Homeರಾಷ್ಟ್ರೀಯಜುಬೇರ್‌‌‌ ಬಂಧನ: ಕೋರ್ಟ್‌ ತೀರ್ಪು ಪ್ರಕಟಿಸುವ ಮೊದಲೇ ‘ಆದೇಶ’ ಸೋರಿಕೆ ಮಾಡಿದ ದೆಹಲಿ ಪೊಲೀಸ್!

ಜುಬೇರ್‌‌‌ ಬಂಧನ: ಕೋರ್ಟ್‌ ತೀರ್ಪು ಪ್ರಕಟಿಸುವ ಮೊದಲೇ ‘ಆದೇಶ’ ಸೋರಿಕೆ ಮಾಡಿದ ದೆಹಲಿ ಪೊಲೀಸ್!

- Advertisement -
- Advertisement -

2018 ರಲ್ಲಿ ಮಾಡಿದ್ದ ಟ್ವೀಟ್‌ನ ವಿರುದ್ಧ ದಾಖಲಿಸಲಾದ ಪ್ರಕರಣದ ಜಾಮೀನು ಅರ್ಜಿಯ ತೀರ್ಪನ್ನು ನ್ಯಾಯಾಲಯ ಪ್ರಕಟಿಸುವ ಮೊದಲೇ ಸೋರಿಕೆಯಾಗಿದೆ ಎಂದು ಅಂತಾರಾಷ್ಟ್ರೀಯ ಖ್ಯಾತಿಯ ಫ್ಯಾಕ್ಟ್‌ಚೆಕ್ಕರ್‌, ಪತ್ರಕರ್ತ ಮೊಹಮ್ಮದ್ ಜುಬೇರ್‌‌‌ ಅವರ ವಕೀಲರು ಅಘಾತ ವ್ಯಕ್ತಪಡಿಸಿದ್ದಾರೆ. ನ್ಯಾಯಾಧೀಶರು ತೀರ್ಪು ಪ್ರಕಟಿಸುವ ಸುಮಾರು 4:30 ಗಂಟೆಗಳಿಗಿಂತಲೂ ಮೊದಲೇ ಮಾಧ್ಯಮ ಸಂಸ್ಥೆಗಳು ವರದಿಗಳನ್ನು ಪ್ರಕಟಿಸಿವೆ ಎಂದು ಅವರು ಶನಿವಾರ ಆರೋಪಿಸಿದ್ದಾರೆ.

ನ್ಯಾಯಾಧೀಶರು ಶನಿವಾರ ಸಂಜೆ 7 ಗಂಟೆಗೆ ಆದೇಶವನ್ನು ಪ್ರಕಟಿಸಿದ್ದಾರಾದರೂ, ಕೆಲವು ಸುದ್ದಿ ವಾಹಿನಿಗಳು ಮತ್ತು ಏಜೆನ್ಸಿಗಳು ಮಧ್ಯಾಹ್ನ 2.30 ರ ಸುಮಾರಿಗೆ ಜುಬೈರ್‌ಗೆ ಜಾಮೀನು ನಿರಾಕರಿಸಲಾಗಿದೆ ಮತ್ತು ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ವರದಿ ಮಾಡಿವೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಜಾಮೀನು ಆದೇಶದ ಕುರಿತ ಮಾಧ್ಯಮ ವರದಿಗಳನ್ನು ನಿರಾಕರಿಸಿದ ಜುಬೇರ್‌ ಅವರ ವಕೀಲ ಸೌತಿಕ್ ಬ್ಯಾನರ್ಜಿ, ಉಪ ಪೊಲೀಸ್ ಆಯುಕ್ತ ಕೆಪಿಎಸ್ ಮಲ್ಹೋತ್ರಾ ಜಾಮೀನು ಆದೇಶವನ್ನು ಮಾಧ್ಯಮಗಳಿಗೆ ಸೋರಿಕೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ: ಖ್ಯಾತ ಪತ್ರಕರ್ತ ಮೊಹಮ್ಮದ್ ಜುಬೇರ್ ಜಾಮೀನು ನಿರಾಕರಣೆ; ಹೊಸ ಆರೋಪಗಳನ್ನು ಸೇರಿಸಿದ ಪೊಲೀಸರು!

