Homeಅಂಕಣಗಳುದಲಿತ ಸಮರ್ಥನೆಯ ಆದ್ಯಪ್ರವರ್ತಕನ ಪಾತ್ರವಹಿಸಿದ್ದ ಮೂಕನಾಯಕ

ದಲಿತ ಸಮರ್ಥನೆಯ ಆದ್ಯಪ್ರವರ್ತಕನ ಪಾತ್ರವಹಿಸಿದ್ದ ಮೂಕನಾಯಕ

ವರ್ತಮಾನದಲ್ಲಿ ಮತ್ತು ಭವಿಷ್ಯದಲ್ಲಿ ನಮ್ಮ ಜನರ ಮೇಲೆ ನಡೆಯುವ ಅನ್ಯಾಯದ ವಿರುದ್ಧ ಪರಿಹಾರ ಸೂಚಿಸಲು ಮತ್ತು ಭವಿಷ್ಯತ್ತಿನಲ್ಲಿ ನಮ್ಮ ಪ್ರಗತಿ ಕುರಿತು ಮಾರ್ಗೋಪಾಯಗಳ ಕುರಿತು ಚರ್ಚಿಸಲು ಪತ್ರಿಕೆಗಿಂತ ಉತ್ತಮ ಸಂಪನ್ಮೂಲ ಮತ್ತೊಂದಿಲ್ಲ.

- Advertisement -
- Advertisement -

ದಲಿತರನ್ನು ಎಚ್ಚರಿಸಿ ಸಬಲರನ್ನಾಗಿ ಮಾಡಬೇಕಿದ್ದರೆ ಅವರದೇ ಆದ ಪ್ರಕಟಣೆಗಳಿರಬೇಕು ಎಂದಿದ್ದರು ಡಾ.ಬಾಬಾಸಾಹೇಬ ಅಂಬೇಡ್ಕರ್. ಇದೇ ಉದ್ದೇಶದಿಂದ 1920ರ ಜನವರಿ 31ರಂದು ಮೂಕನಾಯಕ ಎಂಬ ಮರಾಠಿ ಪಾಕ್ಷಿಕವೊಂದನ್ನು ಆರಂಭಿಸಿದರು. ಆಗ ಅವರಿಗೆ 29ರ ಉಕ್ಕುಪ್ರಾಯ.

ಹದಿನೈದು ದಿನಗಳಿಗೊಮ್ಮೆ ಶನಿವಾರಗಳಂದು ಬಾಂಬೆಯಿಂದ ಹೊರಬೀಳುತ್ತಿತ್ತು ಮೂಕನಾಯಕ. ಅದರ ಕಚೇರಿ ಪರೇಲಿನ ಶ್ರಮಿಕವರ್ಗದ ನೆರೆಹೊರೆಯಲ್ಲಿತ್ತು. ಸಂತ ತುಕಾರಾಮನ ಚತುಷ್ಪದಿಯೊಂದರ ಸ್ಫೂರ್ತಿಯೇ ಮೂಕನಾಯಕ ಶೀರ್ಷಿಕೆಗೆ ಕಾರಣವಾಗಿತ್ತು. ಕೊಲ್ಹಾಪುರದ ಶಾಹು ಮಹಾರಾಜರು ಅಂಬೇಡ್ಕರ್ ಅವರನ್ನು ಅರಸಿಕೊಂಡು ಬಂದು ನೀಡಿದ್ದ 2,500 ರುಪಾಯಿಗಳ ದೇಣಿಗೆಯೇ ಪತ್ರಿಕೆಗೆ ದೊರೆತಿದ್ದ ಆರಂಭಿಕ ಚಾಲನೆ.

