Homeಕರ್ನಾಟಕಡಾ. ಎಸ್. ಬಿ. ಜೋಗುರ ಎಂಬ ಪ್ರಖರ ವೈಚಾರಿಕ ಈಗ ನೆನಪು ಮಾತ್ರ

ಡಾ. ಎಸ್. ಬಿ. ಜೋಗುರ ಎಂಬ ಪ್ರಖರ ವೈಚಾರಿಕ ಈಗ ನೆನಪು ಮಾತ್ರ

- Advertisement -
- Advertisement -

ಸಮಾಜಶಾಸ್ತ್ರದ ಶ್ರೇಷ್ಠ ಪ್ರಾಧ್ಯಾಪಕರು ಉತ್ತಮ ಕತೆಗಾರರು, ಭರವಸೆಯ ಕಾದಂಬರಿಕಾರರು, ಸಮಾಜ ಚಿಂತಕರು ಎಲ್ಲಕ್ಕಿಂತ ಹೆಚ್ಚಾಗಿ ಆತ್ಮೀಯ ಸ್ನೇಹಿತರು ಡಾ.ಎಸ್.ಬಿ.ಜೋಗುರ ಸಮಾಜಶಾಸ್ತ್ರದ ಆಶಯಗಳ ಜೊತೆಗೆ ಜೀವಿಸಿದವರು. ಇವತ್ತು ಅವರು ನಮ್ಮೊಂದಿಗಿಲ್ಲಾ ನಾನು ತಿಳಿದುಕೊಂಡ ಜೋಗುರರನ್ನು ಬರವಣಿಗೆಗೆ ಇಳಿಸಿದ್ದೇನೆ. ಇದು ಅಗಲಿದ ಗೆಳಯನ ನೆನಪು, ನುಡಿ-ನಮನ.

ಸಮಾಜಶಾಸ್ತ್ರದ ಆಶಯಗಳನ್ನು ತತ್ವಗಳನ್ನು ವಿಚಾರಗಳನ್ನು ತಮ್ಮ ನಡುವಳಿಕೆ ಮತ್ತು ಬರವಣಿಗೆಯಲ್ಲಿ ವಿಭಿನ್ನವಾಗಿ ಆಚರಿಸಿಕೊಂಡವರು. ಜಾತಿ, ವರ್ಣ, ಧರ್ಮ, ಲಿಂಗ ತಾರತಮ್ಯ ಇವೆಲ್ಲವೂಗಳಿಂದ ತುಂಬಾ ದೂರ ನಿಲ್ಲುವ ಜೋಗುರರು, ಪಕ್ಕಾ ಕಮ್ಯುನಿಷ್ಟವಾದಿ. ಬಂಡವಾಳವನ್ನು ಹೂಡುವುದು, ಶೇಖರಿಸಿ ಇಡುವುದು, ಇವು ಅವರ ಜೀವನದಿಂದ ತುಂಬಾ ದೂರ ನಿಂತ ಸರಕುಗಳು. ದುಡಿಬೇಕು ಬಂದಿದ್ದರಲ್ಲಿ ತಿನ್ನಬೇಕು ಅದೇ ಬದುಕು ಎಂದುಕೊಂಡಿದ್ದವರು. ಅವರ ಪುಟ್ಟದಾದ ಕುಟುಂಬವೇ ಅವರಿಗೆ ದೊಡ್ಡದಾದ ಬದುಕಾಗಿತ್ತು. ಇಚ್ಚೇಯನರಿತ ಮಡದಿ, ಮುದ್ದಾದ ಎರಡು ಮಕ್ಕಳು ಅಪಾರವಾದ ಸ್ನೇಹಿತ ವಲಯ. ಎಲ್ಲಕ್ಕಿಂತ ಹೆಚ್ಚಾಗಿ ಅವರು ತುಂಬ ಪ್ರೀತಿಸುವ ಪ್ರಾಧ್ಯಾಪಕ ವೃತ್ತಿ, ಜೊತೆಗೆ ಅಪಾರವಾಗಿ ಮೆಚ್ಚುವ ಬರವಣಿಗೆ. ಇದೇ ಅವರ ಬದುಕಿನ ಅವಿರತ ಆಸ್ತಿಯಾಗಿತ್ತು. ಒಬ್ಬ ಶಿಸ್ತಿನ ಪ್ರಾಧ್ಯಾಪಕನಿಗೆ ಇರಬೇಕಾದ ಎಲ್ಲಾ ಗುಣಗಳು ಅವರಲ್ಲಿ ಅವಿರ್ಭಸಿದ್ದವು.ಮತ್ತು ಇತರರಿಗೂ ಮಾದರಿಯಂತಿದ್ದರು.

ಸಮಾಜಶಾಸ್ತ್ರದಲ್ಲಿನ ಆಳವಾದ ಅಧ್ಯಯನವನ್ನು ತಮ್ಮ ಬರವಣಿಗೆಯಲ್ಲಿ ತಮ್ಮದೇಯಾದ ಶೈಲಿಯಲ್ಲಿ ಮಂಡಿಸಬೇಕೆನ್ನುವ ಛಾತಿಯುಳ್ಳ ಕೆಚ್ಚದೆಯ ಬರಗಾರರು. ಆದರೆ ವಿಧಿ ಅವರನ್ನು ಅಗಸ್ಷ್ 28ರ ರಾತ್ರಿ 8.30ಕ್ಕೆ ಕಾನ್ಸರ್ ಎಂಬ ಹೆಮ್ಮಾರಿಯಿಂದ ಇನ್ನೆಂದೂ ಇಲ್ಲದಂತೆ ನಮ್ಮಿಂದ ದೂರಮಾಡಿತು. ಕಳೆದ 20ದಿನಗಳಿಂದ ಧಾರವಾಡದ ಎಸ್.ಡಿ.ಎಂ ಆಸ್ಪತ್ರೆಗೆ ಅನಾರೋಗ್ಯದಿಂದ ದಾಖಲಾಗಿ ಸಾವು ಬದುಕಿನ ಮಧ್ಯೆ ಹೋರಾಡುತ್ತಲೇ ಆಸ್ಪತ್ರೆಯ ಶವಾಗಾರದ ರೆಜಿಸ್ಟರನಲ್ಲಿ ಶಾಶ್ವತವಾಗಿ ತಮ್ಮ ಹೆಸರನ್ನು ದಾಖಲಿಸಿ ತಿರುಗಿ ಬಾರದ ಹಾದಿಗೆ ತೆರಳಿದರು. ‘ಸಾವು ನನ್ನ ಹತ್ತಿರ ಸುಳಿಯುವುದೇ ಇಲ್ಲ ಮತ್ತೆ ಎದ್ದು ಕಾಲೇಜಿಗೆ ಬಂದೇ ಬರ್ತೀನಿ, ಮತ್ತೆ ಹೋರಾಟ ಮಾಡೋದೇ’ ಎಂದು ಆಸ್ಪತ್ರೆಗೆ ನೋಡಲು ಹೋದ ತಮ್ಮ ಆತ್ಮೀಯರೆಲ್ಲರ ಮುಂದೆ ಹೇಳಿ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಳ್ಳುತ್ತಾ ಇದ್ದರು.

