ಭೂಗತ ಪಾತಕಿ ದಾವುದ್ ಇಬ್ರಾಹಿಂ ಗುಂಪಿನ ಡಿ-ಕಂಪನಿಯೊಂದಿಗೆ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರಿಗೆ ಸಂಪರ್ಕ ಇದೆ ಎಂದು ಸುದ್ದಿ ಮಾಡಿದ್ದ ಸುದ್ದಿ ಸಂಸ್ಥೆ ಎಎನ್‌ಐ ಮತ್ತು ಈ ಬಗ್ಗೆ ಆರೋಪ ಮಾಡಿದ್ದ ಅವರ ಮನೆಯ ಹೊರಗೆ ಗುಂಡು ಹಾರಿಸಿದ ಇಬ್ಬರು ಆರೋಪಿಗಳ ವಕೀಲರಿಂದ ಕ್ಷಮೆಯಾಚನೆಗೆ ನಟ ಆಗ್ರಹಿಸಿದ್ದಾರೆ ಎಂದು ವರದಿಯಾಗಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ನಟ ಸಲ್ಮಾನ್ ಖಾನ್ ಅವರು ಭಯೋತ್ಪಾದನೆ ಮತ್ತು ಪಾತಕಿಗಳ ಗುಂಪಾದ ಡಿ-ಕಂಪೆನಿಯೊಂದಿಗೆ ”ಸಂಬಂಧ” ಹೊಂದಿದ್ದಾರೆ ಎಂದು ಪ್ರಧಾನಿ ಮೋದಿ ಅವರ ಸರ್ಕಾರದ ಪರವಾಗಿ ಪ್ರೊಪಗಾಂಡ ಸುದ್ದಿ ಮಾಡುವ ಸುದ್ದಿ ಸಂಸ್ಥೆ ಎಎನ್‌ಐ ಪ್ರಕಟಿಸಿದ ವರದಿಯಲ್ಲಿ ಉಲ್ಲೇಖಿಸಲಾಗಿತ್ತು.
ಇದನ್ನೂಓದಿ: ಶ್ರೀಲಂಕಾ ಅಧ್ಯಕ್ಷೀಯ ಚುನಾವಣೆ : ಮಾರ್ಕ್ಸ್‌ವಾದಿ ನಾಯಕ ದಿಸ್ಸನಾಯಕೆಗೆ ಆರಂಭಿಕ ಮುನ್ನಡೆ
ಸೆಪ್ಟೆಂಬರ್ 4 ರಂದು ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟವಾದ ಮತ್ತು ಇತರ ಸುದ್ದಿ ಪೋರ್ಟಲ್‌ಗಳು ಮತ್ತು ಚಾನೆಲ್‌ಗಳೊಂದಿಗೆ ಹಂಚಿಕೊಂಡ ವರದಿಯ ವಿರುದ್ಧ ಸಲ್ಮಾನ್ ಖಾನ್ ಅವರು ANI ಸಂಸ್ಥೆಗೆ ಲೀಗಲ್ ನೋಟಿಸ್ ಕಳುಹಿಸಿದ್ದಾರೆ.
ಸಲ್ಮಾನ್ ಖಾನ್ ಅವರ ಮುಂಬೈನ ಅಪಾರ್ಟ್‌ಮೆಂಟ್ ಹೊರಗೆ ಗುಂಡಿನ ದಾಳಿ ನಡೆಸಿದ್ದ ಆರೋಪಿಗಳಾದ ವಿಕ್ಕಿ ಗುಪ್ತಾ ಮತ್ತು ಸಾಗರ್ ಪಾಲ್ ಅವರ ವಕೀಲ ಅಮಿತ್ ಮಿಶ್ರಾ ಅವರೊಂದಿಗೆ ಎಎನ್‌ಐ ಕಿರು ಸಂದರ್ಶನ ನಡೆಸಿತ್ತು. ಈ ಸಂದರ್ಶನದಲ್ಲಿ ಅವರು ಅಕ್ಷೇಪಾರ್ಹ ಹೇಳಿಕೆ ನೀಡಿದ್ದರು. ಇದರ ಬಗ್ಗೆ ನಟ ಆಕ್ಷೇಪ ಎತ್ತಿದ್ದು ಕಾನೂನು ನೋಟಿಸ್ ನೀಡಿದ್ದಾರೆ.
