Homeಅಂತರಾಷ್ಟ್ರೀಯಇಸ್ರೇಲ್‌ನಾದ್ಯಂತ ಯುದ್ಧ ವಿರೋಧಿ ಪ್ರತಿಭಟನೆ : ನೆತನ್ಯಾಹು ಆಡಳಿತ ವಿರುದ್ಧ ಬೀದಿಗಿಳಿದ ಜನ

ಇಸ್ರೇಲ್‌ನಾದ್ಯಂತ ಯುದ್ಧ ವಿರೋಧಿ ಪ್ರತಿಭಟನೆ : ನೆತನ್ಯಾಹು ಆಡಳಿತ ವಿರುದ್ಧ ಬೀದಿಗಿಳಿದ ಜನ

- Advertisement -
- Advertisement -

ಗಾಝಾದಲ್ಲಿ ಸುಮಾರು 80 ಸಾವಿರದಷ್ಟು ಜನರನ್ನು ಹತ್ಯೆಗೈದ ಬಳಿಕ, ಈಗ ಲೆಬನಾನ್ ಮತ್ತು ಇರಾನ್ ಮೇಲೆ ದಾಳಿ ನಡೆಸುತ್ತಿರುವ ಇಸ್ರೇಲ್‌ನ ಬೆಂಜಮಿನ್ ನೆತನ್ಯಾಹು ಸರ್ಕಾರದ ವಿರುದ್ದ ಅಲ್ಲಿನ ನಾಗರಿಕರು ಬೀದಿಗಿಳಿದಿದ್ದಾರೆ.

ನೆತನ್ಯಾಹು ಆಡಳಿತದ ಯುದ್ದದಾಹ ಮತ್ತು ಜನ ವಿರೋಧಿಗಳ ನೀತಿಗಳ ವಿರುದ್ದ ದೇಶದ ವಿವಿಧ ಭಾಗಗಳಲ್ಲಿ ನಿರಂತರ ಪ್ರತಿಭಟನೆಗಳು ನಡೆಯುತ್ತಿವೆ. ಏಪ್ರಿಲ್ 11ರ ಮಾಧ್ಯಮ ವರದಿಗಳ ಪ್ರಕಾರ, ಪ್ರತಿಭಟನಾ ಚಳುವಳಿ ಆರನೇ ವಾರಕ್ಕೆ ಕಾಲಿಟ್ಟಿದೆ.

ಇಸ್ರೇಲ್‌ನ ಪ್ರಮುಖ ನಗರ ಟೆಲ್ ಅವೀವ್‌ನ ಹಬಿಮಾ ಸ್ಕ್ವೇರ್ ಪ್ರತಿಭಟನೆಯ ಕೇಂದ್ರಬಿಂದುವಾಗಿದ್ದು, ಇದರ ಜೊತೆಗೆ ಜೆರುಸಲೇಂ, ಹೈಫಾ ಮತ್ತು ಬೀರ್ ಶೆವಾ ನಗರಗಳಲ್ಲೂ ಪ್ರತಿಭಟನೆಗಳು ನಡೆಯುತ್ತಿವೆ.

ಇರಾನ್ ಮತ್ತು ಲೆಬನಾನ್ ವಿರುದ್ಧದ ಯುದ್ಧವನ್ನು ತಕ್ಷಣವೇ ನಿಲ್ಲಿಸಬೇಕು. ನೆತನ್ಯಾಹು ನೇತೃತ್ವದ ಬಲಪಂಥೀಯ ಸರ್ಕಾರವು ಅಧಿಕಾರದಿಂದ ಕೆಳಗಿಳಿಯಬೇಕು. ಮಿಲಿಟರಿ ಕಾರ್ಯಾಚರಣೆಯ ಬದಲಿಗೆ ಶಾಂತಿಯುತ ಮಾತುಕತೆಯ ಮೂಲಕ ಭದ್ರತೆಯನ್ನು ಕಂಡುಕೊಳ್ಳಬೇಕು ಎಂಬುವುದು ಪ್ರತಿಭಟನಾನಿರತರ ಪ್ರಮುಖ ಬೇಡಿಕೆಯಾಗಿದೆ.

ಸಾರ್ವಜನಿಕ ಸಭೆಗಳ ಮೇಲೆ ನಿಷೇಧವಿದ್ದರೂ ಸಾವಿರಾರು ಜನರು ಬೀದಿಗಿಳಿಯುತ್ತಿದ್ದಾರೆ. ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಬಲಪ್ರಯೋಗ ಮಾಡುತ್ತಿದ್ದು, ಅನೇಕರನ್ನು ಬಂಧಿಸಲಾಗಿದೆ ಎಂದು ವರದಿಯಾಗಿದೆ.

