Homeಮುಖಪುಟಉತ್ತರ ಸಂವಿಧಾನದಲ್ಲಿದೆ, ಮೀಸಲಾತಿ ವಿರೋಧಿ ಸಂಘಪರಿವಾರದ ಕಚೇರಿಗಳಲ್ಲಿ ಅಲ್ಲ: ಅನಂತನಾಯಕ್ ಎನ್

ಉತ್ತರ ಸಂವಿಧಾನದಲ್ಲಿದೆ, ಮೀಸಲಾತಿ ವಿರೋಧಿ ಸಂಘಪರಿವಾರದ ಕಚೇರಿಗಳಲ್ಲಿ ಅಲ್ಲ: ಅನಂತನಾಯಕ್ ಎನ್

ಮೀಸಲಾತಿಯೇ ಕ್ಷೀಣಿಸುತ್ತಿರುವ ಹೊತ್ತಿನಲ್ಲಿ ಮೀಸಲಾತಿಯನ್ನು ಉಳಿಸಿಕೊಳ್ಳುವ ಹೋರಾಟ ಬಲಗೊಳಿಸಬೇಕು. ಸಣ್ಣ ಪುಟ್ಟ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಎಲ್ಲಾ ಜನಸಮುದಾಯಗಳು ಐಕ್ಯ ಹೋರಾಟಕ್ಕೆ ಮುಂದಾಗಬೇಕು.

- Advertisement -
- Advertisement -

ಒಳಮೀಸಲಾತಿ ಚರ್ಚೆಯ ಹಿನ್ನಲೆಯಲ್ಲಿ ಕರ್ನಾಟಕ ಮೀಸಲಾತಿ ಸಂರಕ್ಷಣಾ ಒಕ್ಕೂಟದ ರಾಜ್ಯ ಸಮಿತಿಯ ಪ್ರಧಾನ ಕಾರ್ಯದರ್ಶಿಗಳಾದ ಎನ್.ಅನಂತನಾಯಕ್‌ರವರ ಸಂದರ್ಶನ.

  1. ಒಳಮೀಸಲಾತಿಯ ಬಗ್ಗೆ ನಿಮ್ಮ ನಿಲುವೇನು?

ಎಲ್ಲಾ ವಂಚಿತ ಸಮುದಾಯಗಳಿಗೆ ಸೂಕ್ತ ಪ್ರಾತಿನಿಧ್ಯ ಬೇಕು. ಅದು ನನ್ನ ಬಲವಾದ ನಂಬಿಕೆ. ಜಾತಿಗಳ ಜನಸಂಖ್ಯೆವಾರು ಮೀಸಲಾತಿ ವೈಜ್ಞಾನಿಕವಾಗಿ ಹಂಚಿಕೆಯಾಗಬೇಕು. ಈ ಹಂಚಿಕೆಗೆ ಪೂರಕ ಆಧಾರವಾಗಲು ಎಲ್ಲಾ ಜಾತಿಗಳ ಸ್ಥಿತಿಗತಿ, ಆರ್ಥಿಕ, ಸಾಮಾಜಿಕ ಸಮೀಕ್ಷೆ ನಡೆಯಬೇಕು. ಜಾತಿಗಳ ಹಿಂದುಳಿದಿರುವಿಕೆ, ಸರ್ಕಾರದಲ್ಲಿ ಅವರ ಪ್ರಾತಿನಿಧ್ಯ ಆಧರಿಸಿ ವಂಚಿತರನ್ನೂ ಮುಖ್ಯವಾಹಿನಿಗೆ ತರುವ ಕಾರ್ಯಕ್ರಮ, ಯೋಜನೆಗಳನ್ನು ರೂಪಿಸಬೇಕು.

2. ಒಳಮೀಸಲಾತಿ ಮತ್ತು ಮೀಸಲಾತಿ ಎರಡರ ತಾತ್ವಿಕತೆಯೂ ಭಿನ್ನವೇ ಅಥವಾ ಒಂದೆಯೇ?