ಆರೋಪಿಗಳಾದ ಗುಪ್ತಾ ಮತ್ತು ಪಾಲ್ ಅವರಿಗೆ ದಾವುದ್ ಇಬ್ರಾಹಿಂ ಗುಂಪಾದ ಡಿ-ಕಂಪೆನಿ ಸದಸ್ಯರು ಬೆದರಿಕೆ ಹಾಕಿದ್ದು, ಅದಕ್ಕಾಗಿ ಅವರು ಮುಂಬೈನ ಬಾಂದ್ರಾದಲ್ಲಿರುವ ಸಲ್ಮಾನ್ ಖಾನ್ ಅವರ ಗ್ಯಾಲಕ್ಸಿ ಅಪಾರ್ಟ್‌ಮೆಂಟ್‌ನ ಹೊರಗೆ ಗುಂಡಿನ ದಾಳಿ ನಡೆಸಿದ್ದರು. ಯಾಕೆಂದರೆ ಸಲ್ಮಾನ್ ಖಾನ್ ಡಿ ಕಂಪೆನಿಯೊಂದಿಗೆ ಸಂಬಂಧ ಹೊಂದಿದ್ದು, ಅವರು ತನ್ನ ಕಕ್ಷಿದಾರರನ್ನು ಕೊಲ್ಲಲು ಬಯಸಿದ್ದರು ಎಂದು ವಕೀಲ ಹೇಳಿದ್ದರು.
ಇದನ್ನೂಓದಿ: ಸುಪ್ರಿಂಕೋರ್ಟ್ ತರಾಟೆ ನಂತರ ಕೇಂದ್ರದಿಂದ 8 ಹೊಸ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ನೇಮಕ
ANI ಮತ್ತು ವಕೀಲ ಮಿಶ್ರಾ ಮುಂದಿನ 48 ಗಂಟೆಗಳ ಒಳಗೆ ಪ್ರಮುಖ ಪತ್ರಿಕೆಗಳಲ್ಲಿ “ಬೇಷರತ್ ಕ್ಷಮೆಯಾಚನೆ”ಯನ್ನು ಪ್ರಕಟಿಸಬೇಕೆಂದು ಸಲ್ಮಾನ್ ಖಾನ್ ಒತ್ತಾಯಿಸಿದ್ದು, ಸುದ್ದಿ ಸಂಸ್ಥೆ ತನ್ನ ವರದಿಯನ್ನು ಹಿಂತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಇಬ್ಬರಿಗೆ ಕಳುಹಿಸಿದ ಲೀಗಲ್ ನೋಟಿಸ್‌ನಲ್ಲಿ ಸಲ್ಮಾನ್ ಖಾನ್ ಅವರು ವಕೀಲ ಮಿಶ್ರಾ ಮಾಡಿದ ಆರೋಪಗಳನ್ನು ನಿರಾಕರಿಸಿದ್ದಾರೆ. ಅವರ ಹೇಳಿಕೆಗಳನ್ನು ಸಲ್ಮಾನ್ ಖಾನ್ ಅವರು “ಸುಳ್ಳು, ಆಧಾರರಹಿತ, ದುರುದ್ದೇಶಪೂರಿತ, ತೀವ್ರವಾಗಿ ಮಾನಹಾನಿಕರ, ತಪ್ಪುದಾರಿಗೆಳೆಯುವ” ಎಂದು ಕರೆದಿದ್ದಾರೆ.
“ನನ್ನ ಇಮೇಜ್ ಮತ್ತು ಸದ್ಭಾವನೆಯನ್ನು ಕೆಡಿಸುವ ಉದ್ದೇಶದಿಂದ ಈ ಆರೋಪ ಮಾಡಲಾಗಿದೆ. ಮಿಶ್ರಾ ಮತ್ತು ಎಎನ್‌ಐ ಇಬ್ಬರೂ ನನ್ನ ಪ್ರತಿಷ್ಠೆಗೆ ಕುಂದುಂಟುಮಾಡುವ ಮೂಲಕ ವಿವಾದವನ್ನು ಹುಟ್ಟುಹಾಕಲು ಮತ್ತು ಸಾರ್ವಜನಿಕ ಗಮನವನ್ನು ಸೆಳೆಯಲು ಪ್ರಯತ್ನಿಸುತ್ತಿದ್ದಾರೆ. ಈ ಅಪರಾಧವು ಮಾನಹಾನಿಯಾಗುತ್ತದೆ” ನಟ ಸಲ್ಮಾನ್ ಖಾನ್ ನೀಡಿರುವ ನೋಟಿಸ್ ಹೇಳಿದೆ.
ವಿಡಿಯೊ ನೋಡಿ: ಸುರತ್ಕಲ್ ಅಕ್ರಮ ಟೋಲ್ ಹಾಡು ವೈರಲ್ | ಚಕ್ರವರ್ತಿ ಸೂಲಿಬೆಲೆ ಪ್ರತಾಪ್ ಸಿಂಹ ಜಗಳವಾಡ್ತಿರೋದು ಏಕೆ? ಫುಲ್ ಎಪಿಸೋಡ್ Sulibele versus Pratap Simha