ಈ ಪ್ರಕಟಣೆಯ ಹಿಂದಿನ ತರ್ಕವನ್ನು ವಿವರಿಸಿ ಮೂಕನಾಯಕದ ಉದ್ಘಾಟನಾ ಸಂಚಿಕೆಯ ಸಂಪಾದಕೀಯದಲ್ಲಿ ಅವರು ಬರೆದರು- ‘ವರ್ತಮಾನದಲ್ಲಿ ಮತ್ತು ಭವಿಷ್ಯದಲ್ಲಿ ನಮ್ಮ ಜನರ ಮೇಲೆ ನಡೆಯುವ ಅನ್ಯಾಯದ ವಿರುದ್ಧ ಪರಿಹಾರ ಸೂಚಿಸಲು ಮತ್ತು ಭವಿಷ್ಯತ್ತಿನಲ್ಲಿ ನಮ್ಮ ಪ್ರಗತಿ ಕುರಿತು ಮಾರ್ಗೋಪಾಯಗಳ ಕುರಿತು ಚರ್ಚಿಸಲು ಪತ್ರಿಕೆಗಿಂತ ಉತ್ತಮ ಸಂಪನ್ಮೂಲ ಮತ್ತೊಂದಿಲ್ಲ’.

ಮುಂದುವರೆದು ಅವರು ಬರೆಯುತ್ತಾರೆ- ‘ಹಿಂದೂ ಸಮಾಜವು ಏಣಿ ಅಥವಾ ಪ್ರವೇಶ ದ್ವಾರವೇ ಇಲ್ಲದ ಹಲವು ಅಂತಸ್ತುಗಳ ಗೋಪುರವಿದ್ದಂತೆ. ಕೆಳ ಅಂತಸ್ತಿನಲ್ಲಿ ಹುಟ್ಟಿದ ವ್ಯಕ್ತಿ ಅದೆಷ್ಟೇ ಯೋಗ್ಯನಾದರೂ ಮೇಲಿನ ಅಂತಸ್ತನ್ನು ಪ್ರವೇಶಿಸಲಾರ. ಮೇಲಿನ ಅಂತಸ್ತಿನಲ್ಲಿ ಹುಟ್ಟಿದ ವ್ಯಕ್ತಿ ಅದೆಷ್ಟೇ ಅಯೋಗ್ಯನಾದರೂ ಅವನನ್ನು ಕೆಳ ಅಂತಸ್ತಿಗೆ ಓಡಿಸುವುದು ಸಾಧ್ಯವಿಲ್ಲ. ಅಂತರ್ಜಾತೀಯ ಸಹಭೋಜನ ಮತ್ತು ಅಂತರ್ಜಾತೀಯ ವಿವಾಹಗಳಿಗೆ ಅವಕಾಶವಿಲ್ಲದೆ ಏರ್ಪಟ್ಟಿರುವ ಪರಕೀಯಪ್ರಜ್ಞೆಯು ಸ್ಪೃಶ್ಯ ಮತ್ತು ಅಸ್ಪೃಶ್ಯ ಭಾವನೆಗಳನ್ನು ಅದೆಷ್ಟು ಪೋಷಿಸಿಬಿಟ್ಟಿದೆಯೆಂದರೆ ಈ ಸ್ಪೃಶ್ಯ ಮತ್ತು ಅಸ್ಪೃಶ್ಯ ಜಾತಿಗಳು ಹಿಂದೂ ಸಮಾಜದ ಭಾಗವೇ ಆಗಿದ್ದರೂ, ವಾಸ್ತವದಲ್ಲಿ ಬೇರೆ ಬೇರೆಯೇ ಜಗತ್ತುಗಳಾಗಿ ಜೀವಿಸುತ್ತಿವೆ’.

