Homeಅಂಕಣಗಳುಜಂಟಿ ಕಾರ್ಯದರ್ಶಿ ಹುದ್ದೆಗಳ ನೇರ ನೇಮಕದ ಹುನ್ನಾರಗಳು

ಜಂಟಿ ಕಾರ್ಯದರ್ಶಿ ಹುದ್ದೆಗಳ ನೇರ ನೇಮಕದ ಹುನ್ನಾರಗಳು

- Advertisement -
- Advertisement -

ಇದೊಂದು ತೀರಾ ಅಪಾಯಕಾರಿ ಸಂವಿಧಾನ ವಿರೋಧಿ ನಡೆ. ಭಾರತೀಯ ಪ್ರತಿಭಾವಂತ ಉತ್ಸಾಹಿಗಳಿಗೆ ಸದೃಢ ಭಾರತವನ್ನು ಕಟ್ಟಲು ನೀವು ಜಂಟಿ ಕಾರ್ಯದರ್ಶಿಯಾಗಿ ಸರಕಾರದೊಂದಿಗೆ ಕೈಜೋಡಿಸಿ ಎಂದು ಹೇಳುವ ಸರಕಾರದ ಈ ಘೋಷಣೆಯಲ್ಲಿಯೇ ಬಹುದೊಡ್ಡ ಹುನ್ನಾರ ಅಡಗಿದೆ. ನೇರ ಆಯ್ಕೆಯಲ್ಲಿ ಆಯ್ಕೆಯಾಗುವ ಈ ಜಾಯಿಂಟ್ ಸೆಕ್ರೆಟ್ರಿಗಳು ಯೋಜನೆಗಳನ್ನು ರೂಪಿಸುವುದಲ್ಲದೆ, ಈ ಯೋಜನೆಗಳನ್ನು ಸ್ವತಂತ್ರವಾಗಿ ಜಾರಿಗೊಳಿಸುವ ಪರಮಾಧಿಕಾರವನ್ನೂ ಹೊಂದಿದ್ದಾರೆ.
ಇದೀಗ ಹಣಕಾಸು, ಆರ್ಥಿಕವ್ಯವಹಾರ, ಕೃಷಿ ಮತ್ತು ಕೃಷಿಕರ ಕಲ್ಯಾಣ, ಸಾರಿಗೆ, ನಾಗರಿಕ ವಿಮಾನಯಾನ, ನೌಕಾಯಾನ, ಪರಿಸರ, ಅರಣ್ಯ ಮೊದಲಾದ ಪ್ರಮುಖ 10 ಇಲಾಖೆಗಳಿಗೆ ಈ ಹುದ್ದೆಗಳನ್ನು ಕರೆಯಲಾಗಿದೆ. ಹುದ್ದೆಗಿರುವ ಮಾನದಂಡಗಳನ್ನು ಗಮನಿಸೋಣ. ಜುಲೈ 1, 2018 ಕ್ಕೆ ಸರಿಯಾಗಿ 40 ವರ್ಷ ತುಂಬಿರಬೇಕು, ಪದವೀಧರರಾಗಿರಬೇಕು, ಈಗಾಗಲೆ ಜಾಯಿಂಟ್ ಸೆಕ್ರೆಟರಿಯ ಪದನಾಮಕ್ಕೆ ಸಮನಾದ ಹುದ್ದೆಗಳಲ್ಲಿ ಅನುಭವ ಇದ್ದವರಿಗೆ ಆದ್ಯತೆ ಇದೆ. ಖಾಸಗಿಯಾಗಿಯೂ ಕನಿಷ್ಠ 15 ವರ್ಷಗಳ ಕಾಲ ಖಾಸಗಿ, ಡೀಮ್ಡ್ ಕಂಪನಿಗಳನ್ನು ಒಳಗೊಂಡಂತೆ ವಿಶ್ವವಿದ್ಯಾಲಯಗಳು, ಎನ್‍ಜಿಓಗಳಲ್ಲಿ ಕೆಲಸ ಮಾಡಿದವರನ್ನೂ ಪರಿಗಣಿಸಲಾಗುವುದು. ಇದು 3 ವರ್ಷದಿಂದ 5 ವರ್ಷದ ಅವಧಿಯ ಕಾಂಟ್ರಾಕ್ಟ್ ಬೇಸ್ಡ್ ಆದ ಜವಾಬ್ದಾರಿಯಾಗಿದೆ. ಸಂಬಳ 144200 ರಿಂದ 218200/- ತನಕ ನಿಗದಿ ಮಾಡಬಹುದಾಗಿದೆ. ಇದೇ ಜೂನ್ 15 ರಿಂದ ಜುಲೈ 30 ರತನಕ ಅರ್ಜಿಯನ್ನು ಆನ್‍ಲೈನಲ್ಲಿ ಆಹ್ವಾನಿಸಲಾಗಿದೆ. ಅರ್ಜಿ ಹಾಕಿದವರಲ್ಲಿ ಅರ್ಹರಾದವರ ಅಂತಿಮ ಪಟ್ಟಿ ಸಿದ್ಧಪಡಿಸಿ, ಈ ಅಂತಿಮ ಪಟ್ಟಿಯಲ್ಲಿರುವವರನ್ನು ಸಂದರ್ಶನದ ಮೂಲಕ ಆಯ್ಕೆ ಮಾಡಿಕೊಳ್ಳಲಾಗುತ್ತದೆ.
