Homeಕರ್ನಾಟಕ ‘ಮೇಘ ಸಂದೇಶವೇ ನಮ್ಮ ಇಮೇಲ್’. ಎನ್.ಐ.ಎ ಪ್ರಗ್ಯಾ ಮೇಲಿನ ಕೇಸ್ ಕೈಬಿಟ್ಟಿದ್ದು ಹೀಗೆ

 ‘ಮೇಘ ಸಂದೇಶವೇ ನಮ್ಮ ಇಮೇಲ್’. ಎನ್.ಐ.ಎ ಪ್ರಗ್ಯಾ ಮೇಲಿನ ಕೇಸ್ ಕೈಬಿಟ್ಟಿದ್ದು ಹೀಗೆ

ಠಕ್ಕರ್: ಭೋಪಾಲದಲ್ಲಿ ವಿಷಾನಿಲದೊಂದಿಗೆ ಮುಖಾಮುಖಿ

- Advertisement -
- Advertisement -

| ಮಲ್ಲಿ |

‘ಉಜ್ಜೋಣ ಉಜ್ಜೋಣ ಅಂಬಾ ಬೆನ್ನು ಉಜ್ಜೋಣ’

ಪ್ರಗ್ಯಾ ಮನೆ ಸಮೀಪ ಹೋದಂತೆ ಒಂಥರಾ ವಿಷಾನಿಲದ ವಾಸನೆ…. ತೀರಾ ಸಮೀಪವೇ ಹೋದಾಗ ಸೆಗಣಿ ವಾಸನೆ.. ಹಾಂ, ಇದು ಪ್ರಗ್ಯಾ ಮನೆಯೇ ಎಂದು ಪಕ್ಕಾ ಆಗುತ್ತಿದ್ದಂತೆ, ಅಂಗಳದಲ್ಲಿ ಅಂಬಾ ಬೆನ್ನು ಉಜ್ಜುತ್ತ ನಿಂತಿದ್ದ ಪ್ರಗ್ಯಾ ಕಂಡೇಬಿಟ್ಟರು.

ಅಕ್ಕೋ, ಕರ್ನಾಟಕದಿಂದ ಬಂದೀನಿ… ಲೂಜಾವರ ಸ್ವಾಮೀಜಿ ತಮ್ಮ ಇಂಟರ್‍ವ್ಯೂ ಮಾಡಾಕೆ ಕಳಿಸಿದ್ದಾರೆ.
‘ಓಹ್, ಮೊನ್ನೆನೇ ಅವರ ವ್ಯಾಟ್ಸಪ್ ಬಂದಿತ್ತು, ನಿನ್ನೆ ಇಮೇಲ್ ಕೂಡ ಕಳಿಸಿದ್ದರು… ಬಾರಪ್ಪ ಬಾ’ ಎಂದು ಗೋವಿನ ಹಿಂಭಾಗದ ತುದಿಯಿಂದ ಮುಂದಕ್ಕೆ ಉಜ್ಜತೊಡಗಿದರು.
‘ಅಲ್ಲ ಅಕ್ಕವ್ವ, ನೀವೇನೋ ವ್ಯಾಟ್ಸಪ್, ‘ಮೇಲ್’ ಬಳಸಬಹುದು. ಆದರೆ, ಲೂಜಾವರರು ಬಳಸ್ತಾರಾ?’
‘ಅವ್ರು, ನಾನು ಎಲ್ಲ 1988ರಿಂದಾನೇ ಬಳಸ್ತಾ ಇದೀವಿ…’
‘ಮೋದಿ ಹಂಗೆ ಹೇಳಿದ್ದಕ್ಕೆ ಜನ ನಗ್ತಾ ಅವ್ರೆ ಅಕ್ಕಾ’
‘ದಡ್ಡರು ನೀವೆಲ್ಲ…. ನಮ್ಮ ‘ಮೇಲು’ ಅಂದ್ರೆ ಅದು ಮೇಘ ಸಂದೇಶ… ಮೋಡದ ಮೂಲಕವೇ ಸಂದೇಶ ರವಾನಿಸಿಕೊಳ್ತೀವಿ…ಅದನ್ನು ಬೇರೆಯವರು ನೋಡಾಕಾಗಲ್ಲ…ಮೋಡಗಳ ರಕ್ಷಣೆಯಲ್ಲಿ ಅದು ಹರಿದು ನಮ್ಮವರನ್ನ ತಲುಪುತ್ತೆ’
‘ಅದಿರ್ಲಿ ಅಕ್ಕಾ, ‘ಮೇಲು’ ಬಂದು ಇನ್‍ಬಾಕ್ಸ್‍ಗೆ ಬೀಳ್ತಾವೆ. ಆದ್ರೆ ನಿಮ್ಮ ಮೇಘ ಸಂದೇಶ ಎಲ್ಲಿ ಬೀಳತ್ತೆ? ನಿಮ್ಗೆ, ಲೂಜಾವರರಿಗೆ ಬಕ್ಕಣ (ಕಿಸೆ, ಪಾಕೆಟ್) ಬೇರೆ ಇಲ್ವಲ್ಲ?’
‘ಮೂರ್ಖ. ಆ ಸಂದೇಶಗಳು ಸೀದಾ ಆತ್ಮವನ್ನ ತಲುಪ್ತಾವೆ’
‘ಹಂಗಾದ್ರೆ ನಿಂಗೆ ಶಿಕ್ಷೆ ಆಗಲ್ಲಕ್ಕ… ತನಿಖೆ ಮಾಡೋರಿಗೆ ನಿಮ್ಮ ಮೇಘ ಸಂದೇಶ ಸಿಗೋದೇ ಇಲ್ವಲ್ಲ?’
‘ಇದು ಆಫ್ ದಿ ರೆಕಾರ್ಡ್ ಇರಲಿ..’

