HomeದಿಟನಾಗರFactCheck: ಸತ್ತ ವ್ಯಕ್ತಿ ಬಾಯಿಂದ ಮೋದಿ ಹೊಗಳಿಸಿದ ಪೋಸ್ಟ್‌ ಕಾರ್ಡ್‌: ಸತ್ಯ ತಿಳಿಯುತ್ತಲೇ ಮತ್ತೊಂದು ಸುಳ್ಳು...

FactCheck: ಸತ್ತ ವ್ಯಕ್ತಿ ಬಾಯಿಂದ ಮೋದಿ ಹೊಗಳಿಸಿದ ಪೋಸ್ಟ್‌ ಕಾರ್ಡ್‌: ಸತ್ಯ ತಿಳಿಯುತ್ತಲೇ ಮತ್ತೊಂದು ಸುಳ್ಳು ಪ್ರಕಟ!

- Advertisement -
- Advertisement -

ಫೇಕ್‌ನ್ಯೂಸ್‌ ವೆಬ್‌ಸೈಟ್‌ ಎಂತಲೇ ಕುಖ್ಯಾತಿ ಗಳಿಸಿರುವ ಪೋಸ್ಟ್‌ ಕಾರ್ಡ್‌ ಕನ್ನಡ ಸುಳ್ಳು ಸುದ್ದಿ ಪ್ರಕಟಿಸಿ, ಸತ್ತ ವ್ಯಕ್ತಿಯ ಫೋಟೊ ಹಾಕಿ ಮೋದಿ ಹೊಗಳಿದ್ದಾರೆ ಎಂದು ಪ್ರಸಾರ ಮಾಡಿ ಸಿಕ್ಕಿಬಿದ್ದಿದೆ. ಈ ಕುರಿತು ನೆಟ್ಟಿಗರು ಅದರ ಸ್ಥಾಪಕನ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದಾರೆ.

ನಡೆದುದಿಷ್ಟು…

ಜೂನ್ 15 ರಂದು ಲಡಾಖ್‌ ಗಡಿಯಲ್ಲಿ ಭಾರತ – ಚೀನಾ ನಡುವೆ ನಡೆದ ಸಂಘ‍ರ್ಷದಲ್ಲಿ 20 ಭಾರತೀಯ ಸೈನಿಕರು ಹುತಾತ್ಮರಾಗಿದ್ದಾರೆ. ಅಲ್ಲದೇ ಭಾರತದ ವಾಸ್ತವಿಕ ನಿಯಂತ್ರಿತ ರೇಖೆಯೊಳಗೆ ಕಾಲಿಟ್ಟಿದೆ. ಅಂದಿನಿಂದ ನರೇಂದ್ರ ಮೋದಿ ಸರ್ಕಾರವನ್ನು ಜನ ಪ್ರಶ್ನಿಸುತ್ತಿದ್ದಾರೆ. ಕೊನೆಗೂ ಎರಡು ದೇಶಗಳ ಮಾತುಕತೆಯ ನಂತರ ಎರಡೂ ದೇಶಗಳ ಸೈನ್ಯ ವಾಪಸ್ ತೆರಳಿವೆ. ಇದಿಷ್ಟು ವಾಸ್ತವವನ್ನು ಇಟ್ಟುಕೊಂಡು ಮೋದಿಯನ್ನು ಹೊಗಳುವ ಭರದಲ್ಲಿ ಪೋಸ್ಟ್‌ ಕಾರ್ಡ್‌ ಸುಳ್ಳು ಸುದ್ದಿ ಹಬ್ಬಿಸಿದೆ.

“ಗಡಿಯಲ್ಲಿ ಚೀನಾ ನಿರ್ಮಿಸಿದ್ದ ಉದ್ವಿಗ್ನ ಸ್ಥಿತಿಯನ್ನು ಭಾರತ ಸಮರ್ಥವಾಗಿ ಎದುರಿಸಿದೆ. ಇದು ಚೀನಾದಿಂದ ಒದಗುವ ಬೆದರಿಕೆಯನ್ನು ಧೈರ್ಯದಿಂದ ಎದುರಿಸಲು ಇತರ ದೇಶಗಳಿಗೆ ಶಕ್ತಿ ತುಂಬಲಿದೆ. ಚೀನಾಕ್ಕೆ ತಕ್ಕ ಪ್ರತ್ಯುತ್ತರ ನೀಡಿದ ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಹೆಮ್ಮೆ ಎನಿಸುತ್ತದೆ”. – ಅಮೆರಿಕದ ಸಂಸದ ಜಾನ್ ಕೆನಡಿ ಎಂಬ ವಿಷಯವುಳ್ಳ ಪೋಸ್ಟರ್ ಮಾಡಿ, ಅದರಲ್ಲಿ ಜಾನ್ ಕೆನಡಿ ಫೋಟೊ ಹಾಕಿ ಪೋಸ್ಟ್‌ ಕಾರ್ಡ್‌ ಕನ್ನಡ ಸೇರಿದಂತೆ ಹಲವಾರು ಫೇಸ್‌ಬುಕ್‌ ಪುಟಗಳಲ್ಲಿ ಷೇರ್ ಮಾಡಲಾಗಿದೆ.