ಇದು ಇನ್ನೂ ಸರ್ವೋಚ್ಚ ನ್ಯಾಯಾಲಯದ ವಿಸ್ತೃತ ಪೀಠದಲ್ಲಿ ಚರ್ಚೆಗೆ ಬರಬೇಕಿದೆ, ಕಾಯೋಣ. ಪ್ರತಿಯೊಬ್ಬರಿಗೂ ಸಮಾನ ಅವಕಾಶ ನೀಡಬೇಕೆನ್ನುವುದು ನಮ್ಮ ಸಂವಿಧಾನದ ಮೂಲ ತತ್ವ. ನಾವು ಅದಕ್ಕೆ ಬದ್ಧರಾಗಿರಬೇಕು. ಸಮತೆಯನ್ನು ಸಾಧಿಸಲು ಮಾರ್ಗ ಯಾವುದಾದರೇನು.

3. ಮೀಸಲಾತಿಗೆ ಶೇ.50 ರ ಮಿತಿ ಹೇರಿಕೆ, ಶೇ.3 ರಷ್ಟಿರುವ ಸಮುದಾಯಗಳಿಗೆ ಶೇ. 10 ಮೀಸಲಾತಿ ಕಲ್ಪಿಸಿರುವುದರ ವಿರುದ್ಧ ಹೋರಾಟಗಳಾಗಲಿಲ್ಲವೇಕೆ?

ಮೀಸಲಾತಿಯ ಮಿತಿಯನ್ನು ಶೇ.50 ಮೀರದಂತೆ ಸುಪ್ರೀಂಕೋರ್ಟ್ ಇಂದಿರಾ ಸಾಹ್ನಿ ಪ್ರಕರಣದಲ್ಲಿ ಹೇಳಿದೆ. ಈ ಕುರಿತು ಆಕ್ಷೇಪಗಳೂ ಬಂದಿವೆ. ಸಕಾರಣಗಳನ್ನು ಸಾಬೀತುಪಡಿಸಿ ಕೆಲ ರಾಜ್ಯಗಳಲ್ಲಿ ಮೀಸಲಾತಿ ಪ್ರಮಾಣ ಹೆಚ್ಚಿಸಲಾಗಿದೆ.

ಬ್ರಾಹ್ಮಣ ಮತ್ತಿತರ ಸಮುದಾಯಗಳನ್ನು ಅರ್ಥಿಕ ದುರ್ಬಲ ವರ್ಗಗಳೆಂದು ಗುರುತಿಸಿ (EWS) ಶೇ.10 ಮೀಸಲಾತಿ ಕೊಡಲಾಗಿದೆ. ಇಂದಿನ ರಾಜಕಾರಣ ಸಂಪೂರ್ಣ ಬ್ರಾಹ್ಮಣೀಕರಣಗೊಂಡಿರುವುದಕ್ಕೆ ಸ್ಪಷ್ಟ ಉದಾಹರಣೆ ಇದು. ಎಡ ಮತ್ತು ಬಹುಜನ ಸಿದ್ಧಾಂತದ ಪಕ್ಷಗಳು ಕೂಡ ಈ ಬಗ್ಗೆ ಸ್ಪಷ್ಟ ಅಭಿಪ್ರಾಯಗಳನ್ನು ದೊಡ್ಡ ಪ್ರಮಾಣದಲ್ಲಿ ದಾಖಲಿಸಲಿಲ್ಲ. ಇದನ್ನು ಪ್ರತಿಭಟಿಸಲಿಲ್ಲ.

‘ಮೀಸಲಾತಿ ಬರೀ ಆರ್ಥಿಕ ಸಬಲೀಕರಣದ ಕಾರ್ಯಕ್ರಮ ಅಲ್ಲ’. ಅಸ್ಪೃಶ್ಯತೆ, ಸಾಮಾಜಿಕ ಕಳಂಕ ಹೊತ್ತವರನ್ನು ಮುಖ್ಯವಾಹಿನಿಗೆ ತರುವ ಸಾಧನ. ಮಾನವ ಘನತೆಯನ್ನು ಹೆಚ್ಚಿಸುವ ಮಾರ್ಗ ಮೀಸಲಾತಿ.

