Homeಮುಖಪುಟಒಳಮೀಸಲಾತಿ: ಬಾಣಲೆಯಿಂದ ಬೆಂಕಿಗೆ ಹಾರುವುದು ಬೇಡ.. - ಕರಿಯಪ್ಪ ಗುಡಿಮನಿ

ಒಳಮೀಸಲಾತಿ: ಬಾಣಲೆಯಿಂದ ಬೆಂಕಿಗೆ ಹಾರುವುದು ಬೇಡ.. – ಕರಿಯಪ್ಪ ಗುಡಿಮನಿ

ಬೆಳಗಾವಿ ಅಧಿವೇಶನದಲ್ಲಿ ಒಳಮೀಸಲಾತಿ ಪರ ಹೋರಾಟಗಾರರ ಮೈತುಂಬಾ ಬಾಸುಂಡೆ ಬರುವಂತೆ ಲಾಠಿ ಚಾರ್ಜ್ ಮಾಡಿಸಿದ ಸರ್ಕಾರ ಯಾರದಾಗಿತ್ತು?

- Advertisement -
- Advertisement -

ಆದಿಮ ಕಾಲದ ಮಾದಿಗರು ಸಮಾಜದ ಬ್ರಾಹ್ಮಣ್ಯೀಕರಣದಿಂದ ಅಸ್ಪೃಶ್ಯರಾದರು. ಗಾಂಧೀಜಿಯವರಿಂದ ಹರಿಜನರಾದರು. ಅಂಬೇಡ್ಕರರಿಂದ ಸ್ವಾಭಿಮಾನಿ ದಲಿತರಾದರು. ಹಲವು ಪರಿಶಿಷ್ಟ ಜಾತಿಗಳಲ್ಲಿಂದು ಮಾದಿಗರು ಸಹ ಒಂದು ಸಮುದಾಯವಾಗಿದೆ.

ಮಾದಿಗ ಸಮುದಾಯವು ಸ್ವತಂತ್ರಪೂರ್ವದಲ್ಲಿ ಜಂಡಾ ಹಿಡಿದು ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಸಮುದಾಯವಾಗಿದೆ. ಆದರೆ ಸ್ವಾತಂತ್ರ್ಯದ ನಂತರದ ರಾಜಕೀಯದಲ್ಲಿ ಮಾದಿಗ ಸಮುದಾಯವನ್ನು ಬೆಲೆಯಿಲ್ಲದ, ನೆಲೆಯಿಲ್ಲದ ಸಮುದಾಯವನ್ನಾಗಿ ಮಾಡಲಾಗಿದೆ. ಇಂದಿಗೂ ಕೃಷಿ ಭೂಮಿ ರಹಿತರಾಗಿರುವ ಮಾದಿಗ ಸಮುದಾಯ ಜಮೀನ್ದಾರರ ಕೈ ಕೆಳಗೆ ನರಳುತ್ತಿದೆ. ಉತ್ತರ ಕರ್ನಾಟಕದಲ್ಲಂತು ಇದು ಎದ್ದು ಕಾಣುವ ಸಂಗತಿಯಾಗಿದೆ. ಬೆನ್ನಿಗೆ ನಿಲ್ಲದ ಸಹೋದರ ಸಮುದಾಯಗಳು, ಕೈಗೆ ಅಧಿಕಾರ ನೀಡದ ರಾಜಕೀಯ ಪಕ್ಷಗಳು, ನಿಷ್ಟೆ ಇಲ್ಲದ ಸಮುದಾಯದ ಮುಖಂಡರು, ಅಸ್ಪೃಶ್ಯತೆಯನ್ನು ಮೆರೆಯುವ ಮೇಲ್ವರ್ಗಗಳು. ಹೀಗೆ ಎತ್ತ ನೋಡಿದರೂ ಅಡ್ಡಗಾಲುಗಳು. ನಮ್ಮ ಹಾಸಿಗೆಯಲ್ಲಿ ನಾವೇ ಕಾಲು ಚಾಚದ ಸ್ಥಿತಿ.

