರವಾಗಿ ಸ್ಪೀಕರ್‍ಗೆ ರಾಜಿನಾಮೆ ಕೊಡುವುದು ಬಿಟ್ಟು ತಮ್ಮ ರಾಜಿನಾಮೆ ಪತ್ರವನ್ನು ಸ್ಪೀಕರ್ ಕಛೇರಿಕೆ ಫ್ಯಾಕ್ಸ್ ಮಾಡಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಸ್ಪೀಕರ್ ರಮೇಶ್ ಕುಮಾರ್ ರವರು ಯಾರು ರಾಜಿನಾಮೆ ಕೊಟ್ಟರೂ ಸ್ವೀಕರಿಸಿ ಅಂಗೀಕರಿಸುತ್ತೇನೆ. ಆದರೆ ಯಾರೊಬ್ಬರೂ ನನ್ನನ್ನು ಸಂಪರ್ಕಿಸಿಲ್ಲ ಎಂದು ಖಡಕ್ ಆಗಿ ಹೇಳಿದ್ದಾರೆ. ಅಂದರೆ ಇಂದಿನ ರಾಜಿನಾಮೆ ಪ್ರಹಸನ ಕೂಡ ರಾಜ್ಯ ಸರ್ಕಾರದ ಮೇಲೆ ಒತ್ತಡ ತರುವ ತಂತ್ರವಲ್ಲದೇ ಬೇರೆನಲ್ಲ. ಆದರೆ ಇದರ ಕುರಿತು ಚಕಾರವೆತ್ತದೇ ಎಲ್ಲಾ ಮಾಧ್ಯಮಗಳು ಸಹ ಕೇವಲ ವಿಕೆಟ್ ಪತನ ಎಂಬುದರ ಹಿಂದೆ ಬಿದ್ದಿರುವುದು ದುರಂತ.

ಇದಕ್ಕೆ ಒಂದು ಉದಾಹರಣೆ ಕೊಡುವುದಾದರೆ ಹಾಲಿ ಸಂಸದ ಉಮೇಶ್ ಜಾಧವ್‍ರವರು ಚಿಂಚೊಳ್ಳಿ ಶಾಸಕರಾಗಿದ್ದ ವೇಳೆ ರಾಜಿನಾಮೆ ನೀಡಲು ಬಯಸಿದ್ದರು. ಆದರೆ ಸ್ಪೀಕರ್ ರಮೇಶ್ ಕುಮಾರ್‍ರವರು ಬೆಂಗಳೂರಿನಲ್ಲಿರಲಿಲ್ಲ. ಆಗ ಅನಿವಾರ್ಯವಾಗಿ ಉಮೇಶ್ ಜಾಧವ್‍ರವರು ಶ್ರೀನಿವಾಸಪುರ ತಾಲ್ಲೂಕಿನ ಅಡ್ಡಗಲ್ ಗ್ರಾಮಕ್ಕೆ ತೆರಳಿ ನೇರವಾಗಿ ಸ್ಪೀಕರ್‍ರವರಿಗೆ ರಾಜಿನಾಮೆ ನೀಡಿದ್ದರು ಏಕೆಂದರೆ ಅವರಿಗೆ ಬೇಗ ರಾಜಿನಾಮೆ ಅಂಗೀಕಾರವಾಗಬೇಕಿತ್ತು. ಏಕೆಂದರೆ ಅವರ ರಾಜಿನಾಮೆ ಅಂಗೀಕಾರವಾದರೆ ಮಾತ್ರ ಅವರು ಬಿಜೆಪಿಯಿಂದ ಸಂಸತ್ ಸ್ಥಾನಕ್ಕೆ ಸ್ಪರ್ಧಿಸಲು ಸಾಧ್ಯವಾಗುತ್ತಿತ್ತು. ಹಾಗೆ ಆಯಿತು ಕೂಡ.

ಆದರೆ ಇಂದು ಇದರ ಕುರಿತು ಮುಖ್ಯವಾಹಿನಿ ಮಾಧ್ಯಮಗಳು ಮಾತಾಡದೇ ಕೇವಲ ರಾಜಿನಾಮೆ ಹಿಂದೆ ಬಿದ್ದಿವೆ. ಈ ಕುರಿತು ನಾನುಗೌರಿ.ಕಾಂ ವತಿಯಿಂದ ಸಾಮಾಜಿಕ ಕಾರ್ಯಕರ್ತ ಅನಿಲ್ ಕುಮಾರ್ ಚಿಕ್ಕದಾಳವಟ್ಟರವರನ್ನು ಮಾತನಾಡಿಸಲಾಯಿತು. ಅವರು “ಈ ಮಾಧ್ಯಮಗಳು ಅವರು ರಾಜಿನಾಮೆ ಕೊಟ್ಟಿದ್ದಾರೆ, ಇವರು ರಾಜಿನಾಮೆ ಕೊಟ್ಟಿದ್ದಾರೆ, ನೀವು ಯಾವಾಗ ಕೊಡುತ್ತೀರಿ ಎಂದು ಸಿಕ್ಕ ಸಿಕ್ಕ ಶಾಸಕರನ್ನೆಲ್ಲಾ ಕೇಳುತ್ತಾ ಹೋಗುತ್ತಿರುವುದು ನೋಡಿದರೆ ಈ ಸರ್ಕಾರ ಬೀಳಿಸಲು ಮಾಧ್ಯಮದವರೇ ಸುಪಾರಿ ಪಡೆದಂತಿದೆ” ಎಂದು ಆರೋಪಿಸಿದ್ದಾರೆ.