ನನ್ನದೂ ಹಾಗೂ ಡಾ.ಎಸ್.ಬಿ.ಜೋಗುರ ಅವರದು 2011ರಿಂದ ಸುಮಾರು 10 ವರ್ಷಗಳ ಕಾಲದ ಗೆಳೆತನ. ನಾನು ಸರಕಾರಿ ಪ್ರಥಮ ದರ್ಜೆ ಕಾಲೇಜಿಗೆ ಉಪನ್ಯಾಸಕನಾಗಿ ಸೇರಿಕೊಂಡ ಮೇಲೆ ಅಲ್ಲಿ ಮೊದಲಿಗೆ ಪರಿಚಯವಾದವರು ಇವರೇ, ಬಹಳ ಸ್ಟ್ರೀಕ್ಟ್, ಅಷ್ಟೇ ಶಿಸ್ತಿನ, ನೇರ-ನುಡಿಯ, ಬಿಚ್ಚುಮಾತಿನ, ಕೊಳುಕುತನವನ್ನು ಖಂಡಿಸುವ, ಒಳಗೊಂದು-ಹೊರಗೊಂದು ಬೇಧವನ್ನು ತೋರದ ಮನುಷ್ಯರು. ನಾನು ಅವರನ್ನು ಮೊದಲಿಗೆ ಕಂಡಾಗ ಅವರು ಕಾಲೇಜಿನಲ್ಲಿ ಯಾವದೋ ಸಹ ಪಾಠಿಗಳೊಂದಿಗೆ ವಾಗ್ವಾದಕ್ಕೆ ನಿಂತತ್ತೇ ಕಾಣುತ್ತಿತ್ತು ಒಳಗೊಳಗೆ ಗುಸು ಗುಸು ಎಂದು ಸಹದ್ಯೋಗಿ ಮಿತ್ತರು ‘ಅವನ್ಯಾಕೆ ಕೆಣಕೋದಕ್ಕೆ ಹೋದ್ರೋ ಮಾರಾಯ್ರರ ಅಂವ್ಯಾ ಬಾಳ ಸುಮಾರ ಅದಾನು ಕೆಣಿಕಿದ್ರಿ ಅಂದ್ರ ಅದನ್ನ ಗಟ್ಟಿಗಿಹಚ್ಚೊತನಾ ಬಿಡಾಂವಲ್ಲಂವಾ’ ಎನ್ನತಾ ಇದ್ರು. ನನಗೆ ಮತ್ತೆ ಕುತೂಹಲ ಜಾಸ್ತಿಯಾಯಿತು ಅವರನ್ನು ನೋಡಲೇ ಬೇಕು ಮಾತನಾಡಿಸಲೇಬೇಕು ಎಂದು. ಮೊದಮೊದಲು ಮಹಾವಿದ್ಯಾಲಯವು ಎಲ್,ಆಯ್.ಸಿ ಹತ್ತಿರ ಇರುವ ವಿದ್ಯಾಭವನದಲ್ಲಿ ಇರುವುದರಿಂದ ಕ್ಲಾಸ್ರ ರೂಂಗಳು ಕಡಿಮೆ, ವಿದ್ಯಾರ್ಥಿಗಳ ಸಂಖ್ಯೆ ಜಾಸ್ತಿ, ಒಂದು ರೀತಿಯ ಹೊಂದಾಣಿಕೆಯಿಂದಲೇ ಎಲ್ಲರು ಇರತಾ ಇದ್ದಿವಿ. ಎಲ್ಲ ಮೇಲ್ ಪ್ರಾಧ್ಯಾಪಕರು ಒಂದೇ ಕೋಣೆಯಲ್ಲಿ ವಿಶ್ರಾಂತಿಗಾಗಿ ಕೂಡಬೇಕಾಗಿತ್ತು ಅಲ್ಲಿ ಆಂಗ್ಲ ಭಾಷೆಯ ಡಾ.ಗುರುನಾಥ ಬಡಿಗೇರವರು ಕನ್ನಡದ ಡಾ.ಮನಗುಂಡಿಯವರು, ಡಾ.ಮಠದವರು, ಇತಿಹಾಸದ ಪ್ರೊ.ಮೋರೆಯವರು ಇವರೆಲ್ಲರ ಜೊತೆಗೆ ಸಮಾಜಶಾಸ್ತ್ರದ ಡಾ.ಎಸ್.ಬಿ.ಜೋಗುರ ಕೂಡ ಒಬ್ಬರು. ಎಲ್ಲರೂ ಹೇಗೋ ಹೊಂದಿಕೊಂಡರೂ ಜೋಗುರವರು ಮಾತ್ರ ಸ್ವಲ್ಪ ಶಿಸ್ತಿನಿಂದ ಮತ್ತು ಗತ್ತಿನಿಂದ ಇರೋ ಮನುಷ್ಯರಾಗಿರುವುದರಿಂದ ಇದು ಹೀಗೆ ಇರಬೇಕು, ಹಾಗೇ ಆಗಬೇಕು ಎನ್ನುವ ಸ್ವಭಾವದರು.