ಇಂತಹ ಪರಿಸ್ಥಿತಿಯಲ್ಲಿ ಎಂದಿಗೂ ಮಾದಿಗರ ಪರ ನಿಲ್ಲದ ವಿವಿಧ ಭ್ರಷ್ಟ ರಾಜಕಾರಣಿಗಳ ಮನೆಯ ಹೆಬ್ಬಾಗಿಲುಗಳಲ್ಲಿ ನಮ್ಮ ಸಮುದಾಯದ ಮುಖಂಡರುಗಳಿಂದು ನಿಂತಿದ್ದಾರೆ. ಮತ್ತಷ್ಟೂ ಹಾದಿ ತಪ್ಪಿ ಅಸ್ಪೃಶ್ಯತೆಯನ್ನು ನಮ್ಮ ಮಾದಿಗರ ಮೇಲೆ ಹೇರಿದ ಬ್ರಾಹ್ಮಣ್ಯದ ತವರು ಸ್ಥಾನ ಸಂಘಪರಿವಾರ, ಆರೆಸ್ಸೆಸ್ ದ್ವಾರದ ಮುಂದೆ ಹೋರಾಟ ಮಾಡದೇ, ಒಳಮೀಸಲಾತಿಯ ಧರ್ಮಭಿಕ್ಷೆ ಬೇಡಲು ನಿಂತಿದ್ದಾರೆ. ಬೆಳಗಾವಿ ಅಧಿವೇಶನದಲ್ಲಿ ಒಳಮೀಸಲಾತಿ ಪರ ಹೋರಾಟಗಾರರ ಮೈತುಂಬಾ ಬಾಸುಂಡೆ ಬರುವಂತೆ ಲಾಠಿ ಚಾರ್ಜ್ ಮಾಡಿಸಿದ ಸರ್ಕಾರ ಯಾರದಾಗಿತ್ತು? ಇದು ಖಂಡಿತವಾಗಿಯೂ ಮಾದಿಗ ಸಮುದಾಯದಲ್ಲಿನ ಪ್ರಾಮಾಣಿಕ ಹೋರಾಟಗಾರರಿಗೆ ಚಿಂತೆಗೀಡು ಮಾಡಿದೆ.

ಇಂದು ಮಾದಿಗ ಸಮುದಾಯ ತನ್ನೊಳಗೂ ಹಾಗೂ ಹೊರಗೂ ಪ್ರಾಮಾಣಿಕ ಹೋರಾಟಗಾರರನ್ನು ಕಂಡುಕೊಳ್ಳಬೇಕಿದೆ. ಸದಾ ಚುನಾವಣಾ ರಾಜಕೀಯ ಹಿತಾಸಕ್ತಿಯನ್ನೇ ಬಯಸುವ ದಲಿತ ರಾಜಕಾರಣಿಗಳ ವಿರುದ್ಧವೂ ನಿಲ್ಲಬೇಕಿದೆ. ನಮ್ಮ ಸಂಕಟಗಳು ಬೆಟ್ಟದಷ್ಟಿರುವಾಗ ಆ ಬೆಟ್ಟವನ್ನು ನೆಲಸಮಗೊಳಿಸಲು ಒಳಮೀಸಲಾತಿ ಜಾರಿಯಾಗಲೇಬೇಕಿದೆ.