“ಲೆಬನಾನ್ ಆಕ್ರಮಣವು ವಿನಾಶಕ್ಕೆ ದಾರಿ” ಮತ್ತು “ಶಾಂತಿಯಿಂದ ಮಾತ್ರ ಭದ್ರತೆ ಸಾಧ್ಯ” ಎಂಬ ಘೋಷಣೆಗಳನ್ನು ಕೂಗುತ್ತಾ ಶಾಂತಿಗಾಗಿ ಜನರು ಆಗ್ರಹಿಸುತ್ತಿದ್ದಾರೆ. 

ಪ್ರತಿಭಟನೆಗಳು ತೀವ್ರವಾಗಿದ್ದರೂ, ಇತ್ತೀಚಿನ ಕೆಲವು ಸಮೀಕ್ಷೆಗಳ ಪ್ರಕಾರ ಇಸ್ರೇಲ್‌ನ ಬಹುಸಂಖ್ಯಾತರು ಇರಾನ್ ವಿರುದ್ಧದ ಯುದ್ಧವನ್ನು ಬೆಂಬಲಿಸುತ್ತಿದ್ದಾರೆ ಎಂದು ವರದಿಯಾಗಿದೆ, ಇದು ದೇಶದ ಒಳಗಿನ ವೈಚಾರಿಕ ಭಿನ್ನಾಭಿಪ್ರಾಯವನ್ನು ಎತ್ತಿ ತೋರಿಸುತ್ತದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪ. ಬಂಗಾಳ ಚುನಾವಣೆ | ಭವಾನಿಪುರದಲ್ಲಿ ನನ್ನ ನಾಮಪತ್ರ ರದ್ದತಿಗೆ ಪಿತೂರಿ ನಡೆದಿತ್ತು : ಮಮತಾ ಬ್ಯಾನರ್ಜಿ ಆರೋಪ

ಪಶ್ಚಿಮ ಬಂಗಾಳದ ಭವಾನಿಪುರ ವಿಧಾನಸಭಾ ಕ್ಷೇತ್ರದಲ್ಲಿ ತನ್ನ ನಾಮಪತ್ರವನ್ನು ರದ್ದುಗೊಳಿಸಲು ಉದ್ದೇಶಪೂರ್ವಕ ಪಿತೂರಿ ನಡೆದಿತ್ತು ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ. "ನಮ್ಮ ಹೋರಾಟ ಬಿಜೆಪಿ ವಿರುದ್ಧವಲ್ಲ; ವ್ಯವಸ್ಥೆಯಲ್ಲಿರುವ ದೋಷಗಳ ವಿರುದ್ಧ. ನನ್ನ ಸ್ವಂತ...

Islamabad Talks | ಅಮೆರಿಕದ ಷರತ್ತುಗಳನ್ನು ತಿರಸ್ಕರಿಸಿದ ಇರಾನ್‌ : ಯಾವುದೇ ಒಪ್ಪಂದವಿಲ್ಲದೆ ವಾಪಸ್ ಹೋದ ಜೆಡಿ ವ್ಯಾನ್ಸ್ ನಿಯೋಗ

ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿ ಆಯೋಜಿಸಿರುವ ಅಮೆರಿಕ-ಇರಾನ್‌ ನಡುವಿನ ಮಹತ್ವದ ಶಾಂತಿ ಮಾತುಕತೆ ವಿಫಲವಾದಂತೆ ಗೋಚರಿಸುತ್ತಿದೆ. ಅಮೆರಿಕದ ಪರವಾಗಿ ಮಾತುಕತೆಗೆ ಆಗಮಿಸಿದ್ದ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ನೇತೃತ್ವದ ನಿಯೋಗ, ಇರಾನ್‌ ಜೊತೆ ಯಾವುದೇ ಒಪ್ಪಂದ ಸಾಧ್ಯವಾಗದೆ...

ಹರಿಯಾಣದ ಮೋಸ್ಟ್ ವಾಂಟೆಡ್ ‘ಗ್ಯಾಂಗ್‌ಸ್ಟರ್’ ಸಾಹಿಲ್ ಚೌಹಾಣ್ ಥೈಲ್ಯಾಂಡ್ ನಿಂದ ಗಡೀಪಾರು; ದೆಹಲಿಯಲ್ಲಿ ವಶಕ್ಕೆ ಪಡೆಯಲಿರುವ ಎಸ್‌ಟಿಎಫ್