ಜೋಗುರರವರು ಎಷ್ಟು ಪರ್ಟಿಕ್ಯುಲರ್ ಇದ್ರು ಎಂದರೆ ಅವತ್ತಿನ ಕೆಲಸಾ ಅವತ್ತೇ ಆಗಬೇಕು ಅದು ಅವರ ವೈಯಕ್ತಿಕವಾಗಿರಲಿ ಕಾಲೇಜಿನ ಕೆಲಸವಾಗಿರಲಿ ಮತ್ತು ಬೇರೆ ಯಾರಿಂದಲೂ ಅವರು ಅನಾವಶ್ಯಕವಾಗಿ ಏನನ್ನೂ ಹೇಳಿಸಿಕೊಂಡವರಲ್ಲ. ಮತ್ತು ಯಾರ ಮಾತನ್ನೂ ಅಷ್ಟು ಬೇಗ ಒಪ್ಪಕೊಳ್ಳುವ ಸ್ವಭಾವವು ಅವರದ್ದಾಗಿರಲಿಲ್ಲ. ಆವೋತ್ತು ಇಂತದ್ದೇ ಏನೋ ಒಂದು ಅಚಾತುರ್ಯ ಕಾಲೇಜಿನಲ್ಲಿ ನಡೆದು ಹೋಗಿತ್ತು ನಾವೆಲ್ಲರೂ ಒಂದೇ ಕೊಠಡಿಯಲ್ಲಿ ಕುತಿದ್ದೆವು. ಯಾರೋ ಒಬ್ಬನನ್ನು ಸರ್ ಹಿಗ್ಗಾ ಮುಗ್ಗಾ ಬೈಯುತ್ತಾ ಒಳಗಡೆ ಬಂದರು. ಅಷ್ಟರಲ್ಲಿ ಬಡಿಗೇರ ಸರ್ ಯಾಕ್ರೀ ಏನ ಆತ ? ಎಂದು ಕೇಳೋದೇ ತಡ ಜೋಗುರರು ‘ಎಲ್ಲಾ ಮಳ್ಳ ಅದಾರ್ರೀ ಒಂದು ಹೇಳಿದ್ರೇ ನೂರ್ ಮಾಡೋ ಗಡಿಗಳ ಅದಾವ್ರೀ’ (ಜೋಗುರರ ದೃಷ್ಟಿಯಲ್ಲಿ ಗಡಿ ಅಂದ್ರೆ ಮಳ್ಳರ ತರಾ ನಡೆದುಕೊಳ್ಳವರು ಇಲ್ಲಾ ತೀರಾ ಆಕ್ಟೀವ್ ಎಂದರ್ಥ ಬಹುಶ್ಯಾ ಇದು ಸಿಂದಗಿ ಕಡೇ ಬಳುಸುತ್ತಿರಬಹುದು.) ಎಂದು ಮತ್ತೆ ಬೈಯೊದಕ್ಕೆ ಶುರು ಮಾಡಿದ್ರು ನಾವು ಮೊದಲೇ ಇವರ ಬಗ್ಗೆ ಅಲ್ಪ ಸ್ವಲ್ಪ ತಿಳಿದುಕೊಂಡಿರುವುದರಿಂದ ಏನೋ ಆಗಿರಬೇಕು ಅದಕ್ಕೆ ಈ ರೀತಿ ಬೈಯ್ಯತಾಯಿದಾರೆ ಎಂದುಕೊಂಡು ಕ್ಲಾಸ್‍ಗಳತ್ತ ಹೆಜ್ಜೆ ಹಾಕಿದವು.

ಜೋಗುರರವರು ಖಡಕ್ ಮಾತನಾಡುವ ಮನುಷ್ಯರಾಗಿರುವುದರಿಂದ ಅವರ ಸಾಮೀಪ್ಯಕ್ಕೆ ಜನರು ಸ್ವಲ್ಪ ಅಂಜುತ್ತಲೇ ತೆರೆಳುತ್ತಿದ್ದರು. ನಾನು ಮಾರನೇಯ ದಿನ ಅವರನ್ನು ಕಂಡು ಮಾತನಾಡಿಸಬೇಕೆಂದು ಮನೆಯಿಂದ ಶಪಥ ಮಾಡಿಯೇ ಕಾಲೇಜಿಗೆ ಹೋಗಿದ್ದೆ, ಫ್ರೀ ಟೈಂ ನೋಡಿಕೊಂಡು ಮಾತನಾಡಿಸೋಣ ಎಂದು ಸಂಜೆಯವರೆಗೂ ಕಾಯ್ಡು ಕುಳಿತೆ ಜೊತೆಗಿರುವ ಸ್ನೇಹಿತರು ನನಗೆ ಬುದ್ದಿ ಹೇಳಿ, ಹೇಳಿ ಮನೆಗೆ ಹೋಗಲು ಅಣಿಯಾಗುತ್ತಿದ್ದರು. ಆದರೂ ನಾನು ಛಲ ಬಿಡದ ತ್ರಿವಿಕ್ರಮನಂತೆ, ಬೆನ್ನು ಬಿದ್ದ ಬೇತಾಳದಂತೆ, ಜಗ್ಗದೇ ಕುಳಿತೇಬಿಟ್ಟೆ. ಎಷ್ಟೇ ಸಮಯವಾದರೂ ಮಾತಾಡಿಸಿಯೇ ಮನೆಗೆ ಹೋಗೋಣ ಎಂದು ಪ್ರಯತ್ನ ಮುಂದುವರಿಸಿದೆ.