“ಊಟದ ವಿರಾಮದ ನಂತರ ನ್ಯಾಯಾಧೀಶರು ಇನ್ನೂ ನ್ಯಾಯಾಲಯಕ್ಕೆ ಬರುವ ಮೊದಲೇ ನಮ್ಮ ಜಾಮೀನು ತಿರಸ್ಕರಿಸಲಾಗಿದೆ ಮತ್ತು 14 ದಿನಗಳ ನ್ಯಾಯಾಂಗ ಬಂಧನ ನೀಡಲಾಗಿದೆ ಎಂದು ಡಿಸಿಪಿ ಕೆಪಿಎಸ್ ಮಲ್ಹೋತ್ರಾ ಮಾಧ್ಯಮಗಳಲ್ಲಿ ಸೋರಿಕೆ ಮಾಡಿರುವುದನ್ನು ನೋಡಿ ನನಗೆ ಆಘಾತವಾಗಿದೆ” ಎಂದು ಅವರು ಹೇಳಿದ್ದಾರೆ.

“ಈ ಸುದ್ದಿಗಳನ್ನು ಟ್ವಿಟರ್ ಪೋಸ್ಟ್‌ಗಳನ್ನು ನೋಡಿ ನಾನು ತಿಳಿದುಕೊಂಡೆ. ಈ ಸುದ್ದಿ ಮಾಡಿರುವ ಸುದ್ದಿ ವಾಹಿನಿಗಳ… ಕೆಲವು ಕಾನೂನು ವರದಿಗಾರರು ಈ ಸುದ್ದಿಯನ್ನು ಮಾಡಿದ್ದಾರೆ. ಅವರು ಕೆಪಿಎಸ್ ಮಲ್ಹೋತ್ರಾ ಅವರನ್ನು ಈ ಮಾಹಿತಿಯ ಮೂಲವೆಂದು ಉಲ್ಲೇಖಿಸುತ್ತಿದ್ದಾರೆ” ಎಂದು ಸೌತಿಕ್ ಬ್ಯಾನರ್ಜಿ ಹೇಳಿದ್ದಾರೆ.

“ಇದು ಅತ್ಯಂತ ದೊಡ್ಡ ಹಗರಣವಾಗಿದ್ದು, ನ್ಯಾಯಾಧೀಶರು ಕೋರ್ಟ್‌ಗೆ ಬಂದು ಆದೇಶವನ್ನು ಪ್ರಕಟಿಸುವ ಮೊದಲೇ, ಪೊಲೀಸರು ಆದೇಶವನ್ನು ಮಾಧ್ಯಮಗಳಿಗೆ ಸೋರಿಕೆ ಮಾಡಿದ್ದಾರೆ. ಇದು ದೇಶದ ಕಾನೂನಿನ ಆಡಳಿತದ ಸ್ಥಿತಿಯನ್ನು ಹೇಳುತ್ತದೆ. ನಮಗೆ ಬಂದಿರುವ ಆದೇಶ ಏನೆಂದು ಕೆಪಿಎಸ್ ಮಲ್ಹೋತ್ರಾ ಅವರಿಗೆ ಹೇಗೆ ತಿಳಿಯುತ್ತದೆ. ಈ ಬಗ್ಗೆ ಗಂಭೀರ ಆತ್ಮಾವಲೋಕನವನ್ನು ಮಾಡಬೇಕು” ಎಂದು ವಕೀಲ ಸೌತಿಕ್ ಹೇಳಿದ್ದಾರೆ.

ಇದನ್ನೂ ಓದಿ: ಜುಬೇರ್‌‌‌ ಬಂಧನದ ಐದು ದಿನದ ನಂತರ ದೂರುದಾರನನ್ನು ಹುಡುಕುತ್ತಿರುವ ದೆಹಲಿ ಪೊಲೀಸರು! 

