Homeಮುಖಪುಟಮಧ್ಯಪ್ರದೇಶ: ವಿವಾದಾತ್ಮಕ ಹೇಳಿಕೆ; ಬಿಜೆಪಿ ನಾಯಕಿಗೆ ನೋಟಿಸ್!

ಮಧ್ಯಪ್ರದೇಶ: ವಿವಾದಾತ್ಮಕ ಹೇಳಿಕೆ; ಬಿಜೆಪಿ ನಾಯಕಿಗೆ ನೋಟಿಸ್!

ಅವರನ್ನು (ಕಮಲನಾಥ್) ಮುಖ್ಯಮಂತ್ರಿ ಸ್ಥಾನದಿಂದ ತೆಗೆದುಹಾಕಿದ ನಂತರ ಹುಚ್ಚರಾಗಿದ್ದಾರೆ. ಬಹುಶಃ ಅವರ ತಾಯಿ ಮತ್ತು ಸಹೋದರಿ ಬಂಗಾಳದ ಐಟಂಗಳಾಗಿರಬಹುದು ಎಂದು ಇಮಾರ್ತಿ ದೇವಿ ಹೇಳಿದ್ದರು.

- Advertisement -
- Advertisement -

ಭಾರತ ಚುನಾವಣಾ ಆಯೋಗ (ಇಸಿಐ) ಮಂಗಳವಾರ ಬಿಜೆಪಿಯ ಇಮಾರ್ತಿ ದೇವಿಗೆ ನೋಟಿಸ್ ನೀಡಿದ್ದು, ತನ್ನ ರಾಜಕೀಯ ಪ್ರತಿಸ್ಪರ್ಧಿಯ ಹೆಸರು ಹೇಳದೇ ವಿವಾದಾತ್ಮಕ ಹೇಳಿಕೆ ನೀಡಿದ್ದಕ್ಕಾಗಿ 48 ಗಂಟೆಗಳ ಒಳಗೆ ತನ್ನ ನಿಲುವನ್ನು ವಿವರಿಸುವಂತೆ ಆದೇಶಿಸಿದೆ.

ಇಮಾರ್ತಿ ದೇವಿ ಮಧ್ಯಪ್ರದೇಶದಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದು, ಈ ಹಿಂದೆ ಮಧ್ಯಪ್ರದೇಶದ ಕಾಂಗ್ರೆಸ್ ಮುಖಂಡ ಕಮಲ್ ನಾಥ್ ಇಮಾರ್ತಿ ದೇವಿಯವರನ್ನು “ಐಟಂ” ಎಂದು ಕರೆದು ವಿವಾದಕ್ಕೆ ಒಳಗಾಗಿದ್ದರು.

“ಅವರು ಬಂಗಾಳಿ ವ್ಯಕ್ತಿ. ಅವರು ಮುಖ್ಯಮಂತ್ರಿಯಾಗಲು ಇಲ್ಲಿಗೆ ಬಂದರು. ಆದರೆ ಅವರಿಗೆ ಹೇಗೆ ಮಾತನಾಡಬೇಕೆಂದು ತಿಳಿದಿಲ್ಲ. ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ತೆಗೆದುಹಾಕಿದ ನಂತರ ಅವರು ಹುಚ್ಚರಾಗಿದ್ದಾರೆ. ಅವರ ಬಗ್ಗೆ ಏನೂ ಹೇಳಲಾಗುವುದಿಲ್ಲ. ಬಹುಶಃ ಅವರ ತಾಯಿ ಮತ್ತು ಸಹೋದರಿ ಬಂಗಾಳದ ಐಟಂಗಳಾಗಿರಬಹುದು” ಎಂದು ಇಮಾರ್ತಿ ದೇವಿ ಹೇಳಿದ್ದರು.

ಇದನ್ನೂ ಓದಿ: ಮಧ್ಯಪ್ರದೇಶ: ‘ಐಟಂ’ ಹೇಳಿಕೆಗೆ ಕಮಲನಾಥ್ ವಿವರಣೆ ನೀಡಬೇಕು ಎಂದ ಚುನಾವಣಾ ಆಯೋಗ!

ಈ ವೀಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದ್ದಂತೆ ಚುನಾವಣಾ ಆಯೋಗವು ನೋಟಿಸ್ ನೀಡಿದೆ.