ಜೋಗುರರವರು ಕ್ಲಾಸ್‍ಗೆ ಹೋಗೋದು ಬಿಟ್ಟರೆ ಯಾವಾದರೂ ಒಂದು ಪುಸ್ತಕ ಹಿಡಿದುಕೊಂಡು ತಮ್ಮ ಪಾಡಿಗೆ ತಾವು ಓದುತ್ತಾ ಕುಳಿತುಕೊಳ್ಳುತ್ತಿದ್ದರು. ತಾನಾಯಿತು ತನ್ನ ಕೆಲಸಾ ಆಯಿತು ಅನ್ನೋ ಮನುಷ್ಯಾ ಇಂವಾ.. ಸಾಕಾಯಿತು ಹೋಗೋಣ ನಡಿ ಪಾ ಅಂತಾ ನನ್ನೋಳಗೆ ನಾನೇ ಅನಕೊಂಡೆ, ಬಹುಶ್ಯಾ ನನ್ನೊಳಗಿನ ಮಾತುಗಳು ಅವರಿಗೆ ಕೇಳಿಸಿರಬೇಕು ಸುಮ್ಮನೆ ನನ್ನ ಹತ್ತಿರ ಒಂದು ದೃಷ್ಟಿ ಬೀರಿದರು. ಅಷ್ಟಕ್ಕೇ ಕಾಯ್ದು ಕುಳಿತ ನಾನು ಹಲೋ ಸರ್ ನಾನು ಆನಂದ ಜಕ್ಕಣ್ಣವರ ಅಂತಾ ಈ ಕಾಲೇಜಿಗೆ ಕನ್ನಡ ವಿಷಯ ಪಾಠ ಮಾಡೋಕೆ ಬಂದ ಹೊಸ ಉಪನ್ಯಾಸಕ ಎಂದು ಕೈ ಕೊಡಲು ಮುಂದಾದೆ ಅವರು ಪುಸ್ತಕ ಟೇಬಲ್ ಮೇಲೆ ಇಟ್ಟು ಕೈಕುಲುಕಿ ‘ಓಹೋ ಹೌದಾ ಕನ್ನಡಕ್ಕೆ ಬಂದ ಗಡಿ ಏನು? ಹೇ… ಚಲೋ ಆತ ತುಗೋರಿ, ಎಲ್ಲಿಂದ ಬರತೀರಿ? ಎಲ್ಲಿ ಮನೀ? ಏನ ಕ್ಯಾಲಿಫಿಕೇಶನ್ ಮಾಡಿಕೊಂಡಿದಿರಿ, ಅಂದ್ರು ಪಿ.ಹೆಚ್.ಡಿ ಅದು ಮಾಡಿಕೊಂಡ್ರೊ ಹೇಂಗ’ ಅಂದ್ರು ನಾನು ನನ್ನ ವಿವರಗಳನ್ನೆಲ್ಲಾ ಕೊಟ್ಟ ಮೇಲೆ ಅವರು ಮತ್ತೆ ‘ಏನರೇ ಓದೋದು ಬರಿಯೋದು ಮಾಡಿದ್ರೋ? ನೀವ ಏನಾರ್ರ ಮಾಡ್ರೀ ಒಟ್ಟ ಪಿ.ಹೆಚ್.ಡಿ ಒಂದು ಮಾಡಿಕೋರಿ ಪಾ ಅಂದ್ರು’ ನಾನು ಏನ ಪಾ ಇದು ಒಂದೇ ಉಸಿರಿನಲ್ಲಿ ಇಷ್ಟೋಂದು ಪ್ರಶ್ನೆಗಳನ್ನು ತೂರಿಬಿಟ್ಟ್ರೆ ಹೆಂಗ್ ಇವರನಾ ಎದುರಿಸೋದು ಅನಕ್ಕೋತ ಹೌದು ಸರ್ ಏನಾದ್ರು ಬರಿಬೇಕು ಅಂತಾ ಮಾಡಿದೇನಿ ಅಂದೇ ಕನ್ನಡಕವನ್ನು ಸರಿಮಾಡಿಕೊಳ್ಳುತ್ತಾ ‘ಮಾಡದೇನಿ ಅಂದ್ರೆ ಹೇಂಗ್ರೀ? ಮಾಡಬೇಕ್ರೀ ಏನಾದ್ರೂ ಮಾಡಿದ್ರೇ ಅಷ್ಟೇ ನೀವ ಕನ್ನಡ ಅಧ್ಯಾಪಕರಾಗತೀರಾ ಇಲ್ಲಂದ್ರ ಹೀಂಗ ನೋಡ್ರಿ’ ಎಂದು ಸ್ವಲ್ಪ ಜೋರು ಮಾಡಿದರು. ಇಲ್ಲ ಸರ್ ನಾನು ಸ್ವಲ್ಪಾ ಏನಾದ್ರೂ ಮಾಡಬೇಕು ಅಂದೆ ‘ಆಯ್ತ ತುಗೋರ್ರೀ ಬರ್ರೀ ಚಹಾಕ ಹೋಗಿ ಬರೋಣಾ ಅಂದ್ರು’ ನಾನು ಸ್ವಲ್ಪ ಅಳುಕಿನಿಂದಲೇ ಜೊತೆಗೆ ಹೋದೆ, ಹೋಗುವಾಗ ಕಾಲೇಜಿನ ವಾತಾವರಣದ ಕುರಿತು ಮಾತನಾಡುತ್ತಾ ಹೋದ್ರು ಇದೇ ಸಮಯ ಎಂದು ಕಾಯುತ್ತಿದ್ದ ನಾನು ಸರ್ ನಿನ್ನೆ ಯಾಕೆ ಅಷ್ಟು ಜೋರು ಬಾಯಿ ಮಾಡತಾಯಿದ್ದೀರಿ, ಯಾಕೆ ಸರ್ ಅಂದೆ ಅದಕ್ಕೆ ಅವರು ‘ಅದಾ ಅದು ದೊಡ್ಡದಿದೆ ಬಿಡ್ರಿ’ ಎನ್ನುತ್ತಾ ಜೋರಾಗಿ ನಗೋದಕ್ಕೆ ಶುರು ಮಾಡಿದ್ರು ಯಾವಾಗಲೂ ಗಂಭೀರವಾಗಿ ಇರೋ ವ್ಯಕ್ತಿ ಏಕಾಏಕಿ ನಗೋದಕ್ಕೆ ಶುರು ಮಾಡಿದ್ರು ಅಂದ್ರೆ ನನಗೂ ಒಳಗೊಳಗೆ ಸಂತೋಷವಾಯಿತು.