‘ಅಕ್ಕಾ ಹಿಂಗ ಉಜುತ್ತೀರಲ್ಲ ಆಕಳ ಬೆನ್ನನ್ನ… ಬಿಪಿ ಕಂಟ್ರೋಲ್‍ಗೆ ಬರೋದು ಆಕಳದ್ದೋ, ನಿಮ್ದೋ ಅಕ್ಕಾ’
‘ಪೆದ್ದ, ಗೋಮಾತೆಗೆ ಬಿಪಿ, ಶುಗರ್ ಬರಲ್ಲ’
‘ನಾ ಬಂದಾಗಿಂದ ನೋಡತಿನಿ, ಉಜ್ತಾನೇ ಇದ್ದೀರಿ… ಸೋಲೋ ಭಯದಲ್ಲಿ ಬಿಪಿ ಏರುಪೇರಾಗಿದೆಯಾ?
‘ಓವರ್ ಆಯ್ತು… ಶಾಪ ಕೊಡ್ಲಾ?’
‘ಬೇಡಕ್ಕೋ, ಸಾರಿ….ಅಕ್ಕಾ ಅಕ್ಕಾ, ಕ್ಯಾನ್ಸರ್ ಔಷಧಿ ಬೀಳ್ತಾ ಇದೆ…. ಒಂದು ಬಾಟಲ್ ಕೊಡಕ್ಕ’
(ಆಕಳು ಒಂದು ಕೊಡದಷ್ಟು ಸೂಸು ಮಾಡಿತು…)
‘ಹೇಯ್, ನಿಂಗೆ ಬೇಕಾದ್ರೆ ಅಲ್ಲಿ ಕರ್ನಾಟಕದಲ್ಲಿ ಸಿಗುತ್ತೆ… ರಾಮ್ದೇವ್ ನನ್ನ ಫಾರ್ಮುಲಾ ಇಟ್ಗೊಂಡು, ಗೋಮೂತ್ರಗಳ ಪಾಕೆಟ್ ಮಾಡಿ ‘ಹೇತಂಜಲಿ’ಯಲ್ಲಿ ಮಾರ್ತಾನೆ…’