ಸಮಾಜದ ಎಲ್ಲಾ ಅಪಮಾನಿತರಿಗೆ ಸೂಕ್ತ ಪ್ರತಿನಿಧಿತ್ವ ಇರಬೇಕೆಂದು ಮೀಸಲಾತಿಯ ಮೂಲ ತತ್ವ. ಬ್ರಾಹ್ಮಣರಾದಿಯಾಗಿ ಕೆಲವರಲ್ಲಿ ಬಡತನ ಇರಬಹುದು. ಅದನ್ನು ಹೊಗಲಾಡಿಸಲು ಇಲ್ಲಿಯವರೆಗೆ ಅನೇಕ ಅರ್ಥಿಕ ಕಾರ್ಯಕ್ರಮಗಳನ್ನು ರೂಪಿಸುತ್ತಾ ಬರಲಾಗುತ್ತಿದೆ. ಅಗತ್ಯವಿದ್ದರೆ ಅವುಗಳನ್ನು ಹೆಚ್ಚಿಸೋಣ, ಮುಂದುವರೆಸೋಣ. ಆದರೆ, SC, ST, OBCಗಳಿಗೆ ಅಂಟಿಸಲಾದ ಸಾಮಾಜಿಕ ಕಳಂಕ ಮತ್ತು ತಾರತಮ್ಯ ನಿವಾರಿಸಲೆಂದು ಪ್ರಯೋಗಿಸಲಾದ ಮೀಸಲಾತಿ ನಿಯಮವನ್ನು ಬಡತನ ನಿರ್ಮೂಲನೆ ಹೆಸರಲ್ಲಿ ದುರುಪಯೋಗ ಪಡಿಸಿಕೊಳ್ಳಲಾಗುತ್ತಿದೆ. ಮೀಸಲಾತಿ ತತ್ವವನ್ನು ಅಪಮೌಲ್ಯಗೊಳಿಸಲು ಈ EWS ಮೀಸಲು ಮೂಲಕ ಪ್ರಯತ್ನ ಮಾಡಲಾಗಿದೆ. ಹಾಗಾಗಿ 10% EWS ಮೀಸಲಾತಿಯನ್ನು ಒಪ್ಪಲಾಗದು.

4. ಸ್ಪೃಶ್ಯರನ್ನು ಪರಿಶಿಷ್ಠ ಜಾತಿ ಪಟ್ಟಿಯಿಂದ ಹೊರಗಿಡಬೇಕೆಂಬುದರ ಬಗ್ಗೆ ನಿಮ್ಮ ಅಭಿಪ್ರಾಯವೇನು?

ಚಾತುವರ್ಣ ಹೇರಲ್ಪಟ್ಟ ಸಮಾಜ ನಮ್ಮದು. ಪಿರಮಿಡ್ ರೀತಿಯಲ್ಲಿ ಜಾತಿ ವ್ಯವಸ್ಥೆಯನ್ನು ರೂಪಿಸಲಾಗಿದೆ. ಸಂವಿಧಾನಿಕ ಮೀಸಲಾತಿ ನೀಡುವಾಗಲೇ ಇದನ್ನು ಗುರುತಿಸಲಾಗಿದೆ. ಹೀಗಿರುವಾಗ ಪರಿಶಿಷ್ಟ ಜಾತಿ ಪಟ್ಟಿಯಲ್ಲಿರುವವರಲ್ಲಿ ಸ್ಪೃಶ್ಯ- ಅಸ್ಪೃಶ್ಯ, ಎಡ-ಬಲ ಅಂತ ಬೇರ್ಪಡಿಸಲಾಗದು. ಹೀಗೆ ಗುರುತಿಸುವುದು ಕೂಡ ಕಾನೂನುಬಾಹಿರ. ಇಂದಿಗೂ ಮುಟ್ಟಿಸಿಕೊಳ್ಳಲಾಗದಂತೆ ಈ ಸಮಾಜದ ಕಟ್ಟಕಡೆಯಲ್ಲಿ ಬದುಕುತ್ತಿರುವ ದಕ್ಕಲಿಗ ಮುಂತಾದ ಸಮುದಾಯದ ಗೋಳು ಕೇಳುವವರ್ಯಾರು? ಇಂತಹ ಆಲಕ್ಷಿತ ಸಮುದಾಯಗಳನ್ನು ಪ್ರತ್ಯೇಕವಾಗಿ ಗುರುತಿಸಬೇಕಿದೆ. ಗುರುತಿಸುವ ಮಾನದಂಡ ಯಾವುದು ಎಂಬುದು ಮುಖ್ಯ. ಜಾತಿ ಪಟ್ಟಿಗೆ ಸೇರಿಸುವುದಕ್ಕೆ ಮತ್ತು ತೆಗೆದು ಹಾಕಲು ಸಂಸತ್ತು ಮತ್ತು ರಾಷ್ಟ್ರಪತಿ ಅವರಿಗೆ ಅಧಿಕಾರ ಇದೆ. ಅದನ್ನು ಗಮನಿಸೋಣ.