ಅದೇನಾಗಿತ್ತು ಅಂದ್ರೆ ಎಂದು ನಡೆದ ಘಟನೆ ಹೇಳೊಕೆ ಶುರು ಮಾಡಿದರು. ‘ಕಾಲೇಜಿನಲ್ಲಿ ಒಂದು ಕಾರ್ಯಕ್ರಮ ಇತ್ತು ರೀ ಅದಕ್ಕೆ ಚಹಾ ಬಿಸ್ಕಿಟ್ಟು ವ್ಯವಸ್ಥೆ ಮಾಡಿಸಿದ್ದೇ ನಾನು ಸುಮ್ ಹೀಂಗ ಒಬ್ಬರಿಗೀ 4 ಪ್ಯಾಕ್ ಬಿಸ್ಕಿಟ್ಸ ತುಗೊಂಡು ಬರೀ ಅಂತಾ ಕಳಿಸ್ಯೇನಿ ಅಂವಾ ಮಳ್ಳ…! ಬಿಸ್ಕಿಟ್ ಬಾಕ್ಸದಲ್ಲಿರೋ 12ರದ ಒಂದ ಪ್ಯಾಕ್ ತಂದಾನರ್ರೀ ಏನ ಮಾಡೋದರ್ರೀ’ ಎಂದರು. ನನಗೂ ನಗೆ ತಡಿಯೊಕೆ ಆಗಲಿಲ್ಲ ಜೋರಾಗಿ ಇಬ್ಬರೂ ನಕ್ಕೇವು ನಗುತ್ತಲೇ ಕಾಲೇಜಿನ ಸಿಬ್ಬಂದಿ ಕೋಣೆಗೆ ಬರುವಷ್ಟರಲ್ಲಿ ಹಿರಿಯ ಪ್ರಾಧ್ಯಾಪಕ ಸ್ನೇಹಿತರು, ನನ್ನ ಓರಿಗೆಯ ಗೆಳೆಯರು ಏನಪಾ? ಇಷ್ಟ ಲಗೂ ಹೊಂದಿಕೊಂಡ್ರ್ಯಾ? ಎಂದು ಮುಂತಾಗಿ ಮಾತಾಡಿದ್ರು ನಾನು ಸಣ್ಣಗೆ ಒಂದು ಸ್ಮೈಲ್ ಕೊಟ್ಟು ಸುಮ್ಮನಾದೆ.

ಯಾಕೆಂದರೆ ಜೋಗುರ ಎಂಬ ಕತೆಗಾರನ ಇರುವಿಕೆಯೇ ಹಾಗಿತ್ತು ಯಾರ ಮಾತನ್ನು ಅಷ್ಟು ಬೇಗನೆ ಒಪ್ಪಿಕೊಳ್ಳುವ ಜಾಯಮಾನದವರಲ್ಲ ಇದಕ್ಕೆ ಬೆಳೆದು ಬಂದ ಪರಿಸರ ಕಾರಣವೋ ಅಥವಾ ಮನುಷ್ಯ ಸ್ವಭಾವತಃ ಹಾಗೆಯೋ ಎಂಬುದನ್ನು ಅರ್ಥ ಮಾಡಿಕೊಳ್ಳೋಕೆ ತುಂಬ ಸಮಯವೇನು ಬೇಕಾಗಲಿಲ್ಲ. ಅದು ಅವರ ಸ್ವಾಭಿಮಾನದ ಸ್ವಭಾವ ವಿಜಯಪುರ ಜಿಲ್ಲೆಯ ಸಿಂದಗಿಯಿಂದ ಬಂದ ಇವರು ಸಹಜವಾಗಿಯೇ ಒರಟು. ಆದರೆ ಹೃದಯ ಯಾವಾಗಲೂ ಹೂವಿನಷ್ಟೇ ಕೋಮಲವಾಗಿತ್ತು. ನೋಡೋದಕ್ಕೆ ಅವರ ಮಾತುಗಳು ಸ್ಡಲ್ಪ ಒರಟಾಗಿ ಕಂಡರು ಅದರ ಹಿಂದಿನ ಉದ್ದೇಶ ಇನ್ನೊಬ್ಬರಿಗೆ ಒಳ್ಳೆಯದನ್ನೇ ಬಯಸುತ್ತಿತ್ತು. ಮೊದಮೊದಲು ನಕಾರಾತ್ಮಕವಾಗಿ ಪ್ರತಿಕ್ರಯಿಸಿದರೂ ನಂತರ ತಿಳಿಸಿ ಹೇಳಿದ ಮೇಲೆ ‘ಆತ ತುಗೋರ್ರೀ ಹಾಗೇ ಮಾಡೋನಾ’ ಅನ್ನೋ ಸ್ವಭಾವದವರು ಇಲ್ಲ ನೇರಾನೇರ ಖಂಡಿಸಿ ಅಲ್ಲಿಂದ ಎದ್ದು ಹೊರನಡೆಯುವಂತವರು. ಜೋಗುರವರಿಗೆ ಆಗದೇ ಇರುವುದು ಅಂದರೆ ಲೇಬಲ್ ಅಂಟಿಸಿಕೊಂಡು ತಿರುಗಾಡುವ ಜನ ಇಂಥ ಜನರ ಕುರಿತು ಏನಾದರೊಂದು ಕಮೆಂಟ್ ಪಾಸು ಮಾಡುವವರೇ ಒಂದು ದಿನ ನಾನು ಸರ್ ಹೊಸ ಕಾರ ತುಗೋಂಡೆ ಅದಕ್ಕೆ ಶ್ರೀ ಬಸವೇಶ್ವರರ ಪೋಟೋ ಹಾಕಿಸು ಅಂತಾ ಮನೆಯಲ್ಲಿ ಹೇಳತಾ ಇದಾರೆ ಅಂದೆ, ಒಮ್ಮಿಲೇ ಸಿಟ್ಟಿನಿಂದ ಜಕ್ಕಣ್ಣವರ ‘ನೀವು ಹೀಂಗ ಏನ್ರೀ ಅಂದವರೇ ಪೋಟೋ ಹಾಕಿ ದೊಡ್ಡದೇನು ಸಾಧಿಸೋದದೆ ಮಳ್ಳರಂಗ ಮಾಡಬ್ಯಾಡರ್ರೀ ಬಸವಣ್ಣಾ ಏನ್ ಹೇಳ್ಯಾನ ಅದನ್ನಾ ಪಾಲಸ್ರೀ ಸಾಕು’ ಎಂದರು. ಹೌದು ಅವರ ಮಾತು ಅಕ್ಷರಶಹಃ ನಿಜವೆನಿಸಿತು. ನಾನು ಇವತ್ತೀಗೂ ಯಾವ ಲೇಬಲ್‍ಗಳನ್ನು ಅಂಟಿಸಿಕೊಂಡು ಬದುಕಿಲ್ಲ ಆ ಮಾತು ಬೇರೆ, ಆದರೆ ಈ ರೀತಿಯ ವಿಚಾರಗಳಿಂದ ಡಾ.ಜೋಗುರರು ಮಾರುದ್ದ ನಿಲ್ಲುತ್ತಿದ್ದರು. ಈ ತರಹದ ವಿಚಾರಗಳಿಗೆ ತುಂಬಾ ತೀಕ್ಷ್ಣವಾದ ಪ್ರತಿಕ್ರಿಯೆ ಅಂತೂ ಅವರು ಕೊಟ್ಟೇ ಕೊಡುತ್ತಿದ್ದರು. ಯಾಕೆಂದರೆ ಅವರ ತುಡಿತ ಇದ್ದದ್ದು ಜಗತ್ತಿನ ಮಹಾನ್ ನಾಯಕರು ಹೇಳಿದ ತತ್ವಾದರ್ಶಗಳ ಆಚರಣೆಯಲ್ಲಿಯೇ ಹೊರತು, ಪ್ರದರ್ಶನದಲ್ಲಿಯಂತೂ ಅಲ್ಲವೇ ಅಲ.್ಲ ಜೋಗುರರು ಒಬ್ಬ ಪ್ರಖರ ವೈಚಾರಿಕ ಎನ್ನುವುದಕ್ಕೆ ಈ ಮಾತುಗಳು ಸಾಕ್ಷಿಯಾಗಿವೆ.

