Homeಮುಖಪುಟರೈತ ವಿರೋಧಿ ಕಾಯ್ದೆ: SDPI ಪಕ್ಷದಿಂದ ’ಜಾಗೋ ಕಿಸಾನ್’ ಅಭಿಯಾನ ಆರಂಭ

ರೈತ ವಿರೋಧಿ ಕಾಯ್ದೆ: SDPI ಪಕ್ಷದಿಂದ ’ಜಾಗೋ ಕಿಸಾನ್’ ಅಭಿಯಾನ ಆರಂಭ

ಈ ಅಭಿಯಾನದ ಅಂಗವಾಗಿ ರಾಜ್ಯದ ಎಲ್ಲಾ ಜಿಲ್ಲೆಗಳ ಎಪಿಎಂಸಿ ಮಾರುಕಟ್ಟೆಗಳಲ್ಲಿ, ಸಂತೆಗಳಲ್ಲಿ, ಹಳ್ಳಿಗಳಲ್ಲಿ ರೈತರನ್ನು ಭೇಟಿ ಮಾಡಿ ಜಾಗೃತಿ ಮೂಡಿಸಲಾಗುತ್ತದೆ

- Advertisement -
- Advertisement -

ಕೃಷಿ ವಿರೋಧಿ ಮಸೂದೆಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷದ (SDPI) ವತಿಯಿಂದ ರಾಜ್ಯಾದ್ಯಂತ “ಜಾಗೋ ಕಿಸಾನ್” ಎಂಬ ಅಭಿಯಾನ ನಡೆಯುತ್ತಿದ್ದು, ಇದರ ಅಂಗವಾಗಿ ನಿನ್ನೆ ಹುಬ್ಬಳ್ಳಿ ಜಿಲ್ಲಾ ಕೇಂದ್ರದಲ್ಲಿ ಸಮಾಲೋಚನ ಸಭೆ ಆಯೋಜಿಸಲಾಗಿತ್ತು.

ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಜಾರಿಗೆ ತಂದಿರುವ ರೈತ ವಿರೋಧಿ ಕೃಷಿ ಕಾನೂನುಗಳ ವಿರುದ್ಧ ದೇಶದಾದ್ಯಂತ ವ್ಯಾಪಕ ಪ್ರತಿಭಟನೆ ದಾಖಲಾಗುತ್ತಿದೆ. ಹಲವಾರು ಸಂಘಟನೆಗಳು ತಮ್ಮ ವ್ಯಾಪ್ತಿಯಲ್ಲಿಯೇ ವಿಭಿನ್ನವಾಗಿ ಪ್ರತಿಭಟಿಸುತ್ತಿವೆ. ಈ ಸಾಲಿಗೆ SDPI ಪಕ್ಷವೂ ಕೂಡಾ ಈ ಕಾನೂನುಗಳಿಗೆ ವಿರೋಧ ವ್ಯಕ್ತಪಡಿಸಿ ಕೃಷಿಕರಿಗೆ ಜಾಗೃತಿ ಮೂಡಿಸುವ ಅಭಿಯಾನವನ್ನು ಕೈಗೊಂಡಿದೆ.

ಇದನ್ನೂ ಓದಿ: ಪ್ರಧಾನಿ ಮೋದಿ, ಅಂಬಾನಿ, ಅದಾನಿ ಪ್ರತಿಮೆ ಸುಟ್ಟು ಕೃಷಿ ಮಸೂದೆಗಳಿಗೆ ರೈತರ ವಿರೋಧ!

ರಾಜ್ಯ ಕಾರ್ಯದರ್ಶಿಯಾದ ಅಬ್ರಾರ್ ಆಹಮದ್, “ಈ ಮಸೂದೆಗಳಿಂದ ಕೇವಲ ರೈತ ಅಥವಾ ಕೃಷಿ ಕ್ಷೇತ್ರದ ಮೇಲೆ ಮಾತ್ರವಲ್ಲದೇ, ಸಂಪೂರ್ಣವಾಗಿ ಮಾನವ ಸಮೂಹದ ಮೇಲೆ ಕೆಟ್ಟ ದುಷ್ಪರಿಣಾಮ ಬೀರುತ್ತದೆ. ಆದುದರಿಂದ ಇದು ಕೇವಲ ರೈತ ವಿರೋಧಿ ಆಗದೇ, ಮಾನವೀಯ ವಿರೋಧಿ ಆಗಿದೆ. ಹಾಗಾಗಿ ಸಮಸ್ತ ನಾಗರಿಕರು ಬಿಜೆಪಿ ನೇತೃತ್ವದ ಸರಕಾರ ನಡೆಸುತ್ತಿರುವ ದುರಾಡಳಿತದ ವಿರುದ್ದ ಒಗ್ಗೂಡಿ ಹೋರಾಡ ಬೇಕಾಗಿದೆ” ಎಂದು ಕರೆ ನೀಡಿದರು.

