Homeಮುಖಪುಟಸರ್ಕಾರಿ ಹ್ಯಾಂಡ್ ಪಂಪ್ ಮುಟ್ಟಿದ್ದಕ್ಕಾಗಿ ದಲಿತ ವ್ಯಕ್ತಿಗೆ ಹಲ್ಲೆ

ಸರ್ಕಾರಿ ಹ್ಯಾಂಡ್ ಪಂಪ್ ಮುಟ್ಟಿದ್ದಕ್ಕಾಗಿ ದಲಿತ ವ್ಯಕ್ತಿಗೆ ಹಲ್ಲೆ

ಸರ್ಕಾರಿ ಹ್ಯಾಂಡ್ ಪಂಪ್‌ನಿಂದ ದಲಿತ ಕುಟುಂಬಗಳು ನೀರು ಪಡೆಯುವುದನ್ನು ಎರಡು ತಿಂಗಳ ಹಿಂದೆಯೆ ಯಾದವ್ ಸಮುದಾಯದ ರಾಮ್ ದಯಾಳ್ ಯಾದವ್ ನಿಷೇಧಿಸಿದ್ದರು

- Advertisement -
- Advertisement -

ಉತ್ತರ ಪ್ರದೇಶದ ಬಾಂದಾ ಜಿಲ್ಲೆಯಲ್ಲಿ ಹ್ಯಾಂಡ್ ಪಂಪ್‌ನಿಂದ ನೀರು ತರಲು ಹೋದ 45 ವರ್ಷದ ದಲಿತ ವ್ಯಕ್ತಿಯೊಬ್ಬರಿಗೆ ಥಳಿಸಲಾಗಿದೆ. ಘಟನೆಯು ಶುಕ್ರವಾರ ನಡೆದಿದ್ದು, ಸರ್ಕಾರಿ ಹ್ಯಾಂಡ್ ಪಂಪ್ ಮುಟ್ಟಿದ್ದಕ್ಕಾಗಿ ತನಗೆ ತೆಂಡೂರ ಗ್ರಾಮದ ಜನರು ಥಳಿಸಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ಇದನ್ನೂ ಓದಿ: ದೇಶದಲ್ಲಿ ಹಚ್ಚಿರುವ ಕಿಚ್ಚು ಮುಸಲ್ಮಾನರನ್ನು ಮುಕ್ಕತೊಡಗಿದೆ. ಮುಂದಿನ ಸರದಿ ದಲಿತರದು, ಕ್ರೈಸ್ತರದು ಇದ್ದೀತು

ಹಲ್ಲೆಗೊಳಗಾದ ರಾಮಚಂದ್ರ ರೈದಾಸ್ ಅವರನ್ನು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿದ್ದು, ಆರೋಪಿಗಳ ವಿರುದ್ದ ಎಫ್‌ಐಆರ್ ದಾಖಲಾಗಿದೆ. ಎಫ್‌ಐಆರ್‌‌ನಲ್ಲಿ, “ಶುಕ್ರವಾರ ಬೆಳಿಗ್ಗೆ ಹ್ಯಾಂಡ್ ಪಂಪ್‌ನಿಂದ ನೀರು ತೆಗೆದುಕೊಳ್ಳಲು ಹೋದಾಗ ರಾಮ್ ದಯಾಳ್ ಯಾದವ್ ಕುಟುಂಬ ಸದಸ್ಯರು ತನ್ನ ಮೇಲೆ ದೊಣ್ಣೆಗಳಿಂದ ಹಲ್ಲೆ ನಡೆಸಿದ್ದಾರೆ” ಎಂದು ಆರೋಪಿಸಲಾಗಿದೆ.

ಸರ್ಕಾರಿ ಹ್ಯಾಂಡ್ ಪಂಪ್‌ನಿಂದ ದಲಿತ ಕುಟುಂಬಗಳು ನೀರು ಪಡೆಯುವುದನ್ನು ಎರಡು ತಿಂಗಳ ಹಿಂದೆಯೆ ಯಾದವ್ ಸಮುದಾಯದ ರಾಮ್ ದಯಾಳ್ ಯಾದವ್ ನಿಷೇಧಿಸಿದ್ದರು ಎಂದು ಹಲ್ಲೆಗೊಳಗಾದ ರಾಮಚಂದ್ರ ರೈದಾಸ್ ಆರೋಪಿದ್ದಾಗಿ ಪೊಲೀಸ್ ಇನ್ಸ್‌ಪಕ್ಟರ್‌ ನರೇಂದ್ರ ಪ್ರತಾಪ್ ಸಿಂಗ್ ಹೇಳಿದ್ದಾರೆ.

ಆದರೆ ಈ ಬಹಿಷ್ಕಾರ ಪ್ರಕರಣದಲ್ಲಿ ಮಧ್ಯಪ್ರವೇಸಿದ್ದ ಅತಾರಾದ ಉಪ-ವಿಭಾಗೀಯ ಮ್ಯಾಜಿಸ್ಟ್ರೇಟ್ ಸಮಸ್ಯೆಯನ್ನು ಪರಿಹರಿಸಿದ್ದರು ಎನ್ನಲಾಗಿದೆ. ಅದಾಗ್ಯೂ ಹಲ್ಲೆ ನಡೆದಿದೆ. ಪ್ರಸುತ ಪ್ರಕರಣದ ತನಿಖೆ ನಡೆಯುತ್ತಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಇದನ್ನೂ ಓದಿ: ದಲಿತ ಸಮರ್ಥನೆಯ ಆದ್ಯಪ್ರವರ್ತಕನ ಪಾತ್ರವಹಿಸಿದ್ದ ಮೂಕನಾಯಕ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...