ಡಾ.ಎಸ್.ಬಿ ಜೋಗುರರು ಹಲವು ವರ್ಷಗಳ ಕಾಲ ಅರೆಕಾಲಿಕ ಉಪನ್ಯಾಸಕರಾಗಿ ಅಂಕೋಲೆ, ಕುಮಟಾ, ಹುಬ್ಬಳ್ಳಿಯಲ್ಲಿ ಸೇವೆಸಲ್ಲಿಸಿ 2003ರಲ್ಲಿ ಸರಕಾರಿ ಪ್ರಥಮ ದರ್ಜೆ ಕಾಲೇಜಿಗೆ ಸಮಾಜಶಾಸ್ತ್ರದ ಸಹಾಯಕ ಪ್ರಾಧ್ಯಾಪಕರಾಗಿ ನಿಯುಕ್ತಿಗೊಂಡು ಹಿರೇಕೆರೂರದಲ್ಲಿ ಸ್ವಲ್ಪ ವರ್ಷ ನಂತರದಲ್ಲಿ ಧಾರವಾಡದ ಸ.ಪ್ರ.ದ.ಕಾಲೇಜಿನಲ್ಲಿ ಹಲವು ವರ್ಷಗಳ ಕಾಲ ಸೇವೆಯನ್ನು ಸಲ್ಲಿಸುತ್ತಲೇ ನಮ್ಮನ್ನು ಬಿಟ್ಟು ತೆರಳಿದ್ದಾರೆ.

ಜೋಗುರರು ಯಾವಗಲೂ ಒಂದು ಮಾತು ಹೇಳುತ್ತಿದ್ದರು ‘ನಾನು ತುಂಬಾ ಬಡತನದ ಕುಟುಂಬದಿಂದ ಬಂದಾಂವ ಬದುಕು ಏನು ಅನ್ನೋದನ್ನಾ ತಿಳಕೊಂಡೇನ್ರಿ’, ಬಹುಶ್ಯಾ ಅವರು ಹೇಳಿದ್ದನ್ನು ಕೇಳಿದರೆ ಬಡತನ ಅವರನ್ನು ಈ ಹಿಂದೆ ಅನೇಕ ಶ್ರೇಣಿಯ ಕೆಲಸವನ್ನು ಮಾಡುವಂತೆ ಪ್ರೇರೆಪಿಸಿತ್ತು ಎನ್ನುವುದನ್ನು ಮರೆಯಲು ಸಾಧ್ಯವಿಲ್ಲ. ಹೀಗಾಗಿ ಅವರು ಒಂದು ರೀತಿಯ ಸಣ್ಣದಾದ ವೀಕಿಪೀಡಿಯಾದಂತೆ ನನಗೆ ಗೋಚರವಾಗಿದ್ದುಂಟು. ಯಾಕೆಂದರೆ ಅವರು ಬದುಕನ್ನು ಮತ್ತು ವೃತ್ತಿಯನ್ನು ಪ್ರೀತಿಸಿದ್ದಕ್ಕಿಂತ ಜಾಸ್ತಿ ಬರವಣಿಗೆಯನ್ನು ಆರಾಧಿಸಿದ್ದಿದೆ. ಬರವಣಿಗೆ ಅವರಿಗೆ ಎಲ್ಲ ರೀತಿಯ ನೋವನ್ನು ಮರೆಯಿಸಿತ್ತು, ‘ಏನ್ರೀ ಜಕ್ಕಣ್ಣವರ ನಾನು ಜೀಂವಾ ಇರೋತನಕಾನೂ ವರ್ಷಕ್ಕೊಂದು ಪುಸ್ತಕಾ ಬರಿಯ್ಯಾಂವನೇ……!’ ಎಂದು ಆಗಾಗ ನನ್ನ ಮುಂದೆ ಮಾತನಾಡಿದ್ದನ್ನು ನೆನಪಿಸಿಕೊಂಡರೆ ಕಣ್ಣುಗಳು ಈಗಲೂ ತೇವ ತುಂಬುತ್ತವೆ.