ಅಸ್ಪೃಶ್ಯತೆ ಎಂದರೇನು? ಬಾಧಿತರು ಯಾರು? ಯಾರನ್ನು ಸ್ಪೃಶ್ಯರು ಎಂದು ಕರೆಯಲಾಗುತ್ತಿದೆ? ಅದಕ್ಕೆ ಮಾನದಂಡ ಯಾವುದು? ಅದಕ್ಕೆ ಸಾಂವಿಧಾನಿಕ ಬಲವಿದೆಯೇ? ಪರಿಶಿಷ್ಟ ಜಾತಿಗಳ ಕುರಿತು ಸಂವಿಧಾನದ ವ್ಯಾಖ್ಯಾನವನ್ನು ಸರಿಯಾಗಿ ಅರ್ಥೈಸುವ ಅಗತ್ಯವಿದೆ. ಇವುಗಳನ್ನು ಸರಿಯಾಗಿ ಅರ್ಥೈಸದಿದ್ದರೆ ಮೀಸಲಾತಿ ಹಾಳಾಗಲಿ, ಕನಿಷ್ಠ ಸಹಬಾಳ್ವೆಯನ್ನು ಉಳಿಸಿಕೊಳ್ಳಲಾಗದು.

ಮೀಸಲಾತಿಯೇ ಕ್ಷೀಣಿಸುತ್ತಿರುವ ಹೊತ್ತಿನಲ್ಲಿ ಮೀಸಲಾತಿಯನ್ನು ಉಳಿಸಿಕೊಳ್ಳುವ ಹೋರಾಟ ಬಲಗೊಳಿಸಬೇಕು. ಸಣ್ಣ ಪುಟ್ಟ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಎಲ್ಲಾ ಜನಸಮುದಾಯಗಳು ಐಕ್ಯ ಹೋರಾಟಕ್ಕೆ ಮುಂದಾಗಬೇಕು. ಅದು ಸದ್ಯ ನಮ್ಮ ಮುಂದಿರುವ ಸವಾಲು.

5. ಕೆಲವು ಬಲಗೈ ರಾಜಕಾರಣಿಗಳು ಒಳಮೀಸಲಾತಿ ವಿರುದ್ಧವಾಗಿ ದನಿ ಎತ್ತಿದ ಕಾರಣಕ್ಕೆ ಹೊಲೆಮಾದಿಗರ ನಡುವೆ ಭಿನ್ನತೆ ಉಂಟಾಯಿತು ಎನ್ನಲಾಗುತ್ತದೆ. ನಿಜಕ್ಕೂ ಆಯಾ ದಲಿತ ಜಾತಿಗಳನ್ನು ಪ್ರತಿನಿಧಿಸುವ ಪ್ರಾಮಾಣಿಕ ರಾಜಕಾರಣಿಗಳು ಇಂದಿಗೂ ಇದ್ದಾರೆಯೇ?

ಈ ಪ್ರಶ್ನೆಯೇ ತಪ್ಪು. ನಮ್ಮ ಸಮುದಾಯಗಳ ರಾಜಕಾರಣಿಗಳನ್ನು ವಿಲನ್‍ಗಳಾಗಿಸಲು ಇಂತಹ ಪ್ರಶ್ನೆಗಳನ್ನು ಹರಿಬಿಡಲಾಗುತ್ತಿದ್ದೆ. ಮೀಸಲಾತಿ ವಿರೋಧಿ ಸವರ್ಣೀಯ ರಾಜಕಾರಣಿಗಳನ್ನು ಸುಧಾರಕರಂತೆ ಬಿಂಬಿಸಲಾಗುತ್ತಿದೆ. ಇದನ್ನು ಪರಿಶಿಷ್ಟರು ಎಚ್ಚರಿಕೆಯಿಂದ ಗಮನಿಸಬೇಕು. ಇನ್ನೂ ಸುಧಾರಿಸಬೇಕಾದ ಸಂಸದೀಯ ವ್ಯವಸ್ಥೆಯ ಮಿತಿಯೊಳಗೆ ನಮ್ಮವರು ಒಂದಷ್ಟು ಅಭಿವೃದ್ಧಿ ಕೆಲಸಗಳಲ್ಲಿ ತೊಡಗಿದ್ದಾರೆ. ಇನ್ನಷ್ಟು ನೀರಿಕ್ಷೆ ಮಾಡೊಣ. ನಮ್ಮವರ ಮಧ್ಯೆ ಅನಗತ್ಯ ದ್ವೇಷ ಬಿತ್ತುವುದು ಬೇಡ.