ಕಾರ್ಪೊರೇಟ್‍ಗಳು, ಬಂಡವಾಳಶಾಹಿಗಳು ಹಣ ಹೂಡಿ ಒಬ್ಬ ರಾಜಕಾರಣಿಯನ್ನು ಗೆಲ್ಲಿಸುವುದಿದೆ. ಅದೀಗ ದೇಶದ ಬಲಾಢ್ಯ ಕಾರ್ಪೊರೇಟ್‍ಗಳ ಒಕ್ಕೂಟ ಬಂಡವಾಳ ಹೂಡಿ ಈ ದೇಶದ ಪ್ರಧಾನಿಯನ್ನು ನಿರ್ಧರಿಸುವ ಹಂತಕ್ಕೆ ತಲುಪಿದೆ. ಆದರೆ ಭಾರತೀಯ ನಾಗರಿಕ ಸೇವೆಯ ಉನ್ನತ ಅಧಿಕಾರಿಗಳನ್ನು ಹೀಗೆ ಕೊಳ್ಳುವುದು ಕಷ್ಟ. ಈತನಕ ಲೋಕಸೇವಾ ಆಯೋಗದ ಐಎಎಸ್‍ನ ಆಯ್ಕೆ ಸಾಧ್ಯವಾದಷ್ಟು ಪಾರದರ್ಶಕವಾಗಿ ನಡೆಯುತ್ತಿದೆ. ಆದರೆ ಈ ಬೆಳವಣಿಗೆಯನ್ನು ನೋಡಿದರೆ ಕಾರ್ಪೊರೇಟ್ ಶ್ರೀಮಂತರ ಒಕ್ಕೂಟ ಇದೀಗ ಲೋಕಸೇವಾ ಆಯೋಗಕ್ಕೂ ಲಗ್ಗೆ ಇಟ್ಟು ತಮಗೆ ಬೇಕಾದವರನ್ನು ನಿರ್ಧರಿಸಿ ಅವರ ಆಯ್ಕೆಗೆ ಬೇಕಾದ ಲಾಬಿ ಮಾಡುವ ಕಾಲವೂ ದೂರವಿಲ್ಲ ಅನ್ನಿಸುತ್ತದೆ. ಹಾಗಾಗಿ ಮೊದಲನೆಯದಾಗಿ ನಾಗರಿಕ ಸೇವೆಯ ಕನಸು ಕಾಣುವ ಯುವ ಸಮುದಾಯ ಈ ಬಗ್ಗೆ ಎಚ್ಚರಗೊಳ್ಳಬೇಕಿದೆ.