‘ಬೆಕ್ಕುಗಳು ನಾಯಿಗಳು ಅಸ್ಪೃಶ್ಯರ ಎಂಜಲು ತಿನ್ನುತ್ತವೆ. ಮಕ್ಕಳ ಮಲವನ್ನೂ ತಿನ್ನುತ್ತವೆ. ಇದೇ ನಾಯಿ ಬೆಕ್ಕುಗಳು ಸ್ಪೃಶ್ಯರ ಮನೆಯನ್ನು ಪ್ರವೇಶಿಸಬಹುದು. ಹಾಗೆ ಪ್ರವೇಶಿಸಿದರೆ ಮೈಲಿಗೆಯಿಲ್ಲ. ಈ ಪ್ರಾಣಿಗಳನ್ನು ಸ್ಪೃಶ್ಯರು ಮುಟ್ಟುತ್ತಾರೆ, ಅಪ್ಪಿ ಮುದ್ದಾಡುತ್ತಾರೆ. ಅವು ಉಣ್ಣುವ ತಟ್ಟೆಗೆ ಬಾಯಿ ಹಾಕಿದರೂ ಅವರಿಗೆ ತಕರಾರಿಲ್ಲ. ಯಾವುದೋ ಚಾಕರಿಗೆಂದು ಮನೆಯ ಹೊರಗೆ ನಿಲ್ಲುವ ಅಸ್ಪೃಶ್ಯನನ್ನು ಕಂಡ ಸವರ್ಣೀಯ ಗದರುತ್ತಾನೆ- ದೂರ ನಿಲ್ಲು, ಮಗುವಿನ ಮಲವನ್ನು ಬಾಚಿ ಎಸೆಯುವ ಬೋಕಿ ಬಿಲ್ಲೆಯನ್ನು ಅಲ್ಲಿ ಇಡಲಾಗಿದೆ. ಅದನ್ನೂ ಮುಟ್ಟಿ ಮೈಲಿಗೆ ಮಾಡುತ್ತೀಯೇನು?’ ಎಂಬ ಹೃದಯವಿದ್ರಾವಕ ಸಾಲುಗಳನ್ನು ಬಾಬಾಸಾಹೇಬರು ಮೂಕನಾಯಕದ 1920ರ ಆಗಸ್ಟ್ ಸಂಚಿಕೆಯ ಸಂಪಾದಕೀಯದಲ್ಲಿ ಬರೆದಿದ್ದಾರೆ.

ಲಂಡನ್ ಸ್ಕೂಲ್ ಅಫ್ ಎಕನಾಮಿಕ್ಸ್‌ನಲ್ಲಿ ಅರ್ಧದಲ್ಲಿಯೇ ತೊರೆದು ಬಂದಿದ್ದ ತಮ್ಮ ಉನ್ನತ ವ್ಯಾಸಂಗವನ್ನು ಮುಂದುವರೆಸಲು ಬಾಬಾಸಾಹೇಬರು ಹಠಾತ್ತನೆ ಲಂಡನ್‍ಗೆ ತೆರಳಬೇಕಾಗುತ್ತದೆ. ಮೂಕನಾಯಕನ ಉಸ್ತುವಾರಿಯನ್ನು ಅಲ್ಲಿಂದಲೇ ನೋಡಿಕೊಳ್ಳುತ್ತಾರೆ. ಪತ್ರಿಕೆಯ ಹಿಂದಿನ ಚಾಲಕಶಕ್ತಿ ತಾವೇ ಆದರೂ ಸಂಪಾದಕ ಹುದ್ದೆಯಲ್ಲಿ ಅಂಬೇಡ್ಕರ್ ಇರುವುದಿಲ್ಲ. ಪಾಂಡುರಂಗ ಭಾಟ್ಕರ್ ಈ ಪತ್ರಿಕೆಯ ಮೊದಲ ಸಂಪಾದಕರು. ಧ್ಯಾನದೇವ ಘೋಲಪ್ ಎರಡನೆಯ ಸಂಪಾದಕರು. ಆರ್ಥಿಕ ಸಂಕಟ ಈ ಪತ್ರಿಕೆಯನ್ನು ನೆರಳಿನಂತೆ ಹಿಂಬಾಲಿಸಿತ್ತು. ಘೋಲಪ್ ಅವರೊಂದಿಗೆ ಭಿನ್ನಾಭಿಪ್ರಾಯದ ಕಾರಣ ಅಂಬೇಡ್ಕರ್ 1923ರಲ್ಲಿ ಈ ಪತ್ರಿಕೆಯಿಂದ ದೂರವಾದರು.

ಬಾಬಾಸಾಹೇಬರು 1920ರಲ್ಲಿ ಆರಂಭಿಸಿದ ಮೊದಲ ಪತ್ರಿಕೆ ಮೂಕನಾಯಕವಾದರೆ ಕಡೆಯ ಪತ್ರಿಕೆ ಪ್ರಬುದ್ಧ ಭಾರತ (1956ರ ಫೆಬ್ರವರಿ ನಾಲ್ಕು). ಈ ನಡುವಿನ ಅವಧಿಯಲ್ಲಿ ಬಹಿಷ್ಕೃತ ಭಾರತ (1927ರ ಏಪ್ರಿಲ್ ಮೂರು), ಸಮತಾ (1928ರ ಜೂನ್ 29), ಜನತಾ (1930ರ ನವೆಂಬರ್ 25) ಪತ್ರಿಕೆಗಳನ್ನು ಹೊರತಂದರು.