ಮೊದಲು ಸದಾಶಿವ ಆಯೋಗದ ವರದಿ ಬಹಿರಂಗಗೊಳ್ಳಬೇಕು. ಕಾಲ್ಪನಿಕ ಸೋರಿಕೆ ವಿಚಾರಗಳನ್ನು ಬದಿಗಿಟ್ಟು ಸಾರ್ವಜನಿಕ ಚರ್ಚೆಗಳಾಗಬೇಕು. ಇಡೀ 101 ದಲಿತ ಜಾತಿಗಳ ಪ್ರತಿನಿಧಿಗಳು ಒಂದೆಡೆ ಕುಳಿತು ಆಯೋಗದ ಶಿಫಾರಸ್ಸುಗಳನ್ನು ಪರಿಶೀಲಿಸಿ ಒಳಮೀಸಲಾತಿ ಜಾರಿಗೊಳ್ಳುವ ಸರಿಯಾದ ಕ್ರಮಗಳನ್ನು ಸರ್ಕಾರಕ್ಕೆ ಶಿಫಾರಸ್ಸು ಮಾಡಬೇಕು. ಒಳಮೀಸಲಾತಿ ದಲಿತರ ಒಗ್ಗಟ್ಟನ್ನು ಮುರಿಯುತ್ತದೆ ಎಂಬ ಕಾಲ್ಪನಿಕ ಭಯದೊಂದಿಗೆ ಗುದ್ದಾಡದೆ, ಅದನ್ನು ಬಗೆಹರಿಸಿಕೊಂಡು ಮುಂದೆ ದಲಿತ ಜಾತಿಗಳು ಖಾಸಗಿ ಮೀಸಲಾತಿಗಾಗಿ ಹೋರಾಡಬೇಕು. ಸಮಸಮಾಜದೆಡಗೆ ನಮ್ಮ ನಡಿಗೆ ಆದಷ್ಟು ಬೇಗ ಮತ್ತೆ ಗಟ್ಟಿಗೊಳ್ಳಬೇಕು.

  • ಕರಿಯಪ್ಪ ಗುಡಿಮನಿ

(ಕರ್ನಾಟಕ ಮಾದಿಗ ರಕ್ಷಣಾ ವೇದಿಕೆಯ ರಾಜ್ಯ ಅಧ್ಯಕ್ಷರಾದ ಗುಡಿಮನಿಯವರು ಮೂರ್ನಾಲ್ಕು ದಶಕಗಳಿಂದ  ದಲಿತ, ಎಡಪಂಥೀಯ ಚಳುವಳಿಯಲ್ಲಿ ಸಕ್ರಿಯವಾಗಿರುವವರು. ಬಳ್ಳಾರಿ ಭಾಗದ ಭೂಹೋರಾಟದಲ್ಲಿ ಪ್ರಧಾನವಾಗಿ ಮಾದಿಗ ಸಮುದಾಯದ ಜೊತೆ, ಆದರೆ ಎಲ್ಲಾ ಜಾತಿಗಳಿಗೆ ಸೇರಿದ ಶೋಷಿತರ ಪರವಾದ ಯಶಸ್ವಿ ಹೋರಾಟಗಳನ್ನು ಸಂಘಟಿಸಸಿದವರು.)


ಇದನ್ನೂ ಓದಿ: ಜಗದ ಕಣ್ತೆರೆಸಿದ ಮಾದಿಗರ ಒಳಮೀಸಲಾತಿ ಹೋರಾಟ : ಗುರುಪ್ರಸಾದ್ ಕಂಟಲಗೆರೆ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮಹಾರಾಷ್ಟ್ರ : ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿಯನ್ನು ಕೌನ್ಸಿಲರ್ ಮಾಡಿದ ಬಿಜೆಪಿ

ಬದ್ಲಾಪುರ ಲೈಂಗಿಕ ದೌರ್ಜನ್ಯ ಪ್ರಕರಣದ ಸಹ ಆರೋಪಿ ಮತ್ತು ಶಾಲೆಯೊಂದರ ಮಾಜಿ ಕಾರ್ಯದರ್ಶಿ ತುಷಾರ್ ಆಪ್ಟೆ ಎಂಬಾತನನ್ನು ಥಾಣೆ ಜಿಲ್ಲೆಯ ಕುಲ್ಗಾಂವ್-ಬದ್ಲಾಪುರ ಮುನ್ಸಿಪಲ್ ಕೌನ್ಸಿಲ್‌ಗೆ ಬಿಜೆಪಿ ನಾಮನಿರ್ದೇಶನ ಮಾಡಿದೆ. ಮುನ್ಸಿಪಲ್ ಕೌನ್ಸಿಲ್ ಅಧ್ಯಕ್ಷೆ ರುಚಿತಾ...