ಈ ನಡೆಯ ಅಪಾಯವನ್ನು ಪಕ್ಷಾತೀತವಾಗಿ ವಿರೋಧಿಸುವಿಕೆ ಕಂಡುಬರುತ್ತಿದೆ. ಅಂತಹ ಕೆಲವು ಚರ್ಚೆಗಳನ್ನು ಗಮನಿಸುವಾಗ ಬಿಹಾರದ ಆರ್‍ಜೆಡಿ ಮುಖಂಡ ತೇಜಸ್ವಿ ಯಾದವ್ ಟ್ವೀಟ್‍ನ್ನು ಗಮನಿಸಬಹುದು, `ಈ ಮನುವಾದಿ ಸರಕಾರ ಯುಪಿಎಸ್‍ಸಿ ವ್ಯವಸ್ಥೆಯನ್ನು ಬದಿಗೆ ಸರಿಸಿ, ಯಾವುದೇ ಪರೀಕ್ಷೆ ನಡೆಸದೆ ತನಗಿಷ್ಟ ಬಂದವರನ್ನು ಜಂಟಿ ಕಾರ್ಯದರ್ಶಿಗಳಂತಹ ಪ್ರಮುಖ ಹುದ್ದೆಗೆ ಆಯ್ಕೆ ಮಾಡಿಕೊಳ್ಳುವುದು ಸರಿಯೇ? ಇದು ಸಂವಿಧಾನದ ಮತ್ತು ಮೀಸಲಾತಿ ನಿಯಮದ ಉಲ್ಲಂಘನೆಯಾಗಿದೆ. ನಾಳೆ ಚುನಾವಣೆ ನಡೆಸದೆ ಪ್ರಧಾನಿಯನ್ನು ಮತ್ತು ಸಚಿವ ಸಂಪುಟವನ್ನೂ ಅವರು ನೇಮಿಸಬಹುದು. ಈ ಸರಕಾರ ಸಂವಿಧಾನವನ್ನು ಒಂದು ತಮಾಷೆಯ ವಿಷಯವನ್ನಾಗಿಸಿದೆ’ ಎನ್ನುತ್ತಾರೆ. ಅಂತೆಯೇ ಕಾಂಗ್ರೆಸ್ ಮುಖಂಡ ಪಿ.ಎಲ್.ಪುನಿಯಾ `ಬಿಜೆಪಿ ಕಾರ್ಯಕರ್ತರಿಗೆ ಹಾಗೂ ಆರೆಸ್ಸೆಸ್ ಸಿದ್ಧಾಂತದ ಹಿನ್ನೆಲೆಯ ವ್ಯಕ್ತಿಗಳಿಗೆ ಅವಕಾಶ ಮಾಡಿಕೊಡಲು ಸರಕಾರ ರೂಪಿಸಿದ ಯೋಜನೆ ಇದಾಗಿದೆ. ಇಂತಹ ಪ್ರಮುಖ ಹುದ್ದೆಗಳಿಗೆ ಆರೆಸ್ಸೆಸ್ ಹಿನ್ನೆಲೆಯ ವ್ಯಕ್ತಿಗಳನ್ನು ನೇಮಿಸಿ ಅವರು ಸರಕಾರದ ನಿರ್ಧಾರದ ಮೇಲೆ ನೇರವಾಗಿ ಪ್ರಭಾವ ಬೀರುವ ಯೋಜನೆ ಇದಾಗಿದೆ’ ಎಂದು ಟೀಕಿಸಿದ್ದಾರೆ.
ಅಧಿಸೂಚನೆಯಲ್ಲಿ `ಪ್ರತಿಭಾವಂತ ಉತ್ಸಾಹಿ’ ಎನ್ನುವ ಪದವನ್ನು ಬಳಸಲಾಗಿದೆ. ಈ ಪದವೆ ಮೀಸಲಾತಿಯ ವಿರೋಧಿಯಾಗಿದೆ. ಪ್ರತಿಭಾವಂತರನ್ನು ಗುರುತಿಸುವ ಮಾನದಂಡಗಳೇನು? ನಿಸ್ಸಂಶಯವಾಗಿ ಇದು ಮೇಲುಜಾತಿಗಳ, ಕಾರ್ಪೋರೇಟ್ ಕಂಪನಿಗಳ ಸಿಇಓಗಳಂತವರನ್ನು ಪ್ರತಿಭಾವಂತರೆಂದು ಭಾವಿಸುವ ಸಾಧ್ಯತೆಯಿದೆ. ಅಂತೆಯೇ ಆರ್‍ಎಸ್‍ಎಸ್ ನಂತಹ ಸಂಸ್ಥೆಗಳಲ್ಲಿರುವವರು ನಿಸ್ಸಂಶಯವಾಗಿ ಈ ಹುದ್ದೆಗಳಿಗೆ ಆಯ್ಕೆಯಾಗುವ ಬಗ್ಗೆ ಈಗಾಗಲೆ ಹಲವಾರು ರಾಜಕೀಯ ನಾಯಕರು ಪ್ರತಿಕ್ರಿಯಿಸಿದ್ದಾರೆ.