ಅಂಬೇಡ್ಕರ್ ಆರಂಭಿಸಿದ್ದ ಪತ್ರಿಕೆಗಳಿಗೆ ಹಣಬಲವಿರಲಿಲ್ಲ. ಮೂಕನಾಯಕ ಮತ್ತು ಬಹಿಷ್ಕೃತ ಭಾರತ ಮುಚ್ಚಲು ಹಣದ ಕೊರತೆಯೇ ನೇರ ಕಾರಣ. ಜಾಹೀರಾತು ಕುರಿತು ಬಾಬಾಸಾಹೇಬರು ತಳೆದಿದ್ದ ನಿಷ್ಠುರ ನಿಲುವೂ ಪತ್ರಿಕೆಗಳ ಆರ್ಥಿಕ ಬಿಕ್ಕಟ್ಟಿಗೆ ಕಾರಣವಾಗಿತ್ತು. ಅಸಮಾನತೆ ಮತ್ತು ಸಂಪ್ರದಾಯವಾದವನ್ನು ಎತ್ತಿ ಹಿಡಿದು ಮುಂದುವರೆಸುವ ಹೊಣೆಗೇಡಿ ಜಾಹೀರಾತುಗಳನ್ನು ಅವರು ತಮ್ಮ ಸಂಪಾದಕೀಯಗಳಲ್ಲಿ ತೀವ್ರವಾಗಿ ಖಂಡಿಸಿದ್ದರು. ಬಾಂಬೇ ಕ್ರಾನಿಕಲ್ ಮತ್ತು ಬಾಲ ಗಂಗಾಧರ ತಿಲಕ್ ಅವರ ಕೇಸರಿ ಸೇರಿದಂತೆ ಹಲವಾರು ರಾಷ್ಟ್ರವಾದಿ ಪತ್ರಿಕೆಗಳು ಬ್ರಾಹ್ಮಣವಾದಿ ಧಾರ್ಮಿಕ ಸಾಹಿತ್ಯವನ್ನು, ಬ್ರಾಹ್ಮಣವಾದವನ್ನು ಎತ್ತಿ ಹಿಡಿಯುವ ಚಟುವಟಿಕೆಗಳು, ಘಟನಾವಳಿಗಳು ಹಾಗೂ ಗಂಡಾಳಿಕೆಯನ್ನು ಸಮರ್ಥಿಸುವ ಜಾಹೀರಾತುಗಳನ್ನು ಪ್ರಕಟಿಸುತ್ತಿದ್ದವು. ಸಾಮಾಜಿಕವಾಗಿ ಅನೈತಿಕ ಮತ್ತು ಅಸಭ್ಯ ಜಾಹೀರಾತುಗಳನ್ನು ಪ್ರಕಟಣೆಗಿಂತ ಜಾಹೀರಾತುಗಳ ಪ್ರಕಟಣೆಯನ್ನು ನಿಲ್ಲಿಸುವುದೇ ಲೇಸು ಎಂಬುದು ಬಾಬಾಸಾಹೇಬರ ನಿಲುವಾಗಿತ್ತು.

ಸ್ವಾತಂತ್ರ್ಯ ಹೋರಾಟದ ದಿನಗಳಲ್ಲಿ ತುಳಿದಿಟ್ಟ ಜನರ ಪರವಾಗಿ ಅಸ್ಪೃಶ್ಯತೆಯ ವಿರುದ್ಧವಾಗಿ ದನಿಯೆತ್ತಿದ್ದ ಅಂಬೇಡ್ಕರ್ ಅವರನ್ನು ಅಂದಿನ ಹಿಂದೂವಾದಿ ಮಾಲೀಕತ್ವದ ಪತ್ರಿಕೆಗಳು ಭೀಮಾಸುರ, ರಾಕ್ಷಸ, ದ್ರೋಹಿ, ಬಾಡಿಗೆಯ ಬಂಟ, ಬ್ರಹ್ಮದ್ವೇಷಿ, ರಾಷ್ಟ್ರೀಯತೆಯ ವಿರೋಧಿ ಎಂದೆಲ್ಲ ಹೀಯಾಳಿಸಿದ್ದವು.
ದಲಿತ ಸಮರ್ಥನೆಯ ಆದ್ಯಪ್ರವರ್ತಕನ ಪಾತ್ರವನ್ನು ವಹಿಸಿತ್ತು ಮೂಕನಾಯಕ.


ಇದನ್ನೂ ಓದಿ: ಬಹುಜನ ಭಾರತ: ಬಾಬಾಸಾಹೇಬರು ಮನುಸ್ಮೃತಿಯನ್ನು ಸುಟ್ಟಿದ್ದು ಸುಳ್ಳೇನು?
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ತೆಲಂಗಾಣ : ಪೋಕ್ಸೋ ಪ್ರಕರಣದ ಆರೋಪಿಯಿಂದ ಸಂತ್ರಸ್ತೆ ಸೇರಿ 6 ಜನರ ಹತ್ಯೆ

ಪೋಕ್ಸೋ ಪ್ರಕರಣದ ಆರೋಪಿಯೊಬ್ಬ ಸಂತ್ರಸ್ತೆ ಸೇರಿದಂತೆ ಒಟ್ಟು ಆರು ಜನರನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಶಾಬಾದ್ ಮಂಡಲದಲ್ಲಿ ಶುಕ್ರವಾರ (ಜು.10) ರಾತ್ರಿ ನಡೆದಿದೆ. 28 ವರ್ಷ ವಯಸ್ಸಿನ...

‘ನನ್ನನ್ನು ಮೌನಗೊಳಿಸಲು, ನೀವು ನನ್ನನ್ನು ಕೊಲ್ಲಬೇಕಾಗುತ್ತದೆ’: ಟಿಎಂಸಿ ಬಿಕ್ಕಟ್ಟಿನ ನಡುವೆ ಬಿಜೆಪಿ ವಿರುದ್ಧ ಮಮತಾ ಬ್ಯಾನರ್ಜಿ ಆಕ್ರೋಶ  

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (TMC) ಪಕ್ಷದಲ್ಲಿ ಆಂತರಿಕ ಬಿಕ್ಕಟ್ಟು ತಾರಕಕ್ಕೇರಿರುವ ಬೆನ್ನಲ್ಲೇ, ಪಕ್ಷದ ಸುಪ್ರೀಮೋ ಹಾಗೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಇತ್ತೀಚಿನ ತಿಂಗಳುಗಳಲ್ಲೇ ಅತ್ಯಂತ ಪ್ರಬಲವಾದ ರಾಜಕೀಯ...

ಸುಪ್ರೀಂ ಕೋರ್ಟ್‌ನಲ್ಲಿ ಜಡ್ಜ್‌ಗಳನ್ನೇ ‘ನ್ಯಾಯಾಂಗ ಸೇವಕರು’ ಎಂದ ಅರ್ಜಿದರ

ಸುಪ್ರೀಂ ಕೋರ್ಟ್‌ನಲ್ಲಿ ಶುಕ್ರವಾರ ಅತ್ಯಂತ ನಾಟಕೀಯ ಹಾಗೂ ಆಘಾತಕಾರಿ ದೃಶ್ಯವೊಂದು ತೆರೆದುಕೊಂಡಿದೆ. ಪ್ರಕರಣವೊಂದರ ವಿಚಾರಣೆ ವೇಳೆ ಖುದ್ದಾಗಿ ಹಾಜರಾಗಿದ್ದ ಅರ್ಜಿದಾರನೊಬ್ಬ, ಲಕ್ನೋದ ಪೊಲೀಸ್ ಅಧಿಕಾರಿಯೊಬ್ಬರ ವಿರುದ್ಧ ಎಫ್‌ಐಆರ್ (FIR) ದಾಖಲಿಸಲು ನಾನು ನ್ಯಾಯಪೀಠಕ್ಕೆ...