ಜುಬೈರ್ ಅವರ ವಕೀಲರ ಪತ್ರಿಕಾ ಹೇಳಿಕೆಯ ನಂತರ, ಕೆಲವು ಮಾಧ್ಯಮಗಳು ವರದಿಯನ್ನು ಹಿಂತೆಗೆದುಕೊಂಡವು ಅಥವಾ ತಿದ್ದುಪಡಿ ಮಾಡಿದವು.

ಈ ಬಗ್ಗೆ ಸ್ಪಷ್ಟನೆ ನೀಡಿರುವ ಡಿಸಿಪಿ, “ಇದು ನನ್ನ ತನಿಖಾಧಿಕಾರಿ ಹೇಳಿರುವ ಮಾತಾಗಿದ್ದು, ಗದ್ದಲದಿಂದಾಗಿ ನನಗೆ ಅದು ತಪ್ಪಾಗಿ ಕೇಳಿದೆ. ಈ ಅಜಾಗರೂಕತೆಯಿಂದ ಸಂದೇಶ ತಪ್ಪಾಗಿ ಪ್ರಸಾರ ಮಾಡಲಾಗಿದೆ” ಎಂದು ಹೇಳಿದ್ದಾರೆ.

“ಆಲ್ಟ್‌ನ್ಯೂಸ್‌ನ ಮೊಹಮ್ಮದ್ ಜುಬೇರ್ ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ ಎಂದು ಮಾಧ್ಯಮಗಳಿಗೆ ತಪ್ಪಾಗಿ ತಿಳಿಸಿದ್ದೇನೆ ಎಂದು ದೆಹಲಿ ಪೊಲೀಸ್ ಡಿಸಿಪಿ ಕೆಪಿಎಸ್ ಮಲ್ಹೋತ್ರಾ ಹೇಳಿದ್ದಾರೆ” ಎಂದು ಪಿಟಿಐ ಟ್ವೀಟ್ ಮಾಡಿದೆ.

ಇದನ್ನೂ ಓದಿ:  ಬೆಂಗಳೂರು: ಪತ್ರಕರ್ತ ಜುಬೇರ್‌ ಬಂಧನ ಖಂಡಿಸಿ ವಿವಿಧೆಡೆ ಮೋಂಬತ್ತಿ ಹಿಡಿದು ಪ್ರತಿಭಟನೆ

“ಮಾಹಿತಿಯನ್ನು ದೆಹಲಿ ಪೊಲೀಸರು ಒದಗಿಸಿದ್ದಾರೆ. ಅಧಿಕೃತ ಆದೇಶಕ್ಕಾಗಿ ಕಾಯಲಾಗುತ್ತಿದೆ” ಎಂದು ANI ಸುದ್ದಿಯನ್ನು ಮತ್ತೇ ಅಪ್‌ಡೇಟ್‌ ಮಾಡಿತ್ತು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

5 COMMENTS

  1. U ppl posting jubair news at least 2 time update in a day but did not find single news news about Jihadies act on Kanayya’s death news…how you ppl become independent news agency and you are one sided agent that’s against India

  2. ಜುಬೇರ್ ನಂತ ಅಯೋಗ್ಯನ ಪರ ಇರೋ ಅಯೋಗ್ಯರನ್ನಾ ದೇಶದಿಂದ ಒದ್ದು ಓಡಿಸುವ ಕೆಲಸ ಜನ ಮಾಡುವ ಮೊದಲು ಸರಕಾರ ಮಾಡಬೇಕಿದೆ .ಈ ಜುಬೇರ್ ನಂತ ಹಿಂದೂ ವಿರೋಧಿಯನ್ನ ಸಾರ್ವಜನಿಕ ಪ್ರದೇಶದಲ್ಲಿ ಗಲ್ಲಿಗೇರಿಸಬೇಕಿದೆ.