ಈ ಹುದ್ದೆಗಳು ಕಾಂಟ್ರಾಕ್ಟ್ ಬೇಸ್ಡ್ ಎನ್ನುತ್ತಲೇ, ಮೂರರಿಂದ ಐದು ವರ್ಷದ ಅವಧಿಯ ಹುದ್ದೆಗಳು ಎಂದಾಗ, ಇವರುಗಳು ಸರಕಾರದ ಪೂರ್ಣಪ್ರಮಾಣದ ಯೋಜನೆಗಳನ್ನು ಜಾರಿ ಮಾಡುವ ಅಧಿಕಾರವನ್ನು ಹೇಗೆ ಪಡೆಯುತ್ತಾರೆ? ಯಾವುದೇ ಯೋಜನೆಗಳು ಜಾರಿಯಾದಾಗಲೂ ಅದಕ್ಕೆ ಅಧಿಕಾರಿ ವಲಯವೆ ಉತ್ತರದಾಯಿತ್ವವನ್ನು ಹೊಂದಿರುತ್ತದೆ. ಯಾವುದೇ ಮಂತ್ರಿ ಭ್ರಷ್ಟಾಚಾರ ಮಾಡಿದಾಗಲೂ ಆಯಾ ಮಂತ್ರಿಯ ಸಚಿವಾಲಯವೂ ಇದಕ್ಕೆ ಉತ್ತರದಾಯಿತ್ವದ ಜವಾಬ್ದಾರಿಯನ್ನು ಹೊರಬೇಕಾಗುತ್ತದೆ. ಹಾಗಾದರೆ ಯೋಜನೆಗಳನ್ನು ಜಾರಿಗೊಳಿಸಿ ಐದು ವರ್ಷದ ನಂತರ ಹುದ್ದೆಗಳನ್ನು ಬಿಟ್ಟುಹೋದರೆ ಈ ಯೋಜನೆಗಳ ಉತ್ತರದಾಯಿತ್ವದ ಹೊಣೆಗಾರಿಕೆ ಯಾರದು? ಎನ್ನುವ ಪ್ರಶ್ನೆಯಿದೆ. ಇದು ಭಾರತೀಯ ನಾಗರಿಕ ಸೇವಾ ಅಧಿಕಾರಿಗಳಿಗೆ ದೊಡ್ಡ ಗಂಡಾಂತರ ತಂದಿಡುತ್ತದೆ. ಕಾರಣ ಈ ಅರೆಕಾಲಿಕ ಜಾಯಿಂಟ್ ಸೆಕ್ರೆಟ್ರಿಗಳು ಮಾಡಿದ ಯಡವಟ್ಟುಗಳಿಗೆ ಈ ಐಎಎಸ್ ಅಧಿಕಾರಿಗಳು ಉತ್ತರ ಕೊಡಬೇಕಾಗುತ್ತದೆ. ಹಾಗಾಗಿ ಮೊದಲನೆಯದಾಗಿ ಐಎಎಸ್ ಅಧಿಕಾರಿಗಳ ಸಮೂಹ ಈ ಆಯ್ಕೆ ಕ್ರಮವನ್ನು ಗಟ್ಟಿಯಾಗಿ ಪ್ರತಿರೋಧಿಸಬೇಕಿದೆ.
ಈ ಮೇಲಿನ ಸಂಗತಿಗಳನ್ನು ಒಳಗೊಂಡಂತೆ ಸೂಕ್ಷ್ಮವಾಗಿ ಗಮನಿಸಿದರೆ, ಕೆಲವು ಗಂಭೀರ ಪ್ರಶ್ನೆಗಳು ಕಾಡುತ್ತವೆ. ಮೊದಲೆ ಹೇಳಿದಂತೆ, ಜನರು ಚುನಾವಣೆಯ ಮೂಲಕ ಜನಪ್ರತಿನಿಧಿಗಳನ್ನು ಆಯ್ಕೆ ಮಾಡುವ ಶಾಸಕಾಂಗವನ್ನು ಬಂಡವಾಳಶಾಹಿ ಶಕ್ತಿಗಳು ನಿಯಂತ್ರಿಸುತ್ತಿವೆ. ಅಂತೆಯೇ ಈಚಿನ ನ್ಯಾಯಾಂಗದ ಕೆಲವು ತೀರ್ಮಾನಗಳನ್ನು ನೋಡಿದರೆ ಕಾರ್ಪೊರೇಟ್ ಶಕ್ತಿಗಳಿಗೆ ನ್ಯಾಯಾಂಗವೂ ಮಣಿಯುತ್ತಿರುವಂತಿದೆ. ಆಳ್ವಿಕೆಗೆ ಸಂಬಂಧಿಸಿದ ಶಾಸನಗಳನ್ನು ಶಾಸಕಾಂಗ ರಚಿಸಿದರೆ, ನ್ಯಾಯಾಂಗ ಅದನ್ನು ಅರ್ಥೈಸುತ್ತದೆ, ಅನ್ವಯಿಸುತ್ತದೆ. ಆದರೆ ಇದನ್ನು ಜಾರಿ ಮಾಡುವುದು, ಈ ಶಾಸನಗಳನ್ನು ಕಾರ್ಯಗತ ಮಾಡುವ ಪರಮ ಅಧಿಕಾರ ಕಾರ್ಯಾಂಗಕ್ಕಿದೆ. ಸಂವಿಧಾನಬದ್ಧವಾಗಿ ಕಾರ್ಯನಿರ್ವಹಿಸಬೇಕಿರುವ ಕಾರ್ಯಾಂಗ ಸಾಮಾನ್ಯವಾಗಿ ಸಂವಿಧಾನಿಕವಲ್ಲದ ನಡೆಗಳನ್ನು ಬೆಂಬಲಿಸುವುದಿಲ್ಲ. ಹಾಗಾಗಿ ಶಾಸಕಾಂಗ ಮತ್ತು ನ್ಯಾಯಾಂಗವನ್ನು ಕಾರ್ಪೊರೇಟ್ ಶಕ್ತಿಗಳು ಮಣಿಸಿದಂತೆ ಸುಲಭವಾಗಿ ಕಾರ್ಯಾಂಗವನ್ನು ಮಣಿಸುವುದು ಕಷ್ಟ. ಮೇಲಿನ ಜಂಟಿಕಾರ್ಯದರ್ಶಿಗಳ ನೇರ ಆಯ್ಕೆ, ನೇರವಾಗಿ ಕಾರ್ಯಾಂಗವನ್ನು ಕೈವಶಮಾಡಿಕೊಳ್ಳುವ ಹುನ್ನಾರವಾಗಿದೆ. ಹೀಗಾಗಿ ಈಗಿನ ಕಾರ್ಯಾಂಗದ ಭಾಗವಾಗಿರುವ ಸದಸ್ಯರು ಈ ಆಯ್ಕೆಯ ಬಗ್ಗೆ ಸಂವಿಧಾನಿಕ ವಿರೋಧಿ ನಡೆಯನ್ನು ಜನರೆದುರು ಬಯಲುಗೊಳಿಸಬೇಕಿದೆ.
ಇದನ್ನು ಗಮನಿಸಿದರೆ, ಈಗಾಗಲೆ ಇರುವ ಕಾರ್ಯಾಂಗವನ್ನು ಬದಿಗೆ ಸರಿಸಿ ತಮಗೆ ಬೇಕಾದ ಕಾರ್ಯಾಂಗವನ್ನು ಮರುಸೃಷ್ಟಿ ಮಾಡಿಕೊಳ್ಳುತ್ತಿದೆ. ಇದು ದೇಶದ ಸಂವಿಧಾನಕ್ಕೆ ಎದುರಾದ ಬಹುದೊಡ್ಡ ಗಂಡಾಂತರಗಳಲ್ಲಿ ಒಂದಾಗಿದೆ. ಈ ದೇಶದ ದಲಿತ ದಮನಿತ ಕೆಳಜಾತಿ ಅಲ್ಪಸಂಖ್ಯಾತರು ಈ ಆಯ್ಕೆ ಪ್ರಕ್ರಿಯೆಯ ವಿರುದ್ಧ ದೇಶವ್ಯಾಪಿ ಸಂವಿಧಾನಬದ್ಧ ಪ್ರಶ್ನೆಗಳನ್ನು ಕೇಳಬೇಕಾಗಿದೆ. ಕಾರಣ ಈ ನಡೆ ಪರೋಕ್ಷವಾಗಿ ಸಂವಿಧಾನವನ್ನು ಇಲ್ಲವಾಗಿಸುವ ಹುನ್ನಾರ. ಅಂತೆಯೇ ಈ ಬಗೆಯ ಚಟುವಟಿಕೆಗಳ ಮೂಲಕವೆ ಸಂವಿಧಾನವನ್ನು ನಿಧಾನಕ್ಕೆ ದುರ್ಬಲಗೊಳಿಸಲಾಗುತ್ತದೆ. ಅದರ ಜತೆಗೆ ಸಂವಿಧಾನ ಪರವಾದ ಹೋರಾಟ ಮತ್ತು ಚಳವಳಿಗಳನ್ನೂ ದಿಕ್ಕುತಪ್ಪಿಸುವ ಸಾಧ್ಯತೆಯಿದೆ.

– ಅರುಣ್ ಜೋಳದ ಕೂಡ್ಲಿಗಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...