ಮದ್ಯದ ಅಮಲಿನಲ್ಲಿ ಸಾರಿಗೆ ಬಸ್‌ ಅಪಹರಿಸಿದ ವ್ಯಕ್ತಿ; 21 ಕಿ.ಮೀ. ಪ್ರಯಾಣದ ನಂತರ ಅಪಘಾತ

ತೆಲಂಗಾಣದ ಜನಗಾಂವ್ ಬಸ್ ನಿಲ್ದಾಣದಲ್ಲಿ ನಿಂತಿದ್ದ ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ನಿಗಮದ (ಟಿಜಿಎಸ್‌ಆರ್‌ಟಿಸಿ) ಬಸ್‌ ಅನ್ನು ವ್ಯಕ್ತಿಯೊಬ್ಬ ಕುಡಿದ ಮತ್ತಿನಲ್ಲಿ ಕದ್ದಿದ್ದಾನೆ. ನಂತರ ಅದನ್ನು ಸುಮಾರು 21 ಕಿ.ಮೀ. ದೂರ ಓಡಿಸಿ,...

ಬೆಂಗಳೂರಿನಲ್ಲಿ: ರಸ್ತೆ ಬದಿ ವಾರಗಟ್ಟಲೆ ವಾಹನ ನಿಲ್ಲಿಸಿದರೆ ಜಪ್ತಿ ಮಾಡಿ ‘ಹರಾಜು’ ಹಾಕಲಿದೆ ಸರ್ಕಾರ!

ಸಿಲಿಕಾನ್ ಸಿಟಿಯ ಟ್ರಾಫಿಕ್ ದಟ್ಟಣೆಗೆ ಮುಕ್ತಿ ಹಾಡಲು ಮತ್ತು ಪಾದಚಾರಿಗಳ ಹಕ್ಕನ್ನು ರಕ್ಷಿಸಲು ರಾಜ್ಯ ಸರ್ಕಾರ ಈಗ ಅತ್ಯಂತ ಕಠಿಣ ಹೆಜ್ಜೆಯನ್ನಿಟ್ಟಿದೆ. ನಗರದ ರಸ್ತೆ ಬದಿ ಹಾಗೂ ಫುಟ್‌ಪಾತ್‌ಗಳಲ್ಲಿ ತಿಂಗಳುಗಟ್ಟಲೆ ಧೂಳು ತಿನ್ನುತ್ತಾ...

ಸರ್ಕಾರಿ ಶಾಲೆಗಳಲ್ಲಿ 86 ಲಕ್ಷ ವಿದ್ಯಾರ್ಥಿಗಳ ಕುಸಿತ, ಖಾಸಗಿ ಶಾಲೆಗಳತ್ತ ಮುಖ ಮಾಡಿದ 88 ಲಕ್ಷ ಮಕ್ಕಳು: ಕಳವಳಕಾರಿ ವರದಿ

ನವದೆಹಲಿ: ದೇಶದ ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ ಮಹತ್ತರ ಬದಲಾವಣೆಗಳು ಕಂಡುಬರುತ್ತಿದ್ದು, ಸರ್ಕಾರಿ ಶಾಲೆಗಳ ದಾಖಲಾತಿಯಲ್ಲಿ ಭಾರಿ ಕುಸಿತ ಉಂಟಾಗಿದೆ. 2023–24 ಮತ್ತು 2025–26ರ ಶೈಕ್ಷಣಿಕ ವರ್ಷಗಳ ನಡುವಿನ ಅವಧಿಯಲ್ಲಿ ದೇಶಾದ್ಯಂತ ಸರ್ಕಾರಿ ಶಾಲೆಗಳಲ್ಲಿ...

ಬಿಹಾರ: ನಕಲಿ ದಾಖಲೆ ನೀಡಿ ಕೆಲಸ ಗಿಟ್ಟಿಸಿದ್ದ 3,000ಕ್ಕೂ ಹೆಚ್ಚು ಶಿಕ್ಷಕರು ವಜಾ!