‘ಮನುಷ್ಯಾ ಖಾಲಿ ಕುಂತ ಹಾಳಾಗಬಾರದ್ರು ರೀ… ಏನರೇ ಮಾಡಿಕೊಂತರೀಬೇಕ ಬರೀ ಉರದ ಗಡೀ,ಮೆರೆದ ಗಡೀ ಆಕೋತ ಹೊಂಟ್ರ ಹೇಂಗರ್ರೀ’ ಎನ್ನುತ್ತಲೇ ಯಾವಾಗಲೋ ನಡೆದು ಹೋಗಿರೊ ಘಟನೆಯೊಂದನ್ನು ನೆನಪಿಸಿಕೊಂಡು ಹಾಸ್ಯವನ್ನು ಹುಟ್ಟಿಸುತ್ತಿದ್ದರು.
ಜೋಗುರರು ಎಷ್ಟು ಗಾಂಭೀರ್ಯದಿಂದ ಇರುತ್ತಿದ್ದರೋ ಅಷ್ಟೇ ಹಾಸ್ಯಗಾರರು, ಸೂಕ್ಷ್ಮ ಮನಸ್ಸಿನವರಾಗಿದ್ದರು. ಶಿಸ್ತು ಅವರ ಬದುಕಿನ ಅವಿಭಾಜ್ಯ ಅಂಗ. ಅದನ್ನು ಅವರ ವೈಯಕ್ತಿಕ ಬದುಕು ಮತ್ತು ವೃತ್ತಿಬದುಕಿನಲ್ಲಿಯೂ ಅಳವಡಿಸಿಕೊಂಡಿದ್ದರು. ಸಾಮಾಜಿಕ ನ್ಯಾಯ, ಚರ್ಚೆ, ಓದು, ಬರಹ, ಇಂತವುಗಳ ಕಡೆಗೆ ಅವರದು ಸದಾ ತುಡಿಯುವಂತಹ ಮನಸ್ಸು, ತಮ್ಮ ಅಧ್ಯಾಪನವನ್ನು ವಿದ್ಯಾರ್ಥಿಗಳೊಂದಿಗೆ ಯಾವಾಗಲೂ ಪ್ರೀತಿಸುತ್ತಾ, ಕ್ರೀಯಾತ್ಮಕವಾಗಿಸಿಕೊಂಡಿದ್ದರು. ಆಸ್ಪತ್ರೆಗೆ ದಾಖಲಾಗುವ ದಿನವೂ ತರಗತಿಗಳನ್ನು ಮುಗಿಸಿದ್ದರು ಎಂದರೆ ಅವರ ವೃತ್ತಿ ಶಿಸ್ತು ಎಂಥವರಿಗೂ ಆದರ್ಶಮಯವಾಗಿರುವಂತಹದ್ದು. ಕಳೆದ ಜುಲೈ ತಿಂಗಳಿನಿಂದ ಅವರ ದೇಹ ಕ್ಷೀಣಿಸುತ್ತಾ ಬರುತ್ತಿತ್ತು ಇದನ್ನು ಕಂಡು ನಿಮಗೆ ತೊಂದ್ರೆ ಆಗುತ್ತೆ ದಯಮಾಡಿ ಮನೇಲಿ ರೆಸ್ಟ ಮಾಡ್ರೀ ಎಂದು ಮುಂತಾಗಿ ಅನೇಕ ಸಹದ್ಯೋಗಿ ಮಿತ್ತರು ಹೇಳಿದ್ದು ಇದೆ. ಆದರೆ ಅವರು ‘ನನಗೇನ ಆಗೇದ ಸುಮ್ಮ ಸುಮ್ಮಕ ಹೈ ಡೋಸ್ ಕೊಟ್ಟು ನನ್ನ ಹಾಳು ಮಾಡತಾರೆ’ ಎನ್ನುತ್ತಲೇ ತರಗತಿಗೆ ಹೋರಟು ಹೋದ್ರು. ಸಾವನ್ನು ಗೆಲ್ಲುವುದು ಎಂದರೆ ಇದೇ ಎನೋ ಎಂದು ನನಗೆ ಅನ್ನಿಸಿತು. ಜೋಗುರರಿಗೆ ವೀಲ್ ಪಾವರ ಜಾಸ್ತಿಯಿತ್ತು. ಅವರ ಬಾಯಿಂದ ನನಗೇನು ಆಗಿಲ್ಲ ಎಂದು ಹೇಳುತ್ತಿದ್ದರೆ, ಪಾಪಾ ಅವರ ದೇಹ ಅದಕ್ಕೆ ಸ್ಪಂದಿಸುತ್ತಿರಲಿಲ್ಲ. ‘ಸತ್ತರೂ ಬದುಕಿರಲಿ ಆತ್ಮವಿಶ್ವಾಸ’ ಎಂದು ಬರೆದವರ ಬಾಯಿಯಲ್ಲಿ ಇಂಥದ್ದನ್ನು ನಿರೀಕ್ಷೆಮಾಡುವುದು ತಪ್ಪಲ್ಲ.