  3. ಹುಚ್ಚು ನಾಯಿಗಳಿಗೇನು ಗೊತ್ತು ಜುಬೈರ್ ಬಗ್ಗೆ. ಅವರ ಬಗ್ಗೆ ಯಾಕೆ ಇಷ್ಟು ಕಿಡಿ ಅಂದ್ರೆ ಈ ಅವಿವೇಕಿಗಳು,2 ಭಿಕ್ಷುಕರು, ಮತ್ತೆ ಒಂದು ದೇಶದ ದೊಡ್ಡ ಸುಳ್ಳಿನ ಪಕ್ಷದ ರಾಜಕಾರಣಿಗಳು, ಅದರ ಪಟಾಲಂಗಳು ಹೇಳುವ ಸುಳ್ಳನ್ನು ಸುಳ್ಳು ಎಂದು ನಿಜವಾದ ಸುದ್ದಿಯನ್ನು ಜನರ ಮುಂದೆ ಇಡುವ ವ್ಯಕ್ತಿ ಅದ್ಕೆ ಜುಬೈರ್ ಅಂದ್ರೆ ಅಂಡಿಗೆ ಮೆಣಸಿನಕಾಯಿ ತುದಿ ಕಟ್ ಮಾಡಿ ಏರಿಸ್ಕೊಳೋದು ಭೋ… ಡಿ ಮ## ಲೆ ಅವಿವೇಕಿ 2 ಬೆಗ್ಗೆರ್ಸ್ ಸತ್ಯ ಹೇಳೋಕು ಆಗಲ್ಲ ಒಪ್ಕೋಳೋಕು ಆಗಲ್ಲ ಅಂದ್ರೆ ನಿಮ್ಮ ಚಡ್ಡಿಯೊಳಗಿನ ಕೂದಲಿಗೆ ನೇಣು ಬಿಗಿದುಕೊಂಡು ಸಾಯಿರೋ ದರ್ಬೇಸಿ ಮುಂಡೇವಾ. ನಿಮ್ಮಿಂದ ದೇಶ ಅದೋ ಗತಿಗೆ ಬಂದಾಯ್ತು 😡😡😡😡ಥೂ… ನಿಮ್ಮ ಹಡಬಿಟ್ಟಿ ಜನ್ಮಕ್ಕೆ ನನ್ನ ಹಳೆ ಎಕ್ಕಡ

  4. ಬಿಜೆಪಿ ವಿರುದ್ದ ಮಾತಾಡಿದ ಎಲ್ಲರನ್ನೂ ಕಳ್ಳ ಕೇಸಿನಲ್ಲಿ ಸಿಕ್ಕಿಸಿ ಜೈಲಿಗಟ್ಟುವ ಬಿಜೆಪಿಯ ಜಾಯಮಾನ ಖಂಡನೀಯ.
    ರಾಜಕೀಯ ಮಾಡಬಹುದು ಆದರೆ ನಿರಪರಾಧಿಗಳನ್ನು ಹಿಂಸಿಸುವುದು ಎಷ್ಟು ಸರಿ.
    ಈ ನಡವಳಿಕೆ ಬಿಜೆಪಿಗೆ ತಕ್ಕುದಲ್ಲ.
    ಎಲ್ಲಕ್ಕೂ ಬೆಲೆ ತೆತ್ತಬೇಕಾದ ಸಂಧರ್ಭ ಒದಗಿ ಬರಲಿದೆ.
    ಕಾಲವೇ ಉತ್ತರಿಸಲಿದೆ

LEAVE A REPLY

Please enter your comment!
Please enter your name here

- Advertisment -

ಮತ್ತೆ ಒಂದಾದ ಎನ್‌ಸಿಪಿ ಬಣಗಳು : ಸುಪ್ರಿಯಾ ಸುಳೆ ಜೊತೆ ವೇದಿಕೆ ಹಂಚಿಕೊಂಡ ಅಜಿತ್ ಪವಾರ್, ಜಂಟಿ ಪ್ರಣಾಳಿಕೆ ಬಿಡುಗಡೆ

ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಮತ್ತು ಅವರ ಚಿಕ್ಕಪ್ಪ ಶರದ್ ಪವಾರ್ ನೇತೃತ್ವದ ಎನ್‌ಸಿಪಿ (ಎಸ್‌ಪಿ) ಶನಿವಾರ (ಜ.10) ಪುಣೆ ಮಹಾನಗರ ಪಾಲಿಕೆಗೆ ನಡೆಯಲಿರುವ ಚುನಾವಣೆಗೆ ಜಂಟಿ ಪ್ರಣಾಳಿಕೆಯನ್ನು ಬಿಡುಗಡೆ...