ನಕಲಿ ಪದವಿ ಹಾಗೂ ನಕಲಿ ಶೈಕ್ಷಣಿಕ ಪ್ರಮಾಣಪತ್ರಗಳನ್ನು ನೀಡಿ ಸರ್ಕಾರಿ ಶಾಲೆಗಳಲ್ಲಿ ಉದ್ಯೋಗ ಗಿಟ್ಟಿಸಿಕೊಂಡಿದ್ದ 3,000ಕ್ಕೂ ಹೆಚ್ಚು ಶಿಕ್ಷಕರನ್ನು ಸೇವೆಯಿಂದ ವಜಾಗೊಳಿಸಲು ಬಿಹಾರ ಸರ್ಕಾರ ನಿರ್ಧರಿಸಿದೆ. ಈ ಕುರಿತು ಶುಕ್ರವಾರ ಅಧಿಕೃತ ಪ್ರಕಟಣೆ...

TMC ತೊರೆದು BJP ಸೇರಿದ ಮಾಜಿ ಸಂಸದರಿಗೆ ಬಿಜೆಪಿಯಿಂದ ರಾಜ್ಯಸಭಾ ಟಿಕೆಟ್

ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (TMC) ಪಕ್ಷದ ರಾಜ್ಯಸಭಾ ಸ್ಥಾನಗಳಿಗೆ ರಾಜೀನಾಮೆ ನೀಡಿದ ಕೆಲವೇ ವಾರಗಳಲ್ಲಿ, ಆ ಮೂವರು ಮಾಜಿ ಸಂಸದರು ಈಗ ಬೇರೆ ಬಣ್ಣದ (BJP) ಶಾಲು ಧರಿಸಿ ಮತ್ತೆ...

ಪಶ್ಚಿಮ ಬಂಗಾಳ: ಟಿಎಂಸಿ ಖಾತೆ ಫ್ರೀಜ್ ಮಾಡಿದ್ದ ಪೊಲೀಸರಿಗೆ ಕಲ್ಕತ್ತಾ ಹೈಕೋರ್ಟ್ ತರಾಟೆ!

ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಹಲವು ಬ್ಯಾಂಕ್ ಖಾತೆಗಳನ್ನು ಜಾರಿ ನಿರ್ದೇಶನಾಲಯ (ಇಡಿ) ಮುಟ್ಟುಗೋಲು ಹಾಕಿಕೊಂಡ ಮರುದಿನವೇ, ಪಶ್ಚಿಮ ಬಂಗಾಳ ಪೊಲೀಸರು ಮುಟ್ಟುಗೋಲು ಹಾಕಿಕೊಂಡಿದ್ದ ಪಕ್ಷದ ಮೂರು ಬ್ಯಾಂಕ್...

ಬಂಗಾಳದ ಬಿಸಿಯೂಟ ಇಸ್ಕಾನ್‌ಗೆ ಹಸ್ತಾಂತರವಿಲ್ಲ: ಸರ್ಕಾರದ ಸ್ಪಷ್ಟನೆ, ಕಲ್ಕತ್ತಾ ಹೈಕೋರ್ಟ್‌ನಿಂದ ಅಫಿಡವಿಟ್‌ಗೆ ನಿರ್ದೇಶನ 

ಕೋಲ್ಕತ್ತಾ: ರಾಜ್ಯದ ಶಾಲೆಗಳಲ್ಲಿ ಜಾರಿಯಲ್ಲಿರುವ ಪಿಎಂ-ಪೋಷಣ್ (ಮಧ್ಯಾಹ್ನದ ಬಿಸಿಯೂಟ) ಯೋಜನೆಯ ನಿರ್ವಹಣೆಯನ್ನು ಇಸ್ಕಾನ್ ಸಂಸ್ಥೆಗೆ ಹಸ್ತಾಂತರಿಸುವ ಯಾವುದೇ ಅನುಮೋದಿತ ಪ್ರಸ್ತಾಪ ಸರ್ಕಾರಕ್ಕಿಲ್ಲ ಎಂದು ಪಶ್ಚಿಮ ಬಂಗಾಳ ಸರ್ಕಾರ ಸ್ಪಷ್ಟಪಡಿಸಿದೆ. ಈ ಕುರಿತು ಅಫಿಡವಿಟ್...