ಕಳ್ಳನೆಂದು ಸುಳ್ಳಾರೋಪ ಹೊರಿಸಿ ಜೈಲಿಗಟ್ಟಿದ ಪೊಲೀಸರು : ಸಂತ್ರಸ್ತಗೆ 14 ಲಕ್ಷ ರೂ. ಪರಿಹಾರ ನೀಡಲು ಕೋರ್ಟ್ ಆದೇಶ

ಕಳ್ಳನೆಂದು ಸುಳ್ಳಾರೋಪ ಹೊರಿಸಿ ಪೊಲೀಸರು ಜೈಲಿಗಟ್ಟಿದ ವ್ಯಕ್ತಿಗೆ 14 ಲಕ್ಷ ರೂಪಾಯಿ ಪರಿಹಾರ ಒದಗಿಸುವಂತೆ ಕೇರಳ ಸರ್ಕಾರಕ್ಕೆ ಹೈಕೋರ್ಟ್ ಆದೇಶಿಸಿದೆ. ಕಣ್ಣೂರು ಮೂಲದ ವಿ.ಕೆ ತಾಜುದ್ದೀನ್ ಕಾನೂನು ಹೋರಾಟದಲ್ಲಿ ಗೆದ್ದು ಪರಿಹಾರ ಪಡೆದ ವ್ಯಕ್ತಿ....

ಇರಾನ್‌ನಲ್ಲಿ ತೀವ್ರಗೊಂಡ ಆಡಳಿತ ವಿರೋಧಿ ಪ್ರತಿಭಟನೆ : ಟ್ರಂಪ್ ಮಧ್ಯಪ್ರವೇಶ ಕೋರಿದ ಮಾಜಿ ದೊರೆಯ ಮಗ

ಇರಾನ್‌ನಲ್ಲಿ ಭುಗಿಲೆದ್ದಿರುವ ಆಡಳಿತ ವಿರೋಧಿ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ. 2025ರ ಡಿಸೆಂಬರ್ 28ರಂದು ಪ್ರಾರಂಭಗೊಂಡ ಪ್ರತಿಭಟನೆಗಳು ಹಿಂಸಾಚಾರ ರೂಪ ಪಡೆದುಕೊಂಡು 13ನೇ ದಿನವೂ ಮುಂದುವರಿದಿದೆ. ಆರ್ಥಿಕ ಬಿಕ್ಕಟ್ಟಿನ ವಿರುದ್ದ (ರಿಯಾಲ್ ಕರೆನ್ಸಿ ಮೌಲ್ಯ...

ಮತದಾರರ ಹೆಸರು ಅಳಿಸಲು ಯತ್ನ : ಬಿಜೆಪಿ ವಿರುದ್ಧ 5 ವಿಪಕ್ಷಗಳಿಂದ ದೂರು ದಾಖಲು

ಅಸ್ಸಾಂನ ಐದು ವಿರೋಧ ಪಕ್ಷಗಳು ಶುಕ್ರವಾರ (ಜ.9) ಪೊಲೀಸ್ ದೂರು ದಾಖಲಿಸಿದ್ದು, ಆಡಳಿತಾರೂಢ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ರಾಜ್ಯದ ಮತದಾರರ ಪಟ್ಟಿಯಿಂದ ಹೆಚ್ಚಿನ ಸಂಖ್ಯೆಯ ನಿಜವಾದ ಮತದಾರರ ಹೆಸರನ್ನು ಅಳಿಸಲು ಸಂಚು...