ಮಹಾರಾಷ್ಟ್ರ : ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿಯನ್ನು ಕೌನ್ಸಿಲರ್ ಮಾಡಿದ ಬಿಜೆಪಿ

ಬದ್ಲಾಪುರ ಲೈಂಗಿಕ ದೌರ್ಜನ್ಯ ಪ್ರಕರಣದ ಸಹ ಆರೋಪಿ ಮತ್ತು ಶಾಲೆಯೊಂದರ ಮಾಜಿ ಕಾರ್ಯದರ್ಶಿ ತುಷಾರ್ ಆಪ್ಟೆ ಎಂಬಾತನನ್ನು ಥಾಣೆ ಜಿಲ್ಲೆಯ ಕುಲ್ಗಾಂವ್-ಬದ್ಲಾಪುರ ಮುನ್ಸಿಪಲ್ ಕೌನ್ಸಿಲ್‌ಗೆ ಬಿಜೆಪಿ ನಾಮನಿರ್ದೇಶನ ಮಾಡಿದೆ. ಮುನ್ಸಿಪಲ್ ಕೌನ್ಸಿಲ್ ಅಧ್ಯಕ್ಷೆ ರುಚಿತಾ...

ಕಳ್ಳನೆಂದು ಸುಳ್ಳಾರೋಪ ಹೊರಿಸಿ ಜೈಲಿಗಟ್ಟಿದ ಪೊಲೀಸರು : ಸಂತ್ರಸ್ತಗೆ 14 ಲಕ್ಷ ರೂ. ಪರಿಹಾರ ನೀಡಲು ಕೋರ್ಟ್ ಆದೇಶ

ಕಳ್ಳನೆಂದು ಸುಳ್ಳಾರೋಪ ಹೊರಿಸಿ ಪೊಲೀಸರು ಜೈಲಿಗಟ್ಟಿದ ವ್ಯಕ್ತಿಗೆ 14 ಲಕ್ಷ ರೂಪಾಯಿ ಪರಿಹಾರ ಒದಗಿಸುವಂತೆ ಕೇರಳ ಸರ್ಕಾರಕ್ಕೆ ಹೈಕೋರ್ಟ್ ಆದೇಶಿಸಿದೆ. ಕಣ್ಣೂರು ಮೂಲದ ವಿ.ಕೆ ತಾಜುದ್ದೀನ್ ಕಾನೂನು ಹೋರಾಟದಲ್ಲಿ ಗೆದ್ದು ಪರಿಹಾರ ಪಡೆದ ವ್ಯಕ್ತಿ....

ಇರಾನ್‌ನಲ್ಲಿ ತೀವ್ರಗೊಂಡ ಆಡಳಿತ ವಿರೋಧಿ ಪ್ರತಿಭಟನೆ : ಟ್ರಂಪ್ ಮಧ್ಯಪ್ರವೇಶ ಕೋರಿದ ಮಾಜಿ ದೊರೆಯ ಮಗ

ಇರಾನ್‌ನಲ್ಲಿ ಭುಗಿಲೆದ್ದಿರುವ ಆಡಳಿತ ವಿರೋಧಿ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ. 2025ರ ಡಿಸೆಂಬರ್ 28ರಂದು ಪ್ರಾರಂಭಗೊಂಡ ಪ್ರತಿಭಟನೆಗಳು ಹಿಂಸಾಚಾರ ರೂಪ ಪಡೆದುಕೊಂಡು 13ನೇ ದಿನವೂ ಮುಂದುವರಿದಿದೆ. ಆರ್ಥಿಕ ಬಿಕ್ಕಟ್ಟಿನ ವಿರುದ್ದ (ರಿಯಾಲ್ ಕರೆನ್ಸಿ ಮೌಲ್ಯ...