ಡಾ.ಎಸ್.ಬಿ ಜೋಗುರರು ತಾವೋಬ್ಬ ಉತ್ತಮ ಕತೆಗಾರ ಎನ್ನುವುದಕ್ಕೆ ಅವರ ‘ಬೋಳು ಗುಡ್ಡದ ಹಳದಿ ಮೀನು’, ‘ನೀರೊಳಗಣ ನಿರಾಳ’, ‘ಬಣ್ಣದ ಹನಿಗಳು’,’ಇರದೇ ತೋರುವ ಬಗೆ’, ಮುಂತಾದ ಕಥಾ ಸಂಕಲನಗಳು ಸಾಬೀತು ಪಡಿಸಿವೆ. ‘ನಿದರ್ಶನ’ ಎಂಬ ಕಾದಂಬರಿಯನ್ನು ಬರೆಯುವುದರ ಮೂಲಕ ಅವರೊಬ್ಬ ಕನ್ನಡದ ಭರವಸೆಯ ಕಾದಂಬರಿಕಾರರು ಹೌದು ಎಂದು ರುಜುವಾತು ಮಾಡಿದ್ದರು. ಅನೇಕ ಪ್ರಬಂಧಗಳನ್ನು ಪ್ರಚಲಿತ ವಿದ್ಯಮಾನವನ್ನು ಇಟ್ಟುಕೊಂಡು ಯಾವಾಗಲೂ ಬರೆಯುತ್ತಿದ್ದರು. ಅವರು ತಮ್ಮ ವಿಷಯದ ಪಠ್ಯಕ್ಕೆ ಸಂಬಂಧಿಸಿದಂತೆ ಅನೇಕ ಪಠ್ಯ-ಪುಸ್ತಕಗಳನ್ನು ಬರೆದಿದ್ದಾರೆ ಒಟ್ಟು 80ಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದರೂ ಎಂದೂ ಪ್ರಶಸ್ತಿ ಎನ್ನುವ ಲೇಬಲ್‍ಗೆ ಅಂಟಿಕೊಳ್ಳದಿರುವುದು ಅವರಲ್ಲಿದ್ದ ನಿಷ್ಟುರವಾದವೇ ಕಾರಣವಾಗಿರಬೇಕು. ಹಿಂದೊಮ್ಮೆ ಕರ್ನಾಟಕ ವಿಶ್ವವಿದ್ಯಾಲಯದ ವಿಶ್ರಾಂತಿ ಕೋಣೆಯಲ್ಲಿ ಖ್ಯಾತ ಚಲನಚಿತ್ರ ನಿರ್ದೇಶಕರಾದ ಡಾ.ನಾಗತಿಹಳ್ಳಿ ಚಂದ್ರಶೇಖರರೊಂದಿಗೆ ಸಮಯ ಕಳೆಯುವ ಸಂದರ್ಭ ಒದಗಿತ್ತು. ಜೋಗುರರ ಸ್ನೇಹಿತರ ಜೊತೆಗಿನ ಒಡನಾಟ ಮತ್ತು ಆದರ ಆತಿಥ್ಯ ಎಂಥದ್ದು ಎಂಬುದನ್ನು ತುಂಬಾ ಹತ್ತಿರದಿಂದ ಕಂಡಿದ್ದೇನೆ.ಅವತ್ತು ರಾತ್ರಿ ಪೂರ್ತಿ ಸಿನೆಮಾ ಮಾತು ಕಥೆ, ಇದರ ‘ಜೊತೆಗೆ ನಾಗತಿಹಳ್ಳಿಯವರು ರೀ.. ಆನಂದ ನಿಮ್ಮ ಗುರುಗಳು ಪುರುಷ ಸ್ತ್ರೀ ಚಿಂತಕ ಕಣ್ರೀ ಅವರಲ್ಲೊಬ್ಬ ಹಾಡುಗಾರ ಕೂಡಾ ಇದಾನೆ’ ಎಂದರು. ನಾಗತಿಹಳ್ಳಿಯವರು ಈ ಮಾತು ಹೇಳಿದಾಗ ನಾನು ನನ್ನ ಸ್ನೇಹಿತ ಬಸನಗೌಡ ಬಲವಂತವಾಗಿ ಜೋಗುರರವರನ್ನು ಹಾಡಿಸಿದ್ದು ಈಗ ನೆನಪು ಮಾತ್ರ.

ಜೋಗುರರು ನಮ್ಮನ್ನು ಅಗಲುವುದಕ್ಕಿಂತ ಮುಂಚೆ ನಾಲ್ಕೈದು ದಿನಗಳ ಹಿಂದೆಯೇ ನಾನು ಅವರನ್ನು ಆಸ್ಪತ್ರೆಗೆ ಹೋಗಿ ಬೇಟಿಯಾಗಿದ್ದೆ ಆಸ್ಪತ್ರೆಯಲ್ಲಿ ಅವರನ್ನು ಕಂಡಾಗ ನನಗೆ ಏನೂ ಮಾತನಾಡುವ ಶಕ್ತಿ ಇರಲಿಲ್ಲ. ‘ಯಾಕ್ರೀ ಸುಮ್ಮನೇ ತೊಂದ್ರೇ ತುಗೊಂಡ್ರಿ ಲಾ’ ಅಂದು ನನ್ನ ಎರಡು ಕೈ ಹಿಡಿದು ಹೇಳಿದರು ‘ಏನೂ ಆಗುದಿಲ್ಲರೀ ವಿಲ್ ಪಾವರ ಒಂದೇ ರೀ.. ಕೆಲಸ್ಯಾ ಮಾಡೋದು’ ಎಂದು ಹೇಳುತ್ತಾ ನನ್ನ ಆಸ್ಪತ್ರೆಯ ಇಡೀ ವ್ರತ್ತಾಂತವನ್ನು ಕಾದಂಬರಿಯಾಗಿಸಿದ್ದೇನೆ ಎಂದರು. ದು:ಖ ಉಮ್ಮಳಿಸಿ ಬಂದು ಅತ್ತೇ ಬಿಟ್ಟೆ ಓರ್ವ ಬರಹಗಾರನ ತುಡಿತ ಇದಲ್ಲದೇ ಇನ್ನೇನು?

ಪ್ರೊ. ಆನಂದಕುಮಾರ ಎಂ. ಜಕ್ಕಣ್ಣವರ,
ಸಹಾಯಕ ಪ್ರಾಧ್ಯಾಪಕರು,
ಶಿವಾನಂದ ಮಹಾವಿದ್ಯಾಲಯ,
ಕಾಗವಾಡ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...