ಇದರ ನಡುವೆ ಕಮಲ ನಾಥ್ ಅವರಿಗೂ ನೋಟಿಸ್ ನೀಡಿ ತಮ್ಮ ಹೇಳಿಕೆಯ ಬಗ್ಗೆ ವಿವರಣೆಯನ್ನು ಕೋರಿತ್ತು. ನಂತರ ಇಂತಹ ಪದಗಳನ್ನು ಸಾರ್ವಜನಿಕವಾಗಿ ಮಾತನಾಡುವಾಗ ಬಳಸಬಾರದು ಎಂದು ಎಚ್ಚರಿಸಿತ್ತು.

ಮಾದರಿ ನೀತಿ ಸಂಹಿತೆ ಸೆಪ್ಟೆಂಬರ್ 29 ರಿಂದ ಮಧ್ಯಪ್ರದೇಶದಲ್ಲಿ ಜಾರಿಯಲ್ಲಿದೆ.


ಇದನ್ನೂ ಓದಿ: ಕಮಲನಾಥ್ ವಿವಾದಾತ್ಮಕ ಹೇಳಿಕೆ ಟೀಕಿಸಿದ ರಾಹುಲ್ ಗಾಂಧಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ಎಂಥ ವಿಪರ್ಯಾಸ ನೋಡಿ. ಒಬ್ಬ ಮಾಜಿ ಮುಖ್ಯಮಂತ್ರಿ ಒಬ್ಬ ಹೆಣ್ಣುಮಗಳಿಗೆ ಐಟಂ ಎಂದಾಗ ಈ ಆಯೋಗ ಎಲ್ಲಿ ಮಲಗಿತ್ತೋ ಏನೋ….ತನಗೆ ಬಂದ ಮಾತಿಗೆ ಪ್ರತಿಕ್ರಿಯೆ ನೀಡಿ ಸಂತ್ರಸ್ತೆ ಮಾತನಾಡಿದರೆ ಅವರಿಗೆ ‘ ನೋಟೀಸು ‘
    ಏನೇ ಆಗಲಿ, ದೇಶದಲ್ಲಿ ಕಾಂಗ್ರೆಸ್ ಪಕ್ಷ ಮಕಾಡೆ ಮಲಗಿದ್ದರೂ ಮೀಸೆ ಮಣ್ಣಾಗಿಲ್ಲ ಎಂಬಂತೆ ಮೋದಿ ವಿರುದ್ಧ, ವಿರೋಧಿಗಳ ವಿರುದ್ದ ಪುಂಖಾನುಪುಂಖವಾಗಿ ಪವಿತ್ರ ಪದಗಳನ್ನು ಉದುರಿಸುತ್ತಲೇ ಇದ್ದರೂ ನಡೆಯುತ್ತದೆ ಆದರೆ ಅನ್ನಿಸಿಕೊಂಡವರು ಪ್ರತಿಯಾಗಿ ಅಂದರೆ ಅವರಿಗೆ ನೋಟೀಸು, ಕೇಸು !
    ಆರು ವರ್ಷಗಳ ಹಿಂದೆ ಆ ಪಕ್ಷದಿಂದ ಪಡೆದ ಸೇವೆ ಇನ್ನೂ ಕೆಲಸ ಮಾಡುತ್ತಿದೆಯಾ ? ಎಂಬ ಗುಮಾನಿ

LEAVE A REPLY

Please enter your comment!
Please enter your name here

- Advertisment -

Must Read

The Mysore-Chennai Vandebharat train, inaugurated by the Prime Minister last week, collided; Calf death

‘ವಂದೇ ಭಾರತ್’ ಲಾಭದ ಪ್ರತ್ಯೇಕ ದಾಖಲೆಗಳನ್ನು ರೈಲ್ವೆ ಇಲಾಖೆ ನಿರ್ವಹಿಸುವುದಿಲ್ಲ: ಆರ್‌ಟಿಐ ಮಾಹಿತಿ

0
ವಂದೇ ಭಾರತ್ ರೈಲುಗಳ ಯಾವುದೇ ಪ್ರತ್ಯೇಕ ಆದಾಯದ ದಾಖಲೆಗಳನ್ನು ರೈಲ್ವೇ ಸಚಿವಾಲಯವು ನಿರ್ವಹಿಸುವುದಿಲ್ಲ ಎಂದು ಆರ್‌ಟಿಐ ಕಾಯ್ದೆಯಡಿಯಲ್ಲಿ ಸಲ್ಲಿಸಲಾದ ಅರ್ಜಿಗೆ ಸಚಿವಾಲಯದ ಪ್ರತಿಕ್ರಿಯೆ ನೀಡಿದೆ. ಮಧ್ಯಪ್ರದೇಶ ಮೂಲದ ಚಂದ್ರ ಶೇಖರ್ ಗೌರ್ ಅವರು ಕಳೆದ...