ಆದಾಯ ಇಲಾಖೆಯ ನಿವೃತ್ತ ಜಂಟಿ ಆಯುಕ್ತರಾದ ಖಾಲೀದ್ ಜಮಾದಾರ್ ಮಾತನಾಡಿ, “ಜ್ಞಾನ ಇಲ್ಲದವರಿಗೆ ಅಧಿಕಾರ ಸಿಕ್ಕರೆ ಏನಾಗುತ್ತದೆ ಎಂಬುವುದಕ್ಕೆ ಮೋದಿ ಸರ್ಕಾರವೇ ಉತ್ತಮ ಉದಾಹರಣೆ. ಇದು ಕೇವಲ SDPI ಹೋರಾಟ ಅಲ್ಲ. ಇದು ನಮ್ಮೆಲ್ಲರ ಹೋರಾಟ ಆಗಬೇಕು. ಈ ಸಣ್ಣ ಹೋರಾಟ ಜನಾಂದೋಲನವಾಗಿ ಪರಿವರ್ತನೆ ಆಗಲಿ” ಎಂದು ಹೇಳಿದರು.

ಸಭೆಯಲ್ಲಿ SDPI ಜಿಲ್ಲಾಧ್ಯಕ್ಷರಾದ ರಫೀಕ್ ಲಷ್ಕರ್, ಜಿಲ್ಲಾ ಉಪಾಧ್ಯಕ್ಷರಾದ ಸಮೀರ್ ಬೆಡಗಿರಿ, ಸಂವಿಧಾನ ಸುರಕ್ಷಾ ಸಮಿತಿ ಸಂಘಟನೆಯ ಮುಖಂಡರಾದ ಆಸೀಫ್ ಪಾಚಪುರಿ, ರೈತ ಮಖಂಡರಾದ ಪರಸಪ್ಪ ಯಲ್ಲಪ್ಪ ಕೆರೆ ಕಟ್ಟೆ, ದೇವಂದ್ರಪ್ಪ ಮುಂತಾದವರು ಉಪಸ್ಥಿತಿರಿದ್ದರು.

ಇದನ್ನೂ ಓದಿ: ಎಸ್‌ಡಿಪಿಐಗೆ ನೇರ ಪ್ರಶ್ನೆಗಳು: ರಾಜ್ಯಾಧ್ಯಕ್ಷ ಇಲ್ಯಾಸ್ ತುಂಬೆಯವರ ಸಂದರ್ಶನ

SDPI ಪಕ್ಷವು ದೇಶದಾದ್ಯಂತ ನಡೆಸುತ್ತಿರುವ ’ಜಾಗೋ ಕಿಸಾನ್’ ಅಭಿಯಾನದ ಅಂಗವಾಗಿ ರಾಜ್ಯದಲ್ಲೂ ’ಕೃಷಿ ಸಂಹಾರ ಬಿಜೆಪಿ ಹುನ್ನಾರ’ ಎಂಬ ಶಿರ್ಷಿಕೆಯ ಅಡಿಯಲ್ಲಿ ಅಕ್ಟೋಬರ್‌ 15 ರಿಂದ 31 ರವರೆಗೆ ರೈತ ಜಾಗೃತಿ ಅಭಿಯಾನ ನಡೆಸಲಿದೆ.

ಈ ಅಭಿಯಾನದ ಅಂಗವಾಗಿ ರಾಜ್ಯದ ಎಲ್ಲಾ ಜಿಲ್ಲೆಗಳ ಎಪಿಎಂಸಿ ಮಾರುಕಟ್ಟೆಗಳಲ್ಲಿ, ಸಂತೆಗಳಲ್ಲಿ, ಹಳ್ಳಿಗಳಲ್ಲಿ ರೈತರನ್ನು ಭೇಟಿ ಮಾಡಿ ಜಾಗೃತಿ ಮೂಡಿಸಲಾಗುತ್ತದೆ. ರೈತ ಹೋರಾಟಗಾರರ ಸಮಾಲೋಚನಾ ಸಭೆಯನ್ನು ನಡೆಸಲಾಗುತ್ತದೆ. ಅಷ್ಟೇ ಅಲ್ಲದೆ ಅಭಿಯಾನದಲ್ಲಿ ವಿದ್ಯಾರ್ಥಿಗಳು ಕೂಡಾ ಭಾಗವಹಿಸಬೇಕು ಎಂಬ ಉದ್ದೇಶದಿಂದ ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ ನಡೆಯಲಿದೆ.