ಜಾತಿ ತಾರತಮ್ಯ ವಿನಾಶಕ್ಕಾಗಿ ಮತ್ತು ದಲಿತ ಸಮುದಾಯಗಳ ಪ್ರಗತಿಗಾಗಿ ಹಲವು ರಾಜಕಾರಣಿಗಳು ಕೆಲಸ ಮಾಡುತ್ತಿದ್ದಾರೆ. ಬಲಗೈ ಸಮುದಾಯದವರು ಇದಕ್ಕೆ ವಿರೋಧ ಇದ್ದಾರೆ ಎಂಬುದು ತಪ್ಪು. ವೈಜ್ಞಾನಿಕವಾಗಿ ಅಧ್ಯಯನವಾಗಲಿ ಎಂದು ಎಲ್ಲರೂ ಒತ್ತಾಯಿಸುತ್ತಲೇ ಬರುತ್ತಿದ್ದಾರೆ. ವೈದಿಕ ಮನಸ್ಥಿತಿಯ ಸವರ್ಣೀಯರು ಇದಕ್ಕೆ ಅವಕಾಶ ಕೊಡುತ್ತಿಲ್ಲ.

6. ಒಳಮೀಸಲಾತಿ ದಲಿತರನ್ನು ಒಡೆದು ಆಳುತ್ತದೆ ಎಂದು ಆರಂಭದಲ್ಲಿ ಭಯ ಬೀಳಿಸಿದ್ದಿದೆ. ಆದರೆ ಈಗ ಒಳಮೀಸಲಾತಿ ಜಾರಿಯಾಗದಿದ್ದರೆ ದಲಿತರ ಒಗ್ಗಟ್ಟು ಸಂಪೂರ್ಣ ಮುರಿದು ಬೀಳುತ್ತದೆ ಎಂಬ ಪರಿಸ್ಥಿತಿ ಉಂಟಾಗಿದೆ. ಇದಕ್ಕೆ ನಿಮ್ಮ ಅಭಿಪ್ರಾಯವೇನು?

ಇದು ತಪ್ಪು ಅಭಿಪ್ರಾಯ. ಅಂತಹ ಪರಿಸ್ಥಿತಿ ಇಲ್ಲ. ಅಂತಹ ಪರಿಸ್ಥಿತಿ ಸೃಷ್ಟಿಸುವ ಪಿತೂರಿಗಳು ನಡೆಯುತ್ತಿವೆ. ಒಳಮೀಸಲಾತಿ ‘ಬರೀ ಪರಿಶಿಷ್ಟ ಜಾತಿಗಳ ಮಧ್ಯೆ ಮಾತ್ರ ಹಂಚಿಕೆ ಆಗಲಿ’ ಎಂಬ ಚರ್ಚೆಯೇ ಅಪಾಯಕಾರಿ. ಜಾತಿ ಜನಸಂಖ್ಯೆವಾರು ಮೀಸಲಾತಿ ಹಂಚಿಕೆ ಪ್ರಕ್ರಿಯೆ ಮೊದಲಿಗೆ EWS, OBC, ST, ಕೊನೆಗೆ SCಗಳಿಗೆ ಅನ್ವಯವಾಗಲಿ. ಸಮಾನ ಪಾಲನ್ನು ಹಂಚಿತಿನ್ನುವ ದಲಿತರಲ್ಲಿ ಮೂಲತಃ ಇದೆ. ಇದು ಸಮಾನತೆ ಸಾಧಿಸುವ ಮಾರ್ಗ. ಹೀಗಾದಾಗ ದಲಿತರ ಐಕ್ಯತೆ ಹಾಳಾಗೊಲ್ಲ. ಸಾಮಾಜಿಕ ನ್ಯಾಯ ಬಲಗೊಳ್ಳುತ್ತೆ. ಪರಿಶಿಷ್ಟ ಜಾತಿಗಳನ್ನೇ ಗುರಿಯಾಗಿಸುವ ಚರ್ಚೆ ದುರುದ್ದೇಶಪೂರಿತ. ಅವೇಶಕ್ಕೊಳಗಾಗದೆ ಸೌಹಾರ್ದಯುತವಾಗಿ ಕೂತು ಚರ್ಚಿಸಿದರೆ ಪರಿಹಾರ ಸಾದ್ಯ.