ಭಾರತೀಯ ಭದ್ರತಾ ಸಂಸ್ಥೆಗಳಿಗೆ ಒಂದು ಪ್ರಮುಖ ಪ್ರಗತಿಯಲ್ಲಿ, ಮೋಸ್ಟ್ ವಾಂಟೆಡ್ ಗ್ಯಾಂಗ್‌ಸ್ಟರ್ ಸಾಹಿಲ್ ಚೌಹಾಣ್‌ನನ್ನು ಥೈಲ್ಯಾಂಡ್‌ನಿಂದ ಗಡೀಪಾರು ಮಾಡಿದ ನಂತರ ಭಾರತಕ್ಕೆ ಕರೆತರಲಾಗುತ್ತಿದೆ. ಅಧಿಕಾರಿಗಳ ಪ್ರಕಾರ, ಚೌಹಾಣ್ ದೆಹಲಿಯ ಇಂದಿರಾ ಗಾಂಧಿ ಅಂತರಾಷ್ಟ್ರೀಯ...

ಛತ್ತೀಸ್‌ಗಢ: 5 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ: ಜೀವಂತ ಇರುವಾಗಲೇ ಗೋಣಿಚೀಲದಲ್ಲಿ ತುಂಬಿ ಬಾವಿ ಬಳಿ ಎಸೆದಿದ್ದ ಆರೋಪಿ ಬಂಧನ

ಛತ್ತೀಸ್‌ಗಢದ ದುರ್ಗ ಜಿಲ್ಲೆಯಲ್ಲಿ ಐದು ವರ್ಷದ ಬಾಲಕಿಯನ್ನು ಅಪಹರಿಸಿ ವ್ಯಕ್ತಿಯೊಬ್ಬ ಅತ್ಯಾಚಾರ ಮಾಡಿ, ನಂತರ ಮಗು ಜೀವಂತ ಇರುವಾಗಲೇ ಗೋಣಿಚೀಲದಲ್ಲಿ ಹಾಕಿ ಬಾವಿಯ ಬಳಿ ಎಸೆದಿದ್ದಾನೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ. ಉತೈ...

ಉತ್ತರಪ್ರದೇಶ: ಪ್ರೇಮ ಪ್ರಸ್ತಾಪ ತಿರಸ್ಕರಿಸಿದ್ದಕ್ಕೆ ಪ್ರತೀಕಾರ: ಮನೆಗೆ ನುಗ್ಗಿ 23ವರ್ಷದ ಯುವತಿ ಮತ್ತು ತಾಯಿಯ ಮೇಲೆ ಆಸಿಡ್ ದಾಳಿ; ಯುವತಿ ಸಾವು

ಉತ್ತರ ಪ್ರದೇಶದ ಕುಶಿನಗರ ಜಿಲ್ಲೆಯಲ್ಲಿ 23 ವರ್ಷದ ಯುವತಿಯೊಬ್ಬಳು ಪ್ರಾಣ ಕಳೆದುಕೊಂಡು ಆಕೆಯ ತಾಯಿ ಗಂಭೀರವಾಗಿ ಗಾಯಗೊಂಡ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಇಬ್ಬರು ವ್ಯಕ್ತಿಗಳನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ. ಗುರುವಾರ ರಾತ್ರಿ...

ಬೆಂಗಳೂರಿನ ಪ್ರವಾಹ ಕಾಮಗಾರಿ ಮೇ 30ರೊಳಗೆ ಪೂರ್ಣಗೊಳಿಸಿ, ಇಲ್ಲದಿದ್ದರೆ ಅಮಾನತು ಎದುರಿಸಿ; ಅಧಿಕಾರಿಗಳಿಗೆ ಎಸಿಎಸ್ ತುಷಾರ್ ಗಿರಿನಾಥ್ ಎಚ್ಚರಿಕೆ

ಬೆಂಗಳೂರು: ಮೇ 30 ರೊಳಗೆ ಬಾಕಿ ಇರುವ ಎಲ್ಲಾ ಕೆಲಸಗಳನ್ನು ಪೂರ್ಣಗೊಳಿಸಿ, ಇಲ್ಲದಿದ್ದರೆ ಅಧಿಕಾರಿಗಳನ್ನು ಅಮಾನತುಗೊಳಿಸುವಂತೆ ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿನಾಥ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಯಲಹಂಕದ ಕೇಂದ್ರೀಯ ವಿಹಾರ, ಟಾಟಾ...