ಮತದಾರರ ಹೆಸರು ಅಳಿಸಲು ಯತ್ನ : ಬಿಜೆಪಿ ವಿರುದ್ಧ 5 ವಿಪಕ್ಷಗಳಿಂದ ದೂರು ದಾಖಲು

ಅಸ್ಸಾಂನ ಐದು ವಿರೋಧ ಪಕ್ಷಗಳು ಶುಕ್ರವಾರ (ಜ.9) ಪೊಲೀಸ್ ದೂರು ದಾಖಲಿಸಿದ್ದು, ಆಡಳಿತಾರೂಢ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ರಾಜ್ಯದ ಮತದಾರರ ಪಟ್ಟಿಯಿಂದ ಹೆಚ್ಚಿನ ಸಂಖ್ಯೆಯ ನಿಜವಾದ ಮತದಾರರ ಹೆಸರನ್ನು ಅಳಿಸಲು ಸಂಚು...

ಐ-ಪ್ಯಾಕ್ ಮೇಲೆ ದಾಳಿ ಪ್ರಕರಣ: ಮಮತಾ ಬ್ಯಾನರ್ಜಿ ದೂರಿನ ಬೆನ್ನಲ್ಲೇ ಜಾರಿ ನಿರ್ದೇಶನಾಲಯದ ವಿರುದ್ಧ ಎಫ್‌ಐಆರ್

ಕೋಲ್ಕತ್ತಾ: ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ನಡೆಸಿದ ದಾಳಿಗೆ ಸಂಬಂಧಿಸಿದಂತೆ ಟಿಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿ...

‘ಭ್ರಷ್ಟ ಜನತಾ ಪಾರ್ಟಿ’: ಬಿಜೆಪಿ ಡಬಲ್ ಎಂಜಿನ್ ಆಡಳಿತದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ನವದೆಹಲಿ: ವಿವಿಧ ರಾಜ್ಯಗಳಲ್ಲಿ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರಗಳ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.  ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್, ಉತ್ತರಾಖಂಡದಲ್ಲಿ ಅಂಕಿತ...

ಇಂದೋರ್‌ನಲ್ಲಿ ಕಲುಷಿತ ನೀರಿಗೆ 8 ಮಂದಿ ಬಲಿ: ಆರ್‌ಎಸ್‌ಎಸ್ ಕಚೇರಿಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್: ಭುಗಿಲೆದ್ದ ವಿವಾದ

ಇಂದೋರ್: ಆರ್‌ಎಸ್‌ಎಸ್ ಕಚೇರಿಯಲ್ಲಿ ಬುಧವಾರ ತಡರಾತ್ರಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್ ಭಾಗವಹಿಸಿದ್ದು ಕಂಡುಬಂದ ನಂತರ ಗುರುವಾರ ಇಂದೋರ್‌ನಲ್ಲಿ ರಾಜಕೀಯ ವಿವಾದ ಭುಗಿಲೆದ್ದಿದೆ.  ಕನಿಷ್ಠ ಎಂಟು ಮಂದಿ ಜೀವಗಳನ್ನು ಬಲಿ ಪಡೆದಿರುವ ಕಲುಷಿತ...

ಐ-ಪ್ಯಾಕ್ ಮೇಲೆ ಇಡಿ ದಾಳಿ: ಕೋಲ್ಕತ್ತಾದಲ್ಲಿ ಮಮತಾ ಪ್ರತಿಭಟನೆ: ಅಮಿತ್ ಶಾ ಕಚೇರಿಯ ಹೊರಗೆ ಪ್ರತಿಭಟಿಸುತ್ತಿದ್ದ ಟಿಎಂಸಿ ಶಾಸಕರ ಬಂಧನ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ನಡೆಸಿದ...

ಮಹಾರಾಷ್ಟ್ರ ಜಲ್ನಾ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಸ್ಪರ್ಧೆ!

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಆರೋಪಿ ಶ್ರೀಕಾಂತ್ ಪಂಗಾರ್ಕರ್ ಮುಂಬರುವ ಜಲ್ನಾ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ ಎಂಬ ಸುದ್ದಿ  ಹಲವು ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿದೆ.  ಗೌರಿ ಲಂಕೇಶ್ ಹತ್ಯೆ ಸೇರಿದಂತೆ...