ಐ-ಪ್ಯಾಕ್ ಮೇಲೆ ದಾಳಿ ಪ್ರಕರಣ: ಮಮತಾ ಬ್ಯಾನರ್ಜಿ ದೂರಿನ ಬೆನ್ನಲ್ಲೇ ಜಾರಿ ನಿರ್ದೇಶನಾಲಯದ ವಿರುದ್ಧ ಎಫ್‌ಐಆರ್

ಕೋಲ್ಕತ್ತಾ: ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ನಡೆಸಿದ ದಾಳಿಗೆ ಸಂಬಂಧಿಸಿದಂತೆ ಟಿಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿ...

‘ಭ್ರಷ್ಟ ಜನತಾ ಪಾರ್ಟಿ’: ಬಿಜೆಪಿ ಡಬಲ್ ಎಂಜಿನ್ ಆಡಳಿತದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ನವದೆಹಲಿ: ವಿವಿಧ ರಾಜ್ಯಗಳಲ್ಲಿ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರಗಳ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.  ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್, ಉತ್ತರಾಖಂಡದಲ್ಲಿ ಅಂಕಿತ...

ಇಂದೋರ್‌ನಲ್ಲಿ ಕಲುಷಿತ ನೀರಿಗೆ 8 ಮಂದಿ ಬಲಿ: ಆರ್‌ಎಸ್‌ಎಸ್ ಕಚೇರಿಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್: ಭುಗಿಲೆದ್ದ ವಿವಾದ

ಇಂದೋರ್: ಆರ್‌ಎಸ್‌ಎಸ್ ಕಚೇರಿಯಲ್ಲಿ ಬುಧವಾರ ತಡರಾತ್ರಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್ ಭಾಗವಹಿಸಿದ್ದು ಕಂಡುಬಂದ ನಂತರ ಗುರುವಾರ ಇಂದೋರ್‌ನಲ್ಲಿ ರಾಜಕೀಯ ವಿವಾದ ಭುಗಿಲೆದ್ದಿದೆ.  ಕನಿಷ್ಠ ಎಂಟು ಮಂದಿ ಜೀವಗಳನ್ನು ಬಲಿ ಪಡೆದಿರುವ ಕಲುಷಿತ...

ಐ-ಪ್ಯಾಕ್ ಮೇಲೆ ಇಡಿ ದಾಳಿ: ಕೋಲ್ಕತ್ತಾದಲ್ಲಿ ಮಮತಾ ಪ್ರತಿಭಟನೆ: ಅಮಿತ್ ಶಾ ಕಚೇರಿಯ ಹೊರಗೆ ಪ್ರತಿಭಟಿಸುತ್ತಿದ್ದ ಟಿಎಂಸಿ ಶಾಸಕರ ಬಂಧನ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ನಡೆಸಿದ...

ಮಹಾರಾಷ್ಟ್ರ ಜಲ್ನಾ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಸ್ಪರ್ಧೆ!

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಆರೋಪಿ ಶ್ರೀಕಾಂತ್ ಪಂಗಾರ್ಕರ್ ಮುಂಬರುವ ಜಲ್ನಾ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ ಎಂಬ ಸುದ್ದಿ  ಹಲವು ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿದೆ.  ಗೌರಿ ಲಂಕೇಶ್ ಹತ್ಯೆ ಸೇರಿದಂತೆ...

‘ಮೋದಿ ಟ್ರಂಪ್‌ಗೆ ಕರೆ ಮಾಡದ ಕಾರಣ ಭಾರತ-ಯುಎಸ್ ವ್ಯಾಪಾರ ಒಪ್ಪಂದ ನಡೆಯಲಿಲ್ಲ’: ಹೊವಾರ್ಡ್ ಲುಟ್ನಿಕ್ 

ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಸರಿಯಾದ ಸಮಯಕ್ಕೆ ಕರೆ ಮಾಡದ ಕಾರಣ ಭಾರತದೊಂದಿಗಿನ ವ್ಯಾಪಾರ ಒಪ್ಪಂದ ನಡೆಯಲಿಲ್ಲ ಎಂದು ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್...