‘ಅಕ್ಕಾ ಈ ರೇಡಾರ್ ಬಗ್ಗೆ ನಿಂಗೇನಾದ್ರೂ ಗೊತ್ತಾ ಅಕ್ಕ?’
‘ಚಿಕ್ಕಪ್ಪಯ್ಯ ಹೇಳಿದ್ದನ್ನ ಜೋಕ್ ಮಾಡ್ತೀದಿಯಾ? ಆಫ್ ದಿ ರೆಕಾರ್ಡ್ ಕೇಳು: ನಮ್ಮನ್ನೆಲ್ಲ ಜೈಲಿಗೆ ಹಾಕಿದ್ರಾ… ಅಮಿತಣ್ಣಂಗೂ ಜೈಲು ಕಾದಿತ್ತಾ? ಚಿಕ್ಕಪ್ಪ ಮೋಡ ಸೃಷ್ಟಿಸಿಬಿಟ್ಟ… ಎನ್‍ಐಎ ಕಣ್ಣಿನ ಪೊರೆಗೆ ಈ ಮೋಡ ಅಮರಿಕೊಂಡವು… ಅಸೀಮಾನಂದ ಕಾಕಾ ಅದಕ್ಕೇ ರಿಲೀಸ್ ಆಗಲಿಲ್ವಾ… ನಮ್ಮ ಚಿಕ್ಕಪ್ಪ ಹೇಳಿದ್ದು ನಿಮ್ಗೆ ಅರ್ಥ ಆಗಲ್ಲ…’
(ಪ್ರಗ್ಯಕ್ಕ ಎದೆ ಮೇಲೆ ಕೈ ಇಟ್ಟುಕೊಂಡು ಕಣ್ಣು ಮುಚ್ಚಿಕೊಂಡರು….ಆಕಳು ಅಂಬಾ ಅಂದಿತು…)
‘ಏನಾಯ್ತಕ್ಕಾ, ಎದೆನೋವಾ?’
‘ನೋ ನೋ… ಆತ್ಮಕ್ಕೆ ಮೇಘ ಸಂದೇಶವೊಂದು ಬಂದಿದೆ, ಚಿಕ್ಕಪ್ಪಯ್ಯನ ಕಡೆಯಿಂದ’
‘ಆಯ್ತಕ್ಕ ಇನ್‍ಬಾಕ್ಸ್…. ಸಾರಿ… ಆತ್ಮವ ತೆರೆದು ಮೇಲು ನೋಡು… ಬರ್ಲಾ ಅಕ್ಕಾ…ಒಂದೇ ಒಂದು ಸಲ ಉಜ್ಜಲಾ?’
(ಟೊಣಪನೊಬ್ಬ ಬಂದು ಏ ಎಂದು ಗದರಿಸಿದ)
‘ಉಜ್ಜಲಿ ಬಿಡು…. ಗೋಮಾತೆ ಇರೋದೇ ಉಜ್ಜಲು, ಬಿಪಿ ಕಂಟ್ರೋಲ್ ಮಾಡಿಕೊಳ್ಳಲು…’
ನಮ್ಮ ಠಕ್ಕಣ್ಣ ಆಕಳಿನ ಬೆನ್ನು ಉಜ್ಜುವಾಗ ಮತ್ತೆ ವಿಷಾನಿಲದ ವಾಸನೆ… ಭಯ ಬಿದ್ದವನೇ ಅಲ್ಲಿಂದ ಪರಾರಿಯಾಗಿ ಬಂದಿದ್ದಾನೆ…

ದೇಶದೊಳಗಿನ ‘ಬಾಂಬು’ ಪ್ರಗ್ಯಾ ಎಂಬ ಸಾಧ್ವಿಯೂ… ಸುರಕ್ಷತೆ ಬಗ್ಗೆ ಕುಟ್ಟುತ್ತಲೇ ಇರುವ ಮೋದಿಯೂ…

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...