ಈ ಬಗ್ಗೆ ನಾನುಗೌರಿ.ಕಾಮ್ ಜೊತೆ ಮಾತನಾಡಿದ ಅಭಿಯಾನದ ರಾಜ್ಯ ಕವ್ವೀನರ್‌ ಅಬ್ರಾರ್ ಅಹ್ಮದ್, “ಪಕ್ಷದ ಜಿಲ್ಲಾಮಟ್ಟದ ಎಲ್ಲಾ ಪದಾಧಿಕಾರಿಗಳಿಗೆ ಕಾಯ್ದೆಯೂ ಯಾವ ರೀತಿಯಲ್ಲಿ ಲೋಪದೋಷದಿಂದ ಕೂಡಿದೆ ಎಂಬ ಕಾರ್ಯಗಾರ ಈಗಾಗಲೇ ನಡೆದಿದೆ. ಅಭಿಯಾನದ ಪೋಸ್ಟರ್‌ ಹಾಗೂ ಕರಪತ್ರಗಳು ತಯಾರಾಗಿದ್ದು ಈಗಾಗಲೇ ಹಂಚುತ್ತಾ ಅಭಿಯಾನವನ್ನು ಪ್ರಾರಂಭಿಸಿದ್ದೇವೆ. ಅಭಿಯಾನದ ಅಂಗವಾಗಿ ಮಸೂದೆಗಳ ಬಗ್ಗೆ ರೈತರಲ್ಲಿ ಜಾಗೃತಿ ಮೂಡಿಸಲು ಕಾರ್ನರ್‌ ಮೀಟಿಂಗ್, ಕಟ್ಟೆ ಚರ್ಚೆ ಸೇರಿದಂತೆ ಸಮಾಲೋಚನಾ ಸಭೆಯನ್ನು ಎಲ್ಲಾ ಹಳ್ಳಿಗಳಲ್ಲಿ ನಡೆಸಲಿದ್ದೇವೆ” ಎಂದರು.

ಅಭಿಯಾನದ ಕೊನೆಯ ದಿನ ಅಕ್ಟೋಬರ್‌ 31 ರಂದು ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಮಾನವ ಸರಪಳಿ ರಚಿಸುವ ಮೂಲಕ ಅಭಿಯಾನಕ್ಕೆ ತಾತ್ಕಾಲಿಕ ತೆರೆ ಎಳೆಯಲಿದ್ದೇವೆ ಎಂದು ಅಬ್ರಾರ್‌ ತಿಳಿಸಿದ್ದಾರೆ.


ಇದನ್ನೂ ಓದಿ: ಆಶಾನಿ ಸಂಕೇತ ಸಿನಿಮಾ ಮತ್ತು ಜಮೀನ್ದಾರಿ ಪದ್ದತಿ ನೆನಪಿಸುವ ಕೃಷಿ ಕಾಯ್ದೆಗಳು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಫೇಸ್‌ಬುಕ್, ಇನ್‌ಸ್ಟಾಗ್ರಾಮ್‌ ವೀಕ್ಷಿಸುತ್ತಾ ಬೀದಿಯಲ್ಲಿ ತಿರುಗಾಡುವ ಯುವಕರ ಖಾತೆಗಳಿಗೆ ಹಣ...

0
"ಇನ್‌ಸ್ಟಾಗ್ರಾಮ್ ಮತ್ತು ಫೇಸ್‌ಬುಕ್‌ಗಳನ್ನು ಬಳಸಿಕೊಂಡು ಬೀದಿಗಳಲ್ಲಿ ತಿರುಗುತ್ತಿರುವ ನಮ್ಮ ಯುವಕರ ಬ್ಯಾಂಕ್ ಖಾತೆಗಳಿಗೆ ವಾರ್ಷಿಕ ಒಂದು ಲಕ್ಷ ರೂಪಾಯಿ ಮತ್ತು ತಿಂಗಳಿಗೆ 8,500 ರೂಪಾಯಿಗಳನ್ನು ಜಮಾ ಮಾಡಲಾಗುತ್ತದೆ ಎಂದು ರಾಹುಲ್‌ ಗಾಂಧಿ ಹೇಳಿದ್ದಾರೆ"...