ಕಾಗವಾಡ ಶಾಸಕ ಶ್ರೀಮಂತ ಪಾಟೀಲ ಸ್ಪೀಕರ್ ಹತ್ತಿರ ಸಮಯ ಕೇಳಿದ್ದಾರೆ ಎಂದು ವರದಿಯಾಗುತ್ತಿದೆ. ಈ ಕುರಿತು ಹೆಚ್ಚಿನ ಮಾಹಿತಿಗಾಗಿ ನಾನುಗೌರಿ.ಕಾಂ ನಿಂದ ಸ್ಪೀಕರ್ ಕಛೇರಿಯನ್ನು ಸಂಪರ್ಕಿಸಲಾಯಿತಾದರೂ ಸಂಪರ್ಕ ಲಭ್ಯವಾಗಿಲ್ಲ.

ಇನ್ನು ಇದೇ ಜುಲೈ 12ಕ್ಕೆ ವಿಧಾನಸಭಾ ಅಧಿವೇಶನ ಆರಂಭವಾಗುತ್ತಿದೆ. ಅಲ್ಲಿ ಈ ವಿಚಾರಗಳು ದೊಡ್ಡ ಮಟ್ಟದಲ್ಲಿ ಚರ್ಚೆಗೆ ಬರುವ ಸಂಭವವಿದೆ. ಇನ್ನು

ಶಾಸಕರಾದ ಭೀಮಾನಾಯ್ಕ್ ಮತ್ತು ಅಮರೇಗೌಡ ಬಯ್ಯಾಪುರರವರು ನಮ್ಮ ಹೆಸರನ್ನು ನಿಮ್ಮ ಅತೃಪ್ತ ಶಾಸಕರ ಪಟ್ಟಿಯಿಂದ ಕೈಬಿಡಿ ಎಂದು ಮಾಧ್ಯಮಗಳಿಗೆ ಬೇಸರದಿಂದ ಪ್ರತಿಕ್ರಿಯಿಸಿದ್ದಾರೆ. ಮಾಧ್ಯಮಗಳು ನೀವು ಯಾವಾಗ ರಾಜಿನಾಮೆ ಕೊಡುತ್ತೀರಿ ಎಂದು ಕೇಳಿದ ಪ್ರಶ್ನೆಗೆ ಈ ರೀತಿಯ ಅಸಮಾಧಾನದ ಹೇಳಿಕೆ ಕೊಟ್ಟಿದ್ದಾರೆ. ಇನ್ನು ಮಹೇಶ್ ಕುಮಟಳ್ಳಿ ರವರಿಗೆ ಸತೀಶ್ ಜಾರಕಿಹೊಳಿಯವರು ಮಾಧ್ಯಮದ ಎದುರೇ ಫೋನ್ ಮಾಡಿ ನೀವು ಹೋಗುತ್ತೀರಾ ಎಂದು ಕೇಳಿದರು. ಆಗ ಮಹೇಶ್ ಕುಮಟಳ್ಳಿ ಇಲ್ಲ ಎಂದಿದ್ದಾರೆ.

ಎಚ್.ವಿಶ್ವನಾಥ್ ನವರು ಕಾಳಿದೇವಿಯ ದರ್ಶನಕ್ಕೆ ದೆಹಲಿಗೆ ಪ್ರಯಾಣ ಬೆಳೆಸಿದ್ದರು. ಆದರೆ ಮಾಧ್ಯಮಗಳು ಏರ್ ಪೋರ್ಟ್ ನಲ್ಲಿಯೂ ಬೆನ್ನು ಬಿದ್ದಾಗ, ಅತೃಪ್ತ ಶಾಸಕರ ನಾಯಕ ನಾನಲ್ಲ ಮತ್ತು ನಾನು ಯಾವುದೇ ಕಾರಣಕ್ಕೂ ರಾಜಿನಾಮೆ ಕೊಡುವುದಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರತ್ಯೇಕ ರಾಜ್ಯದ ಬೇಡಿಕೆ: ನಾಗಾಲ್ಯಾಂಡ್‌ನ 6 ಜಿಲ್ಲೆಗಳಲ್ಲಿ ಶೂನ್ಯ ಮತದಾನ

0
ನಾಗಾಲ್ಯಾಂಡ್‌ನ ಏಕೈಕ ಲೋಕಸಭಾ ಸ್ಥಾನಕ್ಕೆ ಶುಕ್ರವಾರ ಒಂದೇ ಹಂತದಲ್ಲಿ ಮತದಾನ ನಡೆದಿದೆ. ಆದರೆ, ಈಶಾನ್ಯ ರಾಜ್ಯದ ಆರು ಜಿಲ್ಲೆಗಳಲ್ಲಿ ಪ್ರತ್ಯೇಕ ರಾಜ್ಯದ ಬೇಡಿಕೆ ಮುಂದಿಟ್ಟುಕೊಂಡು ಜನರು ಮತದಾನದಿಂದ ದೂರ ಉಳಿದಿದ್ದಾರೆ ಎಂದು 'ಇಂಡಿಯಾ...