Homeಅಂತರಾಷ್ಟ್ರೀಯಮತ್ತೊಂದು ಪ್ರಭೇದದ ಕೊರೊನಾ ವೈರಸ್ ನೈಜೀರಿಯಾದಲ್ಲಿ ಪತ್ತೆ!

ಮತ್ತೊಂದು ಪ್ರಭೇದದ ಕೊರೊನಾ ವೈರಸ್ ನೈಜೀರಿಯಾದಲ್ಲಿ ಪತ್ತೆ!

ಕೊರೊನಾ ಸಾಂಕ್ರಮಿಕ ರೋಗವು 2020 ರ ಇಡೀ ವರ್ಷ ಕಾಡಿದ್ದು, ಇದರ ಪ್ರಭಾವ ಇನ್ನೇನು ಕಡಿಮೆಯಾಗಿದೆ ಎನ್ನುವಾಲೇ, ಅದರ ರೂಪಾಂತರಿ ವೈರಸ್ ಬ್ರಿಟನ್‌ನಲ್ಲಿ ಕಾಣಿಸಿಕೊಂಡಿತ್ತು.

- Advertisement -
- Advertisement -

ಕಳೆದ ವರ್ಷದ ಕೊನೆಯಲ್ಲಿ ಪತ್ತೆಯಾದ ಕೊರೊನಾ ಸಾಂಕ್ರಮಿಕ ರೋಗವು 2020 ರ ಇಡೀ ವರ್ಷ ಕಾಡಿದ್ದು, ಇದರ ಪ್ರಭಾವ ಇನ್ನೇನು ಕಡಿಮೆಯಾಗಿದೆ ಎನ್ನುವಾಲೇ, ಅದರ ರೂಪಾಂತರಿ ವೈರಸ್ ಬ್ರಿಟನ್‌ನಲ್ಲಿ ಕಾಣಿಸಿಕೊಂಡಿತ್ತು. ಆದರೆ ಇದೀಗ ಕೊರೊನಾ ವೈರಸ್‌ನ ಮತ್ತೊಂದು ರೂಪಾಂತರಿ ಪ್ರಭೇದದ ವೈರಸ್ ನೈಜೀರಿಯಾದಲ್ಲಿ ಪತ್ತೆಯಾಗಿದೆ ಎನ್ನಲಾಗಿದೆ.

ಇದನ್ನೂ ಓದಿ:ರೈತ ಹೋರಾಟದಲ್ಲಿ ಖಲೀಸ್ತಾನಿ ಕರಪತ್ರ‌ ಹಂಚಿಕೆ: RSS‌ ಕಾರ್ಯಕರ್ತ ಬಂಧನ!

ನೈಜೀರಿಯಾದಲ್ಲಿ ಪತ್ತೆಯಾದ ಹೊಸ ಪ್ರಭೇದದ ಕೊರೊನಾ ವೈರಸ್ ಬಗ್ಗೆ ಅಫ್ರಿಕಾದ ರೋಗ ನಿಯಂತ್ರಣ ಸಂಸ್ಥೆಯ ಮುಖ್ಯಸ್ಥರು ಎಚ್ಚರಿಸಿದ್ದು, ಇದರ ಬಗ್ಗೆ ಹೆಚ್ಚಿನ ಪರೀಕ್ಷೆಯ ಅಗತ್ಯವಿದೆ ಎಂದು ಹೇಳಿದ್ದಾರೆ. ಈಗಾಗಲೇ ರೂಪಾಂತರಿ ಕೊರೊನಾ ಬ್ರಿಟನ್ ಮತ್ತು ದಕ್ಷಿಣ ಆಫ್ರಿಕಾದಲ್ಲಿ ವೇಗವಾಗಿ ಹರಡುತ್ತಿದ್ದು, ಹೊಸ ರೂಪಾಂತರಿ ವೈರಸ್ ಪತ್ತೆಯಾಗಿದ್ದು ವೈದ್ಯಕೀಯ ಲೋಕ ಮತ್ತೊಂದು ಸುತ್ತಿನ ಹೋರಾಟಕ್ಕೆ ತಯಾರಾಗಿದೆ.

ಎರಡು ಅಥವಾ ಮೂರು ಜನೆಟಿಕ್ ಸೀಕ್ವೆನ್ಸ್‌ಗಳ ಆಧಾರದಲ್ಲಿ ಹೊಸ ಪ್ರಭೇದವೊಂದರ ಉಗಮವಾಗಿರಬಹುದು ಎಂದು ಈಗಾಗಲೆ ನಿರ್ಧಾರಕ್ಕೆ ಬರಲಾಗಿದೆ. ಸೋಂಕು ಪ್ರಕರಣದ ಹೆಚ್ಚು ಮಾದರಿಗಳ ವಿಶ್ಲೇಷಣೆಯನ್ನು ನೈಜೀರಿಯ ರೋಗ ನಿಯಂತ್ರಣ ಕೇಂದ್ರ ಮತ್ತು ನೈಜೀರಿಯದಲ್ಲಿರುವ ಆಫ್ರಿಕನ್ ಸೆಂಟರ್ ಫಾರ್ ಜಿನೋಮಿಕ್ಸ್ ಆಫ್ ಇನ್‌ಫೆಕ್ಶಿಯಸ್ ಡಿಸೀಸಸ್ ಸಂಸ್ಥೆಗಳು ನಡೆಸಲಿವೆ ಎಂದು ಸಂಸ್ಥೆಯ ಮುಖ್ಯಸ್ಥರು ತಿಳಿಸಿದ್ದಾರೆ.

ಇದನ್ನೂ ಓದಿ: ತೀವ್ರಗೊಂಡ ಹೋರಾಟ: ಟೋಲ್‌ ಪ್ಲಾಜಾಗಳನ್ನು ವಶಕ್ಕೆ ಪಡೆದ ರೈತರು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಅರವಿಂದ್ ಕೇಜ್ರಿವಾಲ್, ಕೆ. ಕವಿತಾಗೆ ನೋ ರಿಲೀಫ್‌: ನ್ಯಾಯಾಂಗ ಬಂಧನ ಮೇ 7ರವರೆಗೆ ವಿಸ್ತರಣೆ

0
ದೆಹಲಿ ಅಬಕಾರಿ ನೀತಿಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಭಾರತ್ ರಾಷ್ಟ್ರ ಸಮಿತಿ (ಬಿಆರ್‌ಎಸ್) ನಾಯಕಿ ಕೆ ಕವಿತಾ ಅವರ ನ್ಯಾಯಾಂಗ ಬಂಧನವನ್ನು...