ಆದರೆ ಸ್ಪಲ್ಪ ಸಮಯದಲ್ಲಿಯೇ ನೆಟ್ಟಿಗರು ಅಮೆರಿಕ ಮಾಜಿ ಅಧ್ಯಕ್ಷ ಜಾನ್ ಕೆನಡಿ ಮರಣ ಹೊಂದಿ 57 ವರ್ಷಗಳಾಗಿವೆ. ಸುಳ್ಳು ಸುದ್ದಿ ಹರಡುವುದನ್ನು ನಿಲ್ಲಿಸಿ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ಜಾನ್ ಕೆನಡಿ 1963ರಲ್ಲಿ ಸಾವನಪ್ಪಿರುವ ವಿಕಿಪೀಡಿಯ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ.

ಪೋಸ್ಟ್ ಕಾರ್ಡ್ ಮೊದಲು ಹರಡಿದ್ದ ಪೋಸ್ಟರ್

ನಂತರ ಮುಖಭಂಗಕ್ಕೊಳಗಾದ ಪೋಸ್ಟ್ ಕಾರ್ಡ್ ಮುಖ್ಯಸ್ಥ ಮಹೇಶ್ ವಿಕ್ರಂ ಹೆಗ್ಡೆ ಆ ಪೋಸ್ಟರ್‌ ಅನ್ನು ಡಿಲೀಟ್ ಮಾಡಿದ್ದಾರೆ. ಕೂಡಲೇ ಜಾನ್ ಕೆನಡಿಯ ಜಾಗದಲ್ಲಿ ಜಾನ್ ನೀಲಿ ಕೆನಡಿಯ ಫೋಟೊ ಹಾಕಿ ಮತ್ತೊಂದು ಪೋಸ್ಟರ್ ಅನ್ನು ಪೋಸ್ಟ್ ಮಾಡಿದ್ದಾರೆ.

https://www.facebook.com/mvhindu/posts/1236827983315356

ಈ ಕುರಿತು ಗೂಗಲ್‌ನಲ್ಲಿ ಹುಡಕಾಡಿದಾಗ ಮೋದಿ ಕುರಿತು ಇತ್ತೀಚೆಗೆ ಜಾನ್‌ ನೀಲಿ ಕೆನಡಿ ಮಾತನಾಡಿರುವ ಯಾವುದೇ ವರದಿಗಳು ಲಭ್ಯವಿಲ್ಲ. ಆದರೆ ನ್ಯೂಸ್‌ಬಸ್ಟ್‌.ಇನ್ ಎನ್ನು ಭಾರತೀಯ ಮೂಲಕ ವೆಬ್ ಸೈಟ್ ಒಂದು ಮಾತ್ರ ಈ ಸುದ್ದಿಯನ್ನು ಪ್ರಕಟಿಸಿದೆ. ಆದರೆ ಅದರ ಫೇಸ್‌ಬುಕ್‌ ಪುಟವು ಕೇವಲ 43 ಲೈಕ್‌ಗಳನ್ನು ಹಾಗೂ 473 ಫಾಲೋವರ್‌ಗಳನ್ನು ಮಾತ್ರ ಹೊಂದಿದೆ. ಆ ವರದಿಯನ್ನು ಕೇವಲ ಒಬ್ಬರು ಮಾತ್ರ ಓದಿದ್ದಾರೆ.. ಅಲ್ಲಿಗೆ ಅದು ಕೂಡ ಫೇಕ್‌ ನ್ಯೂಸ್ ಎಂದು ಸಾಬೀತಾಗಿದೆ.

ಒಟ್ಟಿನಲ್ಲಿ ಸುಳ್ಳು ಸುದ್ದಿ ಹರಡುವುದರಲ್ಲಿ ಎತ್ತಿದ ಕೈ ಆದ ಮಹೇಶ್ ವಿಕ್ರಂ ಹೆಗಡೆ ಮತ್ತು ಫೋಸ್ಟ್ ಕಾರ್ಡ್ ಮತ್ತೊಂದು ಸುಳ್ಳು ಸುದ್ದಿ ಹರಡಿ ಸಿಕ್ಕಿಕೊಂಡಿದೆ. ನೆಟ್ಟಿಗರು ದೊಡ್ಡ ಮಟ್ಟದಲ್ಲಿ ತರಾಟೆಗೆ ತೆಗೆದುಕೊಂಡಿದ್ದಾರೆ.


ಇದನ್ನೂ ಓದಿ: ಮುಖ್ಯಮಂತ್ರಿಗಳ ಎಚ್ಚರಿಕೆಯ ನಂತರವೂ ಸುಳ್ಳು ಸುದ್ದಿ ಹರಡುತ್ತಿರುವ ಪೋಸ್ಟ್‌ ಕಾರ್ಡ್‌ ಕನ್ನಡ: ಕ್ರಮ ಯಾವಾಗ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. PEOPLE ARE VERY MUCH AWARE ABOUT GOSI MEDIA N THEIR DIRTY LIES… TO DISTRACT N DIVERT FROM CURRENT MAJOR ISSUES N TO FOOL PEOPLE ASHTE..
    BUT CANT FOOL ANYMORE.
    ENJOY ACHHEDIN..🤣🤣🤣

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...