7. ಸದಾಶಿವ ಆಯೋಗದ ವರದಿ ಜಾರಿ ಮಾಡುವುದರ ಕುರಿತು ನಿಮ್ಮ ಅನಿಸಿಕೆ ಏನು?

ನ್ಯಾ. ಸದಾಶಿವ ಆಯೋಗದ ವರದಿ ಮೊದಲು ಬಹಿರಂಗ ಚರ್ಚೆಗೆ ಬಿಡುಗಡೆ ಆಗಲಿ. ಅದರ ಶಿಫಾರಸ್ಸುಗಳ ಸತ್ಯಾಸತ್ಯಾತೆ ಕುರಿತು ಅನಂತರ ಚರ್ಚಿಸೋಣ. ಈ ವರದಿ ಜನಪರವಾಗಿದ್ದರೆ ಒಪ್ಪೋಣ, ಜನವಿರೋಧಿ ಆಗಿದ್ದರೆ ತಿರಸ್ಕರಿಸೋಣ. ಭಾಗಶಃ ಸರಿಯಿದ್ದರೆ ಮತ್ತಷ್ಟು ಅವಲೋಕಿಸಿ ನಿರ್ಧರಿಸೋಣ. ಸಂಬಂಧಪಟ್ಟ ಎಲ್ಲರನ್ನೂ ಒಳಗೊಂಡು, ಚರ್ಚಿಸಿ ಅದರ ಆಧಾರದಲ್ಲಿ ಕ್ರಮ ಕೈಗೊಳ್ಳಬಹುದು. ಆದರೆ ಈ ವರದಿಯನ್ನು ಬಚ್ಚಿಟ್ಟು ರಾಜಕೀಯ ಮಾಡಲಾಗುತ್ತಿದೆ. ಸಹೋದರ ಸಮುದಾಯಗಳ ಮಧ್ಯೆ ಅನಗತ್ಯ ದ್ವೇಷ ಹುಟ್ಟುಹಾಕಲಾಗುತ್ತಿರುವುದು ಬೇಸರದ ಸಂಗತಿ. ಇದಕ್ಕೆಲ್ಲಾ ಸಂವಿಧಾನದಲ್ಲಿ ಉತ್ತರವಿದೆ. ಮೀಸಲಾತಿ ವಿರೋಧಿಸುತ್ತಲೇ ಬಂದಿರುವ ಸಂಘಪರಿವಾರದ ಕಚೇರಿಗಳಲ್ಲಿ ಅಲ್ಲ. ನಮಗೆಲ್ಲ ಬಾಬಾ ಸಾಹೇಬ್ ಬೆಳಕಾಗಬಹುದು, ಕಾದು ನೋಡೊಣ.

  • ಅನಂತನಾಯಕ್ ಎನ್

(ಹೈಕೋರ್ಟ್ ವಕೀಲರು, ಕರ್ನಾಟಕ ಮೀಸಲಾತಿ ಸಂರಕ್ಷಣಾ ಒಕ್ಕೂಟದ ರಾಜ್ಯ ಸಮಿತಿಯ ಪ್ರಧಾನ ಕಾರ್ಯದರ್ಶಿಗಳು. ವಿದ್ಯಾರ್ಥಿ ದೆಸೆಯಿಂದ ಸಾಮಾಜಿಕ ಹೋರಾಟಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದಾರೆ.)


ಇದನ್ನೂ ಓದಿ: ಸಾಂವಿಧಾನಿಕ ರಕ್ಷಣೆಯನ್ನು ಎತ್ತಿಹಿಡಿದ ಈ ಎರಡು ಮಹತ್ವದ ತೀರ್ಪುಗಳು
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...