ಮರ್ಯಾದೆಗೇಡು ಹತ್ಯೆ ತಡೆಯುವ ʼಇವ ನಮ್ಮವ ಇವ ನಮ್ಮವʼ ವಿಧೇಯಕಕ್ಕೆ ರಾಜ್ಯಪಾಲರಿಂದ ಸಹಿ

ರಾಜ್ಯ ವಿಧಾನಮಂಡಲ ಅಂಗೀಕರಿಸಿದ ವಿಧೇಯಕಗಳ ಪೈಕಿ, ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ವಿದ್ಯುನ್ಮಾನ ಮತಯಂತ್ರ ಬದಲಿಗೆ ಮತಪತ್ರ ಬಳಕೆ ಕಡ್ಡಾಯಗೊಳಿಸುವ ‘2026ರ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ತಿದ್ದುಪಡಿ) ವಿಧೇಯಕ’ ಹೊರತುಪಡಿಸಿ ಉಳಿದವುಗಳಿಗೆ...

ಶಾತವಾಹನ ವಿವಿ ವಿವಾದ: ಬಲಪಂಥೀಯರಿಂದ ದಲಿತ ಪ್ರಾಧ್ಯಾಪಕಿ ಮತ್ತು ವಿದ್ಯಾರ್ಥಿಗೆ ‘ನಗರ ನಕ್ಸಲರು’ ಎಂಬ ಹಣೆಪಟ್ಟಿಯಲ್ಲಿ ನಿರಂತರ ಕಿರುಕುಳ

ತೆಲಂಗಾಣದ ಶಾತವಾಹನ ವಿಶ್ವವಿದ್ಯಾಲಯದಲ್ಲಿ ದಲಿತ ಮಹಿಳಾ ಪ್ರಾಧ್ಯಾಪಕಿ ಮತ್ತು ದಲಿತ ವಿದ್ಯಾರ್ಥಿನಿಯನ್ನು "ನಗರ ನಕ್ಸಲರು" ಎಂದು ಹಣೆಪಟ್ಟಿ ಕಟ್ಟಿ ನಿರಂತರ ಕಿರುಕುಳ ನೀಡಿದ ನಂತರ ವಿವಾದ ಭುಗಿಲೆದ್ದಿದ್ದು, ಇದಕ್ಕೆ ಶಿಕ್ಷಣ ತಜ್ಞರು ಮತ್ತು...

ಕೇಂದ್ರದ ಹೊಸ ಕಾಯ್ದೆಯಿಂದ ಸಂಕಷ್ಟ : ಇಬ್ಬರು ಟ್ರಾನ್ಸ್‌ಜೆಂಡರ್ ವ್ಯಕ್ತಿಗಳಿಗೆ ಹಾರ್ಮೋನ್ ಚಿಕಿತ್ಸೆ ಮುಂದುವರಿಸಲು ಕೇರಳ ಹೈಕೋರ್ಟ್ ಅನುಮತಿ

ಟ್ರಾನ್ಸ್‌ಜೆಂಡರ್ ವ್ಯಕ್ತಿಗಳ (ಹಕ್ಕುಗಳ ರಕ್ಷಣೆ) ತಿದ್ದುಪಡಿ ವಿಧೇಯ, 2026 ಅಂಗೀಕಾರಗೊಂಡ ನಂತರ ಆಸ್ಪತ್ರೆಗಳು ತಮ್ಮ ಚಿಕಿತ್ಸೆಯನ್ನು ಸ್ಥಗಿತಗೊಳಿಸಿವೆ ಎಂದು ಆರೋಪಿಸಿದ್ದ ಇಬ್ಬರು ಟ್ರಾನ್ಸ್‌ಜೆಂಡರ್ ವ್ಯಕ್ತಿಗಳ ಹಾರ್ಮೋನ್ ಬದಲಿ ಚಿಕಿತ್ಸೆಯನ್ನು ಮುಂದುವರಿಸಲು ಕೇರಳ ಹೈಕೋರ್ಟ್...

ಮಾದಕವಸ್ತು ತನಿಖೆಗೆ ಸಹಾಯಕವಾಗಿ AI ಆಧಾರಿತ ಅಪ್ಲಿಕೇಶನ್ ಆರಂಭಿಸಿದ ಗುಜರಾತ್ ಪೊಲೀಸರು

ಅಹಮದಾಬಾದ್: ಮಾದಕವಸ್ತು ಪ್ರಕರಣಗಳ ತನಿಖೆಯನ್ನು ಸುಲಭವಾಗಿಸಲು ಮತ್ತು ವಿಚಾರಣೆಯ ಸಮಯದಲ್ಲಿ ಅವುಗಳನ್ನು ಬಲಪಡಿಸಲು, ಇದರಿಂದಾಗಿ ಶಿಕ್ಷೆಯ ಪ್ರಮಾಣ ಸುಧಾರಿಸಲು ಗುಜರಾತ್ ಪೊಲೀಸರು ಶುಕ್ರವಾರ ಕೃತಕ ಬುದ್ಧಿಮತ್ತೆ (AI) ಆಧಾರಿತ ಅಪ್ಲಿಕೇಶನ್ "NARIT AI"...