ರ್‍ಯಾಲಿ

ಹತ್ರಾಸ್‌‌ನಲ್ಲಿ ನಡೆದ ದಲಿತ ಯುವತಿಯ ಅತ್ಯಾಚಾರ ಪ್ರಕರಣವನ್ನು ಉತ್ತರ ಪ್ರದೇಶದ ಬಿಜೆಪಿ ಸರ್ಕಾರ ನಿಭಾಯಿಸಿದ ರೀತಿಯ ಬಗ್ಗೆ ದೇಶದಾದ್ಯಂತ ಪ್ರತಿಭಟನೆಗಳು ಹೆಚ್ಚುತ್ತಿದ್ದಂತೆ ಬಿಜೆಪಿ ಕಂಗೆಟ್ಟಿದೆ. ಇದೀಗ ಊನಾ ಚಳವಳಿಯ ನಾಯಕ, ಗುಜರಾತ್ ಶಾಸಕ ಜಿಗ್ನೇಶ್ ಮೇವಾನಿಯನ್ನು ಗುಜರಾತ್ ಪೊಲೀಸರು ಹತ್ರಾಸ್ ಸಂತ್ರಸ್ತೆಗೆ ನ್ಯಾಯ ಕೋರಿ ಗುಜರಾತ್‌ನಲ್ಲಿ ನಡೆಸಲಾಗುವ ’ಪ್ರತಿಕಾರ್‌ ರ್‍ಯಾಲಿ’ ಯಲ್ಲಿ ಭಾಗವಹಿಸಲು ಅನುಮತಿಸದೆ ಗೃಹ ಬಂಧನ ಮಾಡಿದ್ದಾರೆ.

ಈ ಬಗ್ಗೆ ಶಾಸಕ ಜಿಗ್ನೇಶ್ ಮೇವಾನಿ ತಮ್ಮ ಫೇಸ್‌ಬುಕ್ ಮತ್ತು ಟ್ವಿಟ್ಟರ್‌ನಲ್ಲಿ ಮಾಹಿತಿ ನೀಡಿದ್ದು, ಗುಜರಾತ್‌ನಲ್ಲಿ ಪ್ರಜಾಪ್ರಭುತ್ವದ ನಾಶವಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜೊತೆಗೆ ಗುಜರಾತ್‌ನ ಪಾಟಿದಾರ್‌ ಚಳುವಳಿಯ ನಾಯಕ ಹಾರ್ದಿಕ್ ಪಾಟಿಲ್ ಅವರಿಗೂ ’ಪ್ರತಿಕಾರ್‌ ರ್‍ಯಾಲಿ’ಯಲ್ಲಿ ಭಾಗವಹಿಸಲು ಅನುಮತಿ ನೀಡುತ್ತಿಲ್ಲ ಎಂದು ಅವರು ಆರೋಪಿಸಿದ್ದಾರೆ.

ಇದನ್ನೂ ಓದಿ: ಹಿಂದೂಗಳ ಕಣ್ಣಿಗೆ ದಲಿತರು ಮನುಷ್ಯರಂತೆ ಕಾಣುವುದೆಂದು? – ಡಿ.ಉಮಾಪತಿ

“ಗುಜರಾತ್‌ನಲ್ಲಿ ಪ್ರಜಾಪ್ರಭುತ್ವದ ವಿನಾಶವಾಗುತ್ತಿದೆ. ಹತ್ರಾಸ್ ಸಂತ್ರಸ್ತರಿಗೆ ನ್ಯಾಯ ಕೋರಿ ಪ್ರತಿಕಾರ್ ‌ರ್‍ಯಾಲಿಯಲ್ಲಿ ಭಾಗವಹಿಸಲು ನನಗೆ ಅವಕಾಶ ನೀಡುತ್ತಿಲ್ಲ. ನನ್ನನ್ನು ಅಹಮದಾಬಾದ್‌ನಲ್ಲಿ ಬಂಧಿಸಲಾಗಿದೆ ಮತ್ತು ನನ್ನ ಕೋಣೆಯಿಂದ ಹೊರಗೆ ಹೋಗಲು ಅನುಮತಿ ನೀಡುತ್ತಿಲ್ಲ” ಎಂದು ಅವರು ಫೇಸ್‌‌ಬುಕ್‌‌ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರ್‍ಯಾಲಿ ನಡೆಸದಂತೆ ಶಾಸಕ ಗಿಯಾಸುದ್ದೀನ್ ಶೇಖ್ ಮತ್ತು ಗುಜರಾತ್ ಕಾಂಗ್ರೆಸ್ ಅಧ್ಯಕ್ಷ ಅಮಿತ್ ಚಾವ್ಡಾ, ಕಾಂಗ್ರೆಸ್ ಶಾಸಕ ನೌಶಾದ್ ಸೋಲಂಕಿ ಸೇರಿಂದತೆ ಹಲವಾರು ಕಾಂಗ್ರೆಸ್ ನಾಯಕರನ್ನು ಗುಜರಾತ್ ಪೊಲೀಸರು ಬಂಧಿಸಿದ್ದಾರೆ.

ಹತ್ರಾಸ್ ಅತ್ಯಾಚಾರ ಘಟನೆ ವಿರುದ್ಧ ಪ್ರತಿಭಟಿಸಲು ಕಾಂಗ್ರೆಸ್ ಪಕ್ಷವು ಕೊಚ್ರಾಬ್ ಆಶ್ರಮದಿಂದ ಸಬರಮತಿ ಆಶ್ರಮಕ್ಕೆ ’ಪ್ರತಿಕಾರ್‌ ರ್‍ಯಾಲಿ’ಯನ್ನು ಆಯೋಜಿಸಿತ್ತು ಎಂದು ಗುಜರಾತ್ ಎಕ್ಸ್‌ಕ್ಲೂಸಿವ್ ವರದಿ ಮಾಡಿದೆ.

ವಿಡಿಯೋ ನೋಡಿ: ಹತ್ರಾಸ್ ಅತ್ಯಾಚಾರ ಕುರಿತು ಗುಜರಾತ್ ಶಾಸಕ ಜಿಗ್ನೇಶ್ ಮೇವಾನಿ ಮಾತುಗಳು.

Donate

ಈ ಲೇಖನ, ಈ ವೆಬ್‌ಸೈಟ್ ನಿಮಗೆ ಇಷ್ಟವಾಯಿತೇ? ನಿಮ್ಮ ಬೆಂಬಲ ಇದಕ್ಕೆ ಅಗತ್ಯ.

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

+ posts

LEAVE A REPLY

Please enter